Home
Gadgets

Smart Home Devices : ನಿಮ್ಮ ಮನೆಯ ಸ್ಮಾರ್ಟ್‌ಡಿವೈಸ್‌ಗಳ ಆಯಸ್ಸನ್ನು ಪತ್ತೆ ಮಾಡೋದೇಗೆ!?

ಸ್ಮಾರ್ಟ್‌ ಗ್ಯಾಜೆಟ್‌ಗಳಿಲ್ಲದ ಜೀವನವನ್ನು ಊಹಿಸಿಕೊಳ್ಳಲೂ ಸಹ ಕಷ್ಟಕರವಾದ ವಾತಾವರಣ ಈಗ ಸೃಷ್ಟಿಯಾಗಿದೆ. ಯಾಕೆಂದರೆ ಈ ಸ್ಮಾರ್ಟ್‌ ಡಿವೈಸ್‌ಗಳು ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದ್ದು, ಬಳಕೆದಾರರ ಬೇಕು ಬೇಡಗಳನ್ನು ಈಡೇರಿಸುತ್ತವೆ. ಈ ನಡುವೆ ಮನೆಯಲ್ಲಿನ ಸ್ಮಾರ್ಟ್‌ಡಿವೈಸ್‌ಗಳು ಆಯಸ್ಸನ್ನು ತಿಳಿದುಕೊಳ್ಳುವುದು ಸಹ ಅಗತ್ಯವಾದ ವಿಷಯ.

ಹೌದು, ಮನೆಯಲ್ಲಿ ಬಳಕೆ ಮಾಡುವ ಎಸಿ,ವಾಶಿಂಗ್‌ ಮೆಷಿನ್‌,ಸ್ಮಾರ್ಟ್‌ಟಿವಿ ಸೇರಿದಂತೆ ಯಾವುದೇ ಸ್ಮಾರ್ಟ್‌ಡಿವೈಸ್‌ ಆಗಾಗ್ಗೆ ಕೆಡುತ್ತಿದ್ದರೆ ಅದರ ಆಯಸ್ಸು ಹತ್ತಿರ ಬಂದಿದೆ ಎಂದರ್ಥ.ಅದಾಗ್ಯೂ ಹೊಸ ಸ್ಮಾರ್ಟ್‌ ಡಿವೈಸ್‌ಗೆ ಅಪ್‌ಗ್ರೇಡ್‌ ಆಗಲು ಬಯಸದವರು ಅದನ್ನೇ ರಿಪೇರಿ ಮಾಡಿಸಿಕೊಂಡು ಬಳಕೆ ಮಾಡುತ್ತಾರೆ. ಆದರೆ, ಒಂದು ನೆನಪಿಡಿ ಪದೇ ಪದೇ ಅದನ್ನು ರಿಪೇರಿ ಮಾಡಿಸಿಕೊಳ್ಳುವ ಬದಲು ಅದರ ಬೆಲೆಗೆ ಹೊಸ ಡಿವೈಸ್‌ ಅನ್ನೇ ಖರೀದಿ ಮಾಡಬಹುದು.ಈ ಕಾರಣಕ್ಕಾಗಿಯೇ ನೀವು ಸ್ಮಾರ್ಟ್‌ ಡಿವೈಸ್‌ಗಳ ಆಯಸ್ಸನ್ನು ಗಣನೆಗೆ ತೆಗೆದುಕೊಳ್ಳಬೇಕು.

ನಿಮ್ಮ ಮನೆಯ ಸ್ಮಾರ್ಟ್‌ಡಿವೈಸ್‌ಗಳ ಆಯಸ್ಸನ್ನು ಪತ್ತೆ ಮಾಡೋದೇಗೆ!?

ಲ್ಯಾಪ್‌ಟಾಪ್‌: ನಿಮ್ಮ ಲ್ಯಾಪ್‌ಟಾಪ್ ಆಗಾಗ್ಗೆ ಕೈ ಕೊಡುತ್ತಿದ್ದರೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾದರೆ ಹಾಗೂ ಅದನ್ನು ಖರೀದಿ ಮಾಡಿ ಹಲವು ವರ್ಷಗಳು ಕಳೆದಿವೆ ಎಂದರೆ ನೀವು ಹೊಸ ಲ್ಯಾಪ್‌ಟಾಪ್‌ಗೆ ಅಪ್‌ಗ್ರೇಡ್‌ ಆಗಬಹುದು. ಅದರಂತೆ ನಿಮ್ಮ ಮನೆಯಲ್ಲಿನ ಎಸಿ ಹೆಚ್ಚುವರಿ ವಿದ್ಯುತ್ ಅನ್ನು ಬಳಕೆ ಮಾಡುತ್ತಿದ್ದರೆ ಹಾಗೂ ಆಗಾಗ್ಗೆ ಗ್ಯಾಸ್ ರೀಫಿಲ್‌ಗಳ ಅಗತ್ಯವಿದ್ದಲ್ಲಿ, ಕಂಡೆನ್ಸರ್ ತೊಂದರೆಗಳನ್ನು ಎದುರಿಸುತ್ತಿದ್ದರೆ ಇದೂ ಸಹ ತನ್ನ ಆಯಸ್ಸಿನ ಅಂತಿಮ ದಿನದಲ್ಲಿ ಇದೆ ಎಂದು ನೀವು ಪರಿಗಣಿಸಬಹುದು.

ಟ್ಯಾಬ್ಲೆಟ್‌: ಇನ್ನು ಸಾಮಾನ್ಯವಾಗಿ ಬಳಕೆ ಮಾಡುವ ಟ್ಯಾಬ್ಲೆಟ್‌ ವಿಚಾರಕ್ಕೆ ಬರುವುದಾದರೆ ಇವು 3-4 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ. ಇದರೊಂದಿಗೆ ನಿಮ್ಮ ಟ್ಯಾಬ್ಲೆಟ್‌ನ ಬ್ಯಾಟರಿಯು ಬೇಗ ಬೇಗನೇ ಖಾಲಿಯಾಗುತ್ತಿದ್ದರೆ, ಪದೇ ಪದೇ ಸಾಫ್ಟ್‌ವೇರ್ ವಿಫಲವಾದರೆ, ಟ್ಯಾಬ್ಲೆಟ್ ಸಾಮಾನ್ಯವಾಗಿ ಹೆಚ್ಚು ಬಿಸಿಯಾಗುತ್ತಿದ್ದರೆ, ಟಚ್ ಸ್ಕ್ರೀನ್ ನಿಧಾನವಾಗಿ ಪ್ರತಿಕ್ರಿಯಿಸುತ್ತಿದ್ದರೆ ಅಥವಾ ಪ್ರತಿಕ್ರಿಯಿಸದಿದ್ದರೆ ಅದನ್ನು ಬದಲಾಯಿಸುವ ಸಮಯಬಂದಿದೆ ಎಂದರ್ಥ. ಇದೇ ಸೂಚನೆಗಳು ಸ್ಮಾರ್ಟ್‌ಫೋನ್‌ನಲ್ಲೂ ಸಹ ಕಾಣಿಸಿಕೊಳ್ಳುತ್ತವೆ.

ಡೆಸ್ಕ್‌ಟಾಪ್ ಕಂಪ್ಯೂಟರ್‌: ಡೆಸ್ಕ್‌ಟಾಪ್ ಕಂಪ್ಯೂಟರ್‌ ಅನ್ನು ನಿರಂತರವಾಗಿ ಬಳಕೆ ಮಾಡಿದ್ದೇ ಆದರೆ ಸರಿ ಸುಮಾರು 6 ರಿಂದ 7 ವರ್ಷಗಳ ವರೆಗೆ ಅದರಿಂದ ಸೇವೆ ಪಡೆದುಕೊಳ್ಳಬಹುದು. ಯಾಕೆಂದರೆ ಸುರಕ್ಷತೆ ದೃಷ್ಟಿಯಿಂದ ಹಲವಾರು ಅಪ್‌ಡೇಟ್‌ಗಳು ಆಗಾಗ್ಗೆ ಜರುಗುತ್ತಲೇ ಇರುತ್ತವೆ.ಈ ನಡುವೆ ಕಂಪ್ಯೂಟರ್‌ನ ಸುರಕ್ಷತೆಯು ಹಳೆಯದಾಗಿದ್ದರೆ,ಹಾರ್ಡ್‌ವೇರ್ ಸರಿಯಾಗಿ ಕೆಲಸ ಮಾಡಿಲ್ಲವಾದರೆ,ಅಪ್ಲಿಕೇಶನ್‌ಗಳು ಲೋಡ್ ಆಗಲು ದೀರ್ಘ ಸಮಯ ತೆಗೆದುಕೊಂಡರೆ ಇದೂ ಸಹ ತನ್ನ ಆಯಸ್ಸಿನ ಅಂತಿಮ ಘಟ್ಟದಲ್ಲಿ ಇದೆ ಎಂದು ನೀವು ಭಾವಿಸಿಕೊಳ್ಳಬಹುದು.

ಸ್ಮಾರ್ಟ್‌ಟಿವಿ: ಇನ್ನು ಎಲ್ಲರ ಮನೆಯಲ್ಲಿ ಇರುವ ಸ್ಮಾರ್ಟ್‌ಟಿವಿ ವಿಚಾರಕ್ಕೆ ಬರುವುದಾದರೆ ಈ ವಿಟಿಗಳಿಗೆ ಸ್ವಲ್ಪ ಹೆಚ್ಚಿನ ಆಯಸ್ಸನ್ನು ನೀಡಲಾಗಿದೆ. ಅಂದರೆ ಇವು ಸುಮಾರು 7 ರಿಂದ 10 ವರ್ಷಗಳು ಬಾಳಿಕೆ ಬರುತ್ತವೆ. ಅದಾಗ್ಯೂ ನೀವು ಅದನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಇನ್ನೂ ಹೆಚ್ಚಿನ ವರ್ಷಗಳ ವರೆಗೆ ಬಳಕೆ ಮಾಡಿಕೊಳ್ಳಬಹುದು. ಈ ನಡುವೆ ಮಾರುಕಟ್ಟೆಯಲ್ಲಿ ಬೇಸಿಕ್ ಟಿವಿ, ಸ್ಮಾರ್ಟ್ ಟಿವಿ ಮತ್ತು ಆಂಡ್ರಾಯ್ಡ್ ಟಿವಿಗಳು ಲಭ್ಯ ಇದ್ದು, ಪ್ರತಿಯೊಂದು ಭಿನ್ನವಾಗಿವೆ.

ಇದರಲ್ಲಿ ಗಮನಿಬೇಕಾದ ವಿಷಯ ಏನೆಂದರೆ ಈ ವಿಭಾಗದಲ್ಲಿ ಎಲ್‌ಇಡಿ ಟಿವಿ, ಓಎಲ್‌ಇಡಿ, ಕ್ಯೂಎಲ್‌ಇಡಿ ಟಿವಿ ಮುಂತಾದ ವಿವಿಧ ಆವೃತ್ತಿಗಳನ್ನು ಇದ್ದು, ಈ ಸ್ಮಾರ್ಟ್ ಟಿವಿಗಳ ನಿರ್ವಹಣೆ ಸಹ ಒಂದು ವಿಶೇಷವಾದ ಕೆಲಸವೂ ಹೌದು. ಆದಾಗ್ಯೂ ಒಮ್ಮೆ ಸ್ಮಾರ್ಟ್‌ಟಿವಿ ಕೆಟ್ಟರೆ ಅದರ ರಿಪೇರಿ ವೆಚ್ಚದಲ್ಲಿ ಹೊಸ ಸ್ಮಾರ್ಟ್‌ಟಿವಿಯನ್ನೇ ಖರೀದಿ ಮಾಡುವಷ್ಟು ಇರುತ್ತದೆ. ಈ ಕಾರಣಕ್ಕೆ ಹಳೆಯದನ್ನು ರಿಪೇರಿ ಮಾಡಿಸುವುದಕ್ಕಿಂತ ಹೊಸ ಟಿವಿಯನ್ನೇ ಖರೀದಿ ಮಾಡುವುದು ಉತ್ತಮವಾದ ಆಯ್ಕೆಯಾಗಿದೆ.

ರೆಫ್ರಿಜರೇಟರ್: ಇದರೊಂದಿಗೆ ಮನೆಯಲ್ಲಿ ಬಳಕೆ ಮಾಡುವ ರೆಫ್ರಿಜರೇಟರ್‌ಗಳನ್ನುಸರಿ ಸುಮಾರು 10 ರಿಂದ 20 ವರ್ಷಗಳವರೆಗೆ ಬಳಕೆ ಮಾಡಬಹುದಾಗಿದೆ. ಅದಾಗ್ಯೂ ಸ್ಟಾರ್‌ ರೇಟಿಂಗ್‌ ಕಡಿಮೆ ಇರುವ ರೆಫ್ರಿಜರೇಟರ್ ಕಡಿಮೆ ಆಯಸ್ಸನ್ನು ಹೊಂದುವ ಜೊತೆಗೆ ಜನರಿಗೆ ಆರ್ಥಿಕ ವಿಚಾರದಲ್ಲೂ ಭಾರವಾಗಿರುತ್ತವೆ. ಈ ಕಾರಣಕ್ಕೆ ನೀವು ಖರೀದಿ ಮಾಡುವಾಗಲೇ ಉತ್ತಮವಾದ ಸ್ಮಾರ್ಟ್‌ರೇಟಿಂಗ್‌ ಹಾಗೂ ಉತ್ತಮವಾದ ಬ್ರ್ಯಾಂಡ್‌ನ ರೆಫ್ರಿಜರೇಟರ್ ಖರೀದಿ ಮಾಡಿದರೆ ಒಳಿತು.

ನಿಮ್ಮ ಮನೆಯ ಸ್ಮಾರ್ಟ್‌ಡಿವೈಸ್‌ಗಳ ಆಯಸ್ಸನ್ನು ಪತ್ತೆ ಮಾಡೋದೇಗೆ!?

ಸೀಲಿಂಗ್ ಫ್ಯಾನ್‌: ಸೀಲಿಂಗ್ ಫ್ಯಾನ್‌ಗಳಂತೂ ಇಂದು ಎಲ್ಲರ ಮನೆಗೂ ಅಗತ್ಯವಾದ ಡಿವೈಸ್‌ ಆಗಿದೆ. ಈ ಸೀಲಿಂಗ್ ಫ್ಯಾನ್‌ ನ ಜೀವಿತಾವಧಿಯು ನೀವು ಖರೀದಿಸುವ ವೇರಿಯಂಟ್‌ ಹಾಗೂ ಬ್ರ್ಯಾಂಡ್‌ ಮೇಲೆ ಅವಲಂಬಿಸಿರುತ್ತದೆ. ಅಗ್ಗದ ಹಾಗೂ ಕಡಿಮೆ ಗುಣಮಟ್ಟದ ಸೀಲಿಂಗ್ ಫ್ಯಾನ್‌ಗಳು ನಿಮಗೆ 3 ವರ್ಷಗಳವರೆಗೆ ಬಾಳಿಕೆ ಬರಲಿದ್ದು, ಉತ್ತಮ ಗುಣಮಟ್ಟದ ಫ್ಯಾನ್‌ಗಳು ಬರೋಬ್ಬರಿ 30 ವರ್ಷಗಳವರೆಗೂ ಬಾಳಿಕೆ ಬರುತ್ತವೆ.

ಸ್ಮಾರ್ಟ್ LED ಬಲ್ಬ್: ಸ್ಮಾರ್ಟ್ LED ಬಲ್ಬ್ ವಿಚಾರಕ್ಕೆ ಬರುವುದಾದರೆ ಕೆಲವು ಬಲ್ಬ್‌ಗಳು 25,000 ಗಂಟೆಗಳ ಬಳಿಕ ತಮ್ಮ ಸಾಮರ್ಥ್ಯ ಕಳೆದುಕೊಳ್ಳಲಿವೆ. ಹಾಗೆಯೇ ಸ್ಮಾರ್ಟ್ ಎಲ್‌ಇಡಿ ಬಲ್ಬ್‌ಗಳು ಸುಮಾರು 50,000 ಗಂಟೆಗಳ ಕಾಲ ಬೆಳಕು ನೀಡಲಿವೆ. ಈ ಕಾರಣಕ್ಕೆ ನೀವು ದೀರ್ಘಾಯುಷ್ಯವನ್ನು ಬಯಸಿದರೆ ಎಲ್‌ಇಡಿ ಬಲ್ಬ್‌ಗಳನ್ನು ಖರೀದಿ ಮಾಡಬಹುದು. ಅದರಲ್ಲೂ ಇತ್ತೀಚಿಗೆ ಚಾರ್ಜಿಂಗ್‌ ಆಯ್ಕೆ ಇರುವ ಬಲ್ಬ್‌ಗಳು ಸಹ ಲಭ್ಯ ಆಗುತ್ತಿರುವುದು ವಿಶೇಷ ಸಂಗತಿ.

ಸಾಮಾನ್ಯವಾಗಿ ಸ್ಮಾರ್ಟ್‌ಡಿವೈಸ್‌ಗಳು ಆಗಾಗ್ಗೆ ಕೆಡುತ್ತಿದ್ದರೆ ಒಂದೇ ತೀರ್ಮಾನದಲ್ಲಿ ಅವುಗಳ ಆಯಸ್ಸು ಮುಗಿದಿದೆ ಎಂದು ಹೇಳಲು ಸಾಧ್ಯ ಆಗುವುದಿಲ್ಲ. ಬದಲಾಗಿ ಕೆಲವು ತಾಂತ್ರಿಕ ಸಮಸ್ಯೆಗಳು ಇರಬಹುದು. ಈ ಕಾರಣಕ್ಕೆ ರಿಪೇರಿ ಮಾಡಿಸುವಾಗಲೂ ಸಹ ಉತ್ತಮವಾದ ಸ್ಟೋರ್‌ಗೆ ಭೇಟಿ ನೀಡಿ. ಇಲ್ಲವಾದರೆ ಅವರು ಹಣದ ಆಸೆಗೆ ನಿಮ್ಮನ್ನು ಯಾಮಾರಿಸುವುದರಲ್ಲಿ ಎರಡು ಮಾತಿಲ್ಲ.

Best Mobiles in India

English summary
If any smart device including AC, washing machine, smart TV used at home breaks down frequently, it means its lifespan is near. For this reason, know how many smart devices have a lifespan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+