ಫೈರ್‌ಬೋಲ್ಟ್ ಈ ಸ್ಮಾರ್ಟ್‌ವಾಚ್‌ಗೆ ಬಿಗ್ ಡಿಸ್ಕೌಂಟ್!..ಅಗ್ಗದ ಬೆಲೆಗೆ ಲಭ್ಯ!
ಪ್ರಸ್ತುತ ಸ್ಮಾರ್ಟ್‌ವಾಚ್‌ಗಳು ಸಿಕ್ಕಾಪಟ್ಟೆ ಲೀಡಿಂಗ್ ನಲ್ಲಿ ಕಾಣಿಸಿಕೊಂಡಿದ್ದು, ಮೊಬೈಲ್‌ಗಳಂತೆ ಸಾಮಾನ್ಯ ಎನಿಸಿವೆ. ಆ ಪೈಕಿ ಫೈರ್‌ಬೋಲ್ಟ್ ಸಂಸ್ಥೆಯ ಸ್ಮಾರ್ಟ್‌ವಾಚ್‌ಗಳು ಬಜೆಟ್ ದರದಲ್ಲಿ ಗ್ರಾಹಕರನ್ನು ಸೆಳೆದಿದ್ದು, ಇತ್ತೀಚಿಗಿನ ಫೈರ್‌ಬೋಲ್ಟ್ ನಿಂಜಾ ಫಿಟ್ (Fire-Boltt Ninja Fit) ವಾಚ್ ಪ್ರೈಸ್‌ಟ್ಯಾಗ ಮತ್ತು ಫೀಚರ್ಸ್‌ನಿಂದ ಸಖತ್ ಆಗಿ ಕಾಣಿಸಿಕೊಂಡಿದೆ. ಈ ವಾಚ್ ಬೆಲೆಯಲ್ಲಿ ಈಗ ಇಳಿಕೆ ಆಗಿದೆ.
ಹೌದು, ಫೈರ್‌ಬೋಲ್ಟ್ ಸಂಸ್ಥೆಯ ಫೈರ್‌ಬೋಲ್ಟ್ ನಿಂಜಾ ಫಿಟ್ ಸ್ಮಾರ್ಟ್‌ವಾಚ್ ಅಧಿಕೃತ ಫೈರ್‌ಬೋಲ್ಟ್ ವೆಬ್‌ಸೈಟ್‌ನಲ್ಲಿ 7,999ರೂ. ಆಗಿದೆ. ಆದರೆ ಸದ್ಯ ಈ ಸ್ಮಾರ್ಟ್‌ವಾಚ್ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದ್ದು, 1,099ರೂ. ಗಳಿಗೆ ಖರೀದಿಗೆ ಲಭ್ಯ ಇದೆ. ಹಾಗೆಯೇ ಖರೀದಿದಾರರು ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದಾಗಿದೆ.

ಫೈರ್‌ಬೋಲ್ಟ್ ನಿಂಜಾ ಫಿಟ್ ಸ್ಮಾರ್ಟ್‌ವಾಚ್ 123 ಸ್ಪೋರ್ಟ್ಸ್ ಮೋಡ್‌ಗಳ ಆಯ್ಕೆ ಪಡೆದಿದ್ದು, ಹಾರ್ಟ್ ರೇಟ್ ಟ್ರ್ಯಾಕಿಂಗ್ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಸ್ಮಾರ್ಟ್ ಎಸ್‌ಎಮ್‌ಎಸ್ ಅಲರ್ಟ್ ಆಯ್ಕೆಯನ್ನು ಒಳಗೊಂಡಿದ್ದು, ಗ್ರಾಹಕರನ್ನು ಮೋಡಿ ಮಾಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಪಡೆದಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಫೈರ್‌ಬೋಲ್ಟ್ ನಿಂಜಾ ಫಿಟ್ ಸ್ಮಾರ್ಟ್‌ವಾಚ್ ಫೀಚರ್ಸ್ : ಫೈರ್‌ಬೋಲ್ಟ್ ಕಂಪನಿಯ ನಿಂಜಾ ಫಿಟ್ ವಾಚ್ 1.69 ಇಂಚಿನ ಫುಲ್ ಟಚ್ ಹೆಚ್‌ಡಿ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಸ್ಕ್ರೀನ್ ಆಕರ್ಷಕ ಲುಕ್‌ನಲ್ಲಿದೆ. ಡಿಸ್‌ಪ್ಲೇಯು 240 x 280 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದ್ದು, ಈ ಡಿಸ್‌ಪ್ಲೇ ಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 218 ppi ಆಗಿದೆ.
ಈ ವಾಚ್ ಲಿಥೀಯಂ ಬ್ಯಾಟರಿ ಒಳಗೊಂಡಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 7ದಿನಗಳ ವರೆಗೆ ಬ್ಯಾಟರಿ ಬ್ಯಾಕ್‌ಅಪ್ ಒದಗಿಸಲಿದೆ. ಇನ್ನು ಸ್ಟ್ಯಾಂಡ್‌ಬೈ ಟೈಮ್ 1.31 ತಿಂಗಳು ಆಗಿದೆ. ಹಾಗೆಯೇ ಈ ವಾಚ್ ಬ್ಲೂಟೂತ್ ಕರೆ ಮಾಡುವ ಸೌಲಭ್ಯ ಸಹ ಪಡೆದಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್ ಗೂ ಸಪೋರ್ಟ್ ಪಡೆದಿದೆ.
ಪ್ರಮುಖ ಫೀಚರ್ಸ್‌ಗಳು ಏನಿವೆ : ಫೈರ್‌ಬೋಲ್ಟ್ ಕಂಪನಿಯ ನಿಂಜಾ ಫಿಟ್ ವಾಚ್ ಹಾರ್ಟ್ ರೇಟ್ ಮಾನಿಟರಿಂಗ್, SpO2 ಮಾನಿಟರ್, ಕ್ಯಾಲೋರಿ ಕೌಂಟ್, ಸ್ಟೆಪ್ ಕೌಂಟ್, ಸ್ಲಿಪ್ ಮಾನಿಟರ್ ನಂತಹ ಕೆಲವು ಅನುಕೂಲಕರ ಸೌಲಭ್ಯ ಗಳನ್ನು ಸಹ ಪಡೆದಿದೆ. ಜೊತೆಗೆ ಅಲಾರಾಂ ಕ್ಲಾಕ್, ಸ್ಟಾಪ್‌ವಾಚ್, ಟೈಮರ್ ಹಾಗೂ ರಿಮೈಂಡರ್ ಆಯ್ಕೆಗಳು ಇವೆ.
ಹಾಗೆಯೇ ಈ ವಾಚ್ ತೆಳುವಾದ ರಚನೆ ಹೊಂದಿದ್ದು, ಸ್ಟೈಲಿಶ್ ಲುಕ್ ಪಡೆದಿದೆ. ಸುಮಾರು 100 ಕ್ಕೂ ಅಧಿಕ ವಾಚ್‌ಫೇಸ್‌ಗಳ ಆಯ್ಕೆ ಬಳಕೆದಾರರಿಗೆ ಲಭ್ಯ ಇರಲಿದೆ. ಸ್ಮಾರ್ಟ್‌ವಾಚ್ ಮೂಲಕ ಫೋನಿನ ಕ್ಯಾಮೆರಾ, ಮ್ಯೂಸಿಕ್ ನಿಯಂತ್ರಿಸುವ ಆಯ್ಕೆಗಳು ಇವೆ. ವಾಕ್, ಡ್ರಿಂಕ್ ವಾಟರ್ ನಂತಹ ರಿಮೈಂಡರ್‌ಗಳ ಆಯ್ಕೆ ಇದೆ.
ಫೈರ್ ಬೋಲ್ಟ್ ಕೋಬ್ರಾ ಸ್ಮಾರ್ಟ್‌ವಾಚ್ ಫೀಚರ್ಸ್ ಹೀಗಿವೆ : ಫೈರ್‌ಬೋಲ್ಟ್ ಸಂಸ್ಥೆಯ ಈ ಸ್ಮಾರ್ಟ್‌ವಾಚ್ 1.78 ಇಂಚಿನ AMOLED ಪಡೆದಿದ್ದು, 368 × 448 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಇದರೊಂದಿಗೆ ಈ ವಾಚ್ ಸಹ ಸುಮಾರು 123 ಕ್ರೀಡಾ ಮೋಡ್‌ಗಳ ಆಯ್ಕೆಗಳನ್ನು ಪಡೆದುಕೊಂಡಿದೆ.
ಹಾಗೆಯೇ 24 × 7 ಡೈನಾಮಿಕ್ ಹೃದಯ ಬಡಿತ ಮಾನಿಟರಿಂಗ್, SpO2 ಮಾನಿಟರಿಂಗ್, ಸ್ತ್ರೀ ಆರೋಗ್ಯ ರಕ್ಷಣೆ ಮತ್ತು ಸ್ಲೀಪ್ ಮಾನಿಟರಿಂಗ್ ನಂತಹ ಕೆಲವು ಆರೋಗ್ಯ ಫೀಚರ್ಸ್‌ಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡುವ ಆಯ್ಕೆ ಗಳನ್ನು ಇದು ಪಡೆದಿದೆ.


Click it and Unblock the Notifications








