Home
Gadgets

smart TVs: ಆಫರ್ ಬೆಲೆಗೆ ಸ್ಮಾರ್ಟ್‌ಟಿವಿ ಖರೀದಿ ಮಾಡಬೇಕೆ? ಫ್ಲಿಪ್‌ಕಾರ್ಟ್ ನೀಡಿದೆ ವಿಶೇಷ ಡಿಸ್ಕೌಂಟ್‌

ಸ್ಮಾರ್ಟ್‌ಟಿವಿಗಳು (smart TVs) ಇಂದು ವಿಶೇಷ ಫೀಚರ್ಸ್‌ ಆಯ್ಕೆ ಮೂಲಕ ಬಳಕೆದಾರರಿಗೆ ಉತ್ತಮ ಅನುಭವ ನೀಡುವ ಕೆಲಸ ಮಾಡುತ್ತವೆ. ಅದರಲ್ಲೂ ಬಜೆಟ್‌ ಬೆಲೆಯಿಂದ ದುಬಾರಿ ಬೆಲೆಯ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಯಲ್ಲಿ ಲಭ್ಯ ಇದ್ದು, ಗ್ರಾಹಕರು ಅವರ ಅಗತ್ಯಕ್ಕೆ ತಕ್ಕ ಟಿವಿಗಳನ್ನು ಖರೀದಿ ಮಾಡುವ ಮೂಲಕ ಮನೆಯಲ್ಲಿಯೇ ಥಿಯೇಟರ್‌ ಅನುಭವ ಪಡೆದುಕೊಳ್ಳುವುದು ಸಾಮಾನ್ಯವಾದ ವಿಚಾರವಾಗಿದೆ.

ಹೌದು, ಮಾಹಿತಿ ಮನರಂಜನೆಗೆ ಇಂದು ಮನೆಯಲ್ಲಿ ಒಂದು ಸ್ಮಾರ್ಟ್‌ಟಿವಿ ಇದ್ದರೆ ಅದರ ಮಜವೇ ಬೇರೆ. ಅದರಲ್ಲೂ ಮಕ್ಕಳನ್ನು ಸ್ಮಾರ್ಟ್‌ಫೋನ್‌ ನಿಂದ ದೂರ ಇಡಲು ಹಾಗೂ ಹಿರಿಯರಿಗೆ ಸಮಯ ಕಳೆಯಲು ಈ ಟಿವಿಗಳು ಅನುಕೂಲಕರ ಸೌಲಭ್ಯ ಕಲ್ಪಿಸಿಕೊಡುತ್ತವೆ. ಅದರಂತೆ ಈಗ ಫ್ಲಿಪ್‌ಕಾರ್ಟ್‌ ಬಿಗ್ ಇಯರ್ ಎಂಡ್ ಸೇಲ್‌ನಲ್ಲಿ (Flipkart Big Year End Sale) ಸ್ಯಾಮ್‌ಸಂಗ್‌ನಿಂದ ಎಲ್‌ಜಿ ವರೆಗೆ ಎಲ್ಲಾ ರೀತಿಯ ಟಿವಿಗಳಿಗೆ ಉತ್ತಮ ಆಫರ್ ನೀಡಿದೆ. ಅಂದರೆ ಶೇಕಡಾ 75 ರಷ್ಟು ರಿಯಾಯಿತಿಯೊಂದಿಗೆ 50,000 ರೂ.ಗಿಂತ ಕಡಿಮೆ ಬೆಲೆ ಇರುವ ಸ್ಮಾರ್ಟ್‌ಟಿವಿಗಳ ಲಿಸ್ಟ್‌ ಇಲ್ಲಿದೆ ನೋಡಿ.

smart TVs: ಆಫರ್ ಬೆಲೆಗೆ ಸ್ಮಾರ್ಟ್‌ಟಿವಿ ಖರೀದಿ ಮಾಡಬೇಕೆ?..

ಎಲ್‌ಜಿ UR7500 (55UR7500PSC): ಈ ಸ್ಮಾರ್ಟ್‌ಟಿವಿ 55 ಇಂಚಿನ 4K ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 60Hz ರಿಫ್ರೆಶ್‌ ರೇಟ್‌, 20W ಸೌಂಡ್ ಔಟ್‌ಪುಟ್, ವೆಬ್‌ಓಎಸ್‌ ಸಾಫ್ಟ್‌ವೇರ್, ಮ್ಯಾಜಿಕ್ ರಿಮೋಟ್ ಮೂಲಕ ಕಾಣಿಸಿಕೊಂಡಿದೆ. ಈ ಟಿವಿಯನ್ನು ನೀವು ಫ್ಲಿಪ್‌ಕಾರ್ಟ್‌ನಲ್ಲಿ 44,990 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಬ್ಯಾಂಕ್‌ ಆಫರ್ ಸಹ ನೀಡಲಾಗಿದ್ದು, ಪರಿಣಾಮ ಇನ್ನೂ ಕಡಿಮೆ ಬೆಲೆಯಲ್ಲಿ ಇದು ನಿಮಗೆ ಲಭ್ಯವಾಗಲಿದೆ.

ಸ್ಯಾಮ್‌ಸಂಗ್ ಕ್ರಿಸ್ಟಲ್ ವಿಷನ್ 4K ಐಸ್ಮಾರ್ಟ್‌ (UA55CUE70AKLXL) : ಈ ಸ್ಮಾರ್ಟ್‌ಟಿವಿ 55 ಇಂಚಿನ 4K ಡಿಸ್‌ಪ್ಲೇ ಹೊಂದಿದ್ದು, 50Hz ರಿಫ್ರೆಶ್‌ ರೇಟ್‌, 20W ಸೌಂಡ್ ಔಟ್‌ಪುಟ್, ಟೈಜೆನ್ ಟಿವಿ ಓಎಸ್‌ ನೊಂದಿಗೆ ಮೋಷನ್ ಎಕ್ಸೆಲೇಟರ್,ಎಎಲ್‌ಎಲ್‌ಎಮ್‌ ಸೋಲಾರ್ ಸೆಲ್ ರಿಮೋಟ್ ಮತ್ತು ವಿಡಿಯೋ ಕಾಲಿಂಗ್ ಮತ್ತು IOT ಸೆನ್ಸರ್‌ ಆಯ್ಕೆಯನ್ನು ಪಡೆದಿದೆ. ಇದನ್ನು ನೀವು 46,990 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದು. ಇದಕ್ಕೂ ಸಹ ಬ್ಯಾಂಕ್‌ ಆಫರ್ ಇದೆ.

smart TVs: ಆಫರ್ ಬೆಲೆಗೆ ಸ್ಮಾರ್ಟ್‌ಟಿವಿ ಖರೀದಿ ಮಾಡಬೇಕೆ?..

ಮಿ ಎಕ್ಸ್‌ ಪ್ರೊ ಸರಣಿ ಸ್ಮಾರ್ಟ್‌ಟಿವಿ: ಈ ಸ್ಮಾರ್ಟ್‌ಟಿವಿ 55 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 60Hz ಸ್ಕ್ರೀನ್ ರಿಫ್ರೆಶ್‌ ರೇಟ್‌, 4K ಡಾಲ್ಬಿ ವಿಷನ್ ಐಕ್ಯೂ, ಡಾಲ್ಬಿ ಅಟ್ಮಾಸ್‌, ಡಿಟಿಎಸ್‌ ಎಕ್ಸ್‌ , 40W ಸ್ಪೀಕರ್‌ಗಳು, ಗೂಗಲ್‌ ಟಿವಿ ಓಎಸ್‌ ನೊಂದಿಗೆ ಬೆಜೆಲ್ ಲೆಸ್ ವಿನ್ಯಾಸ, ಪ್ಯಾಚ್‌ವಾಲ್ ಬೆಂಬಲ ಮತ್ತು ಕ್ವಾಡ್ ಕೋರ್ A55 ಪ್ರೊಸೆಸರ್ ಮೂಲಕ ಈ ಸ್ಮಾರ್ಟ್‌ಟಿವಿ ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲಿದೆ. ಇದನ್ನು ನೀವು 47,999 ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಬ್ಲೂಪಂಕ್ಟ್ ಸೈಬರ್ ಸೌಂಡ್ G2 ಟಿವಿ (65CSGT7024) : ಈ ಸ್ಮಾರ್ಟ್‌ಟಿವಿ 65 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 4K ಸಾಮರ್ಥ್ಯದೊಂದಿಗೆ 60Hz ರಿಫ್ರೆಶ್‌ ರೇಟ್‌ ಆಯ್ಕೆ ಪಡೆದಿದೆ. ಇದರೊಂದಿಗೆ ಗೂಗಲ್‌ ಟಿವಿ ಓಎಸ್‌, ಡಾಲ್ಬಿ ಅಟ್ಮಾಸ್‌, ಡಾಲ್ಬಿ ವಿಷನ್, 60W ಸೌಂಡ್ ನೊಂದಿಗೆ ಬೆಜೆಲ್ ಲೆಸ್ ವಿನ್ಯಾಸದಲ್ಲಿ ಈ ಟಿವಿ ಕಾಣಿಸಿಕೊಂಡಿದ್ದು, ಇದನ್ನು 43,999 ರೂ.ಗಳಿಂದ ಆರಂಭ ಆಗುವ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಟಿವಿ ಖರೀದಿ ವೇಳೆ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವ ಮೂಲಕ ಇನ್ನೂ ಕಡಿಮೆ ದರದಲ್ಲಿ ಇದನ್ನು ನಿಮ್ಮದಾಗಿಸಿಕೊಳ್ಳಬಹುದು.

smart TVs: ಆಫರ್ ಬೆಲೆಗೆ ಸ್ಮಾರ್ಟ್‌ಟಿವಿ ಖರೀದಿ ಮಾಡಬೇಕೆ?..

ತೋಷಿಬಾ M550MP QLED ಟಿವಿ (55M550MP): ಈ ವಿಶೇಷ ಸ್ಮಾರ್ಟ್‌ಟಿವಿ 55 ಇಂಚಿನ 4K QLED ಡಿಸ್‌ಪ್ಲೇ ಹೊಂದಿದ್ದು, ಹೆಚ್‌ಎಸ್‌ಆರ್‌ 120 ಮೋಡ್, ಗೂಗಲ್‌ಟಿವಿ ಓಎಸ್‌, ಪವರ್ ಬೇಸ್‌ ವೂಫರ್‌ನೊಂದಿಗೆ 49W ಸೌಂಡ್ ಔಟ್‌ಪುಟ್, ಡಾಲ್ಬಿ ವಿಷನ್ ನೊಂದಿಗೆ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ ಅನ್ನು ಈ ಟಿವಿ ಪಡೆದಿದೆ. ಇದನ್ನು ನೀವು 49,999 ರೂ.ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
In the Flipkart Big Year End Sale, Smart TVs from many companies including Samsung, Toshiba, MI have been offered.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+