Home
Gadgets

Garmin: 2 ಸೊಗಸಾದ ಸ್ಮಾರ್ಟ್‌ವಾಚ್‌ ಲಾಂಚ್; ಭರಪೂರ ಫೀಚರ್ಸ್.. ಬೆಲೆ ಬಗ್ಗೆ ಚಿಂತೆ ಬೇಡ.. ಸೇಲ್ ಯಾವಾಗ?

Garmin Instinct 3 Series launched in India: ಗಾರ್ಮಿನ್ ಭಾರತದಲ್ಲಿ ಹೊಸ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳು ಇನ್‌ಸ್ಟಿಂಕ್ಟ್ 3 ಸರಣಿಯ ಅಡಿಯಲ್ಲಿ ದೇಶೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೌದು, ಗಾರ್ಮಿನ್ ಇನ್‌ಸ್ಟಿಂಕ್ಟ್ 3 (Garmin Instinct 3) ಮತ್ತು ಗಾರ್ಮಿನ್ ಇನ್‌ಸ್ಟಿಂಕ್ಟ್ E (Garmin Instinct E) ಸ್ಮಾರ್ಟ್‌ವಾಚ್‌ಗಳು ಅಧಿಕೃತವಾಗಿ ಲಾಂಚ್ ಆಗಿವೆ. ವಿಶೇಷವೆಂದರೆ, ಗಾರ್ಮಿನ್ ಇನ್‌ಸ್ಟಿಂಕ್ಟ್ 3 ಸರಣಿಯ ಸ್ಮಾರ್ಟ್‌ವಾಚ್‌ಗಳನ್ನು ಜನವರಿಯಲ್ಲಿ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಯಿತು. ಇದೀಗ, ಭಾರತದಲ್ಲಿ ಲಾಂಚ್ ಮಾಡಲಾಗಿದೆ. ಬನ್ನಿ, ಈ ಸ್ಮಾರ್ಟ್‌ವಾಚ್‌ಗಳ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಗಾರ್ಮಿನ್ ಇನ್‌ಸ್ಟಿಂಕ್ಟ್ 3 ಎರಡು ರೂಪಾಂತರಗಳಲ್ಲಿ ಬರುತ್ತದೆ. ಒಂದು ಅಮೋಲೆಡ್ ಡಿಸ್ಪ್ಲೇಯೊಂದಿಗೆ ಮತ್ತು ಇನ್ನೊಂದು ಸೌರ ಚಾರ್ಜಿಂಗ್ ಬೆಂಬಲಿಸುವ MIP ಪ್ಯಾನೆಲ್‌ನೊಂದಿಗೆ ಬಿಡುಗಡೆಯಾಗಿದೆ. ಇನ್‌ಸ್ಟಿಂಕ್ಟ್ E ವಾಚ್ ರೂಪಾಂತರದಲ್ಲಿ MIP ಡಿಸ್ಪ್ಲೇ ಸಹ ಲಭ್ಯವಿದೆ. ಈ ಸ್ಮಾರ್ಟ್‌ವಾಚ್‌ಗಳು MIL-STD-810 ಪ್ರಮಾಣೀಕರಣ ಮತ್ತು 10ATM ನೀರು ನಿರೋಧಕ ರೇಟಿಂಗ್‌ ಪಡೆದಿವೆ. ಇವುಗಳಲ್ಲಿ ಸ್ಯಾಟಿಕ್ ಜಿಪಿಎಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಗಾರ್ಮಿನ್ ಇನ್ಸ್ಟಿಂಕ್ಟ್ 3 ಸರಣಿಯ ವೈಶಿಷ್ಟ್ಯಗಳು ಈ ಕೆಳಗಿನಂತಿವೆ.

Garmin: 2 ಸೊಗಸಾದ ಸ್ಮಾರ್ಟ್‌ವಾಚ್‌ ಲಾಂಚ್; ಭರಪೂರ ಫೀಚರ್ಸ್.. ಬೆಲೆ ನೋಡಿ

ಯಾವೆಲ್ಲಾ ಆರೋಗ್ಯ ವೈಶಿಷ್ಟ್ಯಗಳಿವೆ?

ಗಾರ್ಮಿನ್ ಇನ್‌ಸ್ಟಿಂಕ್ಟ್ 3 ಸರಣಿಯ ಸ್ಮಾರ್ಟ್‌ವಾಚ್‌ಗಳು ಆರೋಗ್ಯ ಮತ್ತು ಸ್ವಾಸ್ಥ್ಯ ಟ್ರ್ಯಾಕಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಹೃದಯ ಬಡಿತ ಮೇಲ್ವಿಚಾರಣೆ, ಪಲ್ಸ್ ಆಕ್ಸ್ ಸಂವೇದಕ, ನಿದ್ರೆಯ ಒಳನೋಟಗಳು, ಹೃದಯ ಬಡಿತ ವ್ಯತ್ಯಾಸ (HRV), ಒತ್ತಡ ಟ್ರ್ಯಾಕಿಂಗ್, ಮುಟ್ಟಿನ ಮತ್ತು ಗರ್ಭಧಾರಣೆಯ ಒಳನೋಟ ಸೇರಿದಂತೆ ಸುಧಾರಿತ ಆರೋಗ್ಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇದರೊಂದಿಗೆ ಕ್ರೀಡೆ ಮತ್ತು ವ್ಯಾಯಾಮ ವಿಧಾನಗಳು ಲಭ್ಯವಿದೆ. ಗಾರ್ಮಿನ್ ಕೋಚ್ ಬೆಂಬಲದೊಂದಿಗೆ, ಈ ವಾಚ್ ಹಲವಾರು ಪೂರ್ವ ಲೋಡ್ ಮಾಡಲಾದ ಕ್ರೀಡಾ ವಿಧಾನಗಳೊಂದಿಗೆ ಬರುತ್ತದೆ. ಈ ಪೈಕಿ ಹೈಕಿಂಗ್, ಓಟ, ಸೈಕ್ಲಿಂಗ್, ಈಜು, ಗಾಲ್ಫ್, HIIT, ಶಕ್ತಿ ತರಬೇತಿ, ಪೈಲೇಟ್ಸ್ ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇವು ಮೆಸೆಂಜರ್ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಮೆಸೆಂಜರ್ ಮೂಲಕ ದ್ವಿಮುಖ ಸಂದೇಶ ಕಳುಹಿಸಬಹುದು. ಲೈವ್‌ಟ್ರ್ಯಾಕ್, ಘಟನೆ ಪತ್ತೆ ಮತ್ತು ಸಹಾಯ ಎಚ್ಚರಿಕೆ ಸಹ ಒದಗಿಸಲಾಗಿದೆ. ಇದು ತುರ್ತು ಪರಿಸ್ಥಿತಿಯಲ್ಲಿ ನಿಮಗೆ ಸಹಾಯ ಮಾಡುತ್ತದೆ.

ನೀರಿನಲ್ಲಿಯೂ ಸುಲಭವಾಗಿ ಕೆಲಸ ಮಾಡಬಹುದು

ಗಾರ್ಮಿನ್ ಇನ್‌ಸ್ಟಿಂಕ್ಟ್ 3 ಸರಣಿಯ ಸ್ಮಾರ್ಟ್‌ವಾಚ್‌ಗಳು ಲೋಹ ಬಲವರ್ಧಿತ ಬೆಜೆಲ್‌ಗಳು ಮತ್ತು ಫೈಬರ್ ಬಲವರ್ಧಿತ ಪಾಲಿಮರ್ ಕೇಸ್‌ಗಳೊಂದಿಗೆ ಬರುತ್ತವೆ. ಇವುಗಳನ್ನು ಗಟ್ಟಿಮುಟ್ಟಾಗಿ ಮತ್ತು ಬಾಳಿಕೆ ಬರುವಂತೆ ಮಾಡುತ್ತದೆ. ಅಲ್ಲದೆ, ಸ್ಕ್ರಾಚ್ ನಿರೋಧಕ ಡಿಸ್ಪ್ಲೇ ಒರಟು ಮತ್ತು ಕಠಿಣ ಬಳಕೆಗೆ ಸೂಕ್ತವಾಗಿಸುತ್ತದೆ. ಮೊದಲೇ ಹೇಳಿದಂತೆ ಈ ವಾಚ್‌ಗಳು MIL-STD-810 ಮಿಲಿಟರಿ ದರ್ಜೆಯ ಪ್ರಮಾಣೀಕರಣ ಮತ್ತು 10ATM (100 ಮೀಟರ್) ಜಲನಿರೋಧಕ ರೇಟಿಂಗ್ ಪಡೆದಿವೆ. ಇದು ಕಠಿಣ ಹವಾಮಾನ ಮತ್ತು ನೀರಿನಲ್ಲಿಯೂ ಸಹ ಸುಲಭವಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.

Garmin: 2 ಸೊಗಸಾದ ಸ್ಮಾರ್ಟ್‌ವಾಚ್‌ ಲಾಂಚ್; ಭರಪೂರ ಫೀಚರ್ಸ್.. ಬೆಲೆ ನೋಡಿ

ಇನ್‌ಸ್ಟಿಂಕ್ಟ್ 3 ಸರಣಿಯ ಡಿಸ್ಪ್ಲೇ ವಿವರ

ಇನ್‌ಸ್ಟಿಂಕ್ಟ್ E ಮತ್ತು ಇನ್‌ಸ್ಟಿಂಕ್ಟ್ 3 ಸೋಲಾರ್ ಸ್ಮಾರ್ಟ್‌ವಾಚ್‌ಗಳು MIP ಡಿಸ್ಪ್ಲೇ ಹೊಂದಿವೆ. ಇದು ಸೂರ್ಯನ ಬೆಳಕಿನಲ್ಲಿಯೂ ಸ್ಪಷ್ಟವಾಗಿ ಗೋಚರಿಸುತ್ತದೆ. ಸ್ಟ್ಯಾಂಡರ್ಡ್ ಇನ್‌ಸ್ಟಿಂಕ್ಟ್ 3 ವಾಚ್ 1.2 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 390 × 390 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದು ಯಾವಾಗಲೂ ಆನ್ ವೈಶಿಷ್ಟ್ಯ ಬೆಂಬಲಿಸುತ್ತದೆ. ಇನ್‌ಸ್ಟಿಂಕ್ಟ್ 3 ಕೆಂಪು ಬೆಳಕು ಮತ್ತು ಸ್ಟ್ರೋಬ್ ಮೋಡ್‌ಗಳನ್ನು ಒಳಗೊಂಡಿರುವ ಅಂತರ್ನಿರ್ಮಿತ ಎಲ್‌ಇಡಿ ಫ್ಲ್ಯಾಶ್‌ಲೈಟ್‌ನೊಂದಿಗೆ ಬರುತ್ತದೆ. ಇದು ರಾತ್ರಿ ಚಾರಣ ಮಾಡುವಾಗ ಅಥವಾ ತುರ್ತು ಸಂದರ್ಭಗಳಲ್ಲಿ ಅತ್ಯಂತ ಉಪಯುಕ್ತವಾಗಿದೆ.

ಟ್ರೆಕ್ಕಿಂಗ್ ಅಥವಾ ಸಾಹಸ ಮಾಡುವಾಗ ಉಪಯುಕ್ತ

ಎರಡು ಸ್ಮಾರ್ಟ್‌ವಾಚ್‌ಗಳು ಮಲ್ಟಿ ಬ್ಯಾಂಡ್ ಜಿಪಿಎಸ್ ಬೆಂಬಲ ಪಡೆದಿವೆ. ಇವು ಗಾರ್ಮಿನ್‌ನ SatIQ ತಂತ್ರಜ್ಞಾನದೊಂದಿಗೆ ಬರುತ್ತವೆ. ಈ ಸ್ಮಾರ್ಟ್‌ವಾಚ್‌ ಆಲ್ಟಿಮೀಟರ್, ಬ್ಯಾರೋಮೀಟರ್ ಮತ್ತು ದಿಕ್ಸೂಚಿಯಂತಹ ಎಬಿಸಿ (ABC) ಸಂವೇದಕಗಳನ್ನು ಹೊಂದಿದೆ. ಟ್ರ್ಯಾಕ್‌ಬ್ಯಾಕ್ ವೈಶಿಷ್ಟ್ಯವು ನೀವು ಹಿಂದೆ ಅನುಸರಿಸಿದ ಮಾರ್ಗಕ್ಕೆ ಮರಳಲು ಸಹಾಯ ಮಾಡುತ್ತದೆ. ಇದು ವಿಶೇಷವಾಗಿ ಟ್ರೆಕ್ಕಿಂಗ್ ಅಥವಾ ಸಾಹಸ ಮಾಡುವಾಗ ಉಪಯುಕ್ತವಾಗಿದೆ.

ಗಾರ್ಮಿನ್ ಇನ್‌ಸ್ಟಿಂಕ್ಟ್ 3 ಸರಣಿಯ ಬೆಲೆ

ಭಾರತದಲ್ಲಿ ಗಾರ್ಮಿನ್ ಇನ್ಸ್ಟಿಂಕ್ಟ್ E ಬೆಲೆ 35,990 ರೂ.ನಿಂದ ಪ್ರಾರಂಭವಾಗುತ್ತದೆ. ಗಾರ್ಮಿನ್ ಇನ್‌ಸ್ಟಿಂಕ್ಟ್ 3 45mm ಸೋಲಾರ್ ವಾಚ್ ಬೆಲೆ 46,990 ರೂ.ಗೆ ಬಿಡುಗಡೆಯಾಗಿದೆ. ಗಾರ್ಮಿನ್ ಇನ್‌ಸ್ಟಿಂಕ್ಟ್ 3 ವಾಚ್‌ನ 45mm ಅಮೋಲೆಡ್ ರೂಪಾಂತರದ ಬೆಲೆ 52,999 ರೂ. ಮತ್ತು 55mm ಅಮೋಲೆಡ್ ರೂಪಾಂತರದ ಬೆಲೆ 58,999 ರೂ. ಇದೆ. ನೀವು ಗಾರ್ಮಿನ್ ಇಂಡಿಯಾ ವೆಬ್‌ಸೈಟ್‌ ಮತ್ತು ಆಯ್ದ ಪ್ರೀಮಿಯಂ ಚಿಲ್ಲರೆ ಅಂಗಡಿಗಳಲ್ಲಿ ಇನ್‌ಸ್ಟಿಂಕ್ಟ್ 3 ಸರಣಿಯ ಎಲ್ಲಾ ವಾಚ್‌ಗಳನ್ನು ಖರೀದಿಸಬಹುದು.

Best Mobiles in India

English summary
Garmin Instinct 3 Series Launched In India With Advanced GPS And Long Battery Life: check Price, Features, Specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+