ಭಾರತದಲ್ಲಿ ಗಾರ್ಮಿನ್ ಫೋರ್‌ರನ್ನರ್ 745 ಸ್ಮಾರ್ಟ್‌ವಾಚ್ ಬಿಡುಗಡೆ!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ವಾಚ್‌ ಮಾರುಕಟ್ಟೆ ಸಾಕಷ್ಟು ವಿಶಾಲವಾಗಿದೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವಿಭಿನ್ನ ಮಾದರಿಯ ಸ್ಮಾರ್ಟ್‌ವಾಚ್‌ಗಳನ್ನ ಪರಿಚಯಿಸಿವೆ. ಸದ್ಯ ಸ್ಮಾರ್ಟ್ ವಾಚ್‌ಗಳು ಮತ್ತು ಇತರ ವೆರಿಯೆಬಲ್ಸ್‌ ಧರಿಸಬಹುದಾದ ಪರಿಕರಗಳ ಮಾರುಕಟ್ಟೆಯಲ್ಲಿ ಗಾರ್ಮಿನ್ ಪ್ರಸಿದ್ಧ ಬ್ರಾಂಡ್ ಎನಿಸಿಕೊಂಡಿದೆ. ಇದೀಗ ತನ್ನ ಹೊಸ ಗಾರ್ಮಿನ್ ಫೋರ್‌ ರನ್ನರ್ 745 ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಸುಧಾರಿತ ಜಿಪಿಎಸ್ ಸ್ಮಾರ್ಟ್ ವಾಚ್ ಸಿಲಿಕೋನ್ ಪಟ್ಟಿಯನ್ನು ಹೊಂದಿದೆ.

ಗಾರ್ಮಿನ್ ಫೋರ್‌ ರನ್ನರ್ 745 ಸ್ಮಾರ್ಟ್‌ವಾಚ್

ಹೌದು, ಗಾರ್ಮಿನ್‌ ಕಂಪೆನಿ ತನ್ನ ಹೊಸ ಗಾರ್ಮಿನ್ ಫೋರ್‌ ರನ್ನರ್ 745 ಸ್ಮಾರ್ಟ್‌ವಾಚ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ ಡಿಎಕ್ಸ್‌ ಪ್ರೊಟೆಕ್ಷನ್‌ ಅನ್ನು ಹೊಂದಿದ್ದು, 5ATM ವಾಟರ್‌ ರೆಸಿಸ್ಟೆನ್ಸ್‌ ಅನ್ನು ಸಹ ಒಳಗೊಂಡಿದೆ. ಇದನ್ನು ರನ್ನರ್‌ಗಳು ಮತ್ತು ಟ್ರಯಥ್‌ಲೆಟ್‌ಗಳಿಗಾಗಿ ವಿಶೇಷವಾಗಿ ತಯಾರಿಸಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗಾರ್ಮಿನ್ ಫೋರ್‌ ರನ್ನರ್ 745

ಗಾರ್ಮಿನ್ ಫೋರ್‌ ರನ್ನರ್ 745 ಅನ್ನು ಈ ಹಿಂದೆ ಯುಎಸ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು, ಇದೀಗ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದೆ. ಗಾರ್ಮಿನ್ ಫೋರ್‌ರನ್ನರ್ 745 ವಿವರವಾದ ವರ್ಕ್‌ಔಟ್‌ ಡೇಟ್‌ ಮತ್ತು ಡಿವೈಸ್‌ಲ್ಲಿನ ವರ್ಕ್‌ಔಟ್‌ ಆಯ್ಕೆಗಳನ್ನು ನೀಡುತ್ತದೆ, ಇದು ಗಾರ್ಮಿನ್ ಕೋಚ್‌ಗೆ ಹೊಂದಿಕೊಳ್ಳುತ್ತದೆ. ಜೊತೆಗೆ, ಸ್ಮಾರ್ಟ್ ವಾಚ್ ಓಟಗಾರನ ಗುರಿ ಮತ್ತು ಕಾರ್ಯಕ್ಷಮತೆಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ, ಇದು ಹೃದಯ ಬಡಿತ ಮಾನಿಟರಿಂಗ್, ಉಸಿರಾಟದ ಪ್ರಮಾಣ, ಬಾಡಿ ಬ್ಯಾಟರಿ ಎನರ್ಜಿ ಮಾನಿಟರ್, ಇಡೀ ದಿನದ ಒತ್ತಡ ಟ್ರ್ಯಾಕಿಂಗ್ ಮತ್ತು ಸುಧಾರಿತ ನಿದ್ರೆಯ ಮೇಲ್ವಿಚಾರಣೆಯಂತಹ ಸಾಮಾನ್ಯ ಸ್ಮಾರ್ಟ್ ವಾಚ್ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಗಾರ್ಮಿನ್

ಇನ್ನು ಈ ವಾಚ್‌ ಉಸಿರಾಟ ಮಾರ್ಗದರ್ಶಿ, ಹೈಡ್ರೇಷನ್‌ ಆಲರ್ಟ್‌ ಅನ್ನು ಸಹ ಒಳಗೊಂಡಿದೆ. ಗಾರ್ಮಿನ್ ಎಲಿವೇಟ್ ಮಣಿಕಟ್ಟಿನ ಹೃದಯ ಬಡಿತ ಮಾನಿಟರ್, ಬ್ಯಾರೊಮೆಟ್ರಿಕ್ ಆಲ್ಟಿಮೀಟರ್, ದಿಕ್ಸೂಚಿ, ಗೈರೊಸ್ಕೋಪ್, ಅಕ್ಸೆಲೆರೊಮೀಟರ್, ಥರ್ಮಾಮೀಟರ್ ಮತ್ತು ಪಲ್ಸ್ ಆಕ್ಸ್ ರಕ್ತ ಆಮ್ಲಜನಕ ಸ್ಯಾಚುರೇಶನ್ ಮಾನಿಟರ್ ಫೀಚರ್ಸ್‌ ಅನ್ನು ಹೊಂದಿದೆ. ಇನ್ನು ಗಾರ್ಮಿನ್ ಫೋರ್‌ ರನ್ನರ್ 745 ನಲ್ಲಿನ ಬ್ಯಾಟರಿ ಮತ್ತೊಂದು ಪ್ರಮುಖ ಅಂಶವಾಗಿದೆ, ಇದು ಸ್ಮಾರ್ಟ್‌ವಾಚ್ ಮೋಡ್‌ನಲ್ಲಿ ಏಳು ದಿನಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಮ್ಯೂಸಿಕ್‌ನೊಂದಿಗೆ ಜಿಪಿಎಸ್ ಮೋಡ್‌ಗೆ ಬದಲಾಯಿಸಿದಾಗ, ಅದು 16 ಗಂಟೆಗಳವರೆಗೆ ಮತ್ತು ಮ್ಯೂಸಿಕ್‌ ಇಲ್ಲದೆ ಆರು ಗಂಟೆಗಳವರೆಗೆ ಇರುತ್ತದೆ. ಬ್ಯಾಟರಿಯು ಅಲ್ಟ್ರಾಟ್ರಾಕ್ ಮೋಡ್ ಅನ್ನು ಸಹ ಒಳಗೊಂಡಿದೆ, ಇದು ಗಾರ್ಮಿನ್ 21 ಗಂಟೆಗಳವರೆಗೆ ಇರುತ್ತದೆ ಎಂದು ಹೇಳಿದೆ.

ಸ್ಮಾರ್ಟ್ ವಾಚ್

ಈ ಸ್ಮಾರ್ಟ್ ವಾಚ್‌ ಬೆಲೆ 52,990 ರೂ ಆಗಿದೆ. ಇದು ವೈಟ್‌ಸ್ಟೋನ್, ಮ್ಯಾಗ್ಮಾ ರೆಡ್, ನಿಯೋ ಟ್ರಾಪಿಕ್ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಪೇಟ್‌ಎಂ ಮಾಲ್, ಅಮೆಜಾನ್, ಟಾಟಾ ಕ್ಲಿಕ್, ಮೈಂಟ್ರಾ, ಫ್ಲಿಪ್‌ಕಾರ್ಟ್, ಮತ್ತು ಅಧಿಕೃತ ಗಾರ್ಮಿನ್ ಇಂಡಿಯಾ ಸ್ಟೋರ್‌ ಹಾಗೂ ಹಲವಾರು ಇ-ಕಾಮರ್ಸ್ ಸೈಟ್‌ಗಳಲ್ಲಿ ಹೊಸ ಗಾರ್ಮಿನ್ ಸ್ಮಾರ್ಟ್‌ವಾಚ್ ಅನ್ನು ಖರೀದಿಸಬಹುದಾಗಿದೆ.

Best Mobiles in India

English summary
Garmin is a well-known brand when it comes to smartwatches and other wearable accessories. The company has further expanded its product portfolio with the launch of the Garmin Forerunner 745 smartwatch.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X