Home
Gadgets

ಏರ್‌ಪೊಡ್ ಕಳೆದು ಹೋಗಬಾರದೆಂದು ಈಕೆ ಮಾಡಿದ್ದೇನು ಗೊತ್ತಾ.?

ಸ್ಮಾರ್ಟ್‌ಫೋನಿಗೆ ಉದ್ದನೆಯ ವೈಯರ್ ನಿಂದ ಕೂಡಿದ ಹೆಡ್‌ಫೋನ್ ಸೇರಿಸಿ ಸಂಗೀತ ಕೇಳುವ ಜಮಾನಾ
ಈಗ ಬದಲಾಗಿದೆ. ಈಗೇನಿದ್ದರೂ ವೈಯರ್ ಲೆಸ್‌ ಏರಪೊಡ್ಸ್‌ಗಳೆ ಟ್ರೆಂಡ್ ನಲ್ಲಿರುವುದು. ಆದರೆ ಈ ಏರ್‌ಪೊಡ್ ಗಳು ಚಿಕ್ಕದಾಗಿರುವುದರಿಂದ ಬೇಗ ಕಳೆದು ಹೋಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೆ ಈ ಮಹಿಳೆ ತನ್ನ ಏರ್‌ಪೊಡ್‌ಗಳು ಕಳೆದುಹೋಗಬಾರದೆಂದು ಏನು ಮಾಡಿದ್ದಾಳೆ ಗೊತ್ತಾ?

ಏರ್‌ಪೊಡ್ ಕಳೆದು ಹೋಗಬಾರದೆಂದು ಈಕೆ ಮಾಡಿದ್ದೇನು ಗೊತ್ತಾ.?

ವರ್ಜಿನಿಯಾದ 22 ವರ್ಷದ 'ಗೇಬ್ರಿಲಿ ರೆಲ್ಲಿ' ಎಂಬ ಹುಡುಗಿ ಏರ್‌ಪೊಡ್ಸ್‌ಗಳು ಕಳೆದು ಹೋಗಬಾರದೆಂದು ಅವುಗಳನ್ನು ಕಿವಿಓಲೆ(ಇಯರ್‌ರಿಂಗ್‌)ಗಳನ್ನಾಗಿ ಮಾಡಿ ಹಾಕಿಕೊಂಡಿದ್ದಾಳೆ.! ಹೌದು, ಏಕೆಂದರೆ ಏರ್‌ಪೊಡ್‌ಗಳನ್ನು ಕಳೆದುಕೊಳ್ಳಲು ಆಕೆಗೆ ಇಷ್ಟವಿಲ್ಲ ಹಾಗಾಗಿ ಅವಳು ತನ್ನ ಆಪಲ್ ಸಂಸ್ಥೆಯ ಏರ್‌ಪೊಡ್‌ಗಳನ್ನು ಸುಂದರ ಇಯರ್‌ರಿಂಗ್ ತರಹ ಮಾಡಿಕೊಂಡು ಕಿವಿಯಲ್ಲಿ ಧರಿಸುತ್ತಿದ್ದಾಳೆ.

ಏರ್‌ಪೊಡ್ ಕಳೆದು ಹೋಗಬಾರದೆಂದು ಈಕೆ ಮಾಡಿದ್ದೇನು ಗೊತ್ತಾ.?

ಆಕೆಯ ಬಳಿ ಎರಡು ಜೊತೆ ಬಿಟ್ಸ್ ಬ್ಲೂಟೂತ್ ಹೆಡ್‌ಫೋನ್‌ಗಳಿದ್ದವು, ಅವಳ ಮನೆಯ ಬೆಕ್ಕು ಅವುಗಳನ್ನು ಹಾಳು ಮಾಡಿತಂತೆ ಅಲ್ಲದೇ ಆ ಬೆಕ್ಕು ಹೆಡ್‌ಫೋನ್‌ಗಳ ವೈಯರ್ ಅನ್ನು ಕಡಿತು ಹಾಕಿತ್ತು. ಹೀಗಾಗಿ ಅವಳು 'ಏರ್‌ಪೊಡ್' ಖರೀದಿಸಿದ್ದಾಗಿ ತಿಳಿಸಿದ್ದಾಳೆ. ಆ ಏರ್‌ಪೊಡ್ ಗಳಿಗೆ ಯಾವುದೇ ವೈಯರ್ ಇಲ್ಲದಿರುವುದರಿಂದ ಬೆಕ್ಕು ಕಡಿಯುವ ಆತಂಕ ಸಹ ಇಲ್ಲವಾಗಿದೆಯಂತೆ. ಮತ್ತು ಕಿವಿಯಲ್ಲಿ ಇಯರ್ ರಿಂಗ್ ತರಹ ಹಾಕಿಕೊಂಡಿರುತ್ತಾಳೆ.

ಏರ್‌ಪೊಡ್ ಕಳೆದು ಹೋಗಬಾರದೆಂದು ಈಕೆ ಮಾಡಿದ್ದೇನು ಗೊತ್ತಾ.?

ಆಕೆ ಏರ್‌ಪೊಡ್‌ಗಳಿಗೆ ಏರ್‌ರಿಂಗ್ಸ್ ಎಂದು ಹೆಸರಿಟ್ಟಿದ್ದಾಳೆ. ಅಂದಹಾಗೆ ಈ ಚತುರೆ ಗೇಬ್ರಿಲಿ ರೆಲ್ಲಿ ತನ್ನ ಐಡಿಯಾವನ್ನು ಅಲ್ಲಿಗೇ ಕೈ ಬಿಡಲಿಲ್ಲಾ. ಬದಲಾಗಿ ವೆಬ್‌ಸೈಟ್‌ ರಚಿಸಿಕೊಂಡು ಮಾರಾಟಮಾಡಲು ಶುರು ಮಾಡಿದ್ದು, ಗ್ರಾಹಕರಿಂದ ಮುಂಗಡ ಆರ್ಡರ್ ಪಡೆದು ಏರ್‌ಪೊಡ್ ಗಳನ್ನು ಏರ್‌ರಿಂಗ್ಸ್‌ ಆಗಿ ಪರಿವರ್ತಿಸಿ ಸೇಲ್ ಮಾಡುತ್ತಿದ್ದಾಳೆ. ಈಕೆಯ ಇಯರ್‌ರಿಂಗ್‌ ಕಮ್ ಏರ್‌ಪೊಡ್‌ಗಳು ಮಹಿಳಾ ಗ್ರಾಹಕಿಯರನ್ನು ಆಕರ್ಷಿಸುತ್ತಿವೆ ಎನ್ನಲಾಗುತ್ತಿದೆ. ಒಂದು ಜೊತೆ ಏರ್‌ಪೊಡ್ ಬೆಲೆ $20.00 (1,450ರೂ.ಗಳು) ಎನ್ನಲಾಗಿದೆ.

Best Mobiles in India

English summary
Since they're each about an inch and a half in length and not tethered to anything, losing AirPods is common.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+