Gaming Handheld: ಹೊಸ ಸೌಲಭ್ಯದೊಂದಿಗೆ ಜಿಪಿಡಿ ವಿನ್ ಮಿನಿ 2024 ಗೇಮಿಂಗ್ ಹ್ಯಾಂಡ್ಹೆಲ್ಡ್ ಲಾಂಚ್!
ಭಾರತವೂ ಸೇರಿದಂತೆ ಇತ್ತೀಚೆಗೆ ಗೇಮಿಂಗ್ ವಲಯಕ್ಕೆ (Gaming sector) ಟೆಕ್ ಕಂಪೆನಿಗಳು ಮೊದಲ ಆದ್ಯತೆ ನೀಡುತ್ತಿದ್ದಾರೆ. ಇದು ಲಾಭದಾಯಕ ವ್ಯವಹಾರ ಆಗಿರುವುದರಿಂದ ಕಂಪೆನಿಗಳು ಈ ಮೂಲಕ ಸಾಕಷ್ಟು ಆದಾಯವನ್ನೂ ಸಹ ಪಡೆಯುತ್ತಿವೆ. ಈ ಎಲ್ಲಾ ಬೆಳವಣಿಗೆ ನಡುವೆ ವಿಶೇಷ ಗೇಮಿಂಗ್ ಹ್ಯಾಂಡ್ಹೆಲ್ಡ್ (gaming handheld) ಅನ್ನು ಹೊಸ ನವೀಕರಣದೊಂದಿಗೆ ಲಾಂಚ್ ಮಾಡಲಾಗಿದೆ.
ಹೌದು, ಜಿಪಿಡಿ ವಿನ್ ಮಿನಿ 2024 ಗೇಮಿಂಗ್ ಹ್ಯಾಂಡ್ಹೆಲ್ಡ್ (GPD Win Mini 2024 gaming handheld) ಅನ್ನು ಅನ್ನು ಇದೀಗ ನವೀಕರಣದೊಂದಿಗೆ ಅನಾವರಣ ಮಾಡಲಾಗಿದೆ. ಈ ವಿಶೇಷ ಡಿವೈಸ್ ಗೇಮರ್‌ಗಳನ್ನು ಹೊಸ ಲೋಕಕ್ಕೆ ಕರೆದೊಯ್ಯುವ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ ಇದು ರೈಜೆನ್ 7 8840U ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಕರ್ಷಕ ಡಿಸ್‌ಪ್ಲೇ ಫೀಚರ್ಸ್ ಹೊಂದಿದೆ. ಹಾಗಿದ್ರೆ, ಬನ್ನಿ ಈ ವಿಶೇಷ ಡಿವೈಸ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ತಿಳಿಯೋಣ.

ಜಿಪಿಡಿ ವಿನ್ ಮಿನಿ 2024 ಗೇಮಿಂಗ್ ಹ್ಯಾಂಡ್ಹೆಲ್ಡ್: ಜಿಪಿಡಿ ತನ್ನ ವಿನ್ ಮಿನಿ ಹ್ಯಾಂಡ್‌ಹೆಲ್ಡ್ ಗೇಮಿಂಗ್ ಡಿವೈಸ್ 2024 ಕ್ಕೆ ನವೀಕರಣವನ್ನು ನೀಡಿದ್ದು, ಇದು ಎಎಮ್‌ಡಿಯ ರೈಜೆನ್ 8000 ಸರಣಿಯ ಎಪಿಯು ಗಳನ್ನು ಒಳಗೊಂಡಿದೆ. ಅದರಂತೆ ಇತ್ತೀಚಿನ ರೈಜೆನ್ 7 8840U ಅಥವಾ ರೈಜೆನ್ 5 8640U ಪ್ರೊಸೆಸರ್‌ನೊಂದಿಗೆ ಈ ಡಿವೈಸ್ ಲಭ್ಯವಾಗಲಿದೆ.
ಇದು 8 ಜನ್ 4 ಕೋರ್‌ಗಳನ್ನು ಹೊಂದಿದ್ದು, ವೇಗದ ಸಾಮರ್ಥ್ಯ ಮತ್ತು ಗೇಮ್‌ಗಳನ್ನು ಆಡಲು ಮತ್ತು ಇತರ ಕಾರ್ಯಗಳನ್ನು ಮಾಡಲು ಹೆಚ್ಚಿನ ಶಕ್ತಿ ನೀಡಲಿದೆ ಎಮ್‌ಡಿಯ XDNA AI-ಕೋರ್ ತಂತ್ರಜ್ಞಾನದ ಸೇರ್ಪಡೆಯು ಕಂಪ್ಯೂಟಿಂಗ್ ಕಾರ್ಯಗಳಲ್ಲಿ ಈ ಡಿವೈಸ್‌ನ ಕಾರ್ಯಕ್ಷಮತೆಯನ್ನು ಸುಧಾರಿಸುವ ನಿರೀಕ್ಷೆಯಿದೆ.

ಹೊಸ ಮಾದರಿಯಲ್ಲಿನ ದೊಡ್ಡ ಸುಧಾರಣೆಗಳಲ್ಲಿ ಪ್ರಕುಖವಾಗಿರುವುದು ಡಿಸ್‌ಪ್ಲೇ. ಇದು ಈಗ 7 ಇಂಚಿನ, 1080p ಪಿಕ್ಸೆಲ್ ಸಾಮರ್ಥ್ಯದ ಎಲ್‌ಟಿಪಿಎಸ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 120 Hz ರಿಫ್ರೆಶ್ ರೇಟ್ ಆಯ್ಕೆ ಇದ್ದು, ಫ್ರೀಸಿಂಕ್ ಪ್ರೀಮಿಯಂ ಮತ್ತು ವೇರಿಯಬಲ್ ರಿಫ್ರೆಶ್ ರೇಟ್ (VRR) ಅನ್ನು ಬೆಂಬಲಿಸುತ್ತದೆ. ಇದೆಲ್ಲದರ ಜೊತೆಗೆ ಗೊರಿಲ್ಲಾ ಗ್ಲಾಸ್ 6 ರಕ್ಷಣೆ ಪಡೆದಿದೆ.
ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ 2024 ರ ಮಾದರಿಯು ಬಾಹ್ಯ ಜಿಪಿಯುಗಳನ್ನು ಸಂಪರ್ಕಿಸಲು ಹಿಂದಿನ ಆವೃತ್ತಿಯಲ್ಲಿದ್ದ OCuLink ಪೋರ್ಟ್ ಅನ್ನು ಕೈಬಿಟ್ಟಿದೆ. ಇದರಿಂದ ಇನ್ಮುಂದೆ ಈ ಹೊಸ ಡಿವೈಸ್‌ನಲ್ಲಿ ಯುಎಸ್‌ಬಿ4 (USB4) ಸಂಪರ್ಕ ಬಳಕೆ ಮಾಡಿಕೊಂಡು ಈ ಸೌಲಭ್ಯ ಪಡೆಯಬಹುದಾಗಿದೆ. ಜೊತೆಗೆ ಈ ಡಿವೈಸ್ ಪ್ಲೇಸ್ಟೇಷನ್ 3 ಗೇಮ್‌ಗಳನ್ನು ಅನುಕರಿಸುವಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಅಂದರೆ 60 FPS ಗುರಿಯನ್ನು ಹೊಂದಿದ್ದು, AVX-512 ಸೂಚನೆಗಳನ್ನು ಬೆಂಬಲಿಸುತ್ತದೆ.

ಈ ಡಿವೈಸ್‌ನ ಪೋರ್ಟ್‌ಗಳು ಹಾಗೂ ಬಟನ್‌ಗಳ ವಿಚಾರಕ್ಕೆ ಬಂದರೆ ಈ ಡಿವೈಸ್ ಪ್ರೋಗ್ರಾಮೆಬಲ್ ಮ್ಯಾಕ್ರೋ ಕಿಗಳು, ಟೈಪ್ ಸಿ ಪೋರ್ಟ್, ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್, ಸ್ಪೀಕರ್, ಚಾರ್ಜಿಂಗ್ ಇಂಡಿಕೇಟರ್ ಲೈಟ್ಸ್, ಗೇಮ್‌ಪ್ಯಾಡ್ ಅಥವಾ ಮೌಸ್ ಪ್ಯಾಡ್ ಟಾಗಲ್ ಕೀ, ಯುಎಸ್‌ಬಿ ಎ ಪೋರ್ಟ್, ಬಿಐಓಎಸ್ ಪ್ಲ್ಯಶ್ ಹೋಲ್, ಫುಲ್ ಫಂಕ್ಷನ್ ಯುಎಸ್‌ಬಿ ಟೈಪ್-ಸಿ ಸೇರಿದಂತೆ ಅನೇಕ ಉಪಯುಕ್ತ ಸೌಲಭ್ಯಗಳನ್ನು ಕಾಣಬಹುದಾಗಿದೆ.
ಜಿಪಿಡಿ ವಿನ್ ಮಿನಿ 2024 ಗೇಮಿಂಗ್ ಹ್ಯಾಂಡ್ಹೆಲ್ಡ್ ಬೆಲೆ ಹಾಗೂ ಲಭ್ಯತೆ: ಈ ವಿನ್ ಮಿನಿ 2024 ಅನ್ನು ಕ್ರೌಡ್‌ಫಂಡಿಂಗ್ ಅಭಿಯಾನದ ಮೂಲಕ ಆರಂಭ ಮಾಡಲಾಗಿದ್ದು, ರೈಜೆನ್ 7 8840U ಪ್ರೊಸೆಸರ್, 32 GB RAM ಮತ್ತು 512 GB ಅಥವಾ 2 TB SSD ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇದೆ. ಈ ಮೂಲಕ ಇದಕ್ಕೆ $879 ಗಳ (ಭಾರತೀಯ ರೂ.ಗಳಲ್ಲಿ ಅಂದಾಜು 72,821ರೂ.ಗಳು) ಆರಂಭಿಕ ಬೆಲೆ ನಿಗದಿ ಮಾಡಲಾಗಿದೆ.


Click it and Unblock the Notifications








