Home
Gadgets

ಮನೆಯ ರೂಮನ್ನು 'ಸ್ಮಾರ್ಟ್‌ ರೂಮ್' ಆಗಿ ಮಾರ್ಪಡಿಸಲು ಹೀಗೆ ಮಾಡಿರಿ!

ಇಂದಿನ ಜಗತ್ತು ತುಂಬಾ ವೇಗವಾಗಿ ಸಂಪೂರ್ಣ ಡಿಜಿಟಲೀಕರಣದತ್ತ ಓಡುತ್ತಿದೆ. ಮನೆಯ ಹಲವು ಡಿವೈಸ್‌ಗಳಿಗೆ ಮೊದಲ ರೀಮೋಟ್‌ ಬಳಸಲಾಗುತ್ತಿತ್ತು. ಆದರೆ ಇಂದಿನ ಬಹುತೇಕ ಡಿವೈಸ್‌ಗಳು ವಾಯಿಸ್‌ ಅಸಿಸ್ಟಂಟ್‌ನಿಂದಲೇ ಕೆಲಸ ಮಾಡುತ್ತವೆ. ಮುಖ್ಯವಾಗಿ AI-ಕೃತಕ ಬುದ್ಧಿಮತ್ತೆ, ವಾಯಿಸ್‌ ಅಸಿಸ್ಟಂಟ್ ಮತ್ತು ವರ್ಚುವಲ್ ಅಸಿಸ್ಟಂಟ್ ತಂತ್ರಜ್ಞಾನಗಳು ಡಿವೈಸ್‌ಗಳಿಗೆ ಸ್ಮಾರ್ಟ್‌ ರೂಪ ನೀಡಿವೆ. ಜನರು ಸಹ ಸ್ಮಾರ್ಟ್‌ ಡಿವೈಸ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಗೂಗಲ್‌ ಅಸಿಸ್ಟಂಟ್

ಗೂಗಲ್‌ ಅಸಿಸ್ಟಂಟ್, ಅಮೆಜಾನ್ ಅಲೆಕ್ಸಾ ವಾಯಿಸ್‌ ಆಧಾರಿತ ಸ್ಮಾರ್ಟ್‌ ಡಿವೈಸ್‌ಗಳು ವಾಯಿಸ್‌ ಕಮಾಂಡ್‌ನಿಂದ ಸರಳವಾಗಿ ಮತ್ತು ವೇಗವಾಗಿ ಕೆಲಸ ನಿರ್ವಹಿಸುತ್ತವೆ. ಬಳಕೆದಾರರಿಗೆ ಇವುಗಳ ಬಳಕೆ ಮಾಡುವುದು ಹೆಚ್ಚು ತ್ರಾಸ್‌ ಅನಿಸುವುದಿಲ್ಲ ಎಲ್ಲವೂ ಆಟೋಮ್ಯಾಟಿಕ್ ಆಗಿ ನಡೆಯುತ್ತವೆ. ಹೀಗಾಗಿ ಬಹುತೇಕರು ತಮ್ಮ ಮನೆಯ ರೂಮ್‌ಗಳನ್ನು ಸ್ಮಾರ್ಟ್‌ರೂಮ್ ಆಗಿ ಮಾರ್ಪಾಡು ಮಾಡಬೇಕು ಎಂದುಕೊಂಡಿರುತ್ತಾರೆ.

ಸ್ಮಾರ್ಟ್‌ ರೂಮ್ ಟಚ್

ಮನೆಯ ರೂಮ್ ಅನ್ನು ಸ್ಮಾರ್ಟ್‌ ಆಗಿ ಬದಲಿಸಲು ಹೆಚ್ಚಿನ ದುಬಾರಿ ಬೆಲೆ ಸ್ಮಾರ್ಟ್ ಗ್ಯಾಜೆಟ್ಸ್ ತರುವ ಬದಲಿಗೆ, ಕೆಲವು ಅಗತ್ಯ ಸ್ಮಾರ್ಟ್‌ ಗ್ಯಾಜೆಟ್‌ಗಳ ಬಳಕೆ ಮಾಡುವ ಮೂಲಕವೇ ಸ್ಮಾರ್ಟ್‌ ರೂಮ್ ಟಚ್ ನೀಡಬಹುದು. ಅದಕ್ಕಾಗಿ ಈ ಲೇಖನದಲ್ಲಿ ಮನೆಯ ಸಾಮಾನ್ಯ ರೂಮ್‌ಗೆ ಸ್ಮಾರ್ಟ್‌ ಟಚ್ ನೀಡಲು ಯಾವೆಲ್ಲಾ ಸ್ಮಾರ್ಟ್‌ ಡಿವೈಸ್‌ಗಳನ್ನು ಬಳಸಬೇಕು ಎಂಬುದನ್ನು ತಿಳಿಸಲಾಗಿದೆ. ಮುಂದೆ ಓದಿರಿ.

ಸ್ಮಾರ್ಟ್‌ ಲೈಟ್‌

ಸ್ಮಾರ್ಟ್‌ ಲೈಟ್‌

ಪ್ರತಿಯೊಬ್ಬರ ಮನೆಯಲ್ಲಿಯೂ ಲೈಟ್‌ ಅತೀ ಅಗತ್ಯ ಡಿವೈಸ್‌ ಆಗಿದೆ. ಪ್ರಸ್ತುತ ಬಳಸುವ ಎಲ್‌ಇಡಿ ಬಲ್ಬ್‌ನ ಬದಲಿಗೆ ಇತ್ತೀಚಿನ ಸ್ಮಾರ್ಟ್‌ ಬಲ್ಬ್ ಬಳಸಬಹುದು. ಹೊಸ ಸ್ಮಾರ್ಟ್‌ ಲೈಟ್‌ಗಳು ಸಹ ವಿದ್ಯುತ್ ಉಳಿಸುವ ಎಲ್‌ಇಡಿ ಮಾದರಿಯಲ್ಲಿ ಲಭ್ಯ ಇದ್ದು, ಇವುಗಳ ಬಾಳಿಕೆಯ ಕಾಲಾವಧಿಯು ಹೆಚ್ಚಿರುತ್ತದೆ. ಈ ಸ್ಮಾರ್ಟ್‌ ಲೈಟ್‌ಗಳು ಗೂಗಲ್ ಅಸಿಸ್ಟಂಟ್ ಮತ್ತು ಅಲೆಕ್ಸಾ ಸೌಲಭ್ಯಗಳನ್ನು ಪಡೆದಿರುತ್ತವೆ ಹೀಗಾಗಿ ವಾಯಿಸ್‌ ಮೂಲಕ ಲೈಟ್‌ ಅನ್ನು ನಿಯಂತ್ರಿಸುವ ಆಯ್ಕೆ ಇರಲಿವೆ.

ಸ್ಮಾರ್ಟ್‌ ಡಿಸ್‌ಪ್ಲೇ

ಸ್ಮಾರ್ಟ್‌ ಡಿಸ್‌ಪ್ಲೇ

ಸ್ಮಾರ್ಟ್‌ ಡಿಸ್‌ಪ್ಲೇ ಮತ್ತು ಸ್ಮಾರ್ಟ್‌ ಸ್ಪೀಕರ್ ಡಿವೈಸ್‌ಗಳು ಅತ್ಯುತ್ತಮ ಮನರಂಜನೆಯ ಸಾಧನಗಳಾಗಿ ಗುರುತಿಸಿಕೊಂವೆ. ಸದ್ಯ ಅಮೆಜಾನ್ ಮತ್ತು ಗೂಗಲ್ ಸಂಸ್ಥೆಗಳು ಹಲವು ಸ್ಮಾರ್ಟ್ ಡಿಸ್‌ಪ್ಲೇ ಮತ್ತು ಸ್ಮಾರ್ಟ್‌ ಸ್ಪೀಕರ್ಸ್‌ ಡಿವೈಸ್‌ಗಳನ್ನು ಪರಿಚಯಿಸಿವೆ. ಈ ಡಿವೈಸ್‌ಗಳು ವಾಯಿಸ್‌ ಗ್ರಹಿಕೆಯಿಂದ ಸಾಂಗ್ಸ್ ಪ್ಲೇ, ನ್ಯೂಸ್, ಸೋಶಿಯಲ್‌ ಆಪ್ಸ್, ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿವೆ. 'ಅಮೆಜಾನ್ ಇಕೋ ಶೋ 5' ಮತ್ತು 'ಗೂಗಲ್ ನೆಸ್ಟ್ ಹಬ್' ಡಿವೈಸ್‌ಗಳು ಜನಪ್ರಿಯ ಗಳಿಸಿವೆ.

ಸ್ಮಾರ್ಟ್‌ ಪ್ಲಗ್

ಸ್ಮಾರ್ಟ್‌ ಪ್ಲಗ್

ಮನೆಯ ರೂಮಿನಲ್ಲಿ ವಿದ್ಯುತ್ ಸಾಕೆಟ್‌ಗಳಿಗೆ, ಬಾಹ್ಯವಾಗಿ ಸ್ಮಾರ್ಟ್‌ಪ್ಲಗ್‌ಗಳನ್ನು ಬಳಸಬಹುದು. ಸ್ಮಾರ್ಟ್‌ಪ್ಲಗ್‌ಗಳು ವಿವಿಧ ಅಗತ್ಯಗಳಿಗೆ ಅನುಸಾರವಾಗಿ ಭಿನ್ನ ವಿದ್ಯುತ್ ಸಾಮರ್ಥ್ಯದಲ್ಲಿ ಲಭ್ಯವಾಗಲಿವೆ. ಸ್ಮಾರ್ಟ್‌ ಡಿಸ್‌ಪ್ಲೇ, ಅಲೆಕ್ಸ್ ಮತ್ತು ಗೂಗಲ್ ಅಸಿಸ್ಟಂಟ್ ಸೌಲಭ್ಯಗಳ ಮೂಲಕ ಸ್ಮಾರ್ಟ್‌ಪ್ಲಗ್ (AC-ವಿದ್ಯುತ್) ನಿಯಂತ್ರಿಸಬಹುದು. ವಿಪ್ರೊ ಕಂಪನಿಯ 10Amp ಸಾಮರ್ಥ್ಯದ ಸ್ಮಾರ್ಟ್‌ ಪ್ಲಗ್ 1200ರೂ.ಗಳಾಗಿದೆ.

ವಾಯಿಸ್‌ ಕಂಟ್ರೋಲ್ ಸೌಲಭ್ಯ

ವಾಯಿಸ್‌ ಕಂಟ್ರೋಲ್ ಸೌಲಭ್ಯ

ಮನೆಯ ರೂಮ್‌ನಲ್ಲಿ ಸ್ಮಾರ್ಟ್‌ ಲೈಟ್‌, ಸ್ಮಾರ್ಟ್‌ ಪ್ಲಗ್‌, ಸ್ಮಾರ್ಟ್‌ ಸ್ಪೀಕರ್ ಮತ್ತು ಸ್ಮಾರ್ಟ್‌ ಡಿಸ್‌ಪ್ಲೇ ಡಿವೈಸ್‌ಗಳನ್ನು ಬಳಕೆ ಮಾಡಿದರೇ ರೂಮಿಗೆ ಸಂಪೂರ್ಣ ಸ್ಮಾರ್ಟ್‌ ಲುಕ್ ಪಡೆದುಕೊಳ್ಳಲಿದೆ. ಈ ಎಲ್ಲ ಸ್ಮಾರ್ಟ್‌ ಡಿವೈಸ್‌ಗಳನ್ನು ಕೇವಲ ವಾಯಿಸ್‌ ಮೂಲಕವೇ ನಿಯಂತ್ರಿಸಬಹುದು. ಅಗತ್ಯಕ್ಕೆ ತಕ್ಕನಾಗಿ ಬ್ರೈಟ್ನೆಸ್‌ ಏರಿಳಿತ ಮಾಡುವ ಆಯ್ಕೆಗಳನ್ನು ಸ್ಮಾರ್ಟ್‌ ಲೈಟ್‌ಗಳು ಹೊಂದಿರುತ್ತವೆ. ಸ್ಮಾರ್ಟ್ ಸ್ಪೀಕರ್‌ನಲ್ಲಿ ಮ್ಯೂಸಿಕ್, ಸ್ಮಾರ್ಟ್‌ ಡಿಸ್‌ಪ್ಲೇಯಲ್ಲಿ ಅಮೆಜಾನ್ ಪ್ರೈಮ್‌, ಯೂಟ್ಯೂಬ್‌ಗಳ ಸೌಲಭ್ಯಗಳನ್ನು ವಾಯಿಸ್‌ ಮೂಲಕವೇ ಕಂಟ್ರೋಲ್ ಮಾಡಬಹುದಾಗಿದೆ. ಜೊತೆಗೆ ಮನೆಯಲ್ಲಿ ಸ್ಮಾರ್ಟ್‌ ರೆಫ್ರಿಜಿರೇಟರ್, ಸ್ಮಾರ್ಟ್‌ ಟಿವಿ, ಸ್ಮಾರ್ಟ್‌ ಫ್ಯಾನ್, ಸ್ಮಾರ್ಟ್‌ ಕ್ಯಾಮೆರಾ ಸೇರಿದಂತೆ ಇತ್ತೀಚಿನ ಹಲವು ಹೊಸ AI ಆಧಾರಿತ ಸ್ಮಾರ್ಟ್‌ ಡಿವೈಸ್‌ಗಳನ್ನು ಸಹ ಬಳಸಬಹುದು.

Best Mobiles in India

English summary
All you need to automate your room is three things a smart display, a smart light and a smart plug. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+