Just In
- 1 hr ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 17 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 17 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 18 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್‌ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
Don't Miss
- News
ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಜನ್ಮದಿನ: ತಂದೆ ತಾಯಿಯ ಸಮಾಧಿಗೆ ಪೂಜೆ ಸಲ್ಲಿಸಿದ ಸಿಎಂ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Movies
ಮಂಗ್ಲಿ ಹಾಡೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು? ಸ್ಯಾಂಡಲ್ವುಡ್ನಲ್ಲಿ ಕ್ರೇಜ್ ಹೇಗಿದೆ?
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ಗೆ ಅವಕಾಶ ಇಲ್ಲ: ಬಿಸಿಸಿಐ ನೀಡಿದ ಭರವಸೆ ಏನು?
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಎಚ್‌ಟಿಸಿ' ಪರಿಚಯಿಸಲಿದೆ ಮಲ್ಟಿಟಾಸ್ಕ್ '5G ಹಬ್' ಸಾಧನ.!
ಕೆಲ ವರ್ಷಗಳ ಹಿಂದೆ ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ, ಆಕರ್ಷಕ ಡಿಸೈನ್‌ನಿಂದ ಮಾರುಕಟ್ಟೆಯಲ್ಲಿ ಮಿಂಚಿಂದ 'ಎಚ್‌ಟಿಸಿ' ಕಂಪನಿಯ ಫೋನ್‌ಗಳನ್ನು, ಮೊಬೈಲ್ ಪ್ರೇಮಿಗಳ್ಯಾರು ಮರೆತಿರುವುದಿಲ್ಲ. ಇತ್ತೀಚಿಗೆ ಮಾರುಕಟ್ಟೆಯಿಂದ ಕಣ್ಮರೆಯಾಗಿರುವ 'ಎಚ್‌ಟಿಸಿ' ಕಂಪನಿ ಇದೀಗ ಮತ್ತೆ ಮಾರುಕಟ್ಟೆ ಪ್ರವೇಶಿಸಲು ಮುಂದಾಗಿದ್ದು, ಗ್ರಾಹಕರಿಗೆ ಹೊಸ ಸ್ಮಾರ್ಟ್ ಡಿವೈಸ್ ಒಂದನ್ನು ಪರಿಚಯ ಮಾಡಲಿದೆ.

ಹೌದು, ಎಚ್‌ಟಿಸಿ ಕಂಪನಿ 5G ಹಬ್ ಎಂಬ ಹೊಸ ಡಿವೈಸ್ ಒಂದನ್ನು ಪರಿಚಯಿಸಲಿದ್ದು, ಇದು ಇಂಟರ್ನೆಟ್ ಮತ್ತು ಅಂಡ್ರಾಯ್ಡ್ ಮನರಂಜನಾ ಸಾಧನ ಆಗಿರಲಿದೆ. ಗೂಗಲ್ ಹೋಮದ ಹಬ್ ಮಾದರಿಯ ಸಾಧನವಾಗಿದೆ. ಈ ಸಾಧನವು 5G ನೆಟವರ್ಕ್ ಸೌಲಭ್ಯವನ್ನು ಹೊಂದಿರಲಿದ್ದು, ಇದರ ಹಾಟ್‌ಸ್ಪಾಟ್ ಆಯ್ಕೆ ಬಳಸಿ ಏಕ ಕಾಲಕ್ಕೆ 20 ಜನ ಬಳಕೆದಾರರು ಇಂಟರ್ನೆಟ್ ಸೇವೆಯನ್ನು ಪಡೆಯಬಹುದಾಗಿದೆ.

ಎಚ್‌ಟಿಸಿಯ ಈ ಹಬ್ ಸಾಧನವು 7,660 mAh ಸಾಮರ್ಥ್ಯದ ಬ್ಯಾಟರಿ ಶಕ್ತಿ ಹೊಂದಿದ್ದು, ಇದರೊಂದಿಗೆ USB-C ಕೇಬಲ ಬಳಸಿ ಸ್ಮಾರ್ಟ್‌ಟಿವಿಯ HDMI ಪೋರ್ಟ್‌ಗೆ ಸಂಪರ್ಕ ಕಲ್ಪಸಿ ಟಿವಿ ವೀಕ್ಷಿಸಬಹುದು. ವೈಫೈ ಕನೆಕ್ಟಿವಿಟಿ ಸೌಕರ್ಯವನ್ನು ಸಹ ಇದಗಿಸಲಾಗಿದೆ. ಹಾಗಾದರೇ ಈ ಸಾಧನ ಹೊಂದಿರು ಇತರೆ ಸ್ಪೆಷಲ್ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಎಚ್‌ಟಿಸಿ ಸ್ಮಾರ್ಟ್ ಹಬ್
ಎಚ್‌ಟಿಸಿ ಪರಿಚಯ ಮಾಡಲಿರುವ ಎಚ್‌ಟಿಸಿ ಹಬ್ ಸಾಧನವು ಬಹುತೇಕ ಕೆಲಸಗಳಿಗೆ ಇಂಟರ್ನೆಟ್ ಒದಗಿಸಲಿದ್ದು, ಇದೊಂದು ಮಲ್ಟಿಟಾಸ್ಕ್ ಡಿವೈಸ್ ಆಗಿ ಕೆಲಸ ನಿರ್ವಹಿಸುವುದು. ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಫೋನ್, ನೆಟ್‌ಫ್ಲೇಕ್ಸ್ ನಂತಹ ಆಪ್‌ಗಳಲ್ಲಿ ವಿಡಿಯೋ ಸ್ಟ್ರಿಮೀಂಗ್ ಮಾಡಬಹುದಾಗಿದೆ.

5G ಕನೆಕ್ಟಿವಿಟಿ
ಈ ಸಾಧನವು 5G ನೆಟವರ್ಕ್ ಸೌಲಭ್ಯವನ್ನು ಒದಗಿಸಲಿದ್ದು, ಸ್ನ್ಯಾಪ್‌ಡ್ರಾಗನ್ "X50v2" 5G ನೆಟವರ್ಕ್ ಮೊಡೆಮ್ ಅನ್ನು ಹೊಂದಿರಲಿದೆ. ಹಬ್ ಸಾಧನವು 6GHz ವೇಗದಲ್ಲಿ ಕೆಲಸ ಮಾಡಲು ಸಹಕರಿಸಲಿದೆ. ಮೊದಲ 5G ಸಂಪರ್ಕ ಹೊಂದಿರಲಿರು ಡಿವೈಸ್ ಎನಿಸಿಕೊಳ್ಳಲಿದೆ.

ಡಿಸ್‌ಪ್ಲೇ ಮತ್ತು ರಚನೆ
ಎಚ್‌ಟಿಸಿ ಹಬ್ ಸಾಧನದಲ್ಲಿ 720 x 1280 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5 ಇಂಚಿನ ಡಿಸ್‌ಪ್ಲೇಯನ್ನು ನೀಡಲಾಗಿದೆ. ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ಮಾದರಿಯಲ್ಲಿಯೇ ಇರಲಿದ್ದು, ಒಂದು ಬದಿಗೆ ಡಿಸ್‌ಪ್ಲೇ ಮತ್ತು ಸುತ್ತಲೂ ಮ್ಯಾಟ್ ಕ್ಲಾಥಿಂಗ್‌ನಲ್ಲಿ ಕಾಣಿಸುತ್ತದೆ. ಇದರ ಮುಂಭಾಗ ಮತ್ತು ಹಿಂಬದಿ ಎರಡು ಕಡೆ ಕಂಪನಿ ಹೆಸರು ನಮೂದಿಸಲಾಗಿದೆ.

ಪ್ರೊಸೆಸರ್
ಎಚ್‌ಟಿಸಿ ಹಬ್ ಸಾಧನವು ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಅನ್ನು ಹೊಂದಿರಲಿದ್ದು, 4GB RAM ಮತ್ತು 32GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿರಲಿದೆ ಎಂದು ತಿಳಿದು ಬಂದಿದೆ.

ಬ್ಯಾಟರಿ
ಎಚ್‌ಟಿಸಿ ಹಬ್ ಸಾಧನದಲ್ಲಿ 7,660 mAh ಸಾಮರ್ಥ್ಯದ ಬ್ಯಾಟರಿ ಶಕ್ತಿ ನೀಡಲಾಗಿದೆ. ಈ ಸಾಧನವನ್ನು ಅತೀ ಹಗುರಾಗಿದ್ದು, ನಿಮ್ಮೊಂದಿಗೆ ಕೊಂಡೊಯ್ಯಬಹುದಾಗಿದೆ. ಇದರೊಂದಿಗೆ USB-C ಕೇಬಲ್ ಫೋರ್ಟ್ ಇರಲಿದೆ.

ಎಲ್ಲಿ ಲಭ್ಯ ಮತ್ತು ಬೆಲೆ ಎಷ್ಟು?
ಎಚ್‌ಟಿಸಿ ಕಂಪನಿಯು ತನ್ನ ಈ ಹೊಸ ಹಬ್ ಸಾಧನವನ್ನು ಈ ವರ್ಷದ ಅಂತ್ಯದೊಳಗೆ, ಆಸ್ಟ್ರೇಲಿಯಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಲಿದ್ದು, ಆದರೆ ಭಾರತದಲ್ಲಿ ಬಿಡುಗಡೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಹೊರಹಾಕಿಲ್ಲ. ಇದರ ಬೆಲೆಯ ಬಗ್ಗೆಯು ಕಂಪನಿ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470