Subscribe to Gizbot

1000 mAh ಪವರ್ ಬ್ಲೂಟೂತ್‌ ಸ್ಪೀಕರ್ "ಆಂಪ್ಲಿಫೈ" ಬೆಲೆ ಕೇವಲ ರೂ.999!!

Written By: Bhaskar N J

ಸ್ಮಾರ್ಟ್‌ಫೋನ್ ಅನ್ನು ಸ್ಪಿಕರ್ ಬಳಿಯಲಿ ಇಟ್ಟರೆ ‌ಸ್ಪಿಕರ್ ಸ್ವಯಂ ಚಾಲು ಆಗುವ, 1000 mAh ಪವರ್, ವೈರ್‌ಲೆಸ್ ಬ್ಲೂಟೂತ್‌ ಮತ್ತು ಇಂಡಕ್ಷನ್ ಟೆಕ್ನಾಲಜಿ ಹೊಂದಿರುವ ಸ್ಪೀಕರ್‌ ಕೆವಲ 999 ರೂಪಾಯಿಗಳಲ್ಲಿ ಖರೀದಿಸಲು ಸಾಧ್ಯವಾದರೆ ಹೇಗಿರುತ್ತದೆ.? ಹೌದು, ಮ್ಯೂಸಿಕ್ ಪ್ರಿಯರಿಗೆ ಒಂದು ಸಿಹಿಸುದ್ದಿ, ಭಾರತದ ಪ್ರಮುಖ ಎಲೆಕ್ಟ್ರಾನಿಕ್ ಸಂಸ್ಥೆ ಝೀಬ್ರಾನಿಕ್ಸ್ ಇಂತಹದೊಂದು ಸ್ಪಿಕರ್‌ ಬಿಡುಗಡೆಮಾಡಿದೆ.

"ಆಂಪ್ಲಿಫೈ" ಹೆಸರಿನ ನೂತನ ಸ್ಪಿಕರ್ ಬಿಡುಗಡೆಮಾಡಿರುವ ಝೀಬ್ರಾನಿಕ್ಸ್ ಕಡಿಮೆಬೆಲೆಯಲ್ಲಿಯೇ ಅತ್ಯುತ್ತಮ ಫೀಚರಗಳನ್ನು "ಆಂಪ್ಲಿಫೈ" ಸ್ಪಿಕರ್‌ನಲ್ಲಿ ನೀಡಿದೆ. ಸಾಮಾನ್ಯ ಬ್ಲೂಟೂತ್ ಸ್ಪೀಕರ್‌ಗಳಿಗಿಂತ ಎರಡು ಪಟ್ಟು ದೂರದಿಂದ ಈ ಸ್ಪೀಕರ್‌ಗಳನ್ನು ನಿಯಂತ್ರಿಸಬಹುದಾಗಿದ್ದು, ಇಂಡಕ್ಷನ್ ಟೆಕ್ನಾಲಜಿ ಇದಕ್ಕೆ ಸಹಾಯಕವಾಗಿದೆ. ಕೇವಲ 330 ಗ್ರಾಂ ತೂಕ ಹೊಂದಿರುವ ಈ ಸ್ಪೀಕರ್ ಅತ್ಯುತ್ತಮ ಗುಣಮಟ್ಟದ ಸಂಗೀತವನ್ನು ಆಲಿಸುವ ಅನುಭವವನ್ನು ನಿಮಗೆ ನೀಡಲಿದೆ. ಸ್ಪಿಕರ್ ಗಾತ್ರ ಚಿಕ್ಕದಾಗಿ ಚೊಕ್ಕದಾಗಿದ್ದು, ಇದು ಹೊರಡಿಸುವ ಶಬ್ದದ ಸಾಮರ್ಥ್ಯ ಬಹಳ ಉತ್ತಮವಾಗಿದೆ.

1000 mAh ಪವರ್ ಬ್ಲೂಟೂತ್‌ ಸ್ಪೀಕರ್

ಫೇಸ್‌ಬುಕ್ ಉಪಯೋಗಿಸಲು ಇನ್ನು ಡಾಟಾ ಬೇಕಿಲ್ಲ!..ಉಚಿತ Wi-Fi ಪಡೆಯಿರಿ!!

ಇಂದಿನ ದಿನಗಳಲ್ಲಿ ಮ್ಯೂಸಿಕ್ ಇಲ್ಲದೆ ಯುವಸಮೂಹವಿಲ್ಲ. ಹಾಗಾಗಿ, ನಾವು ಉತ್ತಮ ಗುಣಮಟ್ಟದ ಮ್ಯೂಸಿಕ್ ಔಟ್‌ಪುಟ್ ನೀಡುವ "ಆಂಪ್ಲಿಫೈ" ಸ್ಪೀಕರ್‌ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದ್ದೇವೆ. "ಆಂಪ್ಲಿಫೈ" ಸ್ಪೀಕರ್‌ ದರ ಸಹ ಕಡಿಮೆಯಿದ್ದು, ಮೂಸಿಕ್ ಪ್ರಿಯರ ಮನಗೆಲ್ಲುತ್ತೇವೆ ಎಂದು ಝೀಬ್ರಾನಿಕ್ಸ್ ನಿರ್ದೇಶಕ ಪ್ರದೀಪ್‌ಜೋಶಿ ಹೇಳುತ್ತಾರೆ.

1000 mAh ಪವರ್ ಬ್ಲೂಟೂತ್‌ ಸ್ಪೀಕರ್

ನೋಡಲು ಸುಂಧರವಾಗಿರುವ, ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ "ಆಂಪ್ಲಿಫೈ" ಸ್ಪಿಕರ್ 6 ರಿಂದ 8 ಗಂಟೆಗಳ ಇಂಡಕ್ಷನ್ ಪ್ಲೇಬ್ಯಾಕ್ ಹೊಂದಿದ್ದು, ನೀವು ಸಹ ಮ್ಯೂಸಿಕ್ ಪ್ರಿಯರಾಗಿದ್ದರೆ ಕಡಿಮೆ ಹಣಕ್ಕೆ ದೊರೆಯುತ್ತಿರುವ ಬೆಸ್ಟ್ ಸ್ಪೀಕರ್ "ಆಂಪ್ಲಿಫೈ" ಅನ್ನು www.zebronics.com ಮೂಲಕ ಅಥವಾ ಈ ಸ್ಟೋರ್ಸ್ ಮೂಲಕ ನೀವು ಕೊಳ್ಳಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Leading IT Peripherals and consumer electronics company, Zebronics India Pvt. Ltd, which also has a wide range of Bluetooth speakers meant for the discerning audiophiles has proudly come out with a fascinatingly unique product. ‘Amplify’ to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot