Home
Gadgets

International Yoga Day 2023: ನಿಮ್ಮ ಯೋಗ ಸಾಧನೆಯನ್ನು ಹೆಚ್ಚಿಸಲಿವೆ ಈ 5 ಗ್ಯಾಜೆಟ್‌ಗಳು!

2015 ರಿಂದ ವಾರ್ಷಿಕವಾಗಿ ಜೂನ್ 21 ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಅದರಲ್ಲೂ ಈ ವರ್ಷ ಪ್ರಧಾನಿ ಮೋದಿ ಅವರು ಯುಎಸ್‌ನಲ್ಲಿಯೇ ಯೋಗಾಚರಣೆ ಮಾಡಲಿದ್ದು, ಈ ಮೂಲಕ ಈ ಬಾರಿಯ ಯೋಗ ದಿನಾಚರಣೆ ಅತ್ಯಂತ ವಿಭಿನ್ನವಾಗಿರಲಿದೆ.

ಹೌದು, ಯೋಗಕ್ಕೂ ಬೆಳೆಯುತ್ತಿರುವ ಟೆಕ್ನಾಲಜಿಗೂ ಒಂದಕ್ಕೊಂದು ಅವಿನಾಭಾವ ಸಂಬಂಧ ಇದೆ. ಅಂದರೆ ಆಪ್‌ ಹಾಗೂ ಇನ್ನಿತರೆ ಸ್ಮಾರ್ಟ್‌ ಗ್ಯಾಜೆಟ್ ಮೂಲಕ ಜನರು ಇಂದು ಯೋಗ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಅದರಂತೆ ಈ ಪ್ರಮುಖ ಐದು ಸ್ಮಾರ್ಟ್‌ ಗ್ಯಾಜೆಟ್‌ಗಳು ಖಂಡಿತಾ ನಿಮ್ಮ ಯೋಗ ದಿನಚರಿಯನ್ನು ಹೆಚ್ಚಿಸಲಿವೆ. ಹಾಗಿದ್ರೆ, ಯಾವುವು ಆ ಸ್ಮಾರ್ಟ್‌ ಗ್ಯಾಜೆಟ್‌, ಇವುಗಳಿಂದ ಆಗುವ ಅನುಕೂಲ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ನಿಮ್ಮ ಯೋಗ ಸಾಧನೆಯನ್ನು ಹೆಚ್ಚಿಸಲಿವೆ ಈ 5 ಗ್ಯಾಜೆಟ್‌ಗಳು!

ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಜಗತ್ತಿನ ಎಲ್ಲೆಡೆ ಆಚರಣೆ ಮಾಡಲಾಗುತ್ತಿದ್ದು, ಈ ನಡುವೆ ತಂತ್ರಜ್ಞಾನವು ನಮ್ಮ ಯೋಗಾಭ್ಯಾಸಗಳನ್ನು ಸುಧಾರಿಸುವ ಕೆಲಸ ಮಾಡುತ್ತಿವೆ. ಅಂದರೆ ಈ ನಾವೀನ್ಯತೆಯ ಈ ಯುಗದಲ್ಲಿ ಯೋಗಾಭ್ಯಾಸವನ್ನು ವರ್ಧಿಸಲು ಹಾಗೂ ಬೆಂಬಲಿಸಲು ಹಲವಾರು ಡಿವೈಸ್‌ಗಳು ಲಭ್ಯ ಇವೆ. ಅದರ ನಡುವೆ ಈ ಐದು ಡಿವೈಸ್‌ಗಳಾದ ಸ್ಮಾರ್ಟ್ ವಾಟರ್ ಬಾಟಲ್, ಯೋಗ ವ್ಹೀಲ್‌, ಧ್ಯಾನದ ಹೆಡ್‌ಬ್ಯಾಂಡ್ ಮತ್ತು ಯೋಗ ಟ್ರ್ಯಾಕರ್ ನಿಮ್ಮ ಯೋಗಾಭ್ಯಾಸವನ್ನು ಇನ್ನಷ್ಟು ಸುಧಾರಿಸಲು ಸಹಾಯ, ಮಾಡುತ್ತದೆ.

ಸ್ಮಾರ್ಟ್ ಯೋಗ ಮ್ಯಾಟ್: ಈ ಸ್ಮಾರ್ಟ್ ಯೋಗ ಮ್ಯಾಟ್ ಅನ್ನು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದು ಎಲ್ಲಾ ರೀತಿಯ ಅಭ್ಯಾಸ ಮಾಡುವವರಿಗೆ ಕ್ರಾಂತಿಕಾರಿ ವಸ್ತುವಾಗಿದ್ದು, ಈ ಅತ್ಯಾಧುನಿಕ ಮ್ಯಾಟ್‌ ವಿವಿಧ ಸೆನ್ಸರ್‌ಗಳನ್ನು ಹೊಂದಿದೆ. ಅಂದರೆ ನಿಮ್ಮ ಭಂಗಿ, ಜೋಡಣೆ ಮತ್ತು ಸಮತೋಲನದ ಕುರಿತು ನೈಜ-ಸಮಯದ ಪ್ರತಿಕ್ರಿಯೆಯನ್ನು ನೀಡುತ್ತದೆ. ಜೊತೆಗೆ ಇದನ್ನು ಬಳಕೆ ಮಾಡಿಕೊಂಡು ನೀವು ಮಾರ್ಗದರ್ಶಿ ತರಗತಿಗಳಿಗೆ ಹಾಜರಾಗಬಹುದು.

ಇದರ ಮೂಲಕ ನಿಮ್ಮ ಯೋಗದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಿಕೊಳ್ಳಲು ಇಂಟರ್ನೆಟ್‌ಗೆ ಸಂಪರ್ಕಗೊಂಡಿರುವ ಮೊಬೈಲ್ ಆಪ್‌ ಬಳಕೆ ಮಾಡಿಕೊಳ್ಳಬಹುದು. ಈ ಮೂಲಕ ಅನನ್ಯ ಸೇವೆ ಲಭ್ಯ ಆಗಲಿದ್ದು, ಈ ಇಂಟೆಲಿಜೆಂಟ್‌ ಯೋಗದ ಮ್ಯಾಟ್‌ ನಿಮ್ಮ ಎಲ್ಲಾ ಯೋಗ ತಂತ್ರಗಳನ್ನು ಸುಧಾರಿಸುತ್ತದೆ. ಇದನ್ನು ನೀವು ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ ಸೇರಿದಂತೆ ಅನೇಕ ರೀಟೇಲರ್‌ ಸ್ಟೋರ್‌ ಮೂಲಕ ಖರೀದಿ ಮಾಡಬಹುದು.

ಯೋಗ ವ್ಹೀಲ್‌: ಯೋಗ ವ್ಹೀಲ್‌ ಒಂದು ಅತ್ಯಾಧುನಿಕ ಟೂಲ್ಸ್‌ ಆಗಿದ್ದು, ಯೋಗದ ಭಂಗಿಗಳನ್ನು ಹೇಗೆ ಅನುಸರಿಸುತ್ತೇವೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಬಹುದು. ಇದರಿಂದಾಗಿ ಅಭ್ಯಾಸದ ಸಮಯದಲ್ಲಿ ನಮ್ಯತೆ, ಸಮತೋಲನ ಮತ್ತು ಶಕ್ತಿಯನ್ನು ಹೆಚ್ಚಿಗೆ ಮಾಡಿಕೊಳ್ಳಬಹುದು. ಜೊತೆಗೆ ಇದು ಬೆನ್ನಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಎದೆಯನ್ನು ವಿಸ್ತರಿಸಲು ಅನುಕೂಲಕರವಾಗಿದೆ.

ಇದರೊಂದಿಗೆ ಸವಾಲಿನ ಭಂಗಿಗಳನ್ನು ಮಾಡಲು ಹಾಗೂ ಈ ಮೂಲಕ ನಿಮ್ಮ ಯೋಗಾಭ್ಯಾಸವನ್ನು ಸುಧಾರಿಸಲು ಮಿತಿ ಇಲ್ಲದ ಅವಕಾಶಗಳನ್ನು ನೀಡುತ್ತದೆ. ಜೊತೆಗೆ ನಿಮ್ಮ ಸಾಂಪ್ರದಾಯಿಕ ಯೋಗ ವಿಧಾನದಲ್ಲಿ ಈ ವ್ಹೀಲ್‌ ಅನ್ನು ಬಳಕೆ ಮಾಡಿಕೊಳ್ಳುವ ಮೂಲಕ ಉತ್ತಮವಾದ ಯೋಗ ಸಾಧನೆಗೆ ಇದು ಸಹಕಾರಿಯಾಗಿದೆ. ಈ ಡಿವೈಸ್ ಅನ್ನು ಸಹ ನೀವು ಪ್ರಮುಖ ಇ- ಕಾಮರ್ಸ್‌ ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ.

ಮೆಡಿಟೇಸನ್ ಹೆಡ್‌ಬ್ಯಾಂಡ್‌: ಧ್ಯಾನ ಮಾಡುವ ಸಂದರ್ಭದಲ್ಲಿ ಶಾಂತಿಯನ್ನು ಹೊಂದುವುದು ಪ್ರಮುಖವಾದ ಕೆಲಸವಾಗಿದ್ದು, ಇಂದಿನ ಜೀವನ ಶೈಲಿಯಲ್ಲಿ ತಕ್ಷಣಕ್ಕೆ ಮನಸ್ಸನ್ನು ಹತೋಟಿಕೆ ತರುವುದು ಕಷ್ಟಕರವಾದ ಕೆಲಸ. ಆದರೆ, ಈ ಮೆಡಿಟೇಸನ್ ಹೆಡ್‌ಬ್ಯಾಂಡ್‌ ನಿಮ್ಮ ಮನಸ್ಸನ್ನು ಶಾಂತತೆಯಿಂದ ಇಡಲು ಸಹಾಯ ಮಾಡುತ್ತದೆ. ಅಂದರೆ, ಇದು ನಿಮ್ಮ ಬ್ರೈನ್‌ವೇವ್ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲಿದ್ದು, ಅತ್ಯಾಧುನಿಕ ಇಇಜಿ ತಂತ್ರಜ್ಞಾನವನ್ನು ಬಳಸಿಕೊಂಡು ನಿಮ್ಮ ಧ್ಯಾನ ತಂತ್ರದ ಕುರಿತು ತಕ್ಷಣದ ಪ್ರತಿಕ್ರಿಯೆಯನ್ನು ನೀಡುತ್ತದೆ.

ಈ ಕಾರಣದಿಂದಾಗಿ ನಿಮ್ಮ ಮನಸ್ಸನ್ನು ಶಾಂತಗೊಳಿಸಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ವಿಶ್ರಾಂತಿಯ ಮಟ್ಟವನ್ನು ಹೆಚ್ಚಿಗೆ ಮಾಡಿಕೊಳ್ಳಲು ಇದು ಸಹಕಾರಿಯಾಗಲಿದೆ. ಈ ಧ್ಯಾನದ ಹೆಡ್‌ಬ್ಯಾಂಡ್‌ ಜನರಿಗೆ ಆಂತರಿಕ ಶಾಂತಿಯನ್ನು ಉಂಟು ಮಾಡಲು ಸಹಾಯ ಮಾಡಲಿದ್ದು, ಇದನ್ನೂ ಸಹ ನೀವು ಆಲ್‌ಲೈನ್‌ ಹಾಗೂ ಆಫ್‌ಲೈನ್‌ ಸ್ಟೋರ್‌ ಮೂಲಕ ಆಫರ್‌ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಯೋಗ ಟ್ರ್ಯಾಕರ್: ಇನ್ನು ಯೋಗವನ್ನು ಅಭ್ಯಾಸ ಮಾಡುವಾಗ ನಿಮ್ಮ ಯೋಗದ ಪ್ರಗತಿಯನ್ನು ಟ್ರ್ಯಾಕ್ ಮಾಡಲು ತುಂಬಾ ಸಹಕಾರಿ. ಜೊತೆಗೆ ಈ ಧರಿಸಬಹುದಾದ ಗ್ಯಾಜೆಟ್ ಹೃದಯ ಬಡಿತ, ಸುಟ್ಟ ಕ್ಯಾಲೊರಿಗಳು ಮತ್ತು ತರಬೇತಿಯ ಅವಧಿಯಂತಹ ನಿರ್ಣಾಯಕ ಅಂಕಿಅಂಶಗಳನ್ನು ಟ್ರ್ಯಾಕ್ ಮಾಡುತ್ತವೆ. ಪೂರ್ವ ಲೋಡ್ ಮಾಡಲಾದ ಯೋಗದ ಅನುಕ್ರಮಗಳು ಯೋಗ ಮಾಡುವ ಸಂದರ್ಭದಲ್ಲಿ ಯೋಗಪಟುಗಳ ಚಟುವಟಿಕೆಯನ್ನು ಸುಧಾರಿಸುತ್ತದೆ.

ಸ್ಮಾರ್ಟ್ ವಾಟರ್ ಬಾಟಲ್ : ಇತರೆ ಸ್ಮಾರ್ಟ್‌ ಗ್ಯಾಜೆಟ್‌ಗಳಂತೆ ಸ್ಮಾರ್ಟ್ ವಾಟರ್ ಬಾಟಲ್ ಸಹ ಯೋಗ ಸಂದರ್ಭದಲ್ಲಿ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಈ ನೀರಿನ ಬಾಟಲಿಗಳು ಸೆನ್ಸರ್‌ಗಳನ್ನು ಹೊಂದಿದ್ದು, ನೀವು ಎಷ್ಟು ಕುಡಿಯುತ್ತೀರಿ ಎಂಬುದನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಹೈಡ್ರೇಟ್ ಸುಧಾರಣೆ ಮಾಡಲು ನಿಮ್ಮ ಸ್ಮಾರ್ಟ್‌ಫೋನ್‌ಗೆ ನೋಟಿಫಿಕೇಶನ್‌ಗಳನ್ನು ಕಳುಹಿಸುತ್ತದೆ.

ನಿಮ್ಮ ಯೋಗ ಸಾಧನೆಯನ್ನು ಹೆಚ್ಚಿಸಲಿವೆ ಈ 5 ಗ್ಯಾಜೆಟ್‌ಗಳು!

ಇನ್ನು ಈ ಅತ್ಯಾಧುನಿಕ ನೀರಿನ ಬಾಟಲಿಗಳು ನೀರಿನ ತಾಪಮಾನವನ್ನು ಸಹ ಟ್ರ್ಯಾಕ್ ಮಾಡಲಿದ್ದು, ನಿಮ್ಮ ಪಕ್ಕದಲ್ಲಿ ಈ ಡಿವೈಸ್‌ ಅನ್ನು ಇರಿಸಿಕೊಂಡಾಗ ಯಾವುದೇ ಸಮಸ್ಯೆ ಇಲ್ಲದೆ ಯೋ ಗಸಾಧನೆ ಮಾಡಬಹುದು. ಈ ಎಲ್ಲಾ ಸ್ಮಾರ್ಟ್‌ಡಿವೈಸ್‌ಗಳು ಪ್ರತಿ ಬಳಕೆದಾರರಿಗೂ ಭಿನ್ನ ಅನುಭವ ನೀಡಲಿದ್ದು, ಅಗತ್ಯ ಎನಿಸಿದರೆ ಇವುಗಳನ್ನು ಖರೀದಿ ಮಾಡುವ ಮೂಲಕ ಇತ್ತಮವಾಗಿ ಯೋಗ ಮಾಡಬಹುದಾಗಿದೆ.

Best Mobiles in India

English summary
Yoga and growing technology are inextricably linked. Similarly, a smart water bottle, yoga wheel, meditation headband and yoga tracker will further improve your yoga practice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+