Home
Gadgets

ಐಟೆಲ್‌ ಐಕಾನ್‌ 3 ಸ್ಮಾರ್ಟ್‌ವಾಚ್‌ ವಿಮರ್ಶೆ: ಕೊಟ್ಟ ಬೆಲೆಗೆ ಖಂಡಿತಾ ಮೋಸವಿಲ್ಲ!

ಈಗಾಗಲೇ ಮಾರುಕಟ್ಟೆಯಲ್ಲಿ ಭಿನ್ನ ಶ್ರೇಣಿಯ ಸ್ಮಾರ್ಟ್‌ ಉತ್ಪನ್ನಗಳಿಂದ ಗುರುತಿಸಿಕೊಂಡಿರುವ ಐಟೆಲ್‌ ಸಂಸ್ಥೆಯ ಹೊಸದಾಗಿ ಐಟೆಲ್‌ ಐಕಾನ್‌ 3 (Itel Icon 3) ಸ್ಮಾರ್ಟ್‌ವಾಚ್‌ ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಸ್ಮಾರ್ಟ್‌ ವಾಚ್‌ ಕೆಲವೊಂದು ಅಪ್‌ಡೇಟ್‌ ಆಯ್ಕೆಗಳನ್ನು ಪಡೆದಿದ್ದು, ಪ್ರೈಸ್‌ ಟ್ಯಾಗ್‌ನಿಂದ ಮಾರುಕಟ್ಟೆಯಲ್ಲಿ ವಿಶೇಷ ಮೋಡಿ ಮಾಡಿದೆ.

ಐಟೆಲ್‌ ಐಕಾನ್‌ 3 ಡಿವೈಸ್‌ ವಿಶಾಲ AMOLED ಮಾದರಿಯ ಡಿಸ್‌ಪ್ಲೇ ಪಡೆದಿದ್ದು, ಇದರ ಜೊತೆಗೆ ಬಿಗ್‌ ಬ್ಯಾಟರಿ ಸೌಲಭ್ಯ ಪಡೆದಿದೆ. ಒಮ್ಮೆ ಚಾರ್ಜ್‌ ಮಾಡಿದರೆ, ಸುಮಾರು 15 ದಿನಗಳ ಬ್ಯಾಕ್‌ಅಪ್‌ ಒದಗಿಸಲಿದ್ದು, ಇದು IP67 ರೇಟಿಂಗ್‌ ಸೌಲಭ್ಯ ಸಹ ಪಡೆದುಕೊಂಡಿದೆ. ಇಂತಹ ಕೆಲವು ಆಯ್ಕೆಗಳಿಂದ ಗಮನ ಸೆಳೆದಿರುವ ಐಟೆಲ್‌ ಐಕಾನ್‌ 3 ಸ್ಮಾರ್ಟ್‌ವಾಚ್‌ನ ಕಾರ್ಯ ವೈಖರಿ ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಟೆಲ್‌ ಐಕಾನ್‌ 3 ಸ್ಮಾರ್ಟ್‌ವಾಚ್‌ ವಿಮರ್ಶೆ: ಕೊಟ್ಟ ಬೆಲೆಗೆ ಖಂಡಿತಾ ಮೋಸವಿಲ್ಲ!

AMOLED ಸೌಲಭ್ಯ ಡಿಸ್‌ಪ್ಲೇ ಹಾಗೂ ಆಕರ್ಷಕ ರಚನೆ

ಐಟೆಲ್‌ ಐಕಾನ್‌ 3 ವಾಚ್‌ ಚೌಕಾಕಾರದ ರಚನೆ ಅನ್ನು ಪಡೆದಿದ್ದು, ಇದರ ನಾಲ್ಕು ಮೂಲೆಗಳು ಕರ್ವ್ ಮಾದರಿಯಲ್ಲಿ ಇವೆ. ಹಾಗೆಯೇ ಇದರ ಕ್ರೌನ್‌/ ಸೌಂಡ್‌ ವೃತ್ತಾಕಾರದ ಬಟನ್‌ ತಿರಿಗಿಸಬಹುದಾದ ಆಯ್ಕೆ ಪಡೆದಿದೆ. ಅಲ್ಲದೇ ಇದು ನೀರು ಮತ್ತು ಧೂಳಿನ ಪ್ರತಿರೋಧ ಆಯ್ಕೆ ಸಹ ಇದ್ದು, ಸೂರ್ಯನ ಬೆಳಕಿನಲ್ಲಿಯೂ ಸಹ ಸ್ಪಷ್ಟ ಕಾಣುವಿಕೆ ಎನಿಸುತ್ತದೆ.

ಐಟೆಲ್‌ ಐಕಾನ್‌ 3 ಸ್ಮಾರ್ಟ್‌ವಾಚ್‌ ವಿಮರ್ಶೆ: ಕೊಟ್ಟ ಬೆಲೆಗೆ ಖಂಡಿತಾ ಮೋಸವಿಲ್ಲ!

ಅಂದಾಹಗೆ ಈ ಸ್ಮಾರ್ಟ್‌ವಾಚ್ ಭರ್ತಿ 2 ಇಂಚಿನ AMOLED ಮಾದರಿಯ ಕರ್ವ್ಡ್‌ ಟಚ್‌ ಸ್ಕ್ರೀನ್ ಡಿಸ್‌ಪ್ಲೇ ಅನ್ನು ಪಡೆದಿದೆ. ಈ ಡಿಸ್‌ಪ್ಲೇಯು 240 x 296 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. ಹಾಗೆಯೇ ಈ ವಾಚ್ ಕನಿಷ್ಠ ಬೆಜಲ್‌ ರಚನೆ ಪಡೆದಿದ್ದು, ಇದು ವಾಚ್‌ನ ಅಂದ ಹೆಚ್ಚಿಸಿದೆ. ತನ್ನ ವರ್ಗದಲ್ಲೇ ಇದು ಆಕರ್ಷಕ ಡಿಸ್‌ಪ್ಲೇ ಎನ್ನಬಹುದಾಗಿದೆ. Co-Fit ಆಪ್‌ ಮೂಲಕ ಫಾಂಟ್‌ ಹಾಗೂ ಇರತೆ ಆಯ್ಕೆ ಬದಲಾಯಿಸಬಹುದು.

ಬೊಂಬಾಟ್‌ ಫೀಚರ್ಸ್ ಆಯ್ಕೆ

ಐಟೆಲ್‌ ಸಂಸ್ಥೆಯು ನೂತನವಾಗಿ ಬಿಡುಗಡೆ ಮಾಡಿರುವ ಈ ವಾಚ್‌ ಹೆಲ್ತ್‌ ಮತ್ತು ಫಿಟ್‌ನೆಸ್ ಗೆ ಸಂಬಂಧಿಸಿದ ಕೆಲವು ಅತ್ಯುತ್ತಮ ಮೋಡ್‌ಗಳ ಆಯ್ಕೆ ಅನ್ನು ಪಡೆದುಕೊಂಡಿದೆ. ಅಲ್ಲದೇ ಇದು ಬಿಲ್ಟ್‌ ಇನ್‌ ಗೇಮ್‌ಗಳ ಸೌಲಭ್ಯ ಕೂಡಾ ಪಡೆದಿರುವುದು ಪ್ರಮುಖ ಹೈಲೈಟ್ಸ್‌ಗಳಲ್ಲಿ ಒಂದಾಗಿದೆ. ಇದರ ಜೊತೆಗೆ ಈ ವಾಚ್‌ ಕ್ಯಾಲ್ಕುಲೇಟರ್‌ ಆಯ್ಕೆ ಅನ್ನು ಕೂಡಾ ಪಡೆದಿದ್ದು, ಈ ಮೂಲಕ ತನ್ನ ವರ್ಗದಲ್ಲೇ ಇತರ ಬ್ರ್ಯಾಂಡ್‌ಗಳಿಗೆ ಅಚ್ಚರಿ ಮೂಡಿಸಿದೆ.

ಬಿಗ್ ಬ್ಯಾಟರಿ ಸೌಲಭ್ಯ

ಐಟೆಲ್‌ ಸಂಸ್ಥೆಯ ಈ ಸ್ಮಾರ್ಟ್‌ವಾಚ್‌ ಸಾಧನವು 310mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಅನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್ ಅನ್ನು ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ, 15 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ. ಹೀಗಾಗಿ ಈ ವರ್ಗದಲ್ಲಿ ಇದರ ವಿಶ್ವಾಸಾರ್ಹ ಬ್ಯಾಟರಿ ಅಂಶವು ಸಹ ಗಮನ ಸೆಳೆಯುತ್ತದೆ. ಉಳಿದಂತೆ ಈ ಸ್ಮಾರ್ಟ್‌ ವಾಚ್‌ ಬ್ಲೂಟೂತ್ ಸಪೋರ್ಟ್‌ ಪಡೆದಿದ್ದು, ಕನೆಕ್ಟಿವಿಟಿಯು ಉತ್ತಮವಾಗಿದೆ.

ಕೊನೆಯ ಮಾತು

ನೂತನ ಐಟೆಲ್‌ ಐಕಾನ್‌ 3 ಸ್ಮಾರ್ಟ್‌ವಾಚ್‌ ಸಂಸ್ಥೆಯ ಹಿಂದಿನ ವಾಚ್‌ ಸರಣಿಗಿಂತ ಸಾಕಷ್ಟು ಅಪ್‌ಡೇಟ್‌ ನೊಂದಿಗೆ ಲಗ್ಗೆ ಇಟ್ಟಿದೆ. ಈ ವಾಚ್‌ AMOLED ಡಿಸ್‌ಪ್ಲೇ, ಆಕರ್ಷಕ ಲುಕ್‌ ಹಾಗೂ ಬಿಲ್ಟ್‌ಇನ್‌ ಗೇಮ್‌ ಹಾಗೂ ಕ್ಯಾಲ್ಕುಲೇಟರ್ ಆಯ್ಕೆಗಳಿಂದಲೂ ವಾವ್‌ ಎನಿಸುವಂತಿದೆ. ಅಲ್ಲದ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಪ್ಲಸ್‌ ಪಾಯಿಂಟ್‌ ಎನಿಸುತ್ತದೆ. ಹೀಗಾಗಿ ಕೊಟ್ಟ ಬೆಲೆಗೆ ಮೋಸವಿಲ್ಲ ಎನ್ನಬಹುದು.

ಐಟೆಲ್‌ ಸಂಸ್ಥೆಯ ಈ ನೂತನ ಐಕಾನ್‌ 3 ಸ್ಮಾರ್ಟ್‌ವಾಚ್‌ ಬೆಲೆ 1,699ರೂ. ಆಗಿದೆ. ಇನ್ನು ವಾಚ್‌ ಡಾರ್ಕ್‌ ಕ್ರೋಮ್‌, ಮೀಡ್‌ನೈಟ್‌ ಬ್ಲೂ ಹಾಗೂ ಶೈನಿ ಗೋಲ್ಡ್‌ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಗ್ರಾಹಕರು ಅಮೆಜಾನ್‌ ಇ ಕಾಮರ್ಸ್‌ ತಾಣದ ಮೂಲಕ ಖರೀದಿಸಬಹುದು.

Best Mobiles in India

English summary
Itel ICON 3 Review: Excellent Smart Watch at Budget Price. Know More details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+