ಐಟೆಲ್ S9 ಪ್ರೊ ವಿಮರ್ಶೆ: ಅಗ್ಗದ ಬೆಲೆಗೆ ಅಧಿಕ ಬ್ಯಾಟರಿ ಬ್ಯಾಕ್‌ಅಪ್ ಇಯರ್‌ಬಡ್!
ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಹಾಗೂ ಆಡಿಯೋ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಗ್ರಾಹಕರ ಗಮನ ಸೆಳೆದಿರುವ ಐಟೆಲ್ ಬ್ರ್ಯಾಂಡ್ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಐಟೆಲ್ S9 ಪ್ರೊ ಇಯರ್‌ಬಡ್ಸ್ ಭಾರತದ ಮಾರುಕಟ್ಟೆಯಲ್ಲಿ ಲಭ್ಯ ಇದೆ. ಈ ಇಯರ್‌ಬಡ್ಸ್ ಅತೀ ಅಗ್ಗದ ಪ್ರೈಸ್‌ಟ್ಯಾಗ್ ಪಡೆದಿರುವುದು ಪ್ರಮುಖ ಹೈಲೈಟ್ ಆಗಿ ಕಾಣಿಸಿಕೊಂಡಿದೆ. ಇನ್ನ ಇದರ ಕಾರ್ಯವೈಖರಿ ಹೇಗೆ ಅಂತೀರಾ?
ಐಟೆಲ್ S9 ಪ್ರೊ ಇಯರ್‌ಬಡ್ಸ್ ನಯವಾದ ಡ್ಯುಯಲ್-ಟೋನ್ ಇನ್-ಇಯರ್ ವಿನ್ಯಾಸವನ್ನು ಹೊಂದಿದೆ. ಹಾಗೆಯೇ ಇನ್ನು ಈ ಇಯರ್‌ಬಡ್ಸ್ 10mm ಬಾಸ್ ಬೂಸ್ಟ್ ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿರುವ ಇನ್-ಇಯರ್ ವಿನ್ಯಾಸವನ್ನು ಹೊಂದಿದೆ.ಇದು ವಿಶಿಷ್ಟವಾದ ಸ್ಟೆಮ್ ಮತ್ತು ಸಿಲಿಕೋನ್ ಇಯರ್ ಟಿಪ್ಸ್‌ಗಳನ್ನು ಬ್ಲ್ಯಾಕ್ ಕಲರ್ ನಲ್ಲಿ ಹಾಗೂ ವೈಬ್ರೆಂಟ್ ಗ್ರೀನ್‌ನಲ್ಲಿ ಬ್ಲೂ ವೇರಿಯಂಟ್ ಆಯ್ಕೆ ಪಡೆದಿದೆ.

ಐಟೆಲ್ S9 ಪ್ರೊ ಇಯರ್‌ಬಡ್ಸ್ ಎನ್ವಿರಾನ್‌ಮೆಂಟಲ್ ನೋಯ್ಸ್ ಕ್ಯಾನ್ಸಲೇಷನ್ (ENC) ಸೌಲಭ್ಯ ಪಡೆದಿದ್ದು, ಇದು ಕರೆಗಳ ಸಮಯದಲ್ಲಿ ಪರಿಸರದ ಶಬ್ದವನ್ನು ಪರಿಣಾಮಕಾರಿಯಾಗಿ ತೆಗೆದುಹಾಕುವ ಜೊತೆಗೆ ಸ್ಪಷ್ಟ ಸಂವಹನವನ್ನು ಖಚಿತಪಡಿಸುತ್ತದೆ. ಇದರ ಜೊತೆಗೆ ಗೇಮಿಂಗ್‌ಗೆ ಪೂರಕವಾಗಿ ಇದು 45ms ಅಲ್ಟ್ರಾ-ಲೋ ಲೇಟೆನ್ಸಿ ಗೇಮಿಂಗ್ ಮೋಡ್, ಟಚ್ ಕಂಟ್ರೋಲ್‌ಗಳು ಮತ್ತು ಅನುಕೂಲಕರ ಚಾರ್ಜಿಂಗ್ ಅನುಭವಕ್ಕಾಗಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ.
ಇನ್ನು ಈ ಇಯರ್‌ಬಡ್ಸ್ ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳುವ ಗುಣವನ್ನು ಇದು ಪಡೆದುಕೊಂಡಿದೆ. ಇದರಲ್ಲಿ ನೀಡಲಾಗಿರುವ ಫೀಚರ್ಸ್ ಬಳಕೆದಾರರ ಗಮನ ಸೆಳೆಯುವಂತಿದ್ದು, ಒಟ್ಟು ಪ್ಲೇಟೈಮ್ 40 ಗಂಟೆಗಳವರೆಗೆ ಲಭ್ಯ ಆಗಲಿದೆ. ಇದು ತಡೆರಹಿತ ಸಂಪರ್ಕಕ್ಕಾಗಿ ಬ್ಲೂಟೂತ್ 5.3 ಅನ್ನು ಬೆಂಬಲಿಸಲಿದ್ದು, ಅತ್ಯುತ್ತಮ ಮ್ಯೂಸಿಕ್ ಅನುಭವವನ್ನು ಒದಗಿಸುತ್ತದೆ.

ಐಟೆಲ್ S9 ಪ್ರೊ ಇಯರ್‌ಬಡ್ಸ್‌ನ ಪ್ರತಿ ಇಯರ್‌ಬಡ್ಸ್ ಕೂಡ 40mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಕೂಡಾ ಹೊಂದಿದೆ. ಇದರ ಚಾರ್ಜಿಂಗ್ ಕೇಸ್ 400mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಅಳವಡಿಸಲಾಗಿದೆ. ಕ್ವಾಲ್ಕಾಮ್‌ನ ಕ್ವಿಕ್ ಚಾರ್ಜ್ ಅಥವಾ ಮೀಡಿಯಾ ಟೆಕ್‌ನ ಪಂಪ್ ಎಕ್ಸ್‌ಪ್ರೆಸ್‌ನಂತಹ ವೇಗದ ಚಾರ್ಜಿಂಗ್ ತಂತ್ರಜ್ಞಾನಗಳನ್ನು ಡಿವೈಸ್ ಅನ್ನು ಚಾರ್ಜ್ ಮಾಡಲು ತೆಗೆದುಕೊಳ್ಳುವ ಟೈಮ್ ಅನ್ನು ಕಡಿಮೆ ಮಾಡಲು ಬಳಕೆ ಮಾಡಲಾಗುತ್ತದೆ.
ಇದು ಟೈಪ್-ಸಿ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದ್ದು, ಫಾಸ್ಟ್ ಚಾರ್ಜಿಂಗ್ ಸಹ ಹೊಂದಿದೆ. 10 ನಿಮಿಷ ಚಾರ್ಜ್‌ನಲ್ಲಿ 100 ನಿಮಿಷ ಪ್ಲೇಬ್ಯಾಕ್ ಟೈಂ ಪಡೆದಿದೆ. ತನ್ನ ವರ್ಗದಲ್ಲೇ ಇದು ಉತ್ತಮ ಫೀಚರ್ಸ್ ಒಳಗೊಂಡಿರುವ ಇಯರ್‌ಬಡ್ಸ್ ಆಗಿ ಕಾಣಿಸಿಕೊಂಡಿದ್ದು, ರಚನೆ ಹಾಗೂ ಕಲರ್ ಆಯ್ಕೆಯ ಮೂಲಕ ಸಹ ಆಕರ್ಷಕ ಎನಿಸಿದೆ. ಸ್ವೆಟ್ ರೆಸಿಸ್ಟನ್ಸ್ ಸೌಲಭ್ಯ ಪಡೆದಿದೆ. ಅಲ್ಲದೇ ಇದು ಬ್ಯಾಟರಿ ಲೆವೆಲ್ ಇಂಡಿಕೇಶನ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇನ್ನು ಇದು ಟೈಪ್ ಸಿ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ.
ಈಗಾಗಲೇ ಹೇಳಿದಂತೆ ಈ ಡಿವೈಸ್ 5.3 ಬ್ಲೂಟೂತ್ ವರ್ಷನ್ ಸೌಲಭ್ಯ ಒಳಗೊಂಡಿದ್ದು, ಕನೆಕ್ಟಿವಿಟಿ ಆಯ್ಕೆ ತನ್ನ ಪ್ರೈಸ್ ಟ್ಯಾಗ್ ರೇಂಜ್ ಉತ್ತಮವಾಗಿದೆ. ಸ್ಮಾರ್ಟ್‌ಫೋನ್ ಹಾಗೂ ಲ್ಯಾಪ್‌ಟಾಪ್ ಸಾಧನಗಳಿಗೆ ಆಟೋ ಕನೆಕ್ಟಿವಿಟಿ ಸೌಲಭ್ಯ ಸಹ ಪಡೆದಿದೆ. ಅಲ್ಲದೇ ನೇರವಾಗಿ ಸಂಭಾಷಣೆಯನ್ನು ಮ್ಯೂಟ್ ಅಥವಾ ಅನ್‌ಮ್ಯೂಟ್ ಮಾಡುವ ಆಯ್ಕೆಯನ್ನು ಸಹ ಈ ಇಯರ್‌ಬಡ್ಸ್ ಪಡೆದಿರುವುದು ವಿಶೇಷ ಎನಿಸುತ್ತದೆ.
ಕೊನೆಯ ಮಾತು
ಐಟೆಲ್ S9 ಪ್ರೊ ಇಯರ್‌ಬಡ್ಸ್ ಅಗ್ಗದ ದರದ ಇಯರ್‌ಬಡ್ ಡಿವೈಸ್ ಆಗಿದ್ದು, ಎಲ್ಲ ಅಗತ್ಯ ಸೌಲಭ್ಯ ನೀಡುವ ಪ್ರಯತ್ನ ಮಾಡಿದೆ. ತನ್ನ ವರ್ಗದಲ್ಲೇ ಇದು ಉತ್ತಮ ಆಡಿಯೋ ಔಟ್‌ಪುಟ್ ಪಡೆದಿದೆ. ವಿನ್ಯಾಸದಲ್ಲಿ ಇನ್ನಷ್ಟು ಅಪ್‌ಗ್ರೇಡ್ ಅಗತ್ಯ ಎನಿಸುತ್ತದೆ ಅಲ್ಲದೇ ಡಾಲ್ಬಿ ಆಡಿಯೋ ಸಪೋರ್ಟ್ ನೀಡಿದ್ದರೆ ಇನ್ನಷ್ಟು ಪ್ಲಸ್ ಪಾಯಿಂಟ್ ಆಗುತ್ತಿತ್ತು. ಅದಾಗ್ಯೂ, ಅಗ್ಗದ ಬೆಲೆಗೆ ಇದು ಉತ್ತಮ ಇಯರ್‌ಬಡ್ ಎನ್ನುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications








