LED-LED TV ಕಥೆ ಮುಗಿತು: ಬಂದಿದೆ ರೋಲ್ ಮಾಡುವ ಸ್ಮಾರ್ಟ್ LG TV
ಸ್ಮಾರ್ಟ್‌ಟಿವಿ ಲೋಕದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ LG ಕಂಪನಿಯೂ ಸದ್ಯ ಅಮೆರಿಕಾದ ಲಾಸ್ ವೇಗಸ್ ನಲ್ಲಿ ನಡೆಯುತ್ತಿರುವ CES 2018 ಕಾರ್ಯಕ್ರಮದಲ್ಲಿ ಟಿವಿ ಲೋಕವೇ ಬೆಚ್ಚಿ ಬಿಳುವ ಸುರುಳಿ ಸುತ್ತ ಬಹುದಾದ ಟಿವಿ ಪರದೆಯನ್ನು ಲಾಂಚ್ ಮಾಡಿದೆ. ಇದು ಭವಿಷ್ಯದ ಟಿವಿ ಜಗತ್ತನ್ನು ಬದಲಾಯಿಸಲಿದೆ ಎನ್ನಲಾಗಿದೆ.

ಓದಿರಿ: ಇದನ್ನು ಡೌನ್‌ಲೋಡ್ ಮಾಡಿಕೊಂಡರೆ ನಿಮ್ಮ ಆಧಾರ್ ಕಾರ್ಡ್ ಅಗತ್ಯತೆ ಇರುವುದಿಲ್ಲ..!
LG 65 ಇಂಚಿನ UHD ಗುಣಮಟ್ಟದ OLED ಡಿಸ್‌ಪ್ಲೇ ಹೊಂದಿರುವ ಟಿವಿ ಮತ್ತು 88 ಇಂಚಿನ 8K ಗುಣಮಟ್ಟದ ಮತ್ತೊಂದು OLED ಡಿಸ್‌ಪ್ಲೇಯನ್ನು CES 2018 ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದೆ. ಈ ಎರಡು ಟಿವಿಗಳನ್ನು ಸುರುಳಿ ಸುತ್ತಿ ಇಡಬಹುದಾಗಿದೆ.

ರೋಲ್ ಮಾಡಬಹುದು:
ಮನೆಯಲ್ಲಿ ಇರುವ ಚಾರ್ಟ್‌ಗಳ ರೋಲ್ ಮಾಡಿ ಇಡುವ ಮಾದರಿಯಲ್ಲಿ ನೀವು LG ಸದ್ಯ ಬಿಡುಗಡೆ ಮಾಡಿರುವ ಸ್ಮಾರ್ಟ್ ಟಿವಿಗಳನ್ನು ಇಡಬಹುದಾಗಿದೆ. ಇದು ಪೇಪರ್ ಮಾದರಿಯಲ್ಲಿಯೇ ಇರಲಿದೆ ಎನ್ನಲಾಗಿದೆ.

ವಿಶ್ವದ ಮೊದಲ 8K ಟಿವಿ ಇದಾಗಿದೆ;
LG CES 2018 ಕಾರ್ಯಕ್ರಮದಲ್ಲಿ ವಿಶ್ವದ ಮೊದಲ 8K ಗುಣಮಟ್ಟದ ಟಿವಿಯನ್ನು ಲಾಂಚ್ ಮಾಡಿದ್ದು, ಇದು ಉತ್ತಮವಾದ ಸೌಂಡ್, ಅದ್ಬುತ ಗುಣಮಟ್ಟವನ್ನು ಹೊಂದಿದೆ ಎನ್ನಲಾಗಿದೆ. ಇದು ಜಾಗತಿಕ ಟಿವಿ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ.


ಬೆಲೆ ತಿಳಿದಿಲ್ಲ:
ಕೇಲವ ತನ್ನ ಟಿವಿಗಳ ಬಗ್ಗೆ ಮಾಹಿತಿಯನ್ನು ನೀಡಿರುವ LG, ಬೆಲೆ ಸೇರಿದಂತೆ ಮಾರುಕಟ್ಟೆಯಲ್ಲಿ ಎಂದು ದೊರೆಯಲಿದೆ ಎನ್ನವ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ.


Click it and Unblock the Notifications








