Subscribe to Gizbot

ಇದನ್ನು ಡೌನ್‌ಲೋಡ್ ಮಾಡಿಕೊಂಡರೆ ನಿಮ್ಮ ಆಧಾರ್ ಕಾರ್ಡ್ ಅಗತ್ಯತೆ ಇರುವುದಿಲ್ಲ..!

Posted By:

ಇಂದಿನ ದಿನದಲ್ಲಿ ಪ್ರತಿಯೊಂದು ಸರಿಕಾರಿ ಸೇವೆಯನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಎನ್ನುವ ಸ್ಥಿತಿಯನ್ನು ಕೇಂದ್ರ ಸರಕಾರವೂ ನಿರ್ಮಿಸುತ್ತಿದೆ. ಇದಲ್ಲದೇ ಅನೇಕ ಸೇವೆಗಳಿಗೆ ಆಧಾರ್ ಲಿಂಕ್ ಮಾಡಲು ಆದೇಶವನ್ನು ನೀಡಿದೆ. ಇದಕ್ಕೆ ಡೆಡ್ ಲೈನ್ ಸಹ ವಿಧಿಸಲಾಗಿದೆ ಎನ್ನಲಾಗಿದೆ.

ಇದನ್ನು ಡೌನ್‌ಲೋಡ್ ಮಾಡಿಕೊಂಡರೆ ನಿಮ್ಮ ಆಧಾರ್ ಕಾರ್ಡ್ ಅಗತ್ಯತೆ ಇರುವುದಿಲ್ಲ..!

ಓದಿರಿ: ಜಿಯೋ ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!

ಈಗಾಗಲೇ ಬ್ಯಾಂಕ್ ಆಕೌಂಟ್, ಪ್ಯಾನ್ ಕಾರ್ಡ್ ಮತ್ತು ಮೊಬೈಲ್ ನಂಬರ್ ನೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವಂತೆ ಕೇಂದ್ರ ಸರಕಾರವೂ ಆದೇಶವನ್ನು ನೀಡಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಆಧಾರ್ ಬಳಕೆ ಹಲವು ಸ್ಥಳಗಳಲ್ಲಿ ಕಡ್ಡಾಯವಾಗಲಿದೆ. ಈ ಹಿನ್ನಲೆಯಲ್ಲಿ e ಆಧಾರ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಸಿಕೊಡುವ ಪ್ರಯತ್ನವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಆಧಾರ್ ಸೇಫ್ ಮಾಡಿ:

ಆಧಾರ್ ಸೇಫ್ ಮಾಡಿ:

ಈಗಾಗಲೇ ಆಧಾರ್ ಅತ್ಯವಶ್ಯಕ ದಾಖಲಾತಿಯಾಗಿದ್ದು, ಈ ಹಿನ್ನಲೆಯಲ್ಲಿ ಎಲ್ಲಾ ಕಡೆಗೂ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗುವುದು ಸೇಫ್ ಅಲ್ಲ ಈ ಹಿನ್ನಲೆಯಲ್ಲಿ ನಿಮ್ಮ ಫೋನಿನಲ್ಲಿಯೇ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅದು ಹೇಗೆ ಎಂಬುದು ಮುಂದಿನಂತಿದೆ.

ಇ-ಆಧಾರ್ ಡೌನ್‌ಲೋಡ್ ಮಾಡಿ:

ಇ-ಆಧಾರ್ ಡೌನ್‌ಲೋಡ್ ಮಾಡಿ:

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇ-ಆಧಾರ್ ಎಂದು ಸರ್ಚ್ ಮಾಡಿದ ನಂತರದಲ್ಲಿ ಅಲ್ಲಿ ಬರುವ ಮೊದಲ ಲಿಂಕ್ ಓಪನ್ ಮಾಡಿರಿ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಎಂಟ್ರಿ ಮಾಡಿರಿ. ನಂತರ ಪೂರ್ಣ ಹೆಸರು ಎಂಟ್ರಿ ಮಾಡಿದ ನಂತರದಲ್ಲಿ ನಿಮ್ಮ ಪಿನ್ ಕೋಡ್ ಹಾಕಿರಿ ನಂತರದಲ್ಲಿ OTP ಕಳುಹಿಸುವ ಬಟನ್ ಮೇಲೆ ಕ್ಲಿಕ್ ಮಾಡಿರಿ.

OTP ಹಾಕಿರಿ:

OTP ಹಾಕಿರಿ:

ನಿಮ್ಮ ಪೋನಿಗೆ ಬರುವ OTPಯನ್ನು ಅಲ್ಲಿ ನೀಡಿರುವ ಜಾಗದಲ್ಲಿ ಎಂಟ್ರಿ ಮಾಡಿರಿ. ಮಾಡಿದ ನಂತರದಲ್ಲಿ ಅಲ್ಲಿ ನೀಡಿರುವ ಡೌನ್‌ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ. ಮಾಡಿದ ನಂತರದಲ್ಲಿ ನಿಮ್ಮ ಫೋನಿನಲ್ಲಿ ಇ-ಆಧಾರ್ ಡೌನ್‌ಲೋಡ್ ಆಗಲಿದೆ. ಅದನ್ನು ಎಲ್ಲಿ ಬೇಕಾದರು ನೀವು ಬಳಕೆ ಮಾಡಿಕೊಳ್ಳಬಹುದಾಗಿದೆ.

ವಿಡಿಯೋ ನೋಡಿ:

ನಿಮಗೆ ಇದು ತಿಳಿಯಲಿಲ್ಲವಾದರೆ ಇ-ಆಧಾರ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಮೊಬೈಲ್ ಆಧಾರ್ ಲಿಂಕ್ ಮಾಡಿ:

ಇದಲ್ಲದೇ ನಿಮ್ಮ ಮೊಬೈಲ್ ನಂಬರ್ ಅನ್ನು ಹೇಗೆ ಲಿಂಕ್ ಮಾಡುವುದು ಎನ್ನುವುದನ್ನು ಈ ವಿಡಿಯೋ ಮೂಲಕ ತಿಳಿದುಕೊಳ್ಳಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
how to download e aadhar. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot