ಗೇಮಿಂಗ್ ಅನುಭವನ್ನು ಬದಲಾಯಿಸಲಿದೆ LG: 21:9 ಅನುಪಾತದ ಆಲ್ಟ್ರಾ ವೈಟ್ ಡಿಸ್‌ಪ್ಲೇ...!
ದಿನದಿಂದ ದಿನಕ್ಕೆ ಗೇಮಿಂಗ್ ಪ್ರಪಂಚವೂ ಹೆಚ್ಚು ಬೆಳೆಯುತ್ತಾ ಸಾಗುತ್ತಿದ್ದು, ಈ ಹಿನ್ನಲೆಯಲ್ಲಿ ಗೇಮರ್ ಗಳನ್ನು ಗಮನದಲ್ಲಿ ಇಟ್ಟುಕೊಂಡು LG ಅತೀ ಅಗಲದ ಸ್ಕ್ರಿನ್ ಹೊಂದಿರುವ ಡಿಸ್‌ಪ್ಲೇಯನ್ನು ಬಿಡುಗಡೆ ಮಾಡಿದೆ. ಅಲ್ಲದೇ ಇದು ಉತ್ತಮ ತಂತ್ರಜ್ಞಾನವನ್ನು ಒಳಗೊಂಡಿದೆ ಎನ್ನಲಾಗಿದೆ.

ಓದಿರಿ: ಬೆಂಗಳೂರಿನಲ್ಲಿ 5G ತಂತ್ರಜ್ಞಾನ ಅಭಿವೃದ್ಧಿಪಡಿಸಲು ಮುಂದಾದ ನೋಕಿಯಾ..!
LG 34UC79G 34 ಇಂಚಿನ ಆಲ್ಟ್ರಾವೈಡ್ ಗೇಮಿಂಗ್ ಮಾನಿಟರ್ ಆಗಿದ್ದು, ಗೇಮ್ ಆಡುವ ಸಲುವಾಗಿಯೇ ಈ ಮಾನಿಟರ್ ಅನ್ನು ನಿರ್ಮಿಸಲಾಗಿದೆ. ಇದು 21:9 ಅನುಪಾತವನ್ನು ಹೊಂದಿದ್ದು, ಗೇಮ್ ಆಡಲು ಅತ್ಯುತ್ತಮ ಅನುಭವನ್ನು ನೀಡಲಿದೆ. ಒಮ್ಮೆ ನೀವು ಈ ಮಾನಿಟರ್ ನಲ್ಲಿ ಗೇಮ್ ಆಡಿದರೆ ನಂತರೆ ಬೇರೆ ಮಾನಿಟರ್‌ಗಳಲ್ಲಿ ಗೇಮ್ ಆಡಿದರೆ ಇಂತಹದು ಅನುಭವನ್ನು ಪಡೆದುಕೊಳ್ಳಲು ಸಾಧ್ಯವೇ ಇಲ್ಲ ಎನ್ನಲಾಗಿದೆ.

ಆಲ್ಟ್ರಾ ವೈಡ್ ಸ್ಕ್ರಿನ್:
ಸಾಮಾನ್ಯ ಮಾನಿಟರ್ ಗಳು 16:9 ಅನುಪಾತದಲ್ಲಿ ಇರಲಿದೆ ಆದರೆ LG 34UC79G 34 ಇಂಚಿನ ಆಲ್ಟ್ರಾವೈಡ್ ಗೇಮಿಂಗ್ ಮಾನಿಟರ್ 21:9 ಅನುಪಾತದಲ್ಲಿ ನಿರ್ಮಾಣವಾಗಿದ್ದು, 2560X1080 ರೆಸಲ್ಯೂಷನ್ ಗುಣಮಟ್ಟವನ್ನು ಹೊಂದಿದೆ. ಇದರ ಬಳಕೆಯೂ ಉತ್ತಮ ಅನುಭವನ್ನು ನೀಡಲಿದೆ.

ಉತ್ತಮ ಪಿಚ್ಚರ್ ಕ್ವಾಲಿಟಿ:
ಈ 21:9 ಅನುಪಾತದ LG 34UC79G 34 ಇಂಚಿನ ಆಲ್ಟ್ರಾವೈಡ್ ಗೇಮಿಂಗ್ ಮಾನಿಟರ್ ನಲ್ಲಿ 16.7 ಮಿಲಿಯನ್ ಕಲರ್‌ಗಳನ್ನು ಕಾಣಬಹುದಾಗಿದೆ. ಇದು 165Hz ಗುಣಮಟ್ಟದ ವಿಡಿಯೋಗಳನ್ನು ಪ್ರಸಾರ ಮಾಡಲಿದೆ ಎನ್ನಲಾಗಿದೆ. ಅಲ್ಲದೇ IPS ಪ್ಯಾನಲ್ ಅನ್ನು ಒಳಗೊಂಡಿದೆ.

ಹೊಸ ತಂತ್ರಜ್ಞಾನ:
ಇದಲ್ಲದೇ LG ಆಲ್ಟ್ರಾವೈಡ್ ಮಾನಿಟರ್ ಬ್ಲರ್ ರೆಡಿಷನ್ ಸೇರಿದಂತೆ ಆನ್ ಸ್ಕ್ರಿನ್ ಕಂಟ್ರೋಲ್ ಮತ್ತು ಸ್ಕ್ರಿನ್ ಸ್ಲಿಟ್ 2.0 ಜೊತೆಗೆ ಸಿಕ್ ಟೆಕ್ನಾಲಜಿಯನ್ನು ಕಾಣಹುದಾಗಿದ್ದು, ಇದು ನಿಮ್ಮ ಗೇಮಿಂಗ್ ಅನುಭವನ್ನು ಉತ್ತಮ ಪಡಿಸಲಿದೆ. ಉತ್ತಮವಾಗಿ ಮತ್ತು ಸುಲಭವಾಗಿ ಗೇಮಿಂಗ್ ಗಳನ್ನು ಆಡುವುದು ಇದರಲ್ಲಿ ಸಾಧ್ಯವಿದೆ.

ಗೇಮರ್‌ಗಳಿಗಾಗಿಯೇ ಈ ಮಾನಿಟರ್:
LG ಆಲ್ಟ್ರಾ ವೈಡ್ ಮಾನಿಟರ್ ಗೇಮರ್ ಗಳಿಗಾಗಿಯೇ ನಿರ್ಮಿಸಲಾಗಿದ್ದು, ಬ್ಲಾಕ್ ಸ್ಟಬ್ಲೇಸರ್ ಟೆಕ್ನಾಲಜಿಯನ್ನು ಹೊಂದಿದೆ. ಇದರಿಂದ ಡ್ರಾರ್ಕ್ ಗೇಮ್‌ಗಳನ್ನು ಇದರಲ್ಲಿ ಉತ್ತಮವಾಗಿ ಆಡಬಹುದಾಗಿದೆ. ಅಲ್ಲದೇ ಉತ್ತಮ ಗ್ರಾಫಿಕ್ಸ್ ಗಳನ್ನು ಪ್ರದರ್ಶಿಸಲು ಸಹಾಯಕಾರಿಯಾಗಿದೆ.


Click it and Unblock the Notifications








