ಬೆಂಗಳೂರಿನಲ್ಲಿ 5G ತಂತ್ರಜ್ಞಾನ ಅಭಿವೃದ್ಧಿಪಡಿಸಲು ಮುಂದಾದ ನೋಕಿಯಾ..!

|

ನೋಕಿಯಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗಳನ್ನು ಈಗಾಗಲೇ ಲಾಂಚ್ ಮಾಡಿರುವುದು ನಿಮಗೆಲ್ಲ ತಿಳಿದಿರುವ ವಿಚಾರ. ನೋಕಿಯಾ ಈ ಹಿಂದೆ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅಧಿಪತ್ಯವನ್ನು ಸ್ಥಾಪಿಸಿತ್ತು.

ಬೆಂಗಳೂರಿನಲ್ಲಿ 5G ತಂತ್ರಜ್ಞಾನ ಅಭಿವೃದ್ಧಿಪಡಿಸಲು ಮುಂದಾದ ನೋಕಿಯಾ..!

ಈ ಮತ್ತೆ ಹೊಸತನದೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿರುವ ಹಿನ್ನಲೆಯಲ್ಲಿ ತನ್ನ ಹಿಂದಿನ ಗತ ವೈಭವಕ್ಕೆ ಮರಳಲು ಹಲವು ಹೊಸ ಪ್ರಯೋಗಳನ್ನು ಮಾಡುತ್ತಿದೆ. ಇದಕ್ಕಾಗಿಯೇ ನೋಕಿಯಾ ಭಾರತದಲ್ಲಿ 5G ಮೊಬೈಲ್ ನೆಟ್‌ವರ್ಕ್ ಟೆಕ್ನಾಲಜಿಯನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಚಾಲನೆ ನೀಡಲು ಮುಂದಾಗಿದೆ.

ಓದಿರಿ: ಇನ್ಮುಂದೆ ವಾಟ್ಸ್‌ಆಪ್‌ನಲ್ಲೇ ಯೂಟ್ಯೂಬ್ ವಿಡಿಯೋ ನೋಡಬಹುದು: ಹೇಗೆ..?

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ 4G ಸೇವೆಯೂ ಹೆಚ್ಚಾಗಿ ಸದ್ದು ಮಾಡುತ್ತಿದೆ. ಇಡೀ ವಿಶ್ವವನ್ನೇ ಭಾರತದ ಕಡೆಗೆ ತಿರುಗುವಂತೆ ಮಾಡಿದೆ. ಈ ಹಿನ್ನಲೇಯಲ್ಲಿ ಇನ್ನು ಕೆಲವೇ ದಿನಗಳಲ್ಲಿ 5G ಸೇವೆಯನ್ನು ಸ್ವಾಗತಿಸಲು ಭಾರತ ಸಹ ತುದಿಗಾಲಿನಲ್ಲಿ ನಿಂತಿದೆ. ಇದಕ್ಕಾಗಿ ನೋಕಿಯಾ 5G ಮೊಬೈಲ್ ನೆಟ್‌ವರ್ಕ್ ಟೆಕ್ನಾಲಜಿಯನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸೆಂಟರ್ ಅನ್ನು ಭಾರತದಲ್ಲಿಯೇ ತೆರೆಯಲು ಮುಂದಾಗಿದೆ.

 ಬೆಂಗಳೂರಿನಲ್ಲಿ ಕೇಂದ್ರ ತೆರೆದ ನೋಕಿಯಾ:

ಬೆಂಗಳೂರಿನಲ್ಲಿ ಕೇಂದ್ರ ತೆರೆದ ನೋಕಿಯಾ:

ಭಾರತದಲ್ಲಿ 4G ಸೇವೆ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡ ಕಾರಣ 5G ಸೇವೆ ಹೆಚ್ಚಿನ ಗಮನವನ್ನು ಸೆಳೆಯುತ್ತಿದೆ. ಇದಕ್ಕಾಗಿಯೇ ಅನೇಕ ಕಂಪನಿಗಳು 5G ಸೇವೆಯನ್ನು ಆರಂಭಿಸಲು ಆಸಕ್ತಿಯನ್ನು ತೋರಿಸಿವೆ. ಇದೇ ಮಾದರಿಯಲ್ಲಿ 5G ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಸುಲವಾಗಿ ನೋಕಿಯಾ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸೆಂಟರ್ ಅನ್ನು ತೆರೆಯಲಿದೆ ಎನ್ನಲಾಗಿದೆ.

ಭವಿಷ್ಯದ ತಂತ್ರಜ್ಞಾನ:

ಭವಿಷ್ಯದ ತಂತ್ರಜ್ಞಾನ:

ಬೆಂಗಳೂರಿನಲ್ಲಿ ಆರಂಭವಾಗುವ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಮುಂದಿನ ತಲೆಮಾರಿನ ಭವಿಷ್ಯದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಲು ಸಂಶೋಧಕರು ಕಾರ್ಯನಿರತರಾಗಲಿದ್ದಾರೆ. ಇಲ್ಲಿ ಅಭಿವೃದ್ಧಿಯಾಗುವ ತಂತ್ರಜ್ಞಾನವು ಭಾರತ ಮತ್ತು ಜಗತ್ತಿಗೆ ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿದೆ.

ಅತೀ ವೇಗದ ಕಾರ್ಯಚರಣೆ:

ಅತೀ ವೇಗದ ಕಾರ್ಯಚರಣೆ:

4G ಸೇವೆಯೇ ಅತೀ ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಈ ಹಿನ್ನಲೆಯಲ್ಲಿ 5G ನೆಟ್‌ವರ್ಕ್‌ ಇನ್ನೂ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಸಂಶೋಧನೆಗಳು ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಉತ್ತಮವಾದ ತಂತ್ರಜ್ಞಾನವನ್ನು ನೋಕಿಯಾ ಅಭಿವೃದ್ಧಿಪಡಿಸುವ ಮುಂದಾಗಿದೆ. ಈ ನೂತನ ತಂತ್ರಜ್ಞಾನವು 2020ಯಲ್ಲಿ ಜಗತ್ತಿಗೆ ತೆರೆದುಕೊಳ್ಳಲಿದೆ ಎನ್ನಲಾಗಿದೆ.

BSNLನೊಂದಿಗೆ ಕಾರ್ಯಚರಣೆ:

BSNLನೊಂದಿಗೆ ಕಾರ್ಯಚರಣೆ:

ನೋಕಿಯಾ 5G ತಂತ್ರಜ್ಞಾನವನ್ನು ಅಬಿವೃದ್ಧಿ ಪಡಿಸುವ ಸಲುವಾಗಿ ಸರ್ಕಾರಿ ಸ್ವಾಮ್ಯದ BSNL ನೊಂದಿಗೆ ಸೇರಿಕೊಂಡು ಕಾರ್ಯಚರಣೆಯನ್ನು ನಡೆಸುತ್ತಿದೆ ಎನ್ನಲಾಗಿದೆ. ಇದರಿಂದಾಗಿ BSNL 4G ಸೇವೆಯನ್ನು ಬಿಟ್ಟು ನೇರವಾಗಿ 5G ಸೇವೆಯನ್ನು ಆರಂಭಿಸಲಿದೆ. ಈ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ನೇರಾವಾಗಿ ಸ್ಪರ್ಧೆಯನ್ನು ನಡೆಸಲಿದೆ.

5G ಸೇವೆಗೆ ಬೂಸ್ಟ್:

5G ಸೇವೆಗೆ ಬೂಸ್ಟ್:

ನೋಕಿಯಾ ದೇಶದಲ್ಲಿ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸೆಂಟರ್ ಅನ್ನು ತೆರೆಯುತ್ತಿರುವ 5G ತಂತ್ರಜ್ಞಾನದ ಅಭಿವೃದ್ಧಿಗೆ ಬೂಸ್ಟ್ ಸಿಕ್ಕಂತಾಗಿದೆ. ಭಾರತವೂ ಮುಂದುವರೆದ ದೇಶಗಳಂತೆ ಒಂದೇ ಸಮಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಮೈಗೂಡಿಸಿಕೊಳ್ಳಲು 5G ಸಹಾಯಕಾರಿಯಾಗಲಿದೆ.

Best Mobiles in India

English summary
Nokia to develop its 5G mobile network technology in India, to increase staffing at R&D centre in Bengaluru. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X