smartphones: ಈ ವರ್ಷ ಲಾಂಚ್ ಆದ ಮಿಡ್‌ರೇಂಜ್ ಫೋನ್‌ಗಳಿವು: ಆಕರ್ಷಕ ಫೀಚರ್ಸ್, ಸಖತ್ ಬೇಡಿಕೆ
ಸ್ಮಾರ್ಟ್‌ಫೋನ್‌ಗಳ (smartphones ) ವಿಭಾಗದಲ್ಲಿ ನಾವು ಪ್ರಮುಖವಾಗಿ ಮೂರು ಭಿನ್ನ ಶ್ರೇಣಿಯ ಫೋನ್‌ಗಳನ್ನು ಕಾಣಬಹುದು. ಅಂದರೆ ಬಜೆಟ್ ಬೆಲೆಯ ಫೋನ್‌ಗಳು, ಮಿಡ್‌ರೇಂಜ್ ಫೋನ್‌ಗಳು ಹಾಗೂ ದುಬಾರಿ ಬೆಲೆಯ ಫೋನ್‌ಗಳು. ಈ ವಿಭಾಗದಲ್ಲಿ ಮಿಡ್‌ರೇಂಜ್ ಫೋನ್‌ಗಳು (Midrange phones) ಭಾರತದಲ್ಲಿ ಹೆಚ್ಚು ಜನಪ್ರಿಯ ಆಗುತ್ತಿವೆ. ಹಾಗೆಯೇ ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ.
ಹೌದು, ಈ ವರ್ಷ ಸಾಕಷ್ಟು ಮಿಡ್‌ರೇಂಜ್ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಾಗಿದ್ದು, ಇವುಗಳಲ್ಲಿ ಮೊಟೊ, ಪೊಕೊ, ಒನ್‌ಪ್ಲಸ್, ಸ್ಯಾಮ್‌ಸಂಗ್, ರೆಡ್ಮಿ (Moto, Poco, OnePlus, Samsung, Redmi) ಬ್ರ್ಯಾಂಡ್‌ಗಳು ಭಿನ್ನ ಫೋನ್‌ಗಳನ್ನು ಅನಾವರಣ ಮಾಡಿವೆ. ಇವು ಭರ್ಜರಿ ಫೀಚರ್ಸ್ ಆಯ್ಕೆಯೊಂದಿಗೆ ಬಳಕೆದಾರರಿಗೆ ವಿವಿಧ ಪ್ರಯೋಜನ ನೀಡಲಿವೆ. ಹಾಗಿದ್ರೆ, ಯಾವೆಲ್ಲಾ ಪ್ರಮುಖ ಫೋನ್‌ಗಳು ಬಜೆಟ್ ಬೆಲೆಯಲ್ಲಿ ಅಂದರೆ 30,000ರೂ. ಒಳಗೆ ಇರುವ ಅತ್ಯುತ್ತಮ ಫೋನ್‌ಗಳ ಲಿಸ್ಟ್ ಇಲ್ಲಿದೆ ನೋಡಿ.

ಮೊಟೊರೊಲಾ ಎಡ್ಜ್ 40: ಈ ಸ್ಮಾರ್ಟ್‌ಫೋನ್ (Motorola Edge 40) ಬರೋಬ್ಬರಿ 1,200 ನಿಟ್ಸ್ ವರೆಗಿನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಹಾಗೂ 3D ಕರ್ವ್ಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದು 6.55 ಇಂಚಿನ pOLED ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಕ್ಲಾಸ್ ಲೀಡಿಂಗ್ 144Hz ರಿಫ್ರೆಶ್ ರೇಟ್‌ನೊಂದಿಗೆ ಲಭ್ಯ ಇದೆ. ಜೊತೆಗೆ ಡಿಸ್‌ಪ್ಲೇಯ ಇತರ ಫೀಚರ್ಸ್ ಎಂದರೆ HDR10+, 92.7 % ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್ ಆಯ್ಕೆ ಪಡೆದುಕೊಂಡಿದೆ.
ಪೊಕೊ F5 5G: ಈ ಫೋನ್ (POCO F5 5G) ಗೆ ಭರ್ಜರಿ ಬೇಡಿಕೆ ಇದ್ದು, ಸ್ನಾಪ್‌ಡ್ರಾಗನ್ 7+ ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ವಿಭಾಗದಲ್ಲಿ ಉತ್ತಮ ಅಂಕ ಪಡೆದುಕೊಂಡಿದೆ. ಅಂದರೆ AnTuTu ಬೆಂಚ್‌ಮಾರ್ಕ್ ಪರೀಕ್ಷೆಗಳಲ್ಲಿ ಒಂಬತ್ತು ಲಕ್ಷಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದೆ. ಹಾಗೆಯೆ 4nm ಪ್ರೊಸೆಸರ್ ಎಂಟು ಕೋರ್‌ಗಳನ್ನು ಪಡೆದಿದ್ದು, ಒಂದು ಕಾರ್ಟೆಕ್ಸ್-X2 (2.91GHz ವರೆಗೆ), ಮೂರು ಕಾರ್ಟೆಕ್ಸ್ A710 (2.49GHz ವರೆಗೆ) ಮತ್ತು ನಾಲ್ಕು ಕಾರ್ಟೆಕ್ಸ್ A510 (1.8GHz ವರೆಗೆ). ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಲಿಕ್ವಿಡ್ ಕೂಲ್ ಟೆಕ್ನಾಲಜಿ 2.0 ಆಯ್ಕೆ ಸಹ ಈ ಫೋನ್‌ನಲ್ಲಿ ಇದೆ.

ಒನ್‌ಪ್ಲಸ್ ನಾರ್ಡ್ 3 5G : ಈ ಸ್ಮಾರ್ಟ್‌ಫೋನ್ (OnePlus Nord 3 5G) ಆಕ್ಸಿಜನ್ ಓಎಸ್ 13.1 ನೊಂದಿಗೆ ಕಾಣಿಸಿಕೊಂಡಿದ್ದು, ಝೆನ್ ಸ್ಪೇಸ್, ಓ-ರಿಲ್ಯಾಕ್ಸ್ ನಂತಹ ಪ್ರಕೃತಿ-ಪ್ರೇರಿತ ಫೀಚರ್ಸ್ ಅನ್ನು ಈ ಫೋನ್ ಪಡೆದುಕೊಂಡಿದೆ. ಈ ಮೊದಲು ಕಾಣಿಸಿಕೊಳ್ಳುತ್ತಿದ್ದ ದೋಷ ಪರಿಹಾರಗಳು ಮತ್ತು ಹೊಸ ಫೀಚರ್ಸ್‌ಗಾಗಿ ನವೀಕರಣಗಳನ್ನು ಹೆಚ್ಚಿನ ವರ್ಷಗಳಿಗೆ ವಿಸ್ತರಣೆ ಸಹ ಮಾಡಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F54 5G: ಈ ಫೋನ್ (Samsung Galaxy F54 5G) ಬ್ಯಾಟರಿ ವಿಚಾರದಲ್ಲಿ ಅತ್ಯುತ್ತಮ ಎನಿಸಿಕೊಂಡಿದೆ. ಯಾಕೆಂದರೆ 6,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಇದು 25W ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಅಂದರೆ ಈ ಫೋನ್ ಅನ್ನು ನೀವು ಎರಡು ದಿನಗಳಿಗೆ ಒಮ್ಮೆ ಚಾರ್ಜ್ ಮಾಡಿದ್ರೆ ಸಾಕು. ಇದರ ಜೊತೆಗೆ ಉತ್ತಮ ಸಾಫ್ಟ್‌ವೇರ್ ಮತ್ತು ಕ್ಯಾಮೆರಾ ಹೊಂದಿದ್ದು, ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ.

ಒಪ್ಪೋ ರೆನೋ 10 5G: ಈ ಫೋನ್ (OPPO Reno 10 5G) ಅತ್ಯುತ್ತಮ ಕ್ಯಾಮೆರಾ ಫೋನ್ ಎಂದು ಹೆಸರು ಪಡೆದುಕೊಂಡಿದೆ. ಈ ಫೋನ್ 32 ಮೆಗಾಪಿಕ್ಸೆಲ್ ಸೋನಿ IMX709 ಟೆಲಿಫೋಟೋ ಸೆನ್ಸರ್ ಹೊಂದಿದ್ದು, ಇದು ಪ್ರೊ ಪೋರ್ಟ್ರೇಟ್ ಮೋಡ್ ಅನ್ನು ಬೆಂಬಲಿಸಲಿದೆ. ಇದರೊಂದಿಗೆ ಜೂಮ್ ಲೆನ್ಸ್ ಹೊರತುಪಡಿಸಿ, ಇದು 64 ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಹೊಂದಿದ್ದು, 4K30fps ವರೆಗೆ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದಾಗಿದೆ.
ಇನ್ಫಿನಿಕ್ಸ್ ಜೀರೋ 30 5G: ಈ ಸ್ಮಾರ್ಟ್‌ಫೋನ್ (Infinix Zero 30 5G) ಸೆಲ್ಫಿ ಪ್ರಿಯರ ನೆಚ್ಚಿನ ಫೋನ್ ಆಗಿ ಗುರುತಿಸಿಕೊಂಡಿದೆ. ಇದು 50 ಮೆಗಾಪಿಕ್ಸೆಲ್ ಸೆಲ್ಫಿ ಲೆನ್ಸ್ ಅನ್ನು ಹೊಂದಿದ್ದು, 4K 60FPS ನಲ್ಲಿ ವಿಡಿಯೋಗಳನ್ನು ಶೂಟ್ ಮಾಡಲು ಅನುಮತಿಸುತ್ತದೆ. ಜೊತೆಗೆ ಎಆರ್ ಸ್ಪೇಸ್ ಅನ್ನು ಸಹ ಪ್ರಯೋಗಿಸಬಹುದು. ಈ ವಿಭಾಗದಲ್ಲಿ ನೀವು ವಿವೋ ಫೋನ್‌ಗಳನ್ನು ಸಹ ಖರೀದಿ ಮಾಡಬಹುದು. ಯಾಕೆಂದರೆ ಸೆಲ್ಫಿ ಉದ್ದೇಶಕ್ಕೆ ವಿವೋ ಸಾಕಷ್ಟು ಫೋನ್‌ಗಳನ್ನು ಅನಾವರಣ ಮಾಡಿದೆ.
ರೆಡ್ಮಿ ನೋಟ್ 12 ಪ್ರೊ ಪ್ಲಸ್ 5G: ಈ ಸ್ಮಾರ್ಟ್‌ಫೋನ್ (Redmi Note 12 Pro Plus 5G) 30,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯ ಇರುವ ಫೋನ್‌ಗಳಲ್ಲಿ ಉತ್ತಮ ಆಯ್ಕೆ ಎನ್ನಬಹುದು, ಇದು 6.67 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ. ಇದರೊಂದಿಗೆ ಡೈಮೆನ್ಸಿಟಿ 1080 ಸಿಪಿಯು ಬಲ ಹಾಗೂ MIUI 13 ಓಎಸ್ ಹೊಂದಿದ್ದು, 4,980mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹಾಗೂ 120W ಚಾರ್ಜಿಂಗ್ ಬೆಂಬಲ ಪಡೆದಿದ್ದು, 200MP + 8MP + 2MP ರಿಯರ್ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಐಕ್ಯೂ ನಿಯೋ 7: ಗೇಮಿಂಗ್ ವಿಭಾಗದಲ್ಲಿ ಈ ಫೋನ್ ಅತ್ಯುತ್ತಮ ಎನ್ನಬಹುದಾಗಿದೆ. ಇದು 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 120Hz ರಿಫ್ರೆಶ್ ರೆಟ್ 1,200Hz ಟಚ್ ಸ್ಯಾಂಪಲಿಂಗ್ ರೇಟ್ ಹೊಂದಿದ್ದು, ಡೈಮೆನ್ಸಿಟಿ 8200 ಪ್ರೊಸೆಸರ್‌ನೊಂದಿಗೆ ಫನ್‌ಟಚ್ ಓಎಸ್ 13 ನಲ್ಲಿ ರನ್ ಆಗಲಿದೆ. ಇದರೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹಾಗೂ 120W ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಉಳಿದಂತೆ 64 ಮೆಗಾಪಿಕ್ಸೆಲ್ OIS ಪ್ರಾಥಮಿಕ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.


Click it and Unblock the Notifications








