Home
Gadgets

₹59,900ಕ್ಕೆ MacBook Neo ಖರೀದಿ ಹೇಗೆ? ವಿದ್ಯಾರ್ಥಿಗಳಿಗೆ Apple ವಿಶೇಷ ಆಫರ್!

ಭಾರತದಲ್ಲಿ ಆಪಲ್‌ನ ಅತ್ಯಂತ ಕೈಗೆಟುಕುವ ಮ್ಯಾಕ್‌ಬುಕ್ ಆಗಿ MacBook Neo ಮೊನ್ನೆಯಷ್ಟೇ (ಮಾರ್ಚ್ 4) ಬಿಡುಗಡೆಯಾಗಿದೆ. Apple A18 Pro ಪ್ರೊಸೆಸರ್ ಹೊಂದಿರುವ ಈ ಹೊಸ ಲ್ಯಾಪ್‌ಟಾಪ್ ದೇಶದಲ್ಲಿ ₹69,900 ಆರಂಭಿಕ ಬೆಲೆಗೆ ಪರಿಚಯಗೊಂಡಿದೆ. ಆದರೆ, ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಣ ರಿಯಾಯಿತಿ ಲಭ್ಯವಿದ್ದು, ಕೇವಲ ₹59,900 ಕ್ಕೆ MacBook Neo ಅನ್ನು ಖರೀದಿಸುವ ಅವಕಾಶ ಪಡೆಯುತ್ತಾರೆ. ಈ ಹೊಸ MacBook Neo ಲ್ಯಾಪ್‌ಟಾಪ್‌ನಲ್ಲಿ 13 ಇಂಚಿನ Liquid Retina ಡಿಸ್‌ಪ್ಲೇ ನೀಡಲಾಗಿದೆ. ಜೊತೆಗೆ Apple A18 Pro chip ಪ್ರೊಸೆಸರ್ ಇದಕ್ಕೆ ಶಕ್ತಿ ನೀಡುತ್ತದೆ. ಇದರೊಂದಿಗೆ ಉತ್ತಮ ಕಾರ್ಯಕ್ಷಮತೆ ಮತ್ತು ದೀರ್ಘಕಾಲದ ಬ್ಯಾಟರಿ ಬ್ಯಾಕಪ್ ಲಭ್ಯವಾಗುತ್ತದೆ. ಮ್ಯಾಕ್‌ಬುಕ್ ಬಳಸಲು ಬಯಸುವ ಕಾಲೇಜು ವಿದ್ಯಾರ್ಥಿಗಳಿಗೆ ಇದು ಹೆಚ್ಚು ಆಕರ್ಷಕ ಆಯ್ಕೆಯಾಗಿದ್ದು, ವಿದ್ಯಾರ್ಥಿಗಳು 10 ಸಾವಿರ ರೂ. ರಿಯಾಯಿತಿಯನ್ನು ಪಡೆಯಬಹುದು ಎಂಬುದನ್ನು ನೋಡೋಣ ಬನ್ನಿ.

ವಿದ್ಯಾರ್ಥಿಗಳಿಗೆ MacBook Neo ನಲ್ಲಿ ವಿಶೇಷ ರಿಯಾಯಿತಿ
ಭಾರತದಲ್ಲಿ 256GB ಸ್ಟೋರೇಜ್ ಹೊಂದಿರುವ ಮಾದರಿಯ ಸಾಮಾನ್ಯ ಬೆಲೆ ₹69,900 ಆಗಿದ್ದರೆ, ಶಿಕ್ಷಣ ರಿಯಾಯಿತಿಯ ಮೂಲಕ ಅದು ₹59,900 ಕ್ಕೆ ಲಭ್ಯವಾಗುತ್ತದೆ. ಅದೇ ರೀತಿ 512GB ಮಾದರಿಯ ಸಾಮಾನ್ಯ ಬೆಲೆ ₹79,900 ಇದ್ದು, ವಿದ್ಯಾರ್ಥಿಗಳಿಗೆ ಅದು ₹69,900 ಕ್ಕೆ ದೊರೆಯುತ್ತದೆ.

₹59,900ಕ್ಕೆ MacBook Neo ಖರೀದಿ ಹೇಗೆ? ವಿದ್ಯಾರ್ಥಿಗಳಿಗೆ Apple ವಿಶೇಷ ಆಫರ್!

ವಿದ್ಯಾರ್ಥಿಗಳು ರಿಯಾಯಿತಿ ಹೇಗೆ ಪಡೆಯಬಹುದು?
ವಿದ್ಯಾರ್ಥಿಗಳು ಆಪಲ್‌ನ ಅಧಿಕೃತ ಶಿಕ್ಷಣ ಸ್ಟೋರ್ ಮೂಲಕ ಈ ರಿಯಾಯಿತಿಯನ್ನು ಪಡೆಯಬಹುದು. ಅದಕ್ಕಾಗಿ ಮೂಲಕ ತಮ್ಮ ವಿದ್ಯಾರ್ಥಿ ಸ್ಥಿತಿಯನ್ನು ಪರಿಶೀಲಿಸಬೇಕು.ಪರಿಶೀಲನೆಗಾಗಿ ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು:
ಮೊದಲು Apple Education Store ವೆಬ್‌ಸೈಟ್‌ಗೆ ಹೋಗಿ 'Verify with UNiDAYS' ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ವಿಶ್ವವಿದ್ಯಾಲಯದ ಇಮೇಲ್ ವಿಳಾಸ (.edu ಅಥವಾ .ac.in) ಬಳಸಿ ನೋಂದಣಿ ಮಾಡಬಹುದು. ಅದು ಲಭ್ಯವಿಲ್ಲದಿದ್ದರೆ ಮಾನ್ಯ ವಿದ್ಯಾರ್ಥಿ ಗುರುತಿನ ಚೀಟಿ ಅಥವಾ ಕಾಲೇಜಿನ ಟ್ರಾನ್ಸ್‌ಕ್ರಿಪ್ಟ್ ಸ್ಕ್ಯಾನ್ ಅನ್ನು ಅಪ್‌ಲೋಡ್ ಮಾಡಬಹುದು. ಪರಿಶೀಲನೆ ಪೂರ್ಣಗೊಂಡ ನಂತರ ವಿದ್ಯಾರ್ಥಿಗಳು ರಿಯಾಯಿತಿ ಬೆಲೆಯೊಂದಿಗೆ ನೇರವಾಗಿ ಸ್ಟೋರ್‌ಗೆ ಪ್ರವೇಶಿಸಬಹುದು.

ಆಫ್‌ಲೈನ್ ಸ್ಟೋರ್‌ಗಳಲ್ಲಿ ಸಹ ವಿದ್ಯಾರ್ಥಿಗಳಿಗೆ ಆಫರ್
ಆನ್‌ಲೈನ್ ಮಾತ್ರವಲ್ಲದೆ, ಕೆಲವು ಆಫ್‌ಲೈನ್ ಅಂಗಡಿಗಳಲ್ಲೂ ವಿದ್ಯಾರ್ಥಿಗಳಿಗೆ ಈ ರಿಯಾಯಿತಿ ಲಭ್ಯವಿದೆ. ಮತ್ತು ಆಪಲ್ ಅಧಿಕೃತ ರಿಸೆಲರ್ ಅಂಗಡಿಗಳಲ್ಲಿ ವಿದ್ಯಾರ್ಥಿಗಳು ಈ ಡಿಸ್ಕೌಂಟ್ ಪಡೆಯಬಹುದು. ಇಲ್ಲಿ ಖರೀದಿಸುವಾಗ ವಿದ್ಯಾರ್ಥಿಗಳು ಮೂಲ ವಿದ್ಯಾರ್ಥಿ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಅಥವಾ ಬೇರೆ ಸರ್ಕಾರಿ ಗುರುತಿನ ಚೀಟಿಯನ್ನು ಪರಿಶೀಲನೆಗಾಗಿ ಕೊಂಡೊಯ್ಯಬೇಕು. ಕೆಲವು ಅಂಗಡಿಗಳು ಬ್ಯಾಂಕ್ ಕ್ಯಾಶ್‌ಬ್ಯಾಕ್ ಅಥವಾ No Cost EMI ಆಯ್ಕೆಯನ್ನೂ ನೀಡುತ್ತವೆ.

ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪ್ರಯೋಜನಗಳು
ವಿದ್ಯಾರ್ಥಿಗಳು ಲ್ಯಾಪ್‌ಟಾಪ್ ಖರೀದಿಸುವಾಗ ಕೆಲವು ಹೆಚ್ಚುವರಿ ಲಾಭಗಳನ್ನು ಸಹ ಪಡೆಯಬಹುದು. ಉದಾಹರಣೆಗೆ AppleCare+ ರಕ್ಷಣೆ ಯೋಜನೆ ಮೇಲೆ ಸುಮಾರು 10% ವರೆಗೆ ರಿಯಾಯಿತಿ ದೊರೆಯಬಹುದು. ಜೊತೆಗೆ Apple Creator Studio ಸಾಫ್ಟ್‌ವೇರ್ ಪ್ಯಾಕೇಜ್‌ನ್ನು ತಿಂಗಳಿಗೆ ₹199 ಚಂದಾದಾರಿಕೆಯಲ್ಲಿ ಪಡೆಯುವ ಅವಕಾಶ ಇದೆ. ಇದರಲ್ಲಿ ವಿಡಿಯೋ ಎಡಿಟಿಂಗ್ ಮತ್ತು ಮ್ಯೂಸಿಕ್ ಪ್ರೊಡಕ್ಷನ್‌ಗೆ ಬಳಸುವ ವೃತ್ತಿಪರ ಟೂಲ್ಸ್ ಲಭ್ಯವಿರುತ್ತವೆ. ಪ್ರತಿ ವರ್ಷ ಜೂನ್ ರಿಂದ ಸೆಪ್ಟೆಂಬರ್ ಅವಧಿಯಲ್ಲಿ ನಡೆಯುವ "Back to School" ಆಫರ್ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಲಾಭಗಳು ದೊರೆಯುತ್ತವೆ. ಈ ಅವಧಿಯಲ್ಲಿ ಮ್ಯಾಕ್‌ಬುಕ್ ಖರೀದಿಸಿದವರಿಗೆ ಕೆಲವೊಮ್ಮೆ ಉಚಿತ ಆಕ್ಸೆಸರಿಗಳು, ಉದಾಹರಣೆಗೆ AirPods ಅಥವಾ Apple Pencil ನೀಡುವ ಅವಕಾಶವೂ ಇರುತ್ತದೆ.

ಒಟ್ಟಾರೆಯಾಗಿ, Apple MacBook Neo ವಿದ್ಯಾರ್ಥಿಗಳಿಗಾಗಿ ಕಡಿಮೆ ಬೆಲೆಯಲ್ಲಿ ಮ್ಯಾಕ್ ಅನುಭವವನ್ನು ನೀಡುವ ಲ್ಯಾಪ್‌ಟಾಪ್ ಆಗಿದೆ. ಶಿಕ್ಷಣ ರಿಯಾಯಿತಿ, ಬ್ಯಾಂಕ್ ಆಫರ್ ಮತ್ತು ಸೀಸನಲ್ ಪ್ರೋಮೋಶನ್‌ಗಳನ್ನು ಬಳಸಿಕೊಂಡರೆ ವಿದ್ಯಾರ್ಥಿಗಳು ಈ ಲ್ಯಾಪ್‌ಟಾಪ್ ಅನ್ನು ಇನ್ನೂ ಕಡಿಮೆ ಬೆಲೆಗೆ ಪಡೆಯುವ ಸಾಧ್ಯತೆ ಇದೆ. ಹಾಗಾದರೆ, ಆಪಲ್‌ನ ಅತ್ಯಂತ ಕೈಗೆಟುಕುವ ಮ್ಯಾಕ್‌ಬುಕ್ Apple MacBook Neo ಹೇಗಿದೆ?, ಈ ಹೊಸ ಲ್ಯಾಪ್‌ಟಾಪ್ ಹೊಂದಿರುವ ಸಂಪೂರ್ಣ ಫೀಚರ್ಸ್ ಯಾವುವು ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Best Mobiles in India

English summary
Apple has launched the new MacBook Neo in India with the powerful A18 Pro chip and a 13-inch Liquid Retina display. While the laptop starts at ₹69,900, eligible students can get a special education discount and purchase it for just ₹59,900 through Apple’s education store.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+