Home
Gadgets

43 ಇಂಚಿನ ಅಗ್ಗದ 'ಮಾರ್ಕ್' ಸ್ಮಾರ್ಟ್‌ಟಿವಿ ಹೇಗಿದೆ ಗೊತ್ತಾ!..ಬೆಲೆ 21,999ರೂ!

ಟಿವಿ ತಂತ್ರಜ್ಞಾನ ವಯಲದಲ್ಲಿ ಸಾಕಷ್ಟು ಹೊಸತನದ ಬದಲಾವಣೆಗಳು ಆಗಿತ್ತಿದ್ದು, ಬ್ಲ್ಯಾಕ್‌ ಆಂಡ್‌ ವೈಟ್‌ಗಳಿಂದ ಪ್ರಸ್ತುತ ಸ್ಮಾರ್ಟ್‌ಟಿವಿ 8K ರೆಸಲ್ಯೂಶನ್‌ ವರೆಗೂ ಮಹತ್ತರ ಬದಲಾವಣೆಯನ್ನು ಕಾಣಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಟಿವಿಗಳಿಗೆ ಭಾರಿ ಬೇಡಿಕೆ ಇದ್ದು, ಆನ್‌ಲೈನ್‌ ಮೂಲಕ ಸ್ಮಾರ್ಟ್‌ಟಿವಿ ಖರೀದಿಸುವ ಗ್ರಾಹಕರ ಸಂಖ್ಯೆಗೆನು ಕಡಿಮೆ ಇಲ್ಲ. ಆನ್‌ಲೈನ್‌ ಮಾರುಕಟ್ಟೆಗೆ ಹೊಸದೊಂದು ಕಂಪನಿಯ ಸ್ಮಾರ್ಟ್‌ಟಿವಿ ಎಂಟ್ರಿ ಆಗಿದೆ.

43 ಇಂಚಿನ ಅಗ್ಗದ 'ಮಾರ್ಕ್' ಸ್ಮಾರ್ಟ್‌ಟಿವಿ ಹೇಗಿದೆ ಗೊತ್ತಾ!..ಬೆಲೆ  21,999ರೂ!

ಹೌದು, ಸ್ಮಾರ್ಟ್‌ಟಿವಿಗಳಿಗೆ ಭಾರತೀಯ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಸಖತ್ ಡಿಮ್ಯಾಂಡ್‌ ಇದ್ದು, ಹೀಗಾಗಿ ಆನ್‌ಲೈನ್‌ನಲ್ಲಿ ಸ್ಮಾರ್ಟ್‌ಟಿವಿ ಮಾರಾಟ ಮಾಡುವ ಕಂಪನಿಗಳ ಸಂಖ್ಯೆಯು ಹೆಚ್ಚಾಗಿದೆ. ಅವುಗಳ ಸಾಲಿಗಿಗ ಮಾರ್ಕ್‌(MarQ) ಕಂಪನಿಯ ಸೇರಿದ್ದು, ಈ ಕಂಪನಿಯು ಇತ್ತೀಚಿಗೆ 43 ಇಂಚಿನ ಹೆಚ್‌ಡಿ ಸಾಮರ್ಥ್ಯದಲ್ಲಿ ಅಲ್ಟ್ರಾ ಥೀನ್ ಬೆಜಲ್ (Ultra Thin Bezel) ಆಂಡ್ರಾಯ್ಡ್ ಸ್ಮಾರ್ಟ್‌ಟಿವಿಯನ್ನು ಬಿಡುಗಡೆ ಮಾಡಿದೆ.

43 ಇಂಚಿನ ಅಗ್ಗದ 'ಮಾರ್ಕ್' ಸ್ಮಾರ್ಟ್‌ಟಿವಿ ಹೇಗಿದೆ ಗೊತ್ತಾ!..ಬೆಲೆ  21,999ರೂ!

ಫ್ಲಿಪ್‌ಕಾರ್ಟ್‌ ಮಾಲೀಕತ್ವದ ಮಾರ್ಕ್(MarQ) ಸ್ಮಾರ್ಟ್‌ಟಿವಿಯು ಗೂಗಲ್ ಅಸಿಸ್ಟಂಟ್ ವಾಯಿಸ್‌ ಕಮಾಂಡ್‌ ಅನ್ನು ಒಳಗೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ಟಿವಿಯು ಆಂಡ್ರಾಯ್ಡ್‌ ಆಪ್ಸ್‌ಗಳನ್ನು ಮತ್ತು ಯೂಟ್ಯೂಬ್‌ ಅನ್ನು ಸಹ ಹೊಂದಿದೆ. ಈ ಟಿವಿಯ ಪ್ರೈಸ್‌ಟ್ಯಾಗ್ ಗ್ರಾಹಕರ ಸ್ನೇಹಿಯಾಗಿದೆ. ಹಾಗಾದರೇ ಮಾರ್ಕ್‌(MarQ) ಸ್ಮಾರ್ಟ್‌ಟಿವಿಯು ಇತರೆ ಯಾವೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಆಕರ್ಷಕ ಡಿಸೈನ್‌

ಆಕರ್ಷಕ ಡಿಸೈನ್‌

ಮಾರ್ಕ್ ಸ್ಮಾರ್ಟ್‌ಟಿವಿಯ ಹೊರ ನೋಟವು ಗ್ರಾಹಕ ಕಣ್ಣಸೆಳೆಯುವ ರಚನೆಯನ್ನು ಪಡೆದಿದ್ದು, ಅಲ್ಟ್ರಾ ಥೀನ್‌ ಬೆಜಲ್ ವಿನ್ಯಾಸ್‌ವು ಈ ಸ್ಮಾರ್ಟ್‌ಟಿವಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಟಿವಿಯ ಅಂಚುಗಳು ಫಿನಿಶಿಂಗ್ ಸುಂದರವಾಗಿದ್ದು, ತೆಳುವಾದ ರಚನೆಯನ್ನು ಹೊಂದಿದೆ. 178 ಡಿಗ್ರಿ ಸಾಮರ್ಐದಲ್ಲಿ ವಿವ್ಯೂ ಆಂಗಲ್ ವಿನ್ಯಾಸವನ್ನು ಡಿಸ್‌ಪ್ಲೇ ಹೊಂದಿದ್ದು, ADS ಪ್ಯಾನೆಲ್‌ನ ಲುಕ್‌ ಪಡೆದುಕೊಂಡಿದೆ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಮಾರ್ಕ್ ಕಂಪನಿಯ ಸ್ಮಾರ್ಟ್‌ಟಿವಿಯು 1920×1080 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿದೆ 43-ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಅಲ್ಟ್ರಾ ಥೀನ್ ಬೆಜಲ್ ರಚನೆಯನ್ನು ಪಡೆದಿದೆ. ಡಿಸ್‌ಪ್ಲೇಯಲ್ಲಿ ವಿಡಿಯೊಗಳು 1080p ಸಾಮರ್ಥ್ಯದಲ್ಲಿ ಮೂಡಿಬರಲಿದ್ದು, ಮೋಷನ್‌ ಬ್ಲರ್‌ ದೃಶ್ಯಗಳು ಇರಲಿವೆ. ಎಚ್‌ಡಿ ಸಿನಿಮಾಗಳಿಗೆ ಪೂರ್ಣ ಬೆಂಬಲವಿಸದ್ದು, ಹಾಗೆಯೇ ಟಿವಿ ವೀಕ್ಷಣೆಗೆ ಅತ್ಯುತ್ತಮ ಎನಿಸಲಿದೆ.

ಸೌಂಡ್‌ ಗುಣಮಟ್ಟ

ಸೌಂಡ್‌ ಗುಣಮಟ್ಟ

ಈ ಸ್ಮಾರ್ಟ್‌ಟಿವಿಯಲ್ಲಿ ಎರಡು ಡೌನ್‌ ಫೈರಿಂಗ್‌ ಸ್ಪೀಕರ್ಸ್‌ಗಳನ್ನು ನೀಡಲಾಗಿದ್ದು, ಇದರೊಂದಿಗೆ DTS ಸೌಂಡ್‌ ತಂತ್ರಜ್ಞಾನ ಒದಗಿಸಲಾಗಿದೆ ಹಾಗೆಯೇ 20W ಸಾಮರ್ಥ್ಯತ ಸ್ಪೀಕರ್ಸ್‌ಗಳನ್ನು ಇದು ಒಳಗೊಂಡಿದೆ. ಇದರ ನೆರವಿನಿಂದ ಆಡಿಯೊ ಕ್ವಾಲಿಟಿಯು ಹೆಚ್ಚು ಗುಣಮಟ್ಟದಲ್ಲಿ ಕೇಳಿಸಲಿದೆ. ಸೌಂಡ್‌ ಸೆಟ್ಟಿಂಗ್‌ ಆಯ್ಕೆಗಳನ್ನು ನೀಡಲಾಗಿದ್ದು, ಗ್ರಾಹಕರು ಅನುಕೂಲಕ್ಕೆ ತಕ್ಕಂತೆ ಸೌಂಡ್‌ ಅನ್ನು ನಿಯಂತ್ರಿಸಬಹುದಾಗಿದೆ.

ಆಂಡ್ರಾಯ್ಡ್ ಆಪ್ಸ್‌ ಲಭ್ಯ

ಆಂಡ್ರಾಯ್ಡ್ ಆಪ್ಸ್‌ ಲಭ್ಯ

ಮಾರ್ಕ್ ಕಂಪನಿಯ ಈ ಸ್ಮಾರ್ಟ್‌ಟಿವಿಯು ಸಂಪೂರ್ಣ ಆಂಡ್ರಾಯ್ಡ್ 8.0 ಓರಿಯೊ‌ ಬೆಂಬಲಿತವಿದ್ದು, 8GB ಇನ್‌ಬಿಲ್ಟ್‌ ಮೆಮೊರಿ ನೀಡಲಾಗಿದೆ. ಆಂಡ್ರಾಯ್ಡ್‌ ಆಧಾರಿತ ಆಪ್ಸ್‌ಗಳು ಗ್ರಾಹಕರಿಗೆ ದೊರೆಯಲಿದ್ದು, ಆದರೆ ನೆಕ್‌ಫ್ಲೆಕ್ಸ್ ಮತ್ತು ಅಮೆಜಾನ್ ಪ್ರೇಮ್ ವಿಡಿಯೊ ಸೇವೆಗಳು ಈ ಸ್ಮಾರ್ಟ್‌ಟಿವಿಯಲ್ಲಿ ಲಭ್ಯವಾಗುವುದಿಲ್ಲ. ಹಾಟ್‌ಸ್ಟಾರ್‌, ಜೀ5, ಸೋನಿLIV, ಜಿಯೋ ಸಿನಿಮಾ ಮತ್ತು ವೂಟ್‌ ಆಪ್‌ಗಳಿಗೆ ಬೆಂಬಲ ವಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮಾರ್ಕ್ ಕಂಪನಿಯ ಹೊಸ 43 ಇಂಚಿನ ಸ್ಮಾರ್ಟ್‌ಟಿವಿಯು ಭಾರತೀಯ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಜನಪ್ರಿಯ ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದೆ. ಇದರ ಬೆಲೆಯು 21,999ರೂ.ಗಳು ಆಗಿದೆ. ಸದ್ಯ ಆನ್‌ಲೈನ್‌ ಮಾರುಕಟ್ಟೆಗೆ ಹೋಲಿಸಿದರೇ ಇದು ದುಬಾರಿ ಎನಿಸುವುದಿಲ್ಲ ಬದಲಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಬೆಲೆಯಲ್ಲಿ ಇದೆ.

Best Mobiles in India

English summary
The new 43-inch Google certified Android TV by MarQ flaunts 'Ultra Thin Bezel' design. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+