Home
Gadgets

ಈ ಸ್ಟೈಲಿಶ್‌ ಸ್ಮಾರ್ಟ್‌ವಾಚ್‌ ಬೆಲೆಯಲ್ಲಿ ಭಾರೀ ಇಳಿಕೆ; ಈ ಆಫರ್‌ ಬಿಡಬೇಡಿ!

ಜನಪ್ರಿಯ ಇ ಕಾಮರ್ಸ್‌ ತಾಣ ಎನಿಸಿರುವ ಫ್ಲಿಪ್‌ಕಾರ್ಟ್‌ ನಲ್ಲಿ ಬ್ಲ್ಯಾಕ್‌ ಫ್ರೈಡ್‌ ಸೇಲ್‌ ಪ್ರಾರಂಭ ಆಗಿದೆ. ಈ ಮಾರಾಟದಲ್ಲಿ ಮೊಬೈಲ್‌ಗಳು ಹಾಗೂ ಸ್ಮಾರ್ಟ್‌ ಗ್ಯಾಡ್ಜೆಟ್ಸ್‌ಗಳು ಭರ್ಜರಿ ಆಫರ್‌ನಲ್ಲಿ ಕಾಣಿಸಿಕೊಂಡಿವೆ. ಭಾರೀ ಡಿಸ್ಕೌಂಟ್‌ ಬೆಲೆಯಲ್ಲಿ ಸ್ಮಾರ್ಟ್‌ ಉತ್ಪನ್ನಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಈ ಸೇಲ್‌ ಆಕರ್ಷಣೀಯ. ಇದೀಗ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ (Fire-Boltt Ninja Calling Pro Plus) ಸ್ಮಾರ್ಟ್‌ವಾಚ್‌ ಬೊಂಬಾಟ್‌ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ.

ಹೌದು, ಜನಪ್ರಿಯ ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ನಲ್ಲಿ ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ (Fire-Boltt Ninja Calling Pro Plus) ಸ್ಮಾರ್ಟ್‌ವಾಚ್‌ ಶೇ. 87% ರಷ್ಟು ನೇರ ಡಿಸ್ಕೌಂಟ್‌ ಪಡೆದಿದೆ. ಈ ವಾಚ್‌ ಅನ್ನು ಖರೀದಿದಾರರು 1,299ರೂ. ಗಳ ಕೊಡುಗೆಯ ದರದಲ್ಲಿ ಖರೀದಿ ಮಾಡಬಹುದು. ಅಲ್ಲದೇ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ಗಳ ಡಿಸ್ಕೌಂಟ್‌ ಪಡೆದುಕೊಂಡರೆ, ಇನ್ನಷ್ಟು ಕೊಡುಗೆ ಸಹ ದೊರೆಯುತ್ತದೆ.

ಈ ಸ್ಟೈಲಿಶ್‌ ಸ್ಮಾರ್ಟ್‌ವಾಚ್‌ ಬೆಲೆಯಲ್ಲಿ ಭಾರೀ ಇಳಿಕೆ; ಈ ಆಫರ್‌ ಬಿಡಬೇಡಿ!

ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಸೌಲಭ್ಯ ಪಡೆದಿದ್ದು, ಹಾಗೆಯೇ AI ವಾಯಿಸ್‌ ಸೌಲಭ್ಯ ಸಹ ಪಡೆದಿದೆ. ಅಲ್ಲದೇ ಈ ವಾಚ್‌ 120 ಸ್ಪೋರ್ಟ್ಸ್‌ ಮೋಡ್‌ ಆಯ್ಕೆಗಳನ್ನು ಪಡೆದಿರುವುದು ಪ್ಲಸ್‌ ಪಾಯಿಂಟ್‌ ಎನಿಸಿದೆ. ಹಾಗಾದರೇ ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ - ಫೀಚರ್ಸ್‌

ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ (Fire-Boltt Ninja Calling Pro Plus) ಸ್ಮಾರ್ಟ್‌ವಾಚ್‌ 1.83 ಇಂಚಿನ HD ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು 240 x 284 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್ ವಾಚ್ ಬ್ಲೂಟೂತ್ ಕಾಲ್‌ ಫೀಚರ್ಸ್‌ ಅನ್ನು ಒಳಗೊಂಡಿದೆ. ಇದರಿಂದ ಬಳಕೆದಾರರು ಫೋನ್‌ ಕಾಲ್‌ಗಳನ್ನು ಸ್ಮಾರ್ಟ್‌ವಾಚ್‌ ಮೂಲಕವೇ ಸ್ವೀಕರಿಸಲು ಅವಕಾಶ ಸಿಗಲಿದೆ.

ಫೈರ್-ಬೋಲ್ಟ್‌ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ 100ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳ ಆಯ್ಕೆ ಅನ್ನು ಒಳಗೊಂಡಿದೆ. ಡ್ರಿಂಕ್ ವಾಟರ್ ರಿಮೈಂಡರ್, ಫೀಮೇಲ್ ಹೆಲ್ತ್ ಕೇರ್, ಹಾರ್ಟ್ ರೇಟ್ ಟ್ರ್ಯಾಕರ್, ಸೆಡೆಂಟರಿ ಟ್ರ್ಯಾಕರ್, ಸ್ಲೀಪ್ ಮಾನಿಟರಿಂಗ್ ಮತ್ತು SpO2 ಸೇರಿದಂತೆ ಹಲವು ಹೆಲ್ತ್‌ ಟ್ರ್ಯಾಕರ್‌ಗಳನ್ನು ಆಯ್ಕೆಗಳನ್ನು ಹೊಂದಿದೆ. ಇದು ಬಳಕೆದಾರರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸೂಕ್ತ ಸಲಹೆಗಳನ್ನು ಒದಗಿಸಲಿದೆ.

ಫೈರ್-ಬೋಲ್ಟ್‌ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ ಮೂಲಕ ಬಳಕೆದಾರರು ಕ್ಯಾಮೆರಾ ಕಂಟ್ರೋಲ್‌ ಮಾಡುವುದಕ್ಕೆ ಕೂಡ ಅವಕಾಶ ಇದೆ. ಅಲ್ಲದೆ ಮ್ಯೂಸಿಕ್‌ ಕಂಟ್ರೋಲ್‌ ಮತ್ತು ವೇದರ್‌ ಅಪ್ಡೇಟ್‌ ಫೀಚರ್ಸ್‌ಗಳನ್ನು ಸಹ ಪಡೆದುಕೊಂಡಿದೆ. ಇದರ ಜೊತೆಗೆ ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ ಇನ್‌ಬಿಲ್ಟ್‌ ಗೇಮ್ಸ್‌ಗಳನ್ನು ಕೂಡ ಪಡೆದಿದೆ. ಇದು ನೀರು ಮತ್ತು ಧೂಳಿನಿಂದ ರಕ್ಷಣೆ ಪಡೆಯಲು IP67 ರೇಟಿಂಗ್‌ ಸೌಲಭ್ಯ ಅನ್ನು ಸಹ ಹೊಂದಿದೆ.

ಫೈರ್-ಬೋಲ್ಟ್‌ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ ಸಾಮಾನ್ಯ ಬಳಕೆಯಲ್ಲಿ 6 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒದಗಿಸಲಿದೆ. ಈ ಸ್ಮಾರ್ಟ್‌ವಾಚ್‌ ಸಿಂಗಲ್‌ ಚಾರ್ಜ್‌ನಲ್ಲಿ 15 ದಿನಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿದೆ ಎನ್ನಲಾಗಿದೆ. ಅಂದಹಾಗೆ ಈ ಸ್ಮಾರ್ಟ್‌ವಾಚ್‌ ಬ್ಲ್ಯಾಕ್‌, ಬ್ಲ್ಯಾಕ್‌ ಗೋಲ್ಡ್‌, ಗ್ರೇ, ಪಿಂಕ್ ಮತ್ತು ನೇವಿ ಬ್ಲೂ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ.

Best Mobiles in India

English summary
Massive Price drop on Fire-Boltt Ninja Calling Pro Plus Smartwatch. Check out offer price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+