Home
Gadgets

ಶಿಯೋಮಿ ಡ್ಯುಯಲ್ ಡ್ರೈವರ್ ಇಯರ್‌ಫೋನ್ ಖರೀದಿಗೆ ಯೋಗ್ಯವೇ?..ವಿಮರ್ಶೆ!

ಮೊಬೈಲ್ ಮಾರುಕಟ್ಟೆಯಲ್ಲಿ ಆಡಿಯೊ ಪರಿಕರಗಳಿಗೂ ಡಿಮ್ಯಾಂಡ್ ಹೆಚ್ಚಿದೆ. ಸಂಗೀತ ಕೇಳಲು ಅತ್ಯುತ್ತಮ ಇಯರ್‌ಫೋನ್‌ಗಳಿಗೆ ಬೇಡಿಕೆ ಇದ್ದೆ ಇದೆ. ಈ ನಿಟ್ಟಿನಲ್ಲಿ ತರಹೇವಾರಿ ಇಯರ್‌ಫೋನ್‌ಗಳು ಲಗ್ಗೆ ಇಡುತ್ತಲೇ ಸಾಗಿವೆ. ಆ ಪೈಕಿ ಇತ್ತೀಚಿಗಷ್ಟೆ ಶಿಯೋಮಿ ಸಂಸ್ಥೆಯು ಮಿ ಡ್ಯುಯಲ್ ಡ್ರೈವರ್ ಇಯರ್‌ಫೋನ್ ಉತ್ಪನ್ನ ಲಾಂಚ್ ಮಾಡಿದ್ದು, ಮ್ಯೂಸಿಕ್ ಪ್ರಿಯರನ್ನು ಭಾರಿ ಆಕರ್ಷಿಸಿದೆ.

ಡ್ಯುಯಲ್ ಡ್ರೈವರ್

ಶಿಯೋಮಿಯು ಸಂಸ್ಥೆಯ ಡ್ಯುಯಲ್ ಡ್ರೈವರ್ ಇಯರ್‌ಫೋನ್ ಡಿವೈಸ್‌ ಬೆಲೆಯು ಅಗ್ಗ ಹಾಗೂ ಕೆಲವು ಅಪ್‌ಡೇಟ್ ಫೀಚರ್ಸ್‌ಗಳನ್ನು ಒಳಗೊಂಡಿರುವುದು ಪ್ಲಾಸ್‌ ಪಾಯಿಂಟ್ ಆಗಿದೆ. ಈ ಇಯರ್‌ಫೋನ್ ಆಡಿಯೊ ಗುಣಮಟ್ಟಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು, 10mm ಮತ್ತು 8mm ಸಾಮರ್ಥ್ಯದ ಎರಡು ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಹಾಗಾದರೆ ಮಿ ಡ್ಯುಯಲ್ ಡ್ರೈವರ್ ಇಯರ್‌ಫೋನ್ ಡಿವೈಸ್‌ ರಚನೆ ಹೇಗಿದೆ? ಆಡಿಯೊ ಔಟ್‌ಪುಟ್ ಸ್ಥಿತಿಗತಿ ಏನು ಎಂಬುದನ್ನು ಈ ಲೇಖನದಲ್ಲಿ ವಿಮರ್ಶಿಸಲಾಗಿದೆ. ಮುಂದೆ ಓದಿರಿ.

ಡಿವೈಸ್‌ ರಚನೆ ಮತ್ತು ಡಿಸೈನ್

ಡಿವೈಸ್‌ ರಚನೆ ಮತ್ತು ಡಿಸೈನ್

ಮಿ ಇಯರ್‌ಫೋನ್ ಅತೀ ಹಗುರವಾದ ಡಿಸೈನ್ ಹೊಂದಿದ್ದು, ಕಿವಿಗಳಿಗೆ ಹಿತವೆನಿಸುವ ಬಡ್ಸ್‌ ರಚನೆಯನ್ನು ಪಡೆದಿದೆ. ಈ ಇಯರ್‌ಬಡ್ಸ್‌ಗಳು ಮ್ಯಾಗ್ನೇಟಿಕ್ ರಚನೆಯನ್ನು ಹೊಂದಿದ್ದು, ಹೀಗಾಗಿ ಬಡ್ಸ್‌ಗಳು ತೊಡಕಾಗುವ ಸಾಧ್ಯತೆಗಳು ಕಡಿಮೆ. ವಾಯಿಸ್‌ ಮೂಲಕ ಆಡಿಯೊ ನಿಯಂತ್ರಿಸಲು ಗೂಗಲ್ ಅಸಿಸ್ಟಂಟ್, ಅಮೆಜಾನ್ ಅಲೆಕ್ಸಾ ಹಾಗೂ ಆಪಲ್ ಸಿರಿ ಸೌಲಭ್ಯಗಳನ್ನು ಪಡೆದಿದೆ. ಹಾಗೆಯೇ ಇಯರ್‌ಫೋನ್ ಬಡ್ಸ್‌ ಕಿವಿಯಿಂದ ಜಾರದಂತಹ ಡಿಸೈನ್ ಹೊಂದಿದ್ದು, ಕನೆಕ್ಟಿವಿಟಿ ಸೌಲಭ್ಯಗಳು ಸಹ ಉತ್ತಮವಾಗಿವೆ.

ಆಡಿಯೊ ಔಟ್‌ಪುಟ್

ಆಡಿಯೊ ಔಟ್‌ಪುಟ್

ಈ ಮಿ ಇಯರ್‌ಫೋನ್ ಡ್ಯುಯಲ್ ಆಡಿಯೊ ಡ್ರೈವರ್‌ಗಳನ್ನು ಹೊಂದಿದ್ದು, ಅವುಗಳು 10mm ಮತ್ತು 8mm ಆಡಿಯೊ ಸಾಮರ್ಥ್ಯವನ್ನು ಪಡೆದಿವೆ. ಅವುಗಳು ಆಡಿಯೊ ಔಟ್‌ಪುಟ್‌ ಕ್ಲಿಯರ್‌ ಆಗಿ ಹಾಗೂ ಗುಣಮಟ್ಟದಲ್ಲಿ ಇರುವಂತೆ ಸಹಕರಿಸುತ್ತವೆ. ಎಂಪಿ 3 ಆಡಿಯೊ ಫೈಲ್‌ಗಳನ್ನು ಬೆಂಬಲಿಸುತ್ತದೆ. ಇದರೊಂದಿಗೆ ಈ ಆಡಿಯೊ ಡ್ರೈವರ್ಸ್‌ಗಳು ಸೌಂಡ್ ಬೂಸ್ಟ್ ಮಾಡಲು ನೆರವಾಗುತ್ತವೆ.

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

ಈ ಡಿವೈಸ್‌ ಫಿಂಗರ್‌ಪ್ರಿಂಟ್ ರೆಸಿಸ್ಟಂಟ್ ರಚನೆಯನ್ನು ಹೊಂದಿದ್ದು, ವ್ಯಾಲ್ಯೂಮ್, ಕರೆ ಸ್ವೀಕರಿಸಲು ಅಗತ್ಯ ಮೂರು ಬಟನ್‌ಗಳನ್ನು ಹೊಂದಿದೆ. ಹಾಗೆಯೆ ಡಿಜಿಟಲ್ ವಾಯಿಸ್ ಅಸಿಸ್ಟಂಟ್ ಸೌಲಭ್ಯ ಇದ್ದು, ಗೂಗಲ್ ಅಸಿಸ್ಟಂಟ್, ಆಪಲ್ ಸಿರಿ ಮತ್ತು ಅಮೆಜಾನ್ ಅಲೆಕ್ಸಾ ಸಫೋರ್ಟ್‌ ಅನ್ನು ಪಡೆದಿದೆ. ಹೀಗಾಗಿ ಬಳಕೆದಾರರು ವಾಯಿಸ್‌ ಮೂಲಕವೇ ಆಡಿಯೊ ನಿಯಂತ್ರಣ ಮಾಡಬಹುದಾಗಿದೆ.

ಬೆಲೆ ಎಷ್ಟು

ಬೆಲೆ ಎಷ್ಟು

ಮಾರುಕಟ್ಟೆಯಲ್ಲಿ ಮಿ ಇಯರ್‌ಫೋನ್ ಡಿವೈಸ್ ಬೆಲೆಯು 799ರೂ. ಆಗಿದ್ದು, ಬ್ಲ್ಯಾಕ್ ಮತ್ತು ಬ್ಲೂ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇನ್ನು ಈ ಇಯರ್‌ಫೋನ್‌ ಅಮೆಜಾನ್ ತಾಣ, Mi.Com ಮತ್ತು Mi ಹೋಮ್ಸ್‌ ತಾಣಗಳಲ್ಲಿ ಖರೀದಿಗೆ ಲಭ್ಯ ವಿದೆ.

ಕೊನೆಯ ಮಾತು

ಕೊನೆಯ ಮಾತು

ಶಿಯೋಮಿ ಸಂಸ್ಥೆಯ ಈ ಇಯರ್‌ಫೋನ್ ರಚನೆಯು ಮತ್ತು ಡಿಸೈನ್ ರಿಚ್ ಮಾದರಿಯಲ್ಲಿ ಕಾಣಿಸುತ್ತದೆ. ಆದರೆ ಅಗ್ಗದ ಬೆಲೆಯ ಪ್ರೈಸ್‌ಟ್ಯಾಗ್ ಹೊಂದಿರುವುದು ಪ್ರಮುಖ ಆಕರ್ಷಣೆ ಆಗಿದೆ. ಆಡಿಯೊ ಗುಣಮಟ್ಟಕ್ಕೂ ಹೆಚ್ಚಿನ ಒತ್ತು ನೀಡಿರುವುದು ಮ್ಯೂಸಿಕ್ ಪ್ರಿಯರಿಗೆ ಕ್ಯಾಚಿ ಅಂಶವಾಗಿದೆ. ಈ ನಿಟ್ಟಿನಲ್ಲಿ ನೋಡುವುದಾದರೇ ಈ ಇಯರ್‌ಫೋನ್ ಖರೀದಿಸಲು ಓಕೆ ಎನ್ನಬಹುದಾಗಿದೆ.

Best Mobiles in India

English summary
Mi Dual Driver Earphones offer two dynamic drivers on each end to offer rich, punchy bass, crisp vocals, and superior instrument separation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+