'MI' ಕಂಪನಿಯ ಈ ಸಿಸಿಟಿವಿ ಕ್ಯಾಮೆರಾ ನಿಮ್ಮ ಮನೆಗೆ ಭದ್ರತೆಯ ಕಣ್ಣಾಗಿರಲಿದೆ.!!
ಸಿಸಿಟಿವಿ ಕ್ಯಾಮೆರಾ ಸಾಧನಗಳ ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದ್ದು, ಪ್ರಸ್ತುತ ಭದ್ರತೆ ದೃಷ್ಠಿಯಿಂದ ಸಿಸಿಟಿವಿ ಕ್ಯಾಮೆರಾ ಒಂದು ಅಗತ್ಯ ಸಾಧನ ಎಂದೇನಿಸಿಕೊಂಡಿದೆ. ಆರಂಭದಲ್ಲಿ ಕೇವಲ ಬ್ಯಾಂಕ್‌ಗಳಿಗೆ, ಅಂಗಡಿಗಳಿಗೆ ಮತ್ತು ಕಛೇರಿಗಳಿಗೆ ಮಾತ್ರ ಸೀಮಿತವಾಗಿದ್ದ ಸಿಸಿಟಿವಿ ಕ್ಯಾಮೆರಾ ಸಾಧನಗಳು. ಇಂದು ಮನೆ ಮನೆಗೂ ವ್ಯಾಪಿಸಿವೆ. ಮನೆಯಲ್ಲಿ ಅಳವಡಿಸಲೇಂದೆ ವಿಶೇಷವಾದ ಸಿಸಿಟಿವಿ ಕ್ಯಾಮೆರಾಗಳು ಲಭ್ಯವಿವೆ.

ಹೌದು, ಕೇಲವು ಸಿಸಿಟಿವಿ ಕ್ಯಾಮೆರಾ ಕಂಪನಿಗಳು ಮನೆಯಲ್ಲಿ ಭದ್ರತೆಗಾಗಿಯೇ ವಿಶೇಷ ಸಿಸಿಟಿವಿ ಕ್ಯಾಮೆರಾಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಜನಪ್ರಿಯ ಆಗಿವೆ. ಅವುಗಳಲ್ಲಿ 'ಮಿ' ಕಂಪನಿಯ ಹೋಮ್ ಸೆಕ್ಯೂರಿಟಿ 360 ಡಿಗ್ರಿ ಕೂಡಾ ಒಂದಾಗಿದೆ. ಈಗಾಗಲೇ ಮಿ ಕಂಪನಿ ಉತ್ಪನ್ನಗಳ ಬಗ್ಗೆ ಗ್ರಾಹಕರಿಕೆ ತಿಳಿದೆ ಇದ್ದು, ಅವರ ನಿರೀಕ್ಷೆಯಂತೆ ಉತ್ತಮ ಗುಣಮಟ್ಟದಲ್ಲಿ ಸಿಸಿಟಿವಿಯನ್ನು ಗ್ರಾಹಕರಿಗೆ ನೀಡಿದೆ.
ನಗರ ಪ್ರದೇಶದಲ್ಲಿ ಮನೆಗಳಲ್ಲಿ ಕಳ್ಳತನ ಪ್ರಕರಣಗಳ ಹೆಚ್ಚಾಗುತ್ತಿರುವುದರಿಂದ, ಜನರು ಮನೆಗಳಲ್ಲಿಯೂ ಸಿಸಿಟಿವಿ ಅಳವಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸ್‌ರಿಗೆ ಸಿಸಿಟಿವಿಗಳು ಕ್ಯಾಮೆರಾ ದೃಶ್ಯಾವಳಿಗಳು ನೆರವಾಗಿರುವುದನ್ನು ನೋಡುತ್ತಿದ್ದೇವೆ. ಹೀಗಾಗಿ ಇಂದು ಮನೆಗಳಲ್ಲಿಯೂ ಜನರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

ಮಾರುಕಟ್ಟೆಯಲ್ಲಿಗ ಸಿಸಿಟಿವಿಗಳಿಗೆ ಭಾರೀ ಬೇಡಿಕೆಯಿದ್ದು, ಕಂಪನಿಗಳು ಗ್ರಾಹಕರ ಬೇಡಿಕೆಗನುಗುಣವಾಗಿ ವಿವಿಧ ವಿನ್ಯಾಸದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಚಯಿಸುತ್ತಿವೆ. ಇದರೊಂದಿಗೆ ಕಡಿಮೆ ಮೆಗಾಪಿಕ್ಸಲ್ ನಿಂದ ಹೈ ರೆಸಲ್ಯೂಶನ್ ಕ್ವಾಲಿಟಿಯಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳು ಲಭ್ಯವಿವೆ. ಹಾಗಾದರೇ ಮಿ ಕಂಪನಿಯ ಹೋಮ್ ಸೆಕ್ಯೂರಿಟಿ 360 ಡಿಗ್ರಿ ಸಿಸಿಟಿವಿ ಕ್ಯಾಮೆರಾ ಹೇಗಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿ.

ರಚನೆ
ಮಿ ಸಿಸಿಟಿವಿ ಕ್ಯಾಮೆರಾವು ರೋಬೋ ಮಾದರಿಯಂತೆ ಕಂಡುಬರುತ್ತದೆ. ಕೆಳಗಡೆ ಅರ್ಧ ಭಾಗ ಬೇಸ್‌ಅನ್ನು ಹೊಂದಿದ್ದು, ಇನ್ನರ್ಧದ ಮೇಲ್ಭಾಗವು ವೃತ್ತಾಕಾರವಾಗಿದ್ದು, ಇದರಲ್ಲಿಯೇ ಕ್ಯಾಮೆರಾ ಅಳವಡಿಸಲಾಗಿದೆ ಮತ್ತು ಈ ಮೇಲ್ಭಾಗ ಸುತ್ತಲೂ 360 ಡಿಗ್ರಿ ತಿರಗುವಂತಿದೆ. ಈ ಸಿಸಿಟಿವಿ ಕ್ಯಾಮೆರಾದ ಎತ್ತರ 118mm ಮತ್ತು ಅಗಲವು 78mm ಆಗಿದೆ.

360 ಡಿಗ್ರಿ
ಮಿ ಕಂಪನಿಯ 'ಹೋಮ್ ಸೆಕ್ಯೂರಿಟಿ 360 ಡಿಗ್ರಿ' ಸಿಸಿಟಿವಿ ಕ್ಯಾಮೆರಾವು ತನ್ನ ಸುತ್ತಲಿನ ಒಟ್ಟು 360 ಡಿಗ್ರಿಯಲ್ಲಿನಲ್ಲಿ ದೃಶ್ಯಾವಳಿಗಳನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಇಂದೇ ಸಿಸಿಟಿವಿ ಕ್ಯಾಮೆರಾದ ಮೂಲಕ ಸುತ್ತಲಿನ ಪ್ರದೇಶವನ್ನು ಕವರ್ ಮಾಡಿಕೊಳ್ಳಲು ಮಿ ಕಂಪನಿಯ ಈ ಸಿಸಿಟಿವಿ ಕ್ಯಾಮೆರಾ ನೆರವಾಗಲಿದೆ ಎನ್ನಬಹುದಾಗಿದೆ.

ಹೈ ರೆಸಲ್ಯೂಶನ್
ಮಿ ಕಂಪನಿಯ ಸಿಸಿಟಿವಿ ಕ್ಯಾಮೆರಾದಲ್ಲಿ 1080 ಪಿಕ್ಸಲ್ ಸಾಮರ್ಥ್ಯದ ಹೈ ರೆಸಲ್ಯೂಶನ್ ವಿಡಿಯೋ ಕ್ವಾಲಿಟಿಯನ್ನು ಹೊಂದಿದೆ. ಇದರೊಂದಿಗೆ ಈ ಸಿಸಿಟಿವಿ ಕ್ಯಾಮೆರಾ 110 ಡಿಗ್ರಿಯ ಆಂಗಲ್ ವೀವ್‌ನಲ್ಲಿ ದೃಶ್ಯಗಳನ್ನು ಸೆರೆಹಿಡಿಯುತ್ತದೆ. ಫೋಕಲ್ ಲೇಂತ್ 3.9mm ಅನ್ನು ಒಳಗೊಂಡಿದೆ. ದೃಶ್ಯಗಳ ಗುಣಮಟ್ಟ ಉತ್ತಮವಾಗಿವೆ.

ಕಲರ್ ಪುಟೆಜ್
ಮಿ ಕಂಪನಿಯ ಈ ಸಿಸಿಟಿವಿ ಕ್ಯಾಮೆರಾ ಹೈ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ದೃಶ್ಯಗಳನ್ನು ಸೆರೆಹಿಡಿಯಲಿದ್ದು, ದೃಶ್ಯಗಳೆಲ್ಲವೂ ಕಲರ್‌ನಲ್ಲಿಯೇ ಇರುತ್ತವೆ. ರಾತ್ರಿ ಸಹ ಕಲರ್‌ನಲ್ಲಿಯೇ ದೃಶ್ಯಗಳು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ.

ಸ್ಟೋರೆಜ್
ಈ ಸಿಸಿಟಿವಿ ಕ್ಯಾಮೆರಾದಲ್ಲಿ ಬಳಕೆದಾರರಿಗೆ 16 GB ಸಂಗ್ರಹ ಸಾಮರ್ಥ್ಯದಿಂದ 64 GB ಸಂಗ್ರಹ ಸಾಮರ್ಥ್ಯದವರೆಗೆ ಎಸ್‌ಡಿಕಾರ್ಡ್ ಬಳೆಸುವ ಅವಕಾಶ ನೀಡಲಾಗಿದೆ. ಮಿ ಕಂಪನಿಯ ಸಿಸಿಟಿವಿ ಕ್ಯಾಮಡರಾದಲ್ಲಿ ಬಳೆಸುವ ಎಸ್‌ಡಿ ಕಾರ್ಡ್ ಕ್ಲಾಸ್ 10 ಮತ್ತು ಅದಕ್ಕಿಂತಲೂ ಹೆಚ್ಚಿನದಾಗಿರಬೇಕು.

ಸ್ಮಾರ್ಟ್‌ಫೋನ್‌ನಲ್ಲಿ ವೀಕ್ಷಿಸಬಹುದು
ಸಿಸಿಟಿವಿಯನ್ನು ಸ್ಮಾರ್ಟ್‌ಫೋನಿಗೆ ಸಂಪರ್ಕಿಸುವ ಮೂಲಕ ನಿಮ್ಮ ಸ್ಮಾರ್ಟ್‌ಫೋನಿನಲ್ಲಿಯೇ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ವೀಕ್ಷಿಸಬಹುದು. ದೃಶ್ಯಗಳನ್ನು 16x ಸ್ಪೀಡ್‌ನಲ್ಲಿ ಫಾರ್ವರ್ಡ್ ಮಾಡುತ್ತಾ ಸಹ ನೋಡಬಹುದಾಗಿದೆ.

ಆಕ್ಸೇಸರಿಸ್
ಈ ಸಿಸಿಟಿವಿ ಕ್ಯಾಮೆರಾದೊಂದಿಗೆ, ಮಿ 360 ಡಿಗ್ರಿ ಸಿಸಿಟಿವಿ ಕ್ಯಾಮೆರಾ, ಬಳಕೆದಾರರಿಗೆ ಕೈಪಿಡಿ, ಅಡಾಪ್ಟರ್ ಜೊತೆಗೆ ಕೇಬಲ್ ಮತ್ತು ಗೋಡೆಗೆ ತೂಗುಹಾಕುವ ಆಕ್ಸೇಸರಿಸ್ ಬ್ಯಾಗ್ ಸಹ ಗ್ರಾಹಕರಿಗೆ ದೊರೆಯಲಿವೆ.

ಬೆಲೆ ಮತ್ತು ಲಭ್ಯತೆ?
ಮನೆಯ ಭದ್ರತೆಗಾಗಿ ಉಪಯೋಗಿಸಲು ಸೂಕ್ತವಾಗಿರುವ ಮಿ ಕಂಪನಿಯ ಹೋಮ್ ಸೆಕ್ಯುರಿಟಿ 360 ಡಿಗ್ರಿ ಸಿಸಿಟಿವಿ ಕ್ಯಾಮೆರಾದ ಬೆಲೆಯು 2,699 ರೂ.ಗಳು ಮತ್ತು ಈ ಸಿಸಿಟಿವಿ ಕ್ಯಾಮೆರಾವನ್ನು MI ಕಂಪನಿಯ ವೆಬ್‌ಸೈಟ್‌ನಲ್ಲಿ ಮೂಲಕ ಖರೀದಿಸಬಹುದು.


Click it and Unblock the Notifications








