Home
Gadgets

'ವ್ಯಾಲೆಂಟನ್ಸ್ ದಿನ'ವೇ ಬಿಡುಗಡೆ ಆಗಲಿದೆ ಶಿಯೋಮಿಯ ಈ ಭದ್ರತೆಯ ಸಾಧನ.!

ಚೀನಾ ಮೂಲದ ಶಿಯೋಮಿ ಕಂಪನಿಯು ಇದೀಗ ಬರಿ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಯಾಗಿ ಉಳಿದಿಲ್ಲ. ಸ್ಮಾರ್ಟ್‌ಫೋನ್‌ಗಳೊಂದಿದೆ ಎಲೆಕ್ಟ್ರಾನಿಕ್ ಮತ್ತು ಭದ್ರತೆಯ ಉತ್ಪನ್ನಗಳನ್ನು ಈಗಾಗಲೇ ಪರಿಚಯಿಸಿದೆ. ಈ ಹಿಂದೆ ಬಿಡುಗಡೆ ಮಾಡಿದ್ದ ಶಿಯೋಮಿ ಹೋಮ್‌ ಸೆಕ್ಯೂರಿಟಿ 360 ಡಿಗ್ರಿಯ ಕ್ಯಾಮೆರಾ ಜನಪ್ರಿಯ ಆಗಿರುವ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ಹೋಮ್‌ ಸೆಕ್ಯೂರಿಟಿ ಸಿಸಿಟಿವಿ ಕ್ಯಾಮೆರಾವನ್ನು ಪರಿಚಯಿಸಲಿದೆ.

'ವ್ಯಾಲೆಂಟನ್ಸ್ ದಿನ'ವೇ ಬಿಡುಗಡೆ ಆಗಲಿದೆ ಶಿಯೋಮಿಯ ಈ ಭದ್ರತೆಯ ಸಾಧನ.!

ಶಿಯೋಮಿ ಕಂಪನಿಯು ತನ್ನ ಹೊಸ ಹೋಮ್ ಸೆಕ್ಯೂರಿಟಿ 130 ಡಿಗ್ರಿ ಕ್ಯಾಮೆರಾವನ್ನು (ಫೆಬ್ರುವರಿ 14) ನಾಳೆ ವ್ಯಾಲೆಂಟನ್ಸ್ ದಿನದಂದು ಸೇಲ್ ಅನ್ನು ಆರಂಭಿಸಲಿದ್ದು, ಭಾರತದಲ್ಲಿ ಈ ಸಾಧನದ ಬೆಲೆ 2299ರೂ.ಗಳು ಆದರೆ ಕಂಪನಿಯು ಆರಂಭಿಕ ಕೊಡುಗೆಯಾಗಿ 300ರೂ.ಗಳ ರಿಯಾಯಿತಿ ನೀಡುತ್ತಿದ್ದು, ಕೇವಲ 1999ರೂ.ಗಳಿಗೆ ದೊರೆಯಲಿದೆ. ಕಂಪನಿಯ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪನಿಯು ಹೇಳಿದೆ.

'ವ್ಯಾಲೆಂಟನ್ಸ್ ದಿನ'ವೇ ಬಿಡುಗಡೆ ಆಗಲಿದೆ ಶಿಯೋಮಿಯ ಈ ಭದ್ರತೆಯ ಸಾಧನ.!

ಭಾರತೀಯ ಮಾರುಕಟ್ಟೆಯನ್ನು ಸರಿಯಾಗಿ ಗ್ರಹಿಸಿರುವ ಶಿಯೋಮಿ ಕಂಪನಿಯೂ ತನ್ನ ನೂತನ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಯನ್ನು ಕಂಡುಕೊಳ್ಳಲಿದೆ. ಹೊಸ 130 ಡಿಗ್ರಿಯ ಹೋಮ್ ಸೆಕ್ಯೂರಿಟಿ ಕ್ಯಾಮೆರಾವು ಅತ್ಯುತ್ತಮ ರೆಸಲ್ಯೂಶನ್ ಸಾಮರ್ಥ್ಯದ ವಿಡಿಯೋ ಸೆರೆಹಿಡಯಲಿದ್ದು, ವಾಯಸ್ ಕರೆ ಮಾಡುವ ಸೌಲಭ್ಯವನ್ನು ಸಹ ಒಳಗೊಂಡಿದೆ. ಇದರೊಂದಿಗೆ ಶಿಯೋಮಿಯ 130 ಡಿಗ್ರಿಯ ಹೋಮ್ ಸೆಕ್ಯೂರಿಟಿ ಕ್ಯಾಮೆರಾವು ಇತರೆ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂದು ನೋಡೋಣ ಬನ್ನಿ.

ಮನೆಯ ಭದ್ರತೆಗೆ ಕ್ಯಾಮೆರಾ

ಮನೆಯ ಭದ್ರತೆಗೆ ಕ್ಯಾಮೆರಾ

ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಕಳ್ಳತನಗಳು, ದರೋಡೆಗಳು ಮತ್ತು ಕೆಲವೊಮ್ಮೆ ಪರಿಚಯಸ್ಥರೇ ದುಷಕೃತ್ಯ ಎಸಗುವ ಘಟನೆಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಮನೆಗಳಲ್ಲಿ ಭದ್ರತೆಗಾಗಿ ಕ್ಯಾಮೆರಾ ಅಳವಡಿಸುವುದು ಅಗತ್ಯ ಎನ್ನುವುದನ್ನು ಅರಿತಿರುವ ಶಿಯೋಮಿಯು ಕಡಿಮೆ ಬೆಲೆಯಲ್ಲಿ ಮನೆಗಳ ಭದ್ರತೆಗಾಗಿ ತನ್ನ ಎರಡನೇಯ ಸಿಸಿಟಿವಿ ಕ್ಯಾಮೆರಾವನ್ನು ಪರಿಚಯಿಸಿದೆ.

ಡಿಸೈನ್ ಹೇಗಿದೆ.

ಡಿಸೈನ್ ಹೇಗಿದೆ.

ಹೊಸ ಹೋಮ್ ಸೆಕ್ಯೂರಿಟಿ ಕ್ಯಾಮೆರಾವು ನೋಡಲು ಚಿಕ್ಕದಾಗಿ ಮತ್ತು ಅಂದವಾಗಿ ಕಾಣುತ್ತದೆ. ಪೂರ್ಣ ಬಿಳ ಬಣ್ಣದಲ್ಲಿರುವ ಸಿಸಿಟಿವಿ ಕ್ಯಾಮೆರಾ ಮೇಲ್ಭಾಗದಲ್ಲಿ ವೃತ್ತಾಕಾರವಾಗಿ ಕ್ಯಾಮೆರಾವನ್ನು ಹೊಂದಿದ್ದು, ಅದರ ಕೆಳಗಡೆ ಕಂಪನಿಯ ಹೆಸರನ್ನು ನಮೂದಿಸಲಾಗಿದೆ. ಈ ಕ್ಯಾಮೆರಾವನ್ನು ನಿಲ್ಲಿಸಲು ಕೆಳಭಾಗದಲ್ಲಿ ಸ್ಟ್ಯಾಂಡ್‌ ನೀಡಲಾಗಿದೆ.

1080 ಪಿಕ್ಸಲ್

1080 ಪಿಕ್ಸಲ್

ಹೋಮ್‌ ಸೆಕ್ಯೂರಿಟಿ ಕ್ಯಾಮೆರಾವು 1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, ದೃಶ್ಯಗಳು ಅತ್ಯುತ್ತಮ ಕ್ವಾಲಿಟಿಯಲ್ಲಿ ಮೂಡಿಬರಲಿವೆ. 130 ಡಿಗ್ರಿಯ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್‌ಅನ್ನು ಅಳವಡಿಸಿರುವುದರಿಂದ ತನ್ನ ಎದುರಿಗಿನ 130 ಡಿಗ್ರಿ ವ್ಯಾಪ್ತಿಯಲ್ಲಿನ ಪ್ರದೇಶವನ್ನು ಸೆರೆಹಿಡಿಯಲಿದೆ. ನೋಡಲು ಪುಟ್ಟಾಣಿ ಕ್ಯಾಮೆರಾ ತರಹ ಕಂಡರು ಇದರ ಕ್ಯಾಮೆರಾ ಕ್ವಾಲಿಟಿ ಹೈ ರೆಸಲ್ಯೂಶನ್‌ ಇದೆ.

ಕೃತಕ ಬುದ್ಧಿಮತ್ತೆ (AI)

ಕೃತಕ ಬುದ್ಧಿಮತ್ತೆ (AI)

ಹೈ ಎಂಡ್‌ ಫೀಚರ್ಸ್‌ಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣುವ ಕೃತಕ ಬುದ್ಧಿಮತ್ತೆ ಸಾಮರ್ಥ್ಯವನ್ನು ಈ ಹೋಮ್ ಸೆಕ್ಯುರಿಟಿ ಕ್ಯಾಮೆರಾದಲ್ಲಿ ಅಳವಡಿಸಿದ್ದು, ಹೀಗಾಗಿ ಆಟೋಮ್ಯಾಟಿಕ್ ಆಗಿ ತನ್ನ ವ್ಯಾಪ್ತಿಯಲ್ಲಿ ಬರುವ ವ್ಯಕ್ತಿಗಳನ್ನು ಗ್ರಹಿಸುವ ಶಕ್ತಿಯನ್ನು ಹೊಂದಿದೆ. ಈ ಕ್ಯಾಮೆರಾವನ್ನು ನಿಮ್ಮ ಸ್ಮಾರ್ಟ್‌ಫೋನ್‌ಗೆ ಲಿಂಕ್ ಮಾಡಿದರೇ ಸೆರೆಯಾದ ದೃಶ್ಯಗಳನ್ನು ಸ್ಮಾರ್ಟ್‌ಫೋನಿನಲ್ಲಿ ವೀಕ್ಷಿಸಬಹುದು.

ವಿಡಿಯೋ ಕಾಲಿಂಗ್ ಸೌಲಭ್ಯ

ವಿಡಿಯೋ ಕಾಲಿಂಗ್ ಸೌಲಭ್ಯ

ಈ ಹೊಸ ಹೋಮ್ ಸೆಕ್ಯುರಿಟಿ ಕ್ಯಾಮೆರಾ ಸ್ಮಾರ್ಟ್‌ ಆಗಿದ್ದು, ಇದರೊಂದಿಗೆ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ಕನೆಕ್ಟ್ ಮಾಡುವ ಮೂಲಕ ವಿಡಿಯೋ ಕರೆಗಳನ್ನು ಸಹ ಮಾಡಿಬಹುದು. ನಿಮ್ಮ ಕುಟುಂಬದೊಂದಿಗೆ ಮಾತಾನಾಡಬಹುದು. ವಾಯಿಸ್ ಕ್ವಾಲಿಟಿಯನ್ನು ಸಾಕಷ್ಟು ಸುದಾರಿಸಿದ್ದು, ಉತ್ತಮ ಕರೆಯ ಅನುಭೂತಿ ಪಡೆಯಲಿದ್ದಿರಿ.

ಮಂದಬೆಳಕಿನಲ್ಲೂ ಹೈ ಕ್ವಾಲಿಟಿ

ಮಂದಬೆಳಕಿನಲ್ಲೂ ಹೈ ಕ್ವಾಲಿಟಿ

ಬಹುತೇಕ ಸಿಸಿಟಿವಿ ಕ್ಯಾಮೆರಾಗಳು ಮಂದಬೆಳಕಿನಲ್ಲಿ ದೃಶ್ಯಗಳು ಅಸ್ಪಷ್ಟ ಆಗಿರುತ್ತವೆ. ಆದರೇ ಶಿಯೋಮಿಯ ಈ ಹೊಸ ಹೋಮ್ ಸೆಕ್ಯೂರಿಟಿ ಕ್ಯಾಮೆರಾವು ಮಂದಬೆಳಕಿನಲ್ಲಿ ಸುಮಾರು 10m ವ್ಯಾಪ್ತಿಯಲ್ಲಿ ಅತ್ಯುತ್ತಮ ಗುಣಮಟ್ಟದಲ್ಲಿ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ.

Best Mobiles in India

English summary
Mi Home Security Camera Basic 1080p.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+