ಶಿಯೋಮಿಯ ಈ ಹೊಸ ಬ್ಲೂಟೂತ್ ಇಯರ್‌ಫೋನ್ 1499ರೂ.ಗಳಿಗೆ ಲಭ್ಯ.!!
ಪ್ರಮುಖ ಟೆಕ್ ಕಂಪನಿ ಶಿಯೋಮಿಯು ಇಂದು ಭಾರತದಲ್ಲಿ ತನ್ನ ಬಹುನಿರೀಕ್ಷಿತ ರೆಡ್ಮಿ ನೋಟ್ 7 ಪ್ರೋ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿ, ಇಡೀ ವಿಶ್ವ ಮಾರುಕಟ್ಟೆಯೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಅದೇ ಕಾರ್ಯಕ್ರಮದಲ್ಲಿ ಕಂಪನಿಯು 'ಸ್ಪೋರ್ಟ್ಸ್ ಬ್ಲೂಟೂತ್ ಇಯರ್‌ಫೋನ್' ಅನ್ನು ರಿಲೀಸ್ ಮಾಡಿ ಗ್ರಾಹಕರು ಬೆರಗಾಗುವಂತೆ ಮಾಡಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದೆ.

ಹೌದು, ಇಂದು ನಡೆದ 'ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಿಯೋಮಿಯು ತನ್ನ 'ಸ್ಪೋರ್ಟ್ಸ್ ಬ್ಲೂಟೂತ್ ಇಯರ್‌ಫೋನ್' ಅನ್ನು ಬಿಡುಗಡೆ ಮಾಡಿದ್ದು, ಈ ಇಯರ್‌ಫೋನ್ ನಿರಂತರ 9 ಗಂಟೆಗಳ ಕಾಲ ಬಾಳಿಕೆ ಬರುವ ಶಕ್ತಿಯುತ ಬ್ಯಾಟರಿಯನ್ನು ಒಳಗೊಂಡಿದೆ. ಹಾಗಾದರೇ ಶಿಯೋಮಿ 'ಸ್ಪೋರ್ಟ್ಸ್ ಬ್ಲೂಟೂತ್ ಇಯರ್‌ಫೋನ್' ಹೊಂದಿರುವ ಇನ್ನಿತರ ವಿಶೇಷತೆಗಳೇನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ವಾಟರ್‌ಪ್ರೂಫ್
ಶಿಯೋಮಿಯ ಈ ಹೊಸ ಇಯರ್‌ಫೋನ್ ಸಂಪೂರ್ಣ ವಾಟರ್‌ಪ್ರೂಫ್ ಆಗಿದ್ದು, ಇದರೊಂದಿಗೆ ಬೆವರುನ್ನು ಹಿಡಿಯದ ರಚನೆಯನ್ನು ಹೊಂದಿದೆ. ಮಳೆಗಾಲದಲ್ಲೂ ನಿರಾತಂಕವಾಗಿ ಬಳೆಸಬಹುದಾಗಿದ್ದು, ಸುಲಲಿತವಾಗಿ ಕಾರ್ಯನಿರ್ವಹಿಸುತ್ತದೆ.

ರಚನೆ
ಸ್ಪೋರ್ಟ್ಸ್ ಬ್ಲೂಟೂತ್ ಇಯರ್‌ಫೋನ್ ಹಗುರವಾಗಿದ್ದು, ಕೇವಲ 13.6ಗ್ರಾಂ ತೂಕವನ್ನು ಹೊಂದಿದೆ. ಬಳಕೆದಾರರಿಗೆ ಸಂಪೂರ್ಣ ಕಂಫರ್ಟ್ ಆಗಿದ್ದು, ಯಾವುದೇ ಕೆಲಸ ಮಾಡುವಾಗಲೂ ಈ ಸಾಧನವನ್ನು ಧರಿಸಬಹುದಾಗಿದೆ. ಇಯರ್ ಬಡ್ಸ್ ರಚನೆ ಅತ್ಯುತ್ತಮವಾಗಿದ್ದು, ಹೊರಗಿನ ಶಬ್ದ ಕೇಳಿಸದು.

ಮಲ್ಟಿ ಕಾರ್ಯದ ಬಟನ್
ಈ ಸ್ಪೋರ್ಟ್ಸ್ ಬ್ಲೂಟೂತ್ ಇಯರ್‌ಫೋನ್ ಬಹುಕಾರ್ಯದ ಬಟನ್ ಹೊಂದಿದ್ದು, ಇದು ಕರೆ ಸ್ವೀಕರಿಸುವ, ಸೌಂಡ್ ನಿಯಂತ್ರಿಸುವ, ಪ್ಲೇ ಮಾಡುವ, ಪವರ್ ಆನ್/ಆಫ್ ಮಾಡುವ, ಬ್ಲೂಟೂತ್ ಪೇರಿಂಗ್, ತ್ರಿವೇ ಕಾಲಿಂಗ್ ಒಳಗೊಂಡಂತೆ ಹಲವು ಕೆಲಸಗಳನ್ನು ನಡೆಸುತ್ತದೆ.

ಬ್ಲೂಟೂತ್
UK CSR8640 ಬ್ಲೂಟೂತ್ ಚಿಪ್ ಮತ್ತು ಬ್ಲೂಟೂತ್ 4.1 ಅನ್ನು ಒಳಗೊಂಡಿರುವ ಈ ಇಯರ್‌ಫೋನ್ ಸರಳವಾಗಿ ಮತ್ತು ವೇಗವಾಗಿ ಬ್ಲೂಟೂತ್ ಸಂಪರ್ಕವನ್ನು ಒದಗಿಸುತ್ತದೆ. 10ಮೀ. ವ್ಯಾಪ್ತಿಯನ್ನು ಹೊಂದಿದ್ದು, ಫೋನಿನೊಂದಿಗೆ ಆಟೋಮ್ಯಾಟಿಕ್ ಮರು ಸಂಪರ್ಕ ಪಡೆದುಕೊಳ್ಳುತ್ತದೆ.

ಸಿಲಿಕಾನ್ ಇಯರ್‌ಬಡ್ಸ್
ಈ ಸಿಲಿಕಾನ್ ಇಯರ್‌ಬಡ್ಸ್ ಹೊರಗಿನ ಶಬ್ದವನ್ನು ತಡೆದು ಉತ್ತಮ ಸೌಂಡ್ ಕೇಳಿಸಿಲು ಸಹಕಾರಿಯಾಗಿದೆ. ಮೃದುವಾದ ಐದು ಇಯರ್‌ಬಡ್ಸ್‌ಗಳನ್ನು ಒಳಗೊಂಡಿದ್ದು, ಇವು ವಿವಿಧ ಗಾತ್ರದಲ್ಲಿವೇ. ಹೀಗಾಗಿ ಬಳಕೆದಾರರು ತಮಗೆ ಕಂಫರ್ಟ್ ಎನಿಸುವ ಇಯರ್‌ಬಡ್‌ಅನ್ನು ಜೋಡಿಸಿಕೊಂಡು ಧರಿಸಬಹುದಾಗಿದೆ.

ಬ್ಯಾಟರಿ ಲೈಫ್ ಮತ್ತು ಬೆಲೆ
120mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದು ನಿರಂತರ 9 ಗಂಟೆಗಳ ಕಾಲ ಬಾಳಿಕೆ ಬರಲಿದೆ. ಒಮ್ಮೆ ಪೂರ್ಣ ಚಾರ್ಜ ಮಾಡಲು ಸುಮಾರು ಎರಡು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಈ ಸಾಧನದ ಬೆಲೆಯು 1499ರೂ.ಗಳಾಗಿದೆ.


Click it and Unblock the Notifications








