Just In
- 12 hrs ago
ನಾಯ್ಸ್ ಬಡ್ಸ್ ಸೋಲೋ ಇಯರ್‌ಫೋನ್ ಲಾಂಚ್! 36 ಗಂಟೆಗಳ ಪ್ಲೇಬ್ಯಾಕ್ ವಿಶೇಷ!
- 13 hrs ago
ಹೆಚ್ಪಿ ಸಂಸ್ಥೆಯಿಂದ ಮೂರು ಹೊಸ ಲ್ಯಾಪ್ಟಾಪ್ ಬಿಡುಗಡೆ! ವಿಶೇಷತೆ ಏನು?
- 14 hrs ago
ಕಡಿಮೆ ಪ್ರೈಸ್ಟ್ಯಾಗ್ನಲ್ಲಿ ಲಭ್ಯವಿರುವ ಜಿಯೋ ಡೇಟಾ ವೋಚರ್ಗಳು!
- 14 hrs ago
ಭಾರತದ ಮಾರುಕಟ್ಟೆಯಲ್ಲಿ ರಿಯಲ್ಮಿ ನಾರ್ಜೊ 30 ಪ್ರೊ 5G ಸ್ಮಾರ್ಟ್ಫೋನ್ ಬಿಡುಗಡೆ!
Don't Miss
- Lifestyle
ಗುರುವಾರದ ಭವಿಷ್ಯ ಹೇಗಿದೆ ನೋಡಿ
- Automobiles
ಸಿಎನ್ಜಿ ಕಾರು ಮಾರಾಟದಲ್ಲಿ ಹೊಸ ದಾಖಲೆ ಮಾಡಿದ ಮಾರುತಿ ಸುಜುಕಿ
- News
ಉನ್ನಾವೋ ವೈದ್ಯಕೀಯ ಕಾಲೇಜಿಗೆ 5 ಕೋಟಿ ರೂ ದಂಡ ವಿಧಿಸಿದ ಸುಪ್ರೀಂಕೋರ್ಟ್
- Sports
ಐಎಸ್ಎಲ್: ಮುಂಬೈ ಗೋಲಿನ ಮಳೆಯಲ್ಲಿ ಮುಳುಗಿದ ಒಡಿಶಾ
- Education
University Of Mysore Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ/ಪ್ರಾಜೆಕ್ಟ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ
- Movies
ಬಿಗ್ಬಾಸ್ ಗೆ ಇನ್ನು ನಾಲ್ಕೇ ದಿನ: ಮನೆ ಹೇಗಿದೆ ಗೊತ್ತಾ?
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಫೆ. 24ರ ಮಾರುಕಟ್ಟೆ ದರ ಇಲ್ಲಿದೆ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶಿಯೋಮಿಯ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ 2 ಡಿವೈಸ್‌ನ ಫಸ್ಟ್ ಲುಕ್!
ಅಗ್ಗದ ಸ್ಮಾರ್ಟ್‌ಫೋನ್‌ಗಳಿಂದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಜನಪ್ರಿಯ ಶಿಯೋಮಿ ಕಂಪನಿಯು ಇತರೆ ಸ್ಮಾರ್ಟ್ ಡಿವೈಸ್‌ಗಳಿಂದಲೂ ಗಮನ ಸೆಳೆದಿದೆ. ಸಂಸ್ಥೆಯು ಇತ್ತೀಚಿಗಷ್ಟೆ ಹೊಸದಾಗಿ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ 2 ಡಿವೈಸ್ ಅನ್ನು ಪರಿಚಯಿಸಿದ್ದು, ಈ ಸಾಧನವು ವಿಶೇಷ ಫೀಚರ್ಸ್‌ಗಳಿಂದ ಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದೆ. ಡ್ಯುಯಲ್ ನಾಯಿಸ್ ಕ್ಯಾನ್ಸ್‌ಲೇಶನ್ ಸೌಲಭ್ಯ ಪಡೆದಿರುವುದು ವಿಶೇಷ ಆಗಿದೆ.

ಶಿಯೋಮಿಯ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ 2 ಡಿವೈಸ್ ಮುಖ್ಯವಾಗಿ ಯುವ ಸಮೂಹವನ್ನು ಸೆಳೆಯುವ ರಚನೆಯನ್ನು ಒಳಗೊಂಡಿದೆ. ಸಂಸ್ಥೆಯು ಈಗಾಗಲೇ ಭಿನ್ನ ಇಯರ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಈ ಹೊಸ ವಾಯರ್‌ಲೆಸ್ ಡಿವೈಸ್ ಇತ್ತೀಚಿನ ಫೀಚರ್ಸ್‌ಗಳಿಂದ ಭರ್ತಿಯಾಗಿದೆ. ಡೈನಾಮಿಕ್ ಆಡಿಯೋ ಡ್ರೈವರ್‌ಗಳು, ಹಾಗೂ ಕಿವಿಗೆ ಹಿತಕರವೆನಿಸುವ ಡಿಸೈನ್ ಹೊಂದಿದೆ. ಇನ್ನು ಈ ಡಿವೈಸ್‌ನ ಫೀಚರ್ಸ್‌ಗಳ ವಿಶೇಷತೆ ಹೇಗಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿವೈಸ್‌ನ ವಿನ್ಯಾಸ್
ಶಿಯೋಮಿಯ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ 2 ಆಕರ್ಷಕ ಲುಕ್ ಹೊಂದಿದ್ದು, ಮುಂಭಾಗದಲ್ಲಿ ಯಾವುದೇ ಬ್ರ್ಯಾಂಡಿಂಗ್ ಇಲ್ಲ. ಚಾರ್ಜ್ ಸ್ಥಿತಿಯನ್ನು ಸೂಚಿಸಲು ಮುಂಭಾಗದಲ್ಲಿ ಒಂದೇ ಎಲ್ಇಡಿ ಮಾತ್ರ ಇದೆ. ಬಲ ತುದಿಯಲ್ಲಿ, ಫ್ಲೈನಲ್ಲಿ ಬ್ಯಾಟರಿ ಸ್ಥಿತಿಯನ್ನು ಪರೀಕ್ಷಿಸಲು ಮತ್ತು ಸಾಧನಗಳೊಂದಿಗೆ ಜೋಡಿಸಲು ಸಹಾಯ ಮಾಡುವ ಒಂದೇ ಬಟನ್ ಇದೆ. ಇಯರ್‌ಬಡ್ಸ್‌ಗಳ ರಚನೆಯು ಬಿಳಿ ಬಣ್ಣಗಳಲ್ಲಿದೆ. ಈ ಡಿವೈಸ್‌ಗಳನ್ನು ನೋಡಿದಾಗ ಬಹುತೇಕ ಏರ್‌ಬಡ್ಸ್‌ಗಳ ಫೀಲ್ ನೀಡುತ್ತದೆ.

ಸೌಂಡ್ ಕ್ವಾಲಿಟಿ
ಶಿಯೋಮಿಯ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ 2 ಡ್ಯುಯಲ್ ನಾಯಿಸ್ ಕ್ಯಾನ್ಸ್‌ಲೇಶನ್ ವ್ಯವಸ್ಥೆಯನ್ನು ಒಳಗೊಂಡಿದೆ. ಸೌಂಡ್ ಕ್ಲಿಯರಿಟಿ, ಬ್ಯಾಟರಿ ಬಾಳಿಕೆ ಹಾಗೂ ವಾಯಿಸ್ ಕ್ವಾಲಿಟಿಗೆ ಆದ್ಯತೆ ನೀಡಿದೆ ಅನಿಸುತ್ತದೆ. ಈ ಡಿವೈಸ್ 14.2mm ಡೈನಾಮಿಕ್ ಆಡಿಯೋ ಡ್ರೈವರ್ ಸೌಲಭ್ಯವನ್ನು ಹೊಂದಿದ್ದು, ಇದರೊಂದಿಗೆ ಟೈಟಾನಿಯಂ ಕಾಂಪೋಸಿಟ್ ಡಯಾಫ್ರಾಮ್ ಅನ್ನು ಸಹ ಒಳಗೊಂಡಿರುತ್ತವೆ. ಹಾಗೆಯೇ ಈ ಡಿವೈಸ್‌ನ ಆಡಿಯೋ ಬಾಸ್ ಉನ್ನತ ಶ್ರೇಣಿಯಲ್ಲಿಲ್ಲ, ಆದರೆ ಹಿತಕರ ಅನಿಸುವ ವ್ಯವಸ್ಥೆ ಪಡೆದಿದೆ.

ಬ್ಯಾಟರಿ ಬ್ಯಾಕ್‌ಅಪ್
ಶಿಯೋಮಿಯ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ 2 ಬ್ಯಾಟರಿ ಬ್ಯಾಕ್‌ಅಪ್ ಉತ್ತಮವಾಗಿದೆ. ಒಮ್ಮ ಪೂರ್ಣವಾಗಿ ಚಾರ್ಜ್ ಪಡೆಯಲು ಸುಮಾರು ಒಂದು ಗಂಟೆ ಹದಿನೈದರಿಂದ ಇಪ್ಪತ್ತು ನಿಮಿಷಗಳ ಸಮಯ ಪಡೆಯುತ್ತದೆ. ಒಮ್ಮೆ ಪೂರ್ಣ ಚಾರ್ಜ್ ಆದರೇ ಸುಮಾರು 14 ಗಂಟೆಗಳ ವರೆಗೂ ಬ್ಯಾಕ್‌ಅಪ್ ಒದಗಿಸುತ್ತದೆ. ವಾಯಿಸ್ ಕರೆಗಳು ಹಾಗೂ ಸಂಗೀತ ಆಲಿಸುವಾಗಲು ಬ್ಯಾಟರಿ ಬಾಳಿಕೆ ಉತ್ತಮ ಅನಿಸುತ್ತದೆ.

ಇತರೆ ಸೌಲಭ್ಯಗಳು
ಶಿಯೋಮಿಯ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ಸ್ 2 ಡಿವೈಸ್ ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ವ್ಯವಸ್ಥೆ ನೀಡಿದೆ. ಡ್ಯುಯಲ್ ನಾಯ್ಸ್ ಕ್ಯಾನ್ಸೆಲೇಶನ್ ಮೈಕ್ರೊಫೋನ್‌ಗಳನ್ನು ಹೊಂದಿದ್ದು ಅದು ಎಕೋ ಸೌಂಡ್ ಅನ್ನು 30 ಡೆಸಿಬಲ್‌ಗೆ ಇಳಿಸುತ್ತದೆ. ಇದರೊಂದಿಗೆ ಸ್ಮಾರ್ಟ್‌ಫೋನ್‌ಗಳೊಂದಿಗೆ ಕ್ವಿಕ್ ಆಗಿ ಕನೆಕ್ಟ್ ಆಗುವ ಸೌಲಭ್ಯ ಪಡೆದಿದೆ. ಇನ್ನು ಸಂಸ್ಥೆಯ ಮಿ ಸ್ಮಾರ್ಟ್‌ಫೋನ್‌ಗಳೊಂದಿಗೆ ತಡೆರಹಿತ ಸಂಪರ್ಕವನ್ನು ಇದು ಬೆಂಬಲಿಸುತ್ತದೆ.

ಬೆಲೆ ಎಷ್ಟು
ಶಿಯೋಮಿ ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ 2 ಭಾರತದಲ್ಲಿ 4,999 ರೂ.ಬೆಲೆಯನ್ನ ಹೊಂದಿದೆ. ಅಮೆಜಾನ್ ಇಂಡಿಯಾ, ಮಿ.ಕಾಮ್ ಮತ್ತು ಮಿ ಹೋಮ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190