Mivi SuperPods Dueto ವಿಮರ್ಶೆ: ರಾಯಲ್ ಲುಕ್ ಜೊತೆಗೆ ಫ್ಲ್ಯಾಗ್‌ಶಿಪ್ ಫೀಚರ್ಸ್ ಇಯರ್‌ಬಡ್ಸ್!
ಆಡಿಯೋ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ಮಿವಿ (MIVI) ಕಂಪನಿಯು ಭಿನ್ನ ಶ್ರೇಣೀಯಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಈ ಬ್ರ್ಯಾಂಡ್ ಇತ್ತೀಚಿಗಷ್ಟೆ ನೂತನವಾಗಿ ಲಾಂಚ್ ಮಾಡಿರುವ ಮಿವಿ ಸೂಪರ್‌ಪಾಡ್ಸ್ ಡ್ಯುಯಟು (Mivi SuperPods Dueto) ಇಯರ್‌ಬಡ್ಸ್ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯ ಇದೆ. ಅಂದಹಾಗೆ ರಾಯಲ್ ಲುಕ್‌ನಲ್ಲಿ ಇರುವ ಈ ಇಯರ್‌ಬಡ್ಸ್ ಬಜೆಟ್ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿರುವುದು ಪ್ಲಸ್ ಪಾಯಿಂಟ್ ಎನಿಸಿದೆ. ಇನ್ನು ಇದರ ಕಾರ್ಯವೈಖರಿ ಬಗ್ಗೆ ಮುಂದೆ ತಿಳಿಯೋಣ.
ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ನೀಡಿರುವ ಮಿವಿ ಸೂಪರ್‌ಪಾಡ್ಸ್ ಡ್ಯುಯಟು ಇಯರ್‌ಬಡ್ಸ್ ಡಿವೈಸ್‌ಗಳು ಡ್ಯುಯಲ್ ಡ್ರೈವರ್, 3D ಸೌಂಡ್‌ಸ್ಟೇಜ್, ಡ್ಯುಯಲ್ ಮೋಡ್ ಸೇರಿದಂತೆ ಕೆಲವು ಅತ್ಯುತ್ತಮ ಆಯ್ಕೆಗಳನ್ನು ಪಡೆದುಕೊಂಡಿದ್ದು, ಮ್ಯೂಸಿಕ್ ಪ್ರಿಯ ಗ್ರಾಹಕರನ್ನು ತನ್ನತ್ತ ಸೆಳೆಯುವ ಲಕ್ಷಣಗಳನ್ನು ಒಳಗೊಂಡಿದೆ. ಇದರ ಔಟ್‌ಲುಕ್ ಕೂಡಾ ರಿಚ್ ಆಗಿ ಕಾಣುವಂತೆ ಇದೆ.

ಮಿವಿ ಸೂಪರ್‌ಪಾಡ್ಸ್ ಡ್ಯುಯಟು (Mivi SuperPods Dueto) ಇಯರ್‌ಬಡ್ಸ್ 3D ಈ ಇಯರ್‌ಬಡ್ಸ್ 13mm ವೂಫರ್ ಸೌಲಭ್ಯ ಪಡೆದಿದ್ದು, ಅತ್ಯುತ್ತಮ ಮ್ಯೂಸಿಕ್ ಎಫೆಕ್ಟ್ ಪಡೆಯಬಹುದಾಗಿದೆ. ಇದರೊಂದಿಗೆ 6mm Tweeter ಸಹ ಇದ್ದು, ಹೈ ಫ್ರಿಕ್ವೆನ್ಸಿ ಸೌಲಭ್ಯ ಈ ಇಯರ್‌ಬಡ್ಸ್‌ನಲ್ಲಿ ಸಿಗಲಿದೆ. ಇದರ ಜೊತೆಗೆ ಈ ಡಿವೈಸ್ AI ENC ಕೂಡಾ ಹೊಂದಿದ್ದು, ಇದು ಬಳಕೆದಾರರಿಗೆ ಅತ್ಯುತ್ತಮವಾದ ಶಬ್ದ ರದ್ದತಿ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.
ಇನ್ನು ಮಿವಿ ಸಂಸ್ಥೆಯು ಈ ಹೊಸ ಡಿವೈಸ್ ಫ್ಲ್ಯಾಗ್‌ಶಿಫ್ ಮಾದರಿಯಂತಹ ಆಯ್ಕೆಗಳನ್ನು ಪಡೆದಿದ್ದು, ಇದು ಗ್ರಾಹಕರು ಈ ಡಿವೈಸ್‌ನತ್ತ ನೋಡುವಂತೆ ಮಾಡಿದೆ. ಈ ಸಾಧನವು ಇಯರ್‌ಬಡ್ಸ್ ಮಿವಿ 3D ಸೌಂಡ್‌ಸ್ಟೇಜ್ ಸೌಲಭ್ಯ ಒಳಗೊಂಡಿದ್ದು, ಇದು 3D ಸೌಂಡ್‌ಸ್ಟೇಜ್ ಉಪಕರಣದ ಬೇರ್ಪಡಿಕೆಯನ್ನು ನೀಡುತ್ತದೆ ಇದರಿಂದ ಬಳಕೆದಾರರು ಪ್ರತಿ ಉಪಕರಣವನ್ನು ಪ್ರತ್ಯೇಕವಾಗಿ ಕೇಳಬಹುದಾಗಿದೆ. ಮ್ಯೂಸಿಕ್‌ನಲ್ಲಿ ಎಷ್ಟೇ ಕಡಿಮೆ ಶಬ್ದದ ವಾದ್ಯ ಇದ್ದರೂ, ಬಳಕೆದಾರರು ಅದನ್ನು ಸ್ಪಷ್ಟವಾಗಿ ಕೇಳಲು ಪೂರಕ ಎನಿಸುತ್ತದೆ.
ಹಾಗೆಯೇ ಈ ಇಯರ್‌ಬಡ್ಸ್ ಡಿವೈಸ್ Hi-lo Dual Drivers ಆಯ್ಕೆ ಸೌಲಭ್ಯ ಸಹ ಲಭ್ಯ ಇದೆ. ಇದರಿಂದ ಬಳಕೆದಾರರಿಗೆ ಸಂಪೂರ್ಣ ವಾಯಿಸ್ ಕ್ಲಾರಿಟಿ ಆಡಿಯೊ ಸೌಲಭ್ಯ ದೊರೆಯಲು ನೆರವಾಗುತ್ತದೆ. ಅಲ್ಲದೇ ಇದು ಮಲ್ಟಿ ಡಿವೈಸ್ ಕನೆಕ್ಷನ್ ಆಯ್ಕೆ ಪಡೆದುಕೊಂಡಿದ್ದು, ತಡೆರಹಿತ ಮಲ್ಟಿ-ಕನೆಕ್ಷನ್ ಸೌಲಭ್ಯಕ್ಕಾಗಿ ಸಮಾನಾಂತರವಾಗಿ 2 ಡಿವೈಸ್‌ಗಳೊಂದಿಗೆ ಕನೆಕ್ಟ್ ಮಾಡಲು ಇದು ನೆರವಾಗಲಿದೆ. ಹಾಗೆಯೇ ಈ ಇಯರ್‌ಬಡ್ಸ್‌ನಲ್ಲಿ ಬ್ಲೂಟೂತ್ v5.3 ಸೌಲಭ್ಯ ಇದ್ದು, 10 ಮೀಟರ್‌ಗಳವರೆಗೆ ತಡೆರಹಿತ ಕನೆಕ್ಟ್‌ಗೆ ಈ ಆಯ್ಕೆ ಸಪೋರ್ಟ್ ಆಗಿದೆ.
ಈ ಇಯರ್‌ಬಡ್ಸ್ ಸಾಧನವು AI-ಸಕ್ರಿಯಗೊಳಿಸಿದ ಪರಿಸರ ಶಬ್ದ ರದ್ದತಿ (ENC) ಸೌಲಭ್ಯದ ಜೊತೆಗೆ ಡ್ಯುಯಲ್ ಮೈಕ್ ಆಯ್ಕೆ ಪಡೆದಿದೆ. ಇದರ ನೆರವಿನಿಂದ HD ಗುಣಮಟ್ಟದ ಕರೆ ಸೌಲಭ್ಯ ಸಿಗಲಿದೆ. ಇದರ ಬ್ಯಾಟರಿ ಬ್ಯಾಕ್‌ಅಪ್ ಸಹ ಉತ್ತಮ ಎನಿಸುತ್ತದೆ. ಇದು ಸುಮಾರು 50 ಗಂಟೆಗಳ ಪ್ಲೇಟೈಮ್ ಸೌಲಭ್ಯ ಒದಗಿಸಲಿದ್ದು, ಅಲ್ಲದೇ ಸುಮಾರು 8.5 ಗಂಟೆಗಳ ಆನ್-ಬಡ್ಸ್ ಪ್ಲೇಟೈಮ್ ನೀಡುತ್ತದೆ.
ಇನ್ನು ಈ ಇಯರ್‌ಬಡ್ಸ್ ಸ್ಟೈಲಿಶ್ ಹಾಗೂ ರಾಯಲ್ ಲುಕ್ ರಚನೆ ಅನ್ನು ಪಡೆದಿದ್ದು, ಬಳಕೆದಾರರ ಕಿವಿಗಳಿಗೆ ಕಂಫರ್ಟ್ ಆಗಿ ಹೊಂದಿಕೊಳ್ಳುವ ರಚನೆಯಲ್ಲಿ ಇವೆ. ಹಾಗೆಯೇಐದು ಕಲರ್ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ ಏರಿಯಲ್ ಲ್ಯಾವೆಂಡರ್, ಕಾಮೆಟ್ ಬ್ಲೂ, ಟ್ರೈಟಾನ್ ಗೋಲ್ಡ್, ಮೆಟೇರ ಬ್ಲ್ಯಾಕ್ ಮತ್ತು ಕ್ಯಾಲಿಸ್ಟೊ ಪೀಚ್ ಆಗಿವೆ. ಅಲ್ಲದೇ ಇದು ಹಾಗೆಯೇ ಈ ಡಿವೈಸ್ IPX4 ನೀರಿನ ಪ್ರತಿರೋಧ ಸೌಲಭ್ಯ ಪಡೆದಿರುವುದು ಪ್ಲಸ್ ಪಾಯಿಂಟ್.
ಕೊನೆಯ ಮಾತು
ಮಿವಿ ಸಂಸ್ಥೆಯ ನೂತನ ಮಿವಿ ಸೂಪರ್‌ಪಾಡ್ಸ್ ಡ್ಯುಯಟು (Mivi SuperPods Dueto) ಇಯರ್‌ಬಡ್ಸ್ ಡಿವೈಸ್ 1999ರೂ.ಗಳ ಪ್ರೈಸ್‌ಟ್ಯಾಗ್ ಅನ್ನು ಪಡೆದುಕೊಂಡಿದೆ. ಈ ಬೆಲೆಯ ವಿಭಾಗದಲ್ಲಿ ಸಂಸ್ಥೆಯು ಡ್ಯುಯಟು ಇಯರ್‌ಬಡ್ಸ್‌ನಲ್ಲಿ ಫ್ಲ್ಯಾಗ್‌ಶಿಪ್ ಮಾದರಿಯ ಫೀಚರ್ಸ್ ಒದಗಿಸುವ ಪ್ರಯತ್ನ ಮಾಡಿದೆ. ಈ ಹೊಸ ಇಯರ್‌ಬಡ್ಸ್ ಸಾಧನವು ತನ್ನ ರೇಂಜ್‌ನಲ್ಲೇ ಅತ್ಯುತ್ತಮ ಆಡಿಯೋ ಔಟ್‌ಪುಟ್ ಒದಗಿಸುತ್ತದೆ. ಇದರ ಜೊತೆಗೆ ಇದು ಸ್ಟೈಲಿಶ್ ಲುಕ್ ಹಾಗೂ ಅತ್ಯುತ್ತಮ ಕಲರ್ ಆಯ್ಕೆಗಳನ್ನು ಪಡೆದಿದೆ. ಬಜೆಟ್ ದರದಲ್ಲಿ ಒಂದೊಳ್ಳೆ ಇಯರ್‌ಬಡ್ಸ್ ಎನ್ನಬಹುದು.


Click it and Unblock the Notifications








