Home
Gadgets

Smart Charger: ಆಫರ್‌ ಬೆಲೆಯಲ್ಲಿ 'ಸ್ಮಾರ್ಟ್‌' ಫೋನ್‌ ಚಾರ್ಜರ್‌! ಇದರ ವಿಶೇಷತೆ ಏನು ಗೊತ್ತಾ?

ಸ್ಮಾರ್ಟ್‌ಫೋನ್‌ಗಳು (Smartphones) ಇಂದು ಅಗತ್ಯ ಡಿವೈಸ್‌ ಆಗಿದ್ದು, ಈ ಮೂಲಕ ಇತರರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರಲು ಹಾಗೂ ಬ್ಯಾಂಕಿಂಗ್‌ ವ್ಯವಹಾರ ಸೇರಿದಂತೆ ಇನ್ನಿತರೆ ಕಾರ್ಯಗಳನ್ನು ಮಾಡಲು ಫೋನ್‌ ಅನ್ನು ಬಳಕೆ ಮಾಡುವುದು ಸಾಮಾನ್ಯವಾದ ವಿಚಾರ. ಪರಿಣಾಮ ಬ್ಯಾಟರಿ ಸಾಮರ್ಥ್ಯ ವೇಗವಾಗಿ ಖಾಲಿಯಾಗಬಹುದು. ಆದರೆ, ಈ ರೀತಿಯ ಡಿವೈಸ್‌ಗಳನ್ನು ಬಳಕೆ ಮಾಡುವುದರಿಂದ ಹಲವಾರು ಸಮಸ್ಯೆಗಳಿಂದ ಪಾರಾಗಬಹುದು.

ಹೌದು, ಸ್ಮಾರ್ಟ್‌ಫೋನ್‌ ಸಂಬಂಧ ಈಗಾಗಲೇ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಗ್ಯಾಜೆಟ್‌ಗಳು ಲಾಂಚ್ ಆಗಿವೆ. ಇವುಗಳು ಬಳಕೆದಾರರಿಗೆ ಅಗತ್ಯ ಇರುವ ಸೌಲಭ್ಯವನ್ನು ಕಲ್ಪಿಸಿಕೊಡುವ ಕೆಲಸ ಮಾಡುತ್ತವೆ. ಅದರಂತೆ ಕಾರ್‌ನಲ್ಲಿ ಪ್ರಯಾಣ ಮಾಡುವವರಿಗೆ ಈ ಮಿಕ್ಸೆನ್ ಚಾರ್ಜರ್ ಸ್ಟ್ಯಾಂಡ್ ಫಾಸ್ಟ್ ಚಾರ್ಜಿಂಗ್-ಕಾರ್ಡ್‌ಲೆಸ್ ಕಪ್ ಹೋಲ್ಡರ್ ಚಾರ್ಜರ್ ಪ್ಯಾಡ್ (Mixen Charger Stand) ಅತ್ಯುತ್ತಮ ಆಯ್ಕೆ ಆಗಿದೆ. ಇದು ನೋಡಲು ಆಕರ್ಷಕವಾಗಿದ್ದು, ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ನೆಚ್ಚಿನ ಡಿವೈಸ್ ಆಗಿದೆ. ಹಾಗಿದ್ರೆ, ಇದರ ವಿಶೇಷತೆ ಏನು?, ಇದಕ್ಕೆ ಇರುವ ಆಫರ್ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಆಫರ್‌ ಬೆಲೆಯಲ್ಲಿ 'ಸ್ಮಾರ್ಟ್‌' ಫೋನ್‌ ಚಾರ್ಜರ್‌! ಇದರ ವಿಶೇಷತೆ ಏನು ಗೊತ್ತಾ?

ವಿಶೇ‍ಷ ಚಾರ್ಜರ್‌: ಈ ಮಿಕ್ಸೆನ್ ಚಾರ್ಜರ್ ಸ್ಟ್ಯಾಂಡ್ ಫಾಸ್ಟ್ ಚಾರ್ಜಿಂಗ್-ಕಾರ್ಡ್‌ಲೆಸ್ ಕಪ್ ಹೋಲ್ಡರ್ ಚಾರ್ಜರ್ ಪ್ಯಾಡ್ ನೋಡಲು ಥೇಟ್‌ ಲೋಟದಂತೆ ಇದೆ. ಹಾಗೆಯೇ ದೀರ್ಘಕಾಲ ಬಾಳಿಕೆ ಬರುವ ಡಿವೈಸ್‌ ಇದಾಗಿದ್ದು, ಪರಿಣಾಮ ಆಗತಾನೆ ಖರೀದಿ ಮಾಡಿದ ಡಿವೈಸ್‌ನಂತೆ ಕಾಣಿಸಿಕೊಳ್ಳುತ್ತದೆ. ಜೊತೆಗೆ ಇದು ಓವರ್ ಕರೆಂಟ್, ಓವರ್‌ ಚಾರ್ಜಿಂಗ್, ಓವರ್‌ಹೀಟಿಂಗ್ ಮತ್ತು ಹೆಚ್ಚಿನ ತಾಪಮಾನದ ವಿರುದ್ಧ ಹೋರಾಡುವ ಸಾಮರ್ಥ್ಯ ಪಡೆದಿದ್ದು, ಇದರಿಂದ ಫೋನ್‌ಗಳಿಗೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ.

ಈ ಯುನಿವರ್ಸಲ್ ಯುಎಸ್‌ಬಿ ಕಾರ್ ಚಾರ್ಜರ್ ಯಾವುದೇ ಆಂಡ್ರಾಯ್ಡ್‌ ಮತ್ತು ಐಓಎಸ್ ಮೊಬೈಲ್ ಡಿವೈಸ್‌ಗಳಿಗೆ (Android, iOS mobile) ಹೊಂದಿಕೊಳ್ಳಲಿದ್ದು, ನಿಮ್ಮ ಡಿವೈಸ್‌ ಬೆಂಬಲಿಸುವ ಗರಿಷ್ಠ ವೇಗದಲ್ಲಿ ಚಾರ್ಜ್‌ ಮಾಡುವ ಸೌಲಭ್ಯ ಪಡೆದಿದೆ. ಈ ವಿಶೇಷ ಡಿವೈಸ್ ಕಾರುಗಳು, ಎಸ್‌ಯುವಿಗಳು, ಟ್ರಕ್‌ಗಳು, ಆಫ್-ರೋವಾ ಮುಂತಾದ ಮುಖ್ಯ ವಾಹನ ಪ್ರಕಾರಗಳಿಗೆ ಹೊಂದಿಕೆ ಆಗುತ್ತದೆ.

ಆಫರ್‌ ಬೆಲೆಯಲ್ಲಿ 'ಸ್ಮಾರ್ಟ್‌' ಫೋನ್‌ ಚಾರ್ಜರ್‌! ಇದರ ವಿಶೇಷತೆ ಏನು ಗೊತ್ತಾ?

ಇನ್ನು 10W ಫಾಸ್ಟ್ ಚಾರ್ಜ್ ತಂತ್ರಜ್ಞಾನ, ನಿಮ್ಮ ಫೋನ್ ಅನ್ನು ನಿರಂತರವಾಗಿ ಮತ್ತು ತ್ವರಿತವಾಗಿ ಚಾರ್ಜ್ ಮಾಡಲಿದ್ದು, ಈ ಡಿವೈಸ್‌ ಮೇಲೆ ಎರಡು ಪಾಯಿಂಟರ್‌ಗಳಿವೆ. ಪವರ್ ಆನ್ ಮಾಡಿದಾಗ, ಪವರ್ ಇಂಡಿಕೇಟರ್ ಲೈಟ್ ಆನ್ ಆಗುತ್ತದೆ, ಅದು ಚಾರ್ಜ್ ಮಾಡಲು ಪ್ರಾರಂಭಿಸಿದಾಗ, ಚಾರ್ಜ್ ಇಂಡಿಕೇಟರ್ ಲೈಟ್ ಕಾಣಿಸಿಕೊಳ್ಳುತ್ತದೆ. ಪರಿಣಾಮ ಇದನ್ನು ಸುಲಭವಾಗಿ ಬಳಕೆ ಮಾಡಬಹುದಾಗಿದೆ.

ಈ ವೈರ್‌ಲೆಸ್ ಚಾರ್ಜರ್ ಅಂತರಾಷ್ಟ್ರೀಯ ಕ್ವಿ ವೈರ್‌ಲೆಸ್ ಚಾರ್ಜಿಂಗ್ ಮಾನದಂಡಗಳಿಗೆ ಅನುಗುಣವಾಗಿದ್ದು, ಕಟ್ಟುನಿಟ್ಟಾದ ಕ್ಯೂಸಿ, ಸಿಇ ಎಫ್‌ಸಿಸಿ ರೋಶ್ ಪ್ರಮಾಣೀಕರಣ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಂಡಿದೆ. ಅಂದರೆ ಇದು ಮಾನವ ದೇಹಕ್ಕೆ ಯಾವುದೇ ಹಾನಿ ಮಾಡುವುದಿಲ್ಲ ಮತ್ತು ನಿಮ್ಮ ಫೋನ್‌ಗಳನ್ನು ಸುರಕ್ಷಿತವಾಗಿರಿಸುತ್ತದೆ. ಹಾಗೆಯೇ ಈ ವೈರ್‌ಲೆಸ್ ಚಾರ್ಜರ್ ಕಪ್ ನಿಮ್ಮ ಫೋನ್ ಅಲುಗಾಡದಂತೆ ಮತ್ತು ಕೆಳಗೆ ಜಾರದಂತೆ ಹಿಡಿದಿಟ್ಟುಕೊಳ್ಳುತ್ತದೆ.

ಆಫರ್‌ ಬೆಲೆಯಲ್ಲಿ 'ಸ್ಮಾರ್ಟ್‌' ಫೋನ್‌ ಚಾರ್ಜರ್‌! ಇದರ ವಿಶೇಷತೆ ಏನು ಗೊತ್ತಾ?

ಮಿಕ್ಸೆನ್ ಚಾರ್ಜರ್ ಸ್ಟ್ಯಾಂಡ್ ನ ಬೆಲೆ ಹಾಗೂ ಲಭ್ಯತೆ: ಈ ಡಿವೈಸ್‌ಗೆ ಅಮೆಜಾನ್‌ನಲ್ಲಿ ಭಾರೀ ಆಫರ್ ನೀಡಲಾಗಿದೆ. ಅಂದರೆ ಇದರ ಸಾಮಾನ್ಯ ದರ 6,999 ರೂ.ಗಳಾಗಿದ್ದು, ನೀವೀಗ ಇದನ್ನು 2,899 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಮೊದಲೇ ತಿಳಿಸಿದಂತೆ ಅಮೆಜಾನ್‌ ಈ ಡಿವೈಸ್‌ಗೆ 59 % ರಷ್ಟು ಆಫರ್ ಘೋಷಣೆ ಮಾಡಿದೆ. ಅಷ್ಟೇ ಅಲ್ಲದೆ ನೀವು 141 ರೂ.ಗಳ ಆರಂಭಿಕ ಇಎಮ್‌ಐ ಪಾವತಿ ಮಾಡುವ ಮೂಲಕವೂ ಇದನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
The Mixen Charger Stand Fast Charging-Wireless Cup Holder Charger Pad is a great choice for charging phones in the car. It looks attractive and is a favorite device for smartphone users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+