Home
Gadgets

ಜಸ್ಟ್‌ 1000ರೂ. ಒಳಗೆ ಲಭ್ಯವಿರುವ ಸ್ಮಾರ್ಟ್‌ಫೋನಿನ 10 ಅಗತ್ಯ ಆಕ್ಸಸರೀಸ್!

ಪ್ರಸ್ತುತ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರಿಗೂ ಅವಶ್ಯ ಡಿವೈಸ್‌ ಆಗಿದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನೆ ಇರಲಿ ಅಥವಾ ದುಬಾರಿ ದರದ ಸ್ಮಾರ್ಟ್‌ಫೋನ್‌ನೇ ಇರಲಿ ಫೋನ್ ಖರೀದಿಸದ ಮೇಲೆ ಅದಕ್ಕೆ ಕೆಲವೊಂದು ಆಕ್ಸಸರಿಸ್ ಅಗತ್ಯ ಅನಿಸುತ್ತದೆ. ಈ ನಿಟ್ಟಿನಲ್ಲಿ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಸ್ಕ್ರೀನ್‌ ಗಾರ್ಡ್‌, ಫೋನ್ ಬ್ಯಾಕ್‌ ಕವರ್, ಆಡಿಯೊ ಕನೆಕ್ಟರ್ ಕೇಬಲ್ ಹೀಗೆ ಕೆಲವೊಂದು ಪರಿಕರಗಳನ್ನು ಖರೀದಿಸುತ್ತಾರೆ.

ಸ್ಮಾರ್ಟ್‌ಫೋನ್‌ಗಳಿಗೆ

ಹೌದು, ಬಹುತೇಕ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಸ್ಕ್ರೀನ್‌ ಗಾರ್ಡ್‌ ಹಾಗೂ ಬ್ಯಾಕ್‌ ಕವರ್ ಹಾಕಿಸಿಕೊಳ್ಳುತ್ತಾರೆ. ಇವುಗಳನ್ನು ಹೊರತು ಪಡಿಸಿ ಚಾರ್ಜಿಂಗ್ ಕೇಬಲ್, OTG ಕೇಬಲ್, ಟ್ರೈಪ್ಯಾಡ್ ಸ್ಟ್ಯಾಂಡ್‌, ಸೆಲ್ಫಿ ಸ್ಟಿಕ್‌ ಸೇರಿದಂತೆ ಇನ್ನಷ್ಟು ಸಣ್ಣ ಪುಟ್ಟ ವಸ್ತುಗಳು ಸ್ಮಾರ್ಟ್‌ಫೋನಿನ ಅಗತ್ಯ ಆಕ್ಸಸರಿಸ್‌ಗಳ ಲಿಸ್ಟ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗೆ ಕೇವಲ 1000ರೂ, ಪ್ರೈಸ್‌ಟ್ಯಾಗ್‌ನ ಒಳಗೆ ಲಭ್ಯವಾಗುವ ಕೆಲವು ಪ್ರಮುಖ ಸ್ಮಾರ್ಟ್‌ಫೋನ್‌ ಆಕ್ಸಸರಿಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

Adhesive cable clips- ಅಂಟುವ ಕೇಬಲ್ ಕ್ಲಿಪ್

Adhesive cable clips- ಅಂಟುವ ಕೇಬಲ್ ಕ್ಲಿಪ್

ಈ ಕೇಬಲ್ ಕ್ಲಿಪ್‌ಗಳನ್ನು ಗೋಡೆಗೆ ಸುಲಭವಾಗಿ ಅಂಟಿಸಬಹುದಾಗಿದೆ. ಡೆಕೊರೇಶನ್ ಸಂದರ್ಭಗಳಲ್ಲಿ ಈ ಕ್ಲಿಪ್ ಹೆಚ್ಚು ಉಪಯುಕ್ತ ಅನಿಸಲಿದೆ. ಅಮೆಜಾನ್ ತಾಣದಲ್ಲಿ ಈ ಕ್ಲಿಪ್ ಪ್ಯಾಕ್ ಬೆಲೆಯು 245ರೂ. ಆಗಿದೆ. (ಈ ಪ್ಯಾಕ್ ಒಟ್ಟು 20 ಕ್ಲಿಪ್‌ಗಳು ಮತ್ತು 24 ಮಿನಿ ಸ್ಟ್ರಿಪ್ಸ್).

spray n' clean device- ಸ್ಕ್ರೀನ್ ಕ್ಲಿನ್ ಡಿವೈಸ್

spray n' clean device- ಸ್ಕ್ರೀನ್ ಕ್ಲಿನ್ ಡಿವೈಸ್

ಲ್ಯಾಪ್‌ಟಾಪ್‌ ಅಥವಾ ಸ್ಮಾರ್ಟ್‌ಫೋನ್ ಮೇಲಿಂದ ಮೇಲೆ ಕ್ಲಿನ್ ಮಾಡಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಸ್ಕ್ರೀನ್ ಕ್ಲಿನ್ ಡಿವೈಸ್ ಗ್ರಾಹಕರಿಗೆ ಉತ್ತಮ ಅನಿಸಲಿದೆ. ಮುಖ್ಯವಾಗಿ ಈ ಡಿವೈಸ್‌ ಮೂಲಕ ಗ್ಯಾಡ್ಜೆಟ್ಸ್‌ ಸ್ಕ್ರೀನ್‌ ಸುಲಭವಾಗಿ ಕ್ಲಿನ್ ಮಾಡಬಹುದು. ಅಮೆಜಾನ್‌ನಲ್ಲಿ ಇದರ ಬೆಲೆಯು 400ರೂ. ಆಗಿದೆ.

wireless fast charger-ವಾಯರ್‌ಲೆಸ್‌ ಫಾಸ್ಟ್‌ ಚಾರ್ಜಿಂಗ್

wireless fast charger-ವಾಯರ್‌ಲೆಸ್‌ ಫಾಸ್ಟ್‌ ಚಾರ್ಜಿಂಗ್

ಪ್ರಸ್ತುತ ಕೆಲವು ನೂತನ ಸ್ಮಾರ್ಟ್‌ಫೋನ್‌ಗಳು ವಾಯರ್‌ಲೆಸ್‌ ಚಾರ್ಜಿಂಗ್ ಸೌಲಭ್ಯ ಪಡೆದಿವೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ವಾಯರ್‌ಲೆಸ್‌ ಚಾರ್ಜಿಂಗ್ ಬಿಡಿ ಭಾಗಗಳು ಕಾಣಿಸಿಕೊಂಡಿವೆ. ಅಮೆಜಾನ್‌ ಇ-ಕಾಮರ್ಸ್‌ನಲ್ಲಿ RAEGR Arc 400 ಹೆಸರಿನ ವಾಯರ್‌ಲೆಸ್‌ ಚಾರ್ಜರ್ ಪ್ರೈಸ್‌ ಕೇವಲ 999ರೂ. ಆಗಿದೆ.

Universal tripod stand-ಯುನಿವರ್ಸಲ್ ಟ್ರೈಪಾಡ್ ಸ್ಟ್ಯಾಂಡ್

Universal tripod stand-ಯುನಿವರ್ಸಲ್ ಟ್ರೈಪಾಡ್ ಸ್ಟ್ಯಾಂಡ್

ಇಂದಿನ ನೂತನ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ ಸೌಲಭ್ಯ ಹೊಂದಿವೆ. ಸದ್ಯ ಬಹುತೇಕ ಬಹುತೇಕ ಬಳಕೆದಾರರು ಸ್ಮಾರ್ಟ್‌ಫೋನ್‌ ಮೂಲಕವೇ ಫೋಟೊಗ್ರಫಿ ನಡೆಸುತ್ತಿದ್ದಾರೆ. ಫೋನಿನಲ್ಲಿ ಬೆಸ್ಟ್‌ ಫೋಟೊ/ವಿಡಿಯೊ ಶೂಟ್ ಮಾಡಲು ಟ್ರೈಪಾಡ್ ಸ್ಟ್ಯಾಂಡ್ ಬಳಕೆ ಸಹ ಹೆಚ್ಚಾಗುತ್ತಿದೆ. ಅಮೆಜಾನ್‌ ತಾಣದಲ್ಲಿ Adofys ಹೆಸರಿನ ಟ್ರೈಪಾಡ್ ಸ್ಟ್ಯಾಂಡ್ ದರವು 739ರೂ. ಆಗಿದೆ.

Dual-port fast charger-ಡ್ಯುಯಲ್-ಪೋರ್ಟ್ ವೇಗದ ಚಾರ್ಜರ್

Dual-port fast charger-ಡ್ಯುಯಲ್-ಪೋರ್ಟ್ ವೇಗದ ಚಾರ್ಜರ್

ಇಂದಿನ ಬಹುತೇಕ ಫೋನ್‌ಗಳು ಫಾಸ್ಟ್‌ ಚಾರ್ಜರ್ ಸೌಲಭ್ಯ ಹೊಂದಿವೆ. ಹಾಗೆಯೇ ಮಾರುಕಟ್ಟೆಯಲ್ಲಿ ಡ್ಯುಯಲ್ ಪೋರ್ಟ್‌ ಫಾಸ್ಟ್‌ ಚಾರ್ಜರ್ ಸೌಲಭ್ಯದ ಡಿವೈಸ್ ಗಳು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಇನ್ನು ಅಮೆಜಾನ್ ತಾಣದಲ್ಲಿ URBN 3.1Amp ಡ್ಯುಯಲ್ ಪೋರ್ಟ್‌ ಫಾಸ್ಟ್‌ ಚಾರ್ಜರ್ ಬೆಲೆಯು 449ರೂ. ಆಗಿದೆ.

Lens wipes

Lens wipes

ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ಲೆನ್ಸ್‌ಗಳನ್ನು ಕ್ಲಿನ್ ಮಾಡಲು ಲೆನ್ಸ್‌ ವೈಪ್ಸ್-Lens wipes ನೆರವಾಗಲಿವೆ. ಈ ಮೂಲಕ ಫೋನ್ ಕ್ಯಾಮೆರಾ ಲೆನ್ಸ್‌ಗಳಿಗೆ ತಗಲುವ ಆಯಿಲ್, ಡಸ್ಟ್‌ ಇತರೆ ಕಲೆಗಳನ್ನು ಸುಲಭವಾಗಿ ಒರೆಸಬಹುದು. ಅಮೆಜಾನ್ ZEISS Lens Wipes - Pack of 30 ದರವು ಜಸ್ಟ್‌ 249ರೂ. ಆಗಿದೆ.

OTG Card Reader- OTG ಕಾರ್ಡ್‌ ರೀಡರ್

OTG Card Reader- OTG ಕಾರ್ಡ್‌ ರೀಡರ್

OTG ಮತ್ತು ಕಾರ್ಡ್‌ ರೀಡರ್ ಪ್ರಸ್ತುತ ಬಳಕೆದಾರರಿಗೆ ಬಹು ಉಪಯುಕ್ತ ಸ್ಮಾರ್ಟ್‌ಫೋನ್ ಆಕ್ಸಸರಿಸ್‌ಗಳು ಎಂದು ಹೇಳಬಹುದಾಗಿದೆ. ಈ ಡಿವೈಸ್‌ಗಳ ಮೂಲಕ ಸುಲಭವಾಗಿ ಡೇಟಾ ಟ್ರಾನ್ಸ್‌ಫರ್/ ಸ್ಟೋರ್ ಮಾಡಬಹುದಾಗಿದೆ ಇನ್ನು ಇವುಗಳ ಬೆಲೆಯು ಅಷ್ಟೆನು ದುಬಾರಿ ಇರುವುದಿಲ್ಲ. ಅಮೆಜಾನ್‌ನಲ್ಲಿ Wayona 4 in 1 OTG ಕಾರ್ಡ್‌ ರೀಡರ್ ಬೆಲೆಯು 999ರೂ.ಗಳು ಆಗಿದೆ.

Touch-Friendly waterproof bags-ವಾಟರ್‌ಪ್ರೂಫ್‌ ಬ್ಯಾಗ್ಸ್‌

Touch-Friendly waterproof bags-ವಾಟರ್‌ಪ್ರೂಫ್‌ ಬ್ಯಾಗ್ಸ್‌

ಮಳೆಗಾಲದಲ್ಲಿ ಅಥವಾ ಈಜುಕೊಳದಲ್ಲಿ ಸ್ಮಾರ್ಟ್‌ಫೋನ್‌ ನೀರಿನಿಂದ ಹಾನಿಯಾಗದಂತೆ ರಕ್ಷಿಸಿಕೊಳ್ಳಲು ವಾಟರ್‌ಪ್ರೂಫ್ ಬ್ಯಾಗ್‌ಗಳು ಲಭ್ಯ ಇವೆ. ಆಕರ್ಷಕ ಲುಕ್‌ನಲ್ಲಿರುವ ಈ ಬ್ಯಾಗ್‌ಗಳಲ್ಲಿ ಯಾವುದೇ ಸ್ಮಾರ್ಟ್‌ಫೋನ್‌ ಅನ್ನು ಸುಲಭವಾಗಿ ಇರಿಸಿಕೊಳ್ಳಬಹುದಾಗಿದೆ. ಅಮೆಜಾನ್‌ ತಾಣದಲ್ಲಿ BOBO ಹೆಸರಿನ ವಾಟರ್‌ಪ್ರೂಫ್‌ ಬ್ಯಾಗ್ಸ್‌ ದರವು 499ರೂ. ಆಗಿದೆ.

Pop Socket-ಪಾಪ್ ಸಾಕೆಟ್

Pop Socket-ಪಾಪ್ ಸಾಕೆಟ್

ಈ ಪಾಪ್ ಸಾಕೆಟ್ ಅಡ್ಜಸ್ಟೆಬಲ್ ವಿನ್ಯಾಸ ಪಡೆದಿದ್ದು, ಅಗತ್ಯ ಎತ್ತರಕ್ಕೆ ಹೊಂದಿಸಿಕೊಳ್ಳುವ ಆಯ್ಕೆ ಪಡೆದಿದೆ. ಹಾಗೂ ಅತ್ಯುತ್ತಮ ಗ್ರೀಪ್‌ ಸಹ ಒದಗಿಸುತ್ತವೆ. ಅಮೆಜಾನ್‌ನಲ್ಲಿ ಪಾಪ್ ಸಾಕೆಟ್ ಡಿವೈಸ್‌ ದರವು 695ರೂ. ಆಗಿದೆ.

Waterproof Armband pouch

Waterproof Armband pouch

ವಾಟರ್‌ಪ್ರೂಫ್ ಆರ್ಮ್‌ ಬ್ಯಾಂಡ್‌ ಪೌಚ್‌ಗಳು ಫಿಟ್ನೆಸ್‌ ಪ್ರಿಯರಿಗೆ ಹೆಚ್ಚು ಉಪಯುಕ್ತ ಅನಿಸುವುದರಲ್ಲಿ ಎರಡು ಮಾತಿಲ್ಲ. ಈ ಪೌಚ್‌ಗಳು ಆಕರ್ಷಕ ಬಣ್ಣಗಳ ಆಯ್ಕೆಗಳನ್ನು ಹೊಂದಿವೆ. ಅಮೆಜಾನ್ ತಾಣದಲ್ಲಿ ಈ ಪೌಚ್ ದರವು 285ರೂ. ಆಗಿದೆ.

Best Mobiles in India

English summary
These top 10 smartphone accessories available under rs 1000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+