Home
Gadgets

ಮೊಟೊರೊಲಾದ ಈ ಜನಪ್ರಿಯ ಫೋನ್‌ಗೆ 33% ರಿಯಾಯಿತಿ: ಫ್ಲಿಪ್‌ಕಾರ್ಟ್‌ನಿಂದ ಭರ್ಜರಿ ಆಫರ್‌

ಮೊಟೊರೊಲಾದ ಯಾವುದೇ ಫೋನ್‌ಗಳು ಸಹ ಬಳಕೆದಾರರಿಗೆ ಅಚ್ಚು ಮೆಚ್ಚು. ಅದರಲ್ಲೂ ಮೊಟೊದ ಹೊಸ ಫೋನ್‌ಗಳಿಗೆ ಅಪ್‌ಗ್ರೇಡ್‌ ಆಗಲು ಗ್ರಾಹಕರು ತುದಿಗಾಲಲ್ಲಿ ಕಾದು ನಿಂತಿರುತ್ತಾರೆ. ಈ ನಡುವೆ ಕಳೆದ ವರ್ಷ ಭಾರೀ ಸದ್ದು ಮಾಡಿದ್ದ ಮೊಟೊರೊಲಾದ ಈ ಫೋನ್‌ಗೆ ಈಗ 33% ರಿಯಾಯಿತಿ ನೀಡಲಾಗಿದೆ.

ಹೌದು, ಮೊಟೊರೊಲಾ ಸಂಸ್ಥೆಯ ಮೊಟೊರೊಲಾ E32 (Motorola E32) ಸ್ಮಾರ್ಟ್‌ಫೋನ್‌ಗೆ ಭರ್ಜರಿ ರಿಯಾಯಿತಿ ನೀಡಲಾಗಿದೆ. ಈ ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಹಾಗೂ ಮೀಡಿಯಾ ಟೆಕ್‌ ಹಿಲಿಯೋ G37 CPU ಬಲ ಪಡೆದುಕೊಂಡಿದೆ. ಅದರಲ್ಲೂ ಅತ್ಯುತ್ತಮ ಬ್ಯಾಕಪ್‌ ನೀಡುವ ಬ್ಯಾಟರಿ ಆಯ್ಕೆ ಸಹ ವಿಶೇಷ ಎನಿಸಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್‌ ಬೆಲೆಯ ವಿವರವನ್ನು ಗಮನಿಸೋಣ ಬನ್ನಿ.

ಮೊಟೊರೊಲಾದ ಈ ಜನಪ್ರಿಯ ಫೋನ್‌ಗೆ 33% ರಿಯಾಯಿತಿ...

ಮೊಟೊರೊಲಾ E32 ಡಿಸ್‌ಪ್ಲೇ ವಿವರ: ಈ ಫೋನ್‌ ಏನೋ ಅಗ್ಗದ ಬೆಲೆಗೆ ಈಗ ಲಭ್ಯ ಆಗುತ್ತಿದೆ. ಆದರೆ ಇದನ್ನು ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ಗಳ ಕಡೆ ಕಣ್ಣಾಯಿಸಿವುದು ಅಗತ್ಯವಾಗಿದೆ. ಅದರಂತೆ ಈ ಫೋನ್ 6.5 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದು 270ppi ಪಿಕ್ಸೆಲ್ ಸಾಂದ್ರತೆ ಹೊಂದಿದೆ.

ಇದರೊಂದಿಗೆ 20:9 ಆಕಾರ ಅನುಪಾತ ಹಾಗೂ 720 x 1600 ನ ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದ್ದು, ಸೆಲ್ಫಿ ಕ್ಯಾಮೆರಾವನ್ನು ಇರಿಸಲು ಸ್ಮಾರ್ಟ್‌ಫೋನ್‌ನ ಬೆಜೆಲ್-ಫ್ರೀ ಡಿಸ್‌ಪ್ಲೇ ಮೇಲೆ ಪಂಚ್-ಹೋಲ್‌ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಡಿಸ್‌ಪ್ಲೇ 90Hz ನ ರಿಫ್ರೆಶ್ ರೇಟ್‌ ಹೊಂದಿದ್ದು, 83.09% ನ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ.

ಮೊಟೊರೊಲಾ E32 ಪ್ರೊಸೆಸರ್‌ ಮಾಹಿತಿ: ಇದರ ಪ್ರೊಸೆಸರ್‌ ವಿಚಾರಕ್ಕೆ ಬರುವುದಾದರೆ ಈ ಫೋನ್ ಮೀಡಿಯಾ ಟೆಕ್‌ ಹಿಲಿಯೋ G37 CPU ಬಲ ಪಡೆದುಕೊಂಡಿದೆ. ಹಾಗೆಯೇ ಪವರ್‌ ವಿಆರ್‌ GE8320 GPU ಬಲ ಹೊಂದಿದ್ದು, ಗೇಮರ್‌ಗಳಿಗೆ ಈ ಫೋನ್‌ ಒಳ್ಳೆಯ ಆಯ್ಕೆಯಾಗಿದೆ. ಉಳಿದಂತೆ ಉತ್ತಮ ಕಾರ್ಯಕ್ಷಮತೆಗಾಗಿ 4GB RAM ಆಯ್ಕೆ ನೀಡಲಾಗಿದೆ.

ಮೊಟೊರೊಲಾ E32 ಕ್ಯಾಮೆರಾ ರಚನೆ: ಇನ್ನು ಈ ಫೋನ್‌ನ ಕ್ಯಾಮೆರಾದ ಬಗ್ಗೆ ತಿಳಿಯುವುದಾದರೆ ಈ ಫೋನ್‌ f/1.8 ವೈಡ್-ಆಂಗಲ್ ಲೆನ್ಸ್ ಆಯ್ಕೆಯ 50 ಮೆಗಾಪಿಕ್ಸೆಲ್‌ನ ಪ್ರಮುಖ ಕ್ಯಾಮೆರಾ ಹಾಗೂ f/2.4 ಮ್ಯಾಕ್ರೋ ಲೆನ್ಸ್‌ ಆಯ್ಕೆ ಇರುವ 2 ಮೆಗಾಪಿಕ್ಸೆಲ್‌ ಜೊತೆಗೆ ಸೆಲ್ಫಿಗಾಗಿ f/2.0 ಯ 8 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.

ಮೊಟೊರೊಲಾ E32 ಬ್ಯಾಟರಿ ಹಾಗೂ ಇತರೆ: ಇನ್ನುಳಿದಂತೆ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇದು ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಜೊತೆಗೆ 4G, 3G, ಎಡ್ಜ್‌, ಜಿಪಿಆರ್‌ಎಸ್‌, ಬ್ಲೂಟೂತ್‌ ಆವೃತ್ತಿ V5.0, ವೈ-ಫೈ ಆವೃತ್ತಿ 802.11 a/b/g/n/h (2.4 GHz | 5 GHz) ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್‌ ಪಡೆದುಕೊಂಡಿದೆ.

ಮೊಟೊರೊಲಾದ ಈ ಜನಪ್ರಿಯ ಫೋನ್‌ಗೆ 33% ರಿಯಾಯಿತಿ...

ಮೊಟೊರಲಾ E32 ಬೆಲೆ ಹಾಗೂ ಆಫರ್‌ ವಿವರ: ಈಗ ಫೋನ್‌ ಪ್ರಮುಖ ವಿಚಾರಕ್ಕೆ ಬರೋಣ. ಇದು 11,999ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವಿಗ ಕೇವಲ 7,999ರೂ.ಗಳಿಗೆ ಈ ಫೋನ್‌ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ ಈ ಫೋನ್‌ಗೆ 33% ಡಿಸ್ಕೌಂಟ್‌ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ಬ್ಯಾಂಕ್ ಮತ್ತು ವಿನಿಮಯ ವ್ಯವಹಾರಗಳು ಸಹ ಲಭ್ಯ ಇದ್ದು, ಇನ್ನಷ್ಟು ಅಗ್ಗದ ಬೆಲೆಗೆ ಈ ಫೋನ್‌ ಖರೀದಿ ಮಾಡಬಹುದಾಗಿದೆ.

Best Mobiles in India

English summary
Motorola E32 smartphone get huge discount. This phone has a dual camera setup and is powered by MediaTek Helio G37 CPU.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+