Home
Gadgets

ಫೋನ್‌ ಮೆಮೊರಿ ಸಾಲುತಿಲ್ಲವೇ?..ಹಾಗಿದ್ರೆ ಇಲ್ಲಿವೆ ನೋಡಿ ಬೆಸ್ಟ್ ಸ್ಟೋರೇಜ್ ಆಯ್ಕೆ!

ಇತ್ತೀಚಿಗಿನ ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಆಂತರಿಕ ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿರುತ್ತವೆ. ಆದರೂ ಫೋಟೊ, ವಿಡಿಯೊ, ಆಪ್ಸ್‌ ಸೇರಿದಂತೆ ಹಲವು ಫೈಲ್‌ಗಳಿಂದ ಎಷ್ಟು ಸಂದರ್ಭಗಳಲ್ಲಿ ಸ್ಮಾರ್ಟ್‌ಫೋನಿನ ಆಂತರಿಕ ಸಂಗ್ರಹ ತುಂಬಿ ಬಿಟ್ಟಿರುತ್ತದೆ. ಈ ವೇಳೆ ಬಳಕೆದಾರರು ತಕ್ಷಣಕ್ಕೆ ಬಾಹ್ಯ ಮೆಮೊರಿಗಾಗಿ ಎಸ್‌ಡಿ ಕಾರ್ಡ್‌ ಮೊರೆ ಹೋಗುತ್ತಾರೆ. ಹಾಗೆಯೇ ಹೆಚ್ಚಿನ ಡೇಟಾ ಸಂಗ್ರಹಕ್ಕೆ ಹಾರ್ಡ್‌ಡಿಸ್ಕ್‌ಗಳು ನೆರವಾಗುತ್ತವೆ.

ಡೇಟಾ ಸಂಗ್ರಹ

ಹೌದು, ಫೋನಿನಲ್ಲಿರುವ ಪ್ರಮುಖ ಡೇಟಾ ಸಂಗ್ರಹಕ್ಕೆ ಬಹುತೇಕರು ಎಸ್‌ಡಿ ಕಾರ್ಡ್‌ ಬಳಸುತ್ತಾರೆ. ಆದರೆ ಎಸ್‌ಡಿ ಕಾರ್ಡ್‌ನಲ್ಲಿನ ದತ್ತಾಂಶಗಳು ಅನೇಕ ಕಾರಣಗಳಿಗಾಗಿ ನಾಶವಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಬಹುಮುಖ್ಯ ಡೇಟಾಗಳನ್ನು ಸುರಕ್ಷಿತವಾಗಿ ಸ್ಟೋರ್‌ ಮಾಡಿ ಇಡಲು ಬಾಹ್ಯ ಹಾರ್ಡ್‌ಡಿಸ್ಕ್ ಗಳು ಸಹಕಾರಿ ಎನಿಸುತ್ತವೆ. ಇನ್ನು ಬಾಹ್ಯ ಹಾರ್ಡ್‌ಡಿಸ್ಕ್‌ಗಳು 1TB ಗಿಂತಲೂ ಅಧಿಕ ಸಾಮರ್ಥ್ಯದ ಆಯ್ಕೆಗಳಲ್ಲಿಯೂ ಲಭ್ಯವಾಗುತ್ತವೆ.

ಹಾರ್ಡ್‌ಡಿಸ್ಕ್

ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್ ಶೇಖರಣಾ ಸಾಧನಗಳು ಫೋಟೋ, ಸಿನಿಮಾ, jpg, pdf, word, excell, documents, ಸೇರಿದಂತೆ ಎಲ್ಲ ಮಾದರಿಯ ದತ್ತಾಂಶಗಳನ್ನು ಸುರಕ್ಷಿತವಾಗಿ ಶೇಖರಿಸಬಹುದಾಗಿದೆ. ಹಾರ್ಡ್‌ಡಿಸ್ಕ್‌ಗಳು ಹಗುರವಾಗಿದ್ದು, ನಿಮ್ಮೊಂದಿಗೆ ಕೊಂಡೊಯ್ಯಬಹುದು. 1TB ಸಾಮರ್ಥ್ಯದ ಅಂತಹ ಕೆಲವು ಹಾರ್ಡ್‌ಡಿಸ್ಕ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

Toshiba Canvio ಹಾರ್ಡ್‌ ಡಿಸ್ಕ್‌

Toshiba Canvio ಹಾರ್ಡ್‌ ಡಿಸ್ಕ್‌

ತೋಶಿಬಾ ಸಂಸ್ಥೆಯ ಈ ಬಾಹ್ಯ ಹಾರ್ಡ್‌ ಡಿಸ್ಕ್‌ (Toshiba Canvio Basic 1TB A3 USB3.0 (Black) ಡಿವೈಸ್‌ 1TB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಈ ಡಿವೈಸ್‌ ಅಮೆಜಾನ್ ಇ ಕಾಮರ್ಸ್‌ ವೆಬ್‌ಸೈಟ್‌ ನಲ್ಲಿ ಲಭ್ಯವಿದೆ. ಇನ್ನು ಬೆಲೆಯು 3,599ರೂ. ಆಗಿದೆ.

Seagate Plus Slim ಹಾರ್ಡ್‌ಡಿಸ್ಕ್‌

Seagate Plus Slim ಹಾರ್ಡ್‌ಡಿಸ್ಕ್‌

1TB ಸಂಗ್ರಹ ಸಾಮರ್ಥ್ಯದಲ್ಲಿ ದೊರೆಯುವ Seagate ಸಂಸ್ಥೆಯ ಈ ಹಾರ್ಡ್‌ಡಿಸ್ಕ್‌ ಸಾಧನವು ವಿವಿಧ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ 3,899ರೂ.ಗಳು ಆಗಿದೆ.

Lenovo 1 TB Wired ಹಾರ್ಡ್‌ಡಿಸ್ಕ್‌

Lenovo 1 TB Wired ಹಾರ್ಡ್‌ಡಿಸ್ಕ್‌

ಎಚ್‌ಪಿ ಕಂಪನಿಯ (Lenovo 1 TB Wired External Hard Disk Drive (Grey)) ಈ ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್‌ 1TB ಸಂಗ್ರಹ ಸಾಮರ್ಥ್ಯದಲ್ಲಿದ್ದು, ಗ್ರೇ ಕಲರ್‌ನಲ್ಲಿ ಲಭ್ಯವಿದೆ. ಜನಪ್ರಿಯ ಇ ಕಾಮರ್ಸ್ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ 3,999ರೂ.ಗಳು ಆಗಿದೆ.

WD 1.5 TB Wired ಹಾರ್ಡ್‌ಡಿಸ್ಕ್‌

WD 1.5 TB Wired ಹಾರ್ಡ್‌ಡಿಸ್ಕ್‌

WD ಕಂಪನಿಯ ಹಲವು ಭಿನ್ನ ಶ್ರೇಣಿಯ ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್ ಆಯ್ಕೆಗಳನ್ನು ಹೊಂದಿದೆ. ಅವುಗಳಲ್ಲಿ ಈ (WD 1.5 TB Wired External Hard Disk Drive (Black) ಶೇಕರಣಾ ಸಾಮರ್ಥ್ಯವು 1.5 TB ಆಗಿದ್ದು, ಬ್ಲ್ಯಾಕ್ ಕಲರ್‌ನಲ್ಲಿ ಲಭ್ಯವಿದೆ. ಇ ಕಾಮರ್ಸ್ ಆನ್‌ಲೈನ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇದರ ದರವು 4,379ರೂ.ಗಳು ಆಗಿದೆ.

Best Mobiles in India

English summary
Here we list few top storage devices that you can consider buying.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+