ಸ್ವಯಂಚಾಲಿತ ವಾಹನಕ್ಕಾಗಿಯೇ ಸೃಷ್ಟಿಯಾಗಿದೆ ಅದ್ಬುತ ಪ್ರೊಸೆಸರ್!!
ಈವರೆಗೂ ಯಾವುದೇ ಸ್ವಯಂಚಾಲಿಕ ಕಾರು ಸಂಪೂರ್ಣವಾಗಿ ತಜ್ಞರು ಅಂದುಕೊಂಡಂತೆ ಸಂಪೂರ್ಣ ಸ್ವಯಂಚಾಲನೆಯನ್ನು ನಡೆಸಲು ಯಶಸ್ವಿಯಾಗಿಲ್ಲ. ಆದರೆ, ಅದಕ್ಕಾಗಿ ಹೆಚ್ಚು ದಿವಸ ಕಾಯುವ ಅಗತ್ಯತೆ ನಮಗಿಲ್ಲ.!
ಚಾಲಕರಹಿತ ಕಾರುಗಳು ಬಳಕೆಗೆ ಬರುತ್ತವೆ ಎಂಬ ಕಾಲ್ಪನಿಕ ಮಾದರಿಗಳನ್ನು ನೀವು ನೋಡಿರುತ್ತೀರಾ. ಆದರೆ, ಈವರೆಗೂ ಯಾವುದೇ ಸ್ವಯಂಚಾಲಿಕ ಕಾರು ಸಂಪೂರ್ಣವಾಗಿ ತಜ್ಞರು ಅಂದುಕೊಂಡಂತೆ ಸಂಪೂರ್ಣ ಸ್ವಯಂಚಾಲನೆಯನ್ನು ನಡೆಸಲು ಯಶಸ್ವಿಯಾಗಿಲ್ಲ. ಆದರೆ, ಅದಕ್ಕಾಗಿ ಹೆಚ್ಚು ದಿವಸ ಕಾಯುವ ಅಗತ್ಯತೆ ನಮಗಿಲ್ಲ.!
ಹೌದು, ಎನ್‍ವಿಡಿಯಾ ಹೊರತಂದಿರುವ 'ಎಕ್ಸವಿಯರ್ ಪ್ರೊಸೆಸರ್' ಚಾಲಕರಹಿತ ಕಾರುಗಳ ಬಹುಮುಖ್ಯ ಶಕ್ತಿಯಾಗಿ ತೋರುತ್ತಿದೆ. ಎಕ್ಸವಿಯರ್ ಪ್ರೊಸೆಸರ್ ಪ್ರೊಸೆಸರ್ ಬಳಕೆಯಿಂದ ಕೆಲವೇ ತಿಂಗಳಲ್ಲಿ ಸ್ವಯಂ ಚಾಲಿತ ವಾಹನಗಳು ಸಾರ್ವಜನಿಕ ಬಳಕೆಗೆ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಸ್ವಯಂಚಾಲಿಕ ಕಾರು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.!!

ಕಾರಿನ ಮೆದುಳಿನಂತೆ ಕಾರ್ಯನಿರ್ವಹಿಸುವ 'ಎಕ್ಸವಿಯರ್ ಪ್ರೊಸೆಸರ್' 900 ಕೋಟಿ ಟ್ರಾನ್ಸಿಸ್ಟರ್‌ಗಳನ್ನು ಹೊಂದಿದ್ದು, 8 ಕೋರ್, 512-ಕೋರ್ ಗ್ರಾಫಿಕಲ್ ಪ್ರೊಸೆಸಿಂಗ್ ಯುನಿಟ್(ಜಿಪಿಯು), 8ಕೆ ಎಚ್‍ಡಿಆರ್ ವಿಡಿಯೊ ಪ್ರೊಸೆಸ್ ಮಾಡುವ ಸಾಮರ್ಥ್ಯ ಹಾಗೂ ಅರ್ಥೈಸಿಕೊಳ್ಳುವ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಲಾಗಿದೆ.!!
ಹಾಗಾಗಿ, ರಾಡಾರ್, ಲಿಡಾರ್, ಕ್ಯಾಮೆರಾ ಮತ್ತು ಅಲ್ಟ್ರಾಸಾನಿಕ್ ಸೆನ್ಸರ್‌ಗಳಿಂದ ಅತ್ಯುತ್ತಮ ಮಾಹಿತಿ ಗ್ರಹಿಸಿ 'ಎಕ್ಸವಿಯರ್ ಪ್ರೊಸೆಸರ್' ವಾಹನವನ್ನು ಸ್ವಯಂ ಚಾಲಿತಗೊಳಿಸುತ್ತದೆ. ಸ್ಟೀರಿಂಗ್ ವೀಲ್ ಕೂಡ ಅಗತ್ಯವಿಲ್ಲದ ಉನ್ನತ ಮಟ್ಟದ ಸ್ವಯಂ ಚಾಲಿತ ವಾಹನದಲ್ಲಿಯೂ ಈ ತಂತ್ರಜ್ಞಾನದ ಅಳವಡಿಕೆ ಇದರಿಂದ ಸಾಧ್ಯ ಎನ್ನಲಾಗಿದೆ.!!

ಈಗಾಗಲೇ ಟೆಸ್ಲಾದ 'ಎಸ್' ಮಾದರಿ ಸ್ವಯಂ ಚಾಲಿತ ಕಾರುಗಳಲ್ಲಿ ಎನ್‍ವಿಡಿಯಾ ಚಿಪ್ ಅನ್ನು ಬಳಕೆ ಮಾಡಲಾಗಿದೆ. ಇನ್ನು ಪೋಕ್ಸ್‌ವ್ಯಾಗನ್ ಮತ್ತು ಹ್ಯುಂಡೈ ಸಂಸ್ಥೆಗಳೊಂದಿಗೂ ಎನ್‍ವಿಡಿಯಾ ಒಪ್ಪಂದ ಮಾಡಿಕೊಂಡಿದ್ದು, ಶೀಘ್ರದಲ್ಲಿ ವಿನೂತನ ಮಾದರಿ ಸ್ವಯಂ ಚಾಲಿತ ಕಾರು, ಬಸ್ ಮಾರುಕಟ್ಟೆ ಪ್ರವೇಶಿಸಲಿವೆ ಎಂದು ಹೇಳಬಹುದು.!!

ಓದಿರಿ: ಶಾಶ್ವತವಾಗಿ ಫೇಸ್‌ಬುಕ್ ಅಕೌಂಟ್ ಡಿಲೀಟ್ ಮಾಡುವುದು ಹೇಗೆ?


Click it and Unblock the Notifications








