Home
Gadgets

ನು ರಿಪಬ್ಲಿಕ್ ಸೈಬರ್‌ಸ್ಟಡ್ ಸ್ಪಿನ್ ವಿಮರ್ಶೆ: ಬಜೆಟ್‌ ಬೆಲೆಯಲ್ಲಿ ಸ್ಟೈಲಿಶ್‌ ಇಯರ್‌ಬಡ್ಸ್‌!

ವಿಶೇಷ ವಿನ್ಯಾಸದ ಆಡಿಯೋ ಉತ್ಪನ್ನಗಳನ್ನು ಪರಿಚಯಿಸಿ ಮಾರುಕಟ್ಟೆಗೆಯಲ್ಲಿ ಗುರುತಿಸಿಕೊಂಡಿರುವ 'ನು ರಿಪಬ್ಲಿಕ್' ( Nu Republic ) ಸಂಸ್ಥೆಯು ಹೊಸದಾಗಿ ಸೈಬರ್‌ಸ್ಟಡ್ ಸ್ಪಿನ್, ಫಿಡ್ಜೆಟ್ ಸ್ಪಿನ್ನರ್‌ (Cyberstud SPIN fidget spinner) ಇಯರ್‌ಬಡ್ಸ್‌ ಡಿವೈಸ್‌ ಲಾಂಚ್ ಮಾಡಿದೆ. ಈ ಇಯರ್‌ಬಡ್ಸ್‌ 360 ಡಿಗ್ರಿ ತಿರುಗುವ ರಚನೆ ಪಡೆದಿದ್ದು, ಜೊತೆಗೆ ಕೇಸ್‌ನಿಂದ ಇಯರ್‌ಬಡ್‌ ತೆಗೆಯುವಾಗ ಹಾಗೂ ಇಡುವಾಗ ಕತ್ತಿ ಜಳಪಿಸಿದ (Swoosh Sound) ಶಬ್ದ ಕೇಳಿಬರುತ್ತದೆ. ಇಂತಹ ವಿಭಿನ್ನ ರಚನೆ ಇರುವ ಈ ಡಿವೈಸ್‌ ಕಾರ್ಯ ವೈಖರಿ ಹೇಗೆ ಅಂತೀರಾ?

ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ನೀಡಿರುವ ನು ರಿಪಬ್ಲಿಕ್‌ನ ಸೈಬರ್‌ಸ್ಟಡ್ ಸ್ಪಿನ್ ಫಿಡ್ಜೆಟ್ ಸ್ಪಿನ್ನರ್‌ ಇಯರ್‌ಬಡ್ಸ್‌ ಡಿವೈಸ್‌ಗಳು ಡ್ಯುಯಲ್ ಮೋಡ್‌ ಆಯ್ಕೆ, ಮೆಟಲ್‌ ರಚನೆ ಸೇರಿದಂತೆ ಗೇಮಿಂಗ್‌ಗೆ ಪೂರಕವಾಗಿಯೂ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನು ತಿರುಗುವ ರಚನೆ ಹೊಂದಿರುವುದೇ ಇದರ ಪ್ರಮುಖ ಹೈಲೈಟ್ಸ್‌ ಎಂದು ಹೇಳಬಹುದು. ಈ ಡಿವೈಸ್‌ ರೆಡ್‌ ಕಲರ್‌ ಪಡೆದಿದ್ದು, ಹಾಗೆಯೇ ಎಲ್‌ಇಡಿ ಲೈಟ್‌ ಇಂಡಿಕೇಶನ್‌ ಸಹ ಹೊಂದಿದೆ.

ನು ರಿಪಬ್ಲಿಕ್ ಸೈಬರ್‌ಸ್ಟಡ್ ಸ್ಪಿನ್ ವಿಮರ್ಶೆ: ಬಜೆಟ್‌ ಬೆಲೆಗೆ ಸ್ಟೈಲಿಶ್‌ ಡಿವೈಸ

ದೀರ್ಘಾವಧಿಯ ಬ್ಯಾಟರಿ ಬ್ಯಾಕ್‌ಅಪ್‌

ಸೈಬರ್‌ಸ್ಟಡ್ ಸ್ಪಿನ್, ಫಿಡ್ಜೆಟ್ ಸ್ಪಿನ್ನರ್‌ ಡಿವೈಸ್‌ ಗಮನ ಸೆಳೆಯುವ ಅಂಶಗಳಲ್ಲಿ ಅದರ ಬ್ಯಾಟರಿ ಆಯ್ಕೆ ಕೂಡಾ ಸೇರಿದೆ. ಈ ಡಿವೈಸ್‌ ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ, 70 ಗಂಟೆಗಳ ಪ್ಲೇ ಬ್ಯಾಕ್‌ ಬ್ಯಾಟರಿ ಬಾಳಿಕೆಯನ್ನು ಇದು ಒದಗಿಸುತ್ತದೆ. ಹಾಗೆಯೇ ಇದು 310 ಗಂಟೆಗಳ ಸ್ಟ್ಯಾಂಡ್ ಬೈ ಟೈಮ್‌ ಪಡೆದಿದ್ದು, ಬಳಕೆದಾರರಿಗೆ ಪದೇ ಪದೇ ಚಾರ್ಜಿಂಗ್ ಮಾಡುವ ಕಿರಿ ಕಿರಿ ಇಲ್ಲದಂತೆ ಮಾಡುತ್ತದೆ. ಹಾಗೆಯೇ ಚಾರ್ಜಿಂಗ್‌ ಸೂಚಿಸಲು ಲೈಟ್‌ ಇಂಡಿಕೇಶನ್ ಸೌಲಭ್ಯ ಸಹ ಇದೆ.

ಆಕರ್ಷಕ ಫೀಚರ್ಸ್‌ ಸೌಲಭ್ಯಗಳು

ಸೈಬರ್‌ಸ್ಟಡ್ ಸ್ಪಿನ್, ಫಿಡ್ಜೆಟ್ ಸ್ಪಿನ್ನರ್‌ ಡಿವೈಸ್‌ 20Hz ನಿಂದ 20kHz ವರೆಗಿನ ಶ್ರೇಣಿಯನ್ನು ಪಡೆದಿದ್ದು, ಬಳಕೆದಾರರಿಗೆ ಇದು ಉತ್ತಮ ಆಡಿಯೋ ಅನುಭವವನ್ನು ನೀಡುತ್ತದೆ. ಇದಲ್ಲದೇ ಬಳಕೆದಾರರು ಗೇಮಿಂಗ್ ಸೆಷನ್‌ನಲ್ಲಿ ಇದ್ದಾಗಲೂ ಸಹ ಮ್ಯೂಸಿಕ್‌ ಮೋಡ್‌ ಮೂಲಕ ಸಂಗೀತ ಕೇಳಬಹುದಾಗಿದೆ. ಈ ಇಯರ್‌ಬಡ್‌ಗಳು X Bass ತಂತ್ರಜ್ಞಾನ ಮತ್ತು ENC ಮೋಡ್ ಕೂಡಾ ಒಳಗೊಂಡಿದ್ದು, ಆಡಿಯೋ ಸ್ಪಷ್ಟತೆ ಉತ್ತಮ ಎನಿಸುತ್ತದೆ.

ಗೇಮಿಂಗಿಗೂ ಸಹ ಪೂರಕ

ನೂತನ ಸೈಬರ್‌ಸ್ಟಡ್ ಸ್ಪಿನ್, ಫಿಡ್ಜೆಟ್ ಸ್ಪಿನ್ನರ್‌ ಇಯರ್‌ಬಡ್ಸ್‌ ಡಿವೈಸ್‌ ಬಳಕೆದಾರರಿಗೆ ಅತ್ಯುತ್ತಮ ಗೇಮಿಂಗ್ ಅನುಭವ ನೀಡಲು 40ms ಕಡಿಮೆ ಲೇಟೆನ್ಸಿ ಆಯ್ಕೆ ಒದಗಿಸಿದ್ದು, ಇದು ಗೇಮ್‌ ಪ್ರಿಯರಿಗೆ ಉತ್ತಮ ಎನಿಸುತ್ತದೆ. ಇನ್ನು ಈ ಇಯರ್‌ಬಡ್‌ಗಳು ಸ್ಪ್ಲಾಶ್ ಮತ್ತು ಬೆವರು ನಿರೋಧಕ ರಚನೆ ಹೊಂದಿರುವುದು ಸಹ ಹೈಲೈಟ್‌ ಆಗಿದೆ. ಅಲ್ಲದೇ ಇದು ಡ್ಯುಯಲ್ ಮೋಡ್ ಫೀಚರ್‌ ಅನ್ನು ಒಳಗೊಂಡಿದೆ. ಈ ಆಯ್ಕೆ ನೆರವಿನಿಂದ ಒಂದೇ ವೇಳೆ ಗೇಮ್‌ ಮೋಡ್‌ ಮತ್ತು ಮ್ಯೂಸಿಕ್‌ ಮೋಡ್‌ ಬಳಸಲು ಸಾಧ್ಯವಾಗುತ್ತದೆ.

ಬೆಲೆ ಹಾಗೂ ಲಭ್ಯತೆ

ಅಂದಹಾಗೆ ನು ರಿಪಬ್ಲಿಕ್‌ ಸೈಬರ್‌ಸ್ಟಡ್ ಸ್ಪಿನ್, ಫಿಡ್ಜೆಟ್ ಸ್ಪಿನ್ನರ್‌ ಇಯರ್‌ಬಡ್ಸ್‌ 2499 ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಆಸಕ್ತ ಖರೀದಿದಾರರು ಅಧಿಕೃತ ನು ರಿಪಬ್ಲಿಕ್‌ ವೆಬ್‌ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ.

ಕೊನೆಯ ಮಾತು

ನು ರಿಪಬ್ಲಿಕ್‌ ಸಂಸ್ಥೆಯ ನೂತನ ಸೈಬರ್‌ಸ್ಟಡ್ ಸ್ಪಿನ್, ಫಿಡ್ಜೆಟ್ ಸ್ಪಿನ್ನರ್‌ ಇಯರ್‌ಬಡ್ಸ್‌ ಡಿವೈಸ್‌ ಬಜೆಟ್‌ ಬೆಲೆಯನ್ನು ಹೊಂದಿದೆ. ಆಡಿಯೋ ಗುಣಮಟ್ಟ, ಮೈಕ್‌ ಸಂಭಾಷಣೆಯ ಸ್ಪಷ್ಟತೆ ಉತ್ತಮ ಇದೆ. ತನ್ನ ಬೆಲೆ ಶ್ರೇಣಿಯಲ್ಲಿ ಗುಣಮಟ್ಟ ನೀಡುವ ಪ್ರಯತ್ನ ಮಾಡಿದೆ. ಇನ್ನು ಇದು ಗೇಮಿಂಗ್‌ ಹಾಗೂ ವಿಭಿನ್ನ ಟೆಕ್‌ ಉತ್ಪನ್ನಗಳ ಕ್ರೇಜ್‌ ಇರುವ ಗ್ರಾಹಕರನ್ನು ಹೆಚ್ಚು ಆಕರ್ಷಿಸುವಂತೆ ಇದರ ರಚನೆ ಪಡೆದಿದೆ.

Best Mobiles in India

English summary
Nu Republic Cyberstud SPIN review: A Unique Earbuds at budget friendly price. check other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+