Home
Gadgets

ನು ರಿಪಬ್ಲಿಕ್ ಸೈಬರ್ಸ್ಟಡ್ X2 ವಿಮರ್ಶೆ: ಭಿನ್ನ ಡಿಸೈನ್‌ ಜೊತೆ ಬಿಗ್ ಬ್ಯಾಟರಿ ಇರುವ ಇಯರ್‌ಬಡ್ಸ್‌!

ವಿಭಿನ್ನ ವಿನ್ಯಾಸದ ಆಡಿಯೋ ಉತ್ಪನ್ನಗಳ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ 'ನು ರಿಪಬ್ಲಿಕ್' ( Nu Republic ) ಕಂಪನಿಯು ಇತ್ತೀಚಿಗೆ ನೂತನವಾಗಿ ನು ರಿಪಬ್ಲಿಕ್ ಸೈಬರ್ಸ್ಟಡ್ X2 (Nu Republic Cyberstud X2) ಇಯರ್‌ಬಡ್ಸ್‌ ಡಿವೈಸ್‌ ಲಾಂಚ್ ಮಾಡಿದೆ. ಈ ಇಯರ್‌ಬಡ್ಸ್‌ ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದು ಗೇಮರುಗಳ, ಮ್ಯೂಸಿಕ್‌ ಪ್ರಿಯರಿಗೆ ಹಾಗೂ ತಂತ್ರಜ್ಞಾನ ಪ್ರಿಯರಿಗೆ ಸಖತ್ ಗಮನ ಸೆಳೆದಿದೆ. ಇಂತಹ ವಿಭಿನ್ನ ಡಿಸೈನ್‌ ರಚನೆ ಪಡೆದಿರುವ ಈ ಇಯರ್‌ಬಡ್ ಡಿವೈಸ್‌ ಕಾರ್ಯ ವೈಖರಿ ಹೇಗೆ ಇದೆ ಅಂತೀರಾ?

ಮಾರುಕಟ್ಟೆಗೆ ನೂತನವಾಗಿ ಲಗ್ಗೆ ಇಟ್ಟಿರುವ ನು ರಿಪಬ್ಲಿಕ್ ಸೈಬರ್ಸ್ಟಡ್ X2 ಇಯರ್‌ಬಡ್ಸ್‌ ಡಿವೈಸ್ ಲಾಕೆಟ್‌ ಮಾದರಿಯ ಲುಕ್‌ ಪಡೆದಿದ್ದು, ಇದರ ಜೊತೆಗೆ ಚೈನ್‌ ಸಹ ಪಡೆದುಕೊಂಡಿದೆ. ಹೀಗಾಗಿ ಬಳಕೆದಾರರು ಇದನ್ನು ಸುಲಭವಾಗಿ ಕೊರಳಿಗೆ ಧರಿಸಬಹುದು. ಇದು ಯುವ ಸಮೂಹವನ್ನು ಆಕರ್ಷಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿ ಕಾಣಿಸಿಕೊಂಡಿದೆ. ಹಾಗೆಯೇ ಎಲ್‌ಇಡಿ ಲೈಟ್‌ ಇಂಡಿಕೇಶನ್‌ ಸಹ ಹೊಂದಿದೆ.

ನು ರಿಪಬ್ಲಿಕ್ ಸೈಬರ್ಸ್ಟಡ್ X2: ಭಿನ್ನ ಡಿಸೈನ್‌ ಜೊತೆ ಬಿಗ್ ಬ್ಯಾಟರಿ ಇಯರ್‌ಬಡ್ಸ್

ನು ರಿಪಬ್ಲಿಕ್ ಸೈಬರ್ಸ್ಟಡ್ X2 ಡಿವೈಸ್‌ ಗಮನ ಸೆಳೆಯುವ ಅಂಶಗಳಲ್ಲಿ ಅದರ ಬಿಗ್‌ ಬ್ಯಾಟರಿ ಆಯ್ಕೆ ಕೂಡಾ ಸೇರಿದೆ. ಈ ಇಯರ್‌ಬಡ್‌ ಡಿವೈಸ್‌ ಅನ್ನು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ, 70 ಗಂಟೆಗಳ ಪ್ಲೇ ಬ್ಯಾಕ್‌ ಅನ್ನು ಇದು ಒದಗಿಸಲಿದೆ. ದೀರ್ಘ ಬಾಳಿಕೆಯು ಬಳಕೆದಾರರಿಗೆ ಪದೇ ಪದೇ ಚಾರ್ಜಿಂಗ್ ಮಾಡುವ ಸಮಸ್ಯೆ ಇಲ್ಲದಂತೆ ಮಾಡುತ್ತದೆ. ಅಲ್ಲದೇ ಚಾರ್ಜಿಂಗ್‌ ಸೂಚಿಸಲು ಲೈಟ್‌ ಇಂಡಿಕೇಶನ್ ಪಡೆದುಕೊಂಡಿದೆ.

ನು ರಿಪಬ್ಲಿಕ್ ಸೈಬರ್ಸ್ಟಡ್ X2 ಡಿವೈಸ್‌ 40ms ಅಲ್ಟ್ರಾ ಕಡಿಮೆ ಲೇಟೆನ್ಸಿ ಸೌಲಭ್ಯ ಪಡೆದಿದೆ. ಇದು ವೇಗದ ಮಾದರಿಯ ಗೇಮಿಂಗ್‌ಗೆ ಪೂರಕವಾದ ಅನುಭವ ನೀಡುತ್ತದೆ. ಹಾಗೆಯೇ ಇದು ಡ್ಯುಯಲ್‌ ಮೋಡ್‌ ಆಯ್ಕೆ ಪಡೆದಿದ್ದು, ಬಳಕೆದಾರರು ಮ್ಯೂಸಿಕ್‌ ಹಾಗೂ ಗೇಮಿಂಗ್ ಮೋಡ್‌ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದೆ. ಹಾಗೆಯೇ ಈ ಇಯರ್‌ಬಡ್‌ಗಳು X Bass ತಂತ್ರಜ್ಞಾನ ಜೊತೆಗೆ ENC ಮೋಡ್ ಸಹ ಪಡೆದಿದ್ದು, ಸ್ಪಷ್ಟ ಆಡಿಯೋ ಅನುಭವ ಪಡೆಯಬಹುದು.

ನು ರಿಪಬ್ಲಿಕ್ ಸೈಬರ್ಸ್ಟಡ್ X2 ಡಿವೈಸ್‌ ಇಯರ್‌ಬಡ್‌ಗಳು ಸ್ಪ್ಲಾಶ್ ಮತ್ತು ಬೆವರು ನಿರೋಧಕ ರಚನೆ ಪಡೆದುಕೊಂಡಿರುವುದು ಸಹ ಹೈಲೈಟ್‌ ಅಂಶಗಳಲ್ಲಿ ಒಂದಾಗಿದೆ. ಅಲ್ಲದೇ ಸ್ಟೈಲಿಶ್‌ ಡಿಸೈನ್ ಪಡೆದಿರುವ ಇದು ಬ್ಲೂಟೂತ್ 5.1 ಸೌಲಭ್ಯ. USB-C ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಸಹ ಪಡೆದುಕೊಂಡಿದೆ.

ಬೆಲೆ ಎಷ್ಟು ಹಾಗೂ ಲಭ್ಯತೆ

ಇನ್ನು ನು ರಿಪಬ್ಲಿಕ್ ಸಂಸ್ಥೆಯು ನೂತನ ಸೈಬರ್ಸ್ಟಡ್ X2 ಡಿವೈಸ್‌ ಇಯರ್‌ಬಡ್‌ಗಳು 2499 ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಈ ಡಿವೈಸ್‌ ಖರೀದಿಸಲು ಆಸಕ್ತಿ ಇರುವ ಗ್ರಾಹಕರು ಅಧಿಕೃತ ನು ರಿಪಬ್ಲಿಕ್‌ ವೆಬ್‌ಸೈಟ್‌ ಮೂಲಕ ಖರೀದಿ ಮಾಡಲು ಅವಕಾಶ ಇದೆ.

ಕೊನೆಯ ಮಾತು

ನು ರಿಪಬ್ಲಿಕ್ ಸೈಬರ್ಸ್ಟಡ್ X2 ಡಿವೈಸ್‌ ಗ್ರಾಹಕ ಸ್ನೇಹಿ ದರದಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಇದರ ಆಡಿಯೋ ಕ್ವಾಲಿಟಿ, ಮೈಕ್‌ ಸ್ಪಷ್ಟತೆ ಉತ್ತಮ ಎನಿಸಿದೆ. ತನ್ನ ವಿಭಾಗದಲ್ಲೇ ಅತ್ಯುತ್ತಮ ಆಯ್ಕೆಗಳನ್ನು ಒದಗಿಸುವ ಪ್ರಯತ್ನ ಮಾಡಿದೆ. ಇನ್ನು ಇದು ಮುಖ್ಯವಾಗಿ ಯುವಸಮೂಹವನ್ನು ಹಾಗೂ ವಿಶೇಷ ಮಾದರಿಯ ಟೆಕ್‌ ಉತ್ಪನ್ನಗಳ ಬಗ್ಗೆ ಹೆಚ್ಚು ಆಸಕ್ತಿ ಇರುವ ಗ್ರಾಹಕರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ ಎನ್ನಬಹುದು.

Best Mobiles in India

English summary
Nu Republic Cyberstud X2 Review. Stylish earbuds at budget price tag. Check out other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+