ಸೈಬೋಟ್ರಾನ್ ಸ್ಪಿನ್ ಪವರ್ ಬ್ಯಾಂಕ್ ವಿಮರ್ಶೆ: ಬಜೆಟ್ ಬೆಲೆಗೆ ಸ್ಟೈಲಿಶ್ ಲುಕ್‌ನ ಪವರ್ ಬ್ಯಾಂಕ್!
ಸ್ಪೆಷಲ್ ಡಿಸೈನ್ ರಚನೆಯ ಆಡಿಯೋ ಉತ್ಪನ್ನಗಳನ್ನು ಪರಿಚಯಿಸಿ ಟೆಕ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ 'ನು ರಿಪಬ್ಲಿಕ್' ( Nu Republic ) ಸಂಸ್ಥೆಯು ಹೊಸದಾಗಿ ಸೈಬೋಟ್ರಾನ್ ಸ್ಪಿನ್, 10,000mAh ವೈರ್‌ಲೆಸ್ ಚಾರ್ಜಿಂಗ್ ಪವರ್ ಬ್ಯಾಂಕ್ (Cybotron Spin power bank) ಡಿವೈಸ್ ಅನ್ನು ಬಿಡುಗಡೆ ಮಾಡಿದೆ. ಈ ಪವರ್ ಬ್ಯಾಂಕ್ ವಿಶಿಷ್ಠ ರಚನೆಯ ಮೂಲಕ ಈಗ ಗ್ರಾಹಕ ಗಮನ ಸೆಳೆದಿದೆ. ಇನ್ನು ಈ ಡಿವೈಸ್ ಕಾರ್ಯ ವೈಖರಿ ಹೇಗೆ ಅಂತೀರಾ?
ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ನೀಡಿರುವ ನು ರಿಪಬ್ಲಿಕ್‌ನ ಪವರ್ ಬ್ಯಾಂಕ್ ಸಾಧನವು ಬ್ಯಾಟರಿ ಮಟ್ಟ ತಿಳಿಸಲು ಚಿಕ್ಕದಾದ ಎಲ್‌ಇಡಿ ಡಿಸ್‌ಪ್ಲೇ ರಚನೆ ಪಡೆದಿದೆ. ಹಾಗೆಯೇ ಪಕ್ಕದಲ್ಲಿ ಪವರ್ ಬಟನ್ ಆಯ್ಕೆ ಸಹ ನೀಡಿದೆ. ಅಲ್ಲದೇ ಫಿಡ್ಜೆಟ್ ಸ್ಪಿನ್ನರ್ ರಚನೆ ಹಾಗೂ ವೈಯರ್ ಲೆಸ್ ಚಾರ್ಜಿಂಗ್ ಸೌಲಭ್ಯ ಪಡೆದಿರುವುದು ಇದರ ಹೈಲೈಟ್ ಅಂಶಗಳಲ್ಲಿ ಒಂದಾಗಿವೆ. ಇನ್ನುಳಿದಂತೆ ಈ ಡಿವೈಸ್‌ನ ಕಾರ್ಯ ವೈಖರಿ ಬಗ್ಗೆ ಮುಂದೆ ನೋಡೋಣ ಬನ್ನಿರಿ.

Nu Republic ಸಂಸ್ಥೆಯ ಈ ಸ್ಪೆಷಲ್ ಪವರ್ ಬ್ಯಾಂಕ್ ಸಣ್ಣ ಆಯತಾಕಾರದ ವಿನ್ಯಾಸವನ್ನು ಕರ್ವ್ಡ್ ರಚನೆ ಪಡೆದಿದೆ. ಅಲ್ಲದೇ ಇದು ಪ್ಲಾಸ್ಟಿಕ್ ಬಾಡಿಯನ್ನು ಹೊಂದಿದ್ದು, ಮ್ಯಾಟ್ ಫಿನಿಶ್ ಇದರ ಲುಕ್ ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಸಣ್ಣ ಪುಟ್ಟ ಗೀರುಗಳಿಂದ ಇದು ರಕ್ಷಣೆ ಪಡೆದಿದೆ ಎನ್ನಬಹುದು. ಇನ್ನು ಇದರ ಮುಂಭಾಗದಲ್ಲಿ ಫಿಡ್ಜೆಟ್ ಸ್ಪಿನ್ನರ್ (fidget spinner) ಮಾದರಿಯ ವಿನ್ಯಾಸವು ಪವರ್ ಬ್ಯಾಂಕ್‌ನ ಪ್ಲಸ್ ಪಾಯಿಂಟ್ ಆಗಿದೆ.
ಹಾಗೆಯೇ ಈ ಪವರ್ ಬ್ಯಾಂಕ್‌ನ ಮುಂಭಾಗದಲ್ಲಿ ಸಣ್ಣ LED ಡಿಸ್‌ಪ್ಲೇ ರಚನೆ ಸಹ ನೀಡಲಾಗಿದ್ದು, ಇದು ಪ್ರಸ್ತುತ ಬ್ಯಾಟರಿ ಮಟ್ಟ ಎಷ್ಟು ಉಳಿದಿದೆ ಎಂಬುದನ್ನು ತೋರಿಸುತ್ತದೆ. ಹಾಗೆಯೇ ಸ್ಕ್ರೀನ್ ಪಕ್ಕದಲ್ಲಿರುವ ಒಂದು ಪವರ್ ಬಟನ್ ಇದ್ದು, ಅದನ್ನು ಬಳಕೆದಾರರು ಒತ್ತಿದಾಗ ನೈಜ ಸಮಯದಲ್ಲಿ ಚಾರ್ಜಿಂಗ್ ಸ್ಟೇಟಸ್ ಅನ್ನು ತೋರಿಸುತ್ತದೆ. ವೈರ್‌ಲೆಸ್ ಹಾಗೂ ವಾಯರ್ಡ್ ಚಾರ್ಜಿಂಗ್ ಮಾದರಿಯ ಆಯ್ಕೆಗಳು ಇವೆ.
ಇದು 10000mAh ಸಾಮರ್ಥ್ಯದ ಪವರ್ ಬ್ಯಾಂಕ್ ಆಗಿದ್ದು, ಹೆಚ್ಚಿನ ಬ್ಯಾಟರಿ ಬ್ಯಾಕ್‌ಅಪ್ ಒದಗಿಸಲು ಸಾಕಷ್ಟು ಶಕ್ತಿಯುತವಾಗಿದೆ. ಇದರ ಜೊತೆಗೆ ಇದು 22.5W ವೇಗದ ಚಾರ್ಜ್ ಸೌಲಭ್ಯ ಸಹ ಪಡೆದುಕೊಂಡಿದ್ದು, ಬಳಕೆದಾರರು ತಮ್ಮ ಫೋನಿಗೆ ತ್ವರಿತವಾಗಿ ಚಾರ್ಜ್ ಪಡೆಯಬಹುದಾಗಿದೆ. ಹಾಗೆಯೇ ಐಫೋನ್ ಮತ್ತು ಇತರ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯದ ಡಿವೈಸ್‌ಗಳಿಗೆ ಈ ಪವರ್ ಬ್ಯಾಂಕ್ ಮೂಲಕ ವೈರ್‌ಲೆಸ್ ಚಾರ್ಜ್ ಮಾಡಬಹುದು.
ಈ ಪವರ್ ಬ್ಯಾಂಕ್ LED ಡಿಸ್‌ಪ್ಲೇ ಪಡೆದಿದ್ದು, ಇದರ ಮೂಲಕ ರಿಯಲ್ ಟೈಮ್ ಬ್ಯಾಟರಿ ಮಟ್ಟ ಮತ್ತು ಚಾರ್ಜಿಂಗ್ ಸ್ಟೇಟಸ್ ಅನ್ನು ತಿಳಿಯಬಹುದಾಗಿದೆ. ಚಾರ್ಜಿಂಗ್ ಅನುಭವಕ್ಕೆ ಇದು ಪೂರಕ ಎನಿಸುತ್ತದೆ. ಈ ಡಿವೈಸ್‌ನ ಇನ್ನೊಂದು ವಿಶೇಷವೆಂದರೆ, ಇದು ಡ್ಯುಯಲ್ ಚಾರ್ಜಿಂಗ್ ಸಾಮರ್ಥ್ಯ ಪಡೆದಿದೆ. ಇದರಲ್ಲಿ ಎರಡು ಡಿವೈಸ್‌ಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದಾಗಿದೆ.
ಇದು ಕಾಂಪ್ಯಾಕ್ಟ್ ರಚನೆ ಪಡೆದಿದ್ದು, ಹಾಗೆಯೇ ಪೋರ್ಟಬಲ್ ಮಾದರಿಯಲ್ಲಿ ಇದೆ. ಇದರೊಂದಿಗೆ ಇದು ಹಗುರವಾಗಿದ್ದು, ಬಳಕೆದಾರರಿಗೆ ಟ್ರಾವೆಲ್ ಫ್ರೇಂಡ್ಲಿ ಡಿಸೈನ್ ಎನಿಸಲಿದೆ. ಬಳಕೆದಾರರು ಇದನ್ನು ತಮ್ಮ ಪಾಕೆಟ್‌ನಲ್ಲಿ ಸುಲಭವಾಗಿ ಇಟ್ಟುಕೊಳ್ಳಬಹುದಾಗಿದೆ. ಇನ್ನು ಈ ಪವರ್ ಬ್ಯಾಂಕ್ 68×20×104mm ಅನ್ನು ಅಳೆತೆಯನ್ನು ಪಡೆದಿದ್ದು, ಹಾಗೆಯೇ 185 ಗ್ರಾಂಗಳಷ್ಟು ಹಗುರ ಆಗಿದೆ.
ನು ರಿಪಬ್ಲಿಕ್ ಸಂಸ್ಥೆಯ ಈ ಪವರ್ ಬ್ಯಾಂಕ್ ಟೈಪ್ C ಪೋರ್ಟ್ ಇನ್‌ಪುಟ್/ಔಟ್‌ಪುಟ್ ಆಯ್ಕೆ ಪಡೆದಿದೆ. ಅಲ್ಲದೇ ಇದು ಟೈಪ್ L ಪೋರ್ಟ್ (ಇನ್‌ಪುಟ್) ಇದ್ದು, ಇದು ಪವರ್ ಬ್ಯಾಂಕ್‌ಗಾಗಿ ಚಾರ್ಜಿಂಗ್ ಇನ್‌ಪುಟ್ ಅನ್ನು ನೀಡುತ್ತದೆ. ಹಾಗೆಯೇ USB-A ಪೋರ್ಟ್ (ಔಟ್‌ಪುಟ್) ಇದ್ದು, ಈ ಆಯ್ಕೆಯು ಸಾರ್ವತ್ರಿಕ ಹೊಂದಾಣಿಕೆಯನ್ನು ಒದಗಿಸುವ ಡಿವೈಸ್‌ಗಳಿಗೆ ಚಾರ್ಜ್ ಸೌಲಭ್ಯ ನೀಡುತ್ತದೆ. ಅಲ್ಲದೇ ವೈರ್‌ಲೆಸ್ ಚಾರ್ಜಿಂಗ್ ಸಹ ಇದೆ.
ಬೆಲೆ ಮತ್ತು ಲಭ್ಯತೆ
ನು ರಿಪಬ್ಲಿಕ್ ಸಂಸ್ಥೆಯ ವೈರ್‌ಲೆಸ್ ಚಾರ್ಜಿಂಗ್ ಪವರ್ ಬ್ಯಾಂಕ್ (Cybotron Spin power bank) 2,499ರೂ. ಗಳ ಬೆಲೆಯಲ್ಲಿ ಪಡೆದಿದೆ. ಇನ್ನು ಈ ಡಿವೈಸ್ ಆಯ್ದ ನಗರಗಳಲ್ಲಿ ಬ್ಲಿಂಕಿಟ್ (Blinkit) ಮೂಲಕ ಲಭ್ಯವಿದೆ. ಅಲ್ಲದೇ ನು ರಿಪಬ್ಲಿಕ್‌ನ (Nu Republic) ಅಧಿಕೃತ ವೆಬ್‌ಸೈಟ್ ಮೂಲಕ ಸಹ ಖರೀದಿ ಮಾಡಬಹುದು.
ಕೊನೆಯ ಮಾತು
ನು ರಿಪಬ್ಲಿಕ್ ಸಂಸ್ಥೆಯ ವೈರ್‌ಲೆಸ್ ಚಾರ್ಜಿಂಗ್ ಪವರ್ ಬ್ಯಾಂಕ್ 10,000mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿರುವುದು ಹಾಗೂ ಫಿಡ್ಜೆಟ್ ಸ್ಪಿನ್ನರ್ (fidget spinner) ಡಿಸೈನ್ ಹೊಂದಿರುವುದು ಆಕರ್ಷಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಈ ಡಿವೈಸ್ USB Type-A ಹಾಗೂ Type-C ಆಯ್ಕೆಗಳನ್ನು ಪಡೆದಿರುವುದು ಪ್ಲಸ್ ಪಾಯಿಂಟ್ ಎನಿಸಿದೆ. ಇನ್ನು ಇದರ ಬೆಲೆಯು ಗ್ರಾಹಕ ಸ್ನೇಹಿ ಆಗಿದೆ. ಅದಾಗ್ಯೂ, ಮಾರುಕಟ್ಟೆಯಲ್ಲಿ ಇತರೆ ಅಗ್ಗದ ಬೆಲೆಯ ಪವರ್ ಬ್ಯಾಂಕ್‌ಗಳಿಗೆ ಹೋಲಿಸಿದಾಗ ಗ್ರಾಹಕರಿಗೆ ಇದು ಸ್ವಲ್ಪ ದುಬಾರಿ ಎನಿಸಬಹುದು.


Click it and Unblock the Notifications








