ಒನ್‌ಪ್ಲಸ್ 'ಬುಲೆಟ್ ವಾಯರ್‌ಲೆಸ್ 2' ಇಯರ್‌ಫೋನಿನ ಕಂಪ್ಲೀಟ್ ರೀವ್ಯೂ!
ಇತ್ತೀಚಿಗೆ ಜನಪ್ರಿಯ ಒನ್‌ಪ್ಲಸ್ ಕಂಪನಿಯು ಬೆಂಗಳೂರಿನಲ್ಲಿ ತನ್ನ ಹೊಸ 'ಬುಲೆಟ್ ವಾಯರ್‌ಲೆಸ್ 2' ಇಯರ್‌ಫೋನ್ ಅನ್ನು ಬಿಡುಗಡೆ ಮಾಡಿ ಮ್ಯೂಸಿಕ್ ಪ್ರಿಯರನ್ನು ಸೆಳೆದಿದೆ. ಈ ವಾಯರ್‌ಲೆಸ್ ಇಯರ್‌ಫೋನ್ ಡಿಸೈನ್ ಗಮನ ಸೆಳೆಯುವಂತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಹುಟ್ಟುಹಾಕಿರುವ ವಾಯಿಸ್ ಕಮಾಂಡ್ ಫೀಚರ್ ಅನ್ನು ಸಹ ಒಳಗೊಂಡಿದೆ. ಹಾಗೆಯೇ ಗ್ರಾಹಕರ ಕೈಗೆಟುವ ಬೆಲೆಯನ್ನು ಹೊಂದಿದೆ.

ಒನ್‌ಪ್ಲಸ್ ಇಯರ್‌ಪೋನ್ ಗೂಗಲ್ ಅಸಿಸ್ಟಂಟ್ ಮತ್ತು ಸಿರಿ ವಾಯಿಸ್ ಕಮಾಂಡ್ ಆಯ್ಕೆಗಳ ಬೆಂಬಲ ಪಡೆದಿದ್ದು, ಒನ್ ಟ್ಯಾಪ್ ಕನೆಕ್ಟ್ ಆಯ್ಕೆ ಇದೆ. ಇದರ ಸೌಂಡ್ ಕ್ವಾಲಿಟಿಯು ಹೈ ಡೆಫ್ನಿಶನ್ ಗುಣಮಟ್ಟದಲ್ಲಿದ್ದು, ಎರಡು ಬಡ್ಸ್‌ಗಳಲ್ಲಿ ಸೌಂಡ್ ಸಮಾಂತರವನ್ನು ಕಾಯ್ದುಕೊಂಡಿದೆ. ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದ್ದು, ಧರಿಸಿದಾಗ ಕಂಫರ್ಟ್ ಎನಿಸುವ ರಚನೆಯನ್ನು ಪಡೆದಿದೆ.

ಈ ಸಾಧನದಲ್ಲಿ ಎರಡು ಮಾಡ್ಯುಲಗಳನ್ನು ನೀಡಲಾಗಿದೆ. ಒಂದರಲ್ಲಿ ಸೌಂಡ್ ನಿಯಂತ್ರಿಸುವ ಬಟನ್‌ಗಳನ್ನು ಮತ್ತು ಪವರ್ ಬಟನ್ ಆಯ್ಕೆಯನ್ನು ಒದಗಿಸಿದ್ದು, ಸುಲಭವಾಗಿ ನಿಯಂತ್ರಿಸಬಹುದು. ಇಯರ್‌ಫೋನ್ ಅನ್ನು ಸುರಕ್ಷಿತವಾಗಿಡಲು ಸಿಲಿಕಾನ್ ಪೌಚ್ ನೀಡಲಾಗಿದೆ. ಒನ್‌ಪ್ಲಸ್ ಬುಲೆಟ್ ವಾಯರ್‌ಲೆಸ್ 2 ಇಯರ್‌ಫೋನ್ ರಚನೆ ಹೇಗಿದೆ ಮತ್ತು ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್ ಹೇಗಿದೆ
ಒನ್‌ಪ್ಲಸ್ ಬುಲೆಟ್ ವಾಯರ್‌ಲೆಸ್ ಇಯರ್‌ಫೋನ್ ಹಗುರವಾದ ರಚನೆಯನ್ನು ಹೊಂದಿದ್ದು, ನೆಕ್‌ಬ್ಯಾಂಡ್‌ನಲ್ಲಿ ಎರಡು ಮಾಡ್ಯುಲನ್ನು ನೀಡಲಾಗಿದೆ. ಅವುಗಳಲ್ಲಿ ಎಡ ಮಾಡ್ಯುಲನಲ್ಲಿ ಸೌಂಡ್ ಬಟನಗಳನ್ನು ನೀಡಲಾಗಿದ್ದು, ಹಾಗೂ ಆನ್ ಆಫ್ ಪವರ್ ಬಟನ್ ಸಹ ಒದಗಿಸಲಾಗಿದೆ. ಈ ಎರಡು ಮಾಡ್ಯುಲಗಳು ಸಾಫ್ಟ್ ರಚನೆಯಲ್ಲಿದ್ದು, ಇಯರ್‌ಬಡ್ ಕಿವಿಯಿಂದ ಜಾರದ ಆಕಾರದಲ್ಲಿವೆ. ಧರಿಸಲು ಕಂಫರ್ಟ್ ಎನಿಸಲಿದೆ.

ಉತ್ತಮ ಸಾಫ್ಟವೇರ್
ಒನ್‌ಪ್ಲಸ್ ಬುಲೆಟ್ ಇಯರ್‌ಫೋನ್ 'ಆಕ್ಸಿಜನ್ ಓಸ್' ತಂತ್ರಾಂಶವನ್ನು ಒಳಗೊಂಡಿದ್ದು, ಸ್ಮಾರ್ಟ್‌ಫೋನ್ ಕನೆಕ್ಷನ್‌ಗೆ ಉತ್ತಮ ಬೆಂಬಲ ನೀಡಲಿದೆ. ಹಾಗೇ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಬಳಸುವವರು ಈ ಇಯರ್‌ಫೋನ್‌ಗೆ ಕನೆಕಟ್ಟ್ ಮಾಡಿದರೆ ಸೌಂಡ್‌ನ ಏರಿಳಿತ ತೋರಿಸುವ ವ್ಯವಸ್ಥೆ ಇದೆ. ಬ್ಲೂಟೈತ್ ಮೂಲಕ ಒಂದು ಬಾರಿ ಫೋನಿಗೆ ಪೇರ್ ಮಾಡಿದರೇ ನಂತರ ಪವರ್ ಬಟನ ಒತ್ತಿದರೇ ಸಾಕು ಆಟೋಮ್ಯಾಟಿಕ್ ಆಗಿ ಕನೆಕ್ಟ್ ಆಗುವುದು.

ಡೈನಾಮಿಕ್ ಸೌಂಡ್ ಕ್ವಾಲಿಟಿ
ಈ ಇಯರ್‌ಫೋನ್‌ನಲ್ಲಿ 24 ಬಿಟ್ ಆಡಿಯೊ ಸಾಮರ್ಥ್ಯದ ಬೆಂಬಲ ನೀಡಿದ್ದು, ಸೌಂಡ್‌ನ ಗುಣಮಟ್ಟವು ಅತ್ಯುತ್ತಮವಾಗಿ ಹೊರಹೊಮ್ಮಲಿದೆ. ಇಯರ್‌ಬಡ್ಸ್‌ನಲ್ಲಿ ಡೈನಾಮಿಕ್ ಡ್ರೈವ್‌ರ್‌ಗಳನ್ನು ನೀಡಿದ್ದು, ಇವು ಸೌಂಡ್‌ನ ಕ್ವಾಲಿಟಿಯನ್ನು ಮತ್ತಷ್ಟು ಹೆಚ್ಚಿಸಲಿವೆ ಹಾಗೂ ಸ್ಪಷ್ಟವಾಗಿ ಕೇಳಸಲು ಸಹಕರಿಸುತ್ತವೆ. ಕಡಿಮೆ ವ್ಯಾಲ್ಯೂಮ್‌ನಲ್ಲಿಯೂ ಸಹ ಸೌಂಡ್‌ನ ಕ್ವಾಲಿಟಿ ಉತ್ತಮವಾಗಿ ಕೇಳಿಸುತ್ತದೆ.

ಬೆಸ್ಟ್ ಬ್ಯಾಟರಿ ಲೈಫ್
ಒನ್‌ಪ್ಲಸ್ ಬುಲೆಟ್ ವಾಯರ್‌ಲೆಸ್ ಇಯರ್‌ಫೋನ್ 2 ಬ್ಯಾಟರಿ ಲೈಫ್ ಅತ್ಯುತ್ತಮವಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೇ 14 ಗಂಟೆಗಳ ಕಾಲ ಬ್ಯಾಟರಿ ಬೆಂಬಲ ನೀಡಲಿದೆ. Warp ಚಾರ್ಜ್ ತಂತ್ರಜ್ಞಾನ ಸೌಲಭ್ಯವನ್ನು ನೀಡಲಾಗಿದ್ದು, ಇದರ ನೆರವಿನಿಂದ ಕೇವಲ 10 ನಿಮಿಷ ಚಾರ್ಜ್ ಮಾಡಿದರೇ ಸುಮಾರು 10 ಗಂಟೆ ಇಯರ್‌ಫೋನ್ ಬಾಳಿಕೆ ಬರುವ ಸಾಮರ್ಥ್ಯವನ್ನು ಪಡೆದಿದೆ.

ಬೆಲೆ
ಸೌಂಡ್, ಬ್ಯಾಟರಿ ಬಾಳಿಕೆ, ಉತ್ತಮ ಬ್ಲೂಟೂತ್, ಅತ್ಯುತ್ತಮ ಸಾಫ್ಟ್‌ವೇರ್, ಡಿಸೈನ್ ಹೀಗೆ ಹಲವು ವಿಭಾಗಗಳಲ್ಲಿ ಬೆಸ್ಟ್ ಎನಿಸಿಕೊಂಡಿರುವ ಒನ್‌ಪ್ಲಸ್ ಕಂಪನಿಯ ಬುಲೆಟ್ ಇಯರ್‌ಫೋನ್ 2 ಬೆಲೆಯಲ್ಲಿಯೂ ಸಹ ಗ್ರಾಹಕರಿಗೆ ಕೈಗೆಟುಕುವ ಹಾಗಿದೆ. ಈ ಡಿವೈಸ್‌ನ ಬೆಲೆಯು $99 (5,990ರೂ.ಗಳು) ಆಗಿದೆ.


Click it and Unblock the Notifications








