ಒನ್‌ಪ್ಲಸ್ ವಾಚ್ 2 ವಿಮರ್ಶೆ: ಅತ್ಯುತ್ತಮ ಫಿಟ್ನೆಸ್ ಫೀಚರ್ಸ್ ಜೊತೆಗೆ ಬಿಗ್ ಬ್ಯಾಟರಿ!
ಒನ್‌ಪ್ಲಸ್ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಒನ್‌ಪ್ಲಸ್ ವಾಚ್ 2 (OnePlus Watch 2) ಸ್ಮಾರ್ಟ್‌ವಾಚ್ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಈ ಸ್ಮಾರ್ಟ್ ವಾಚ್ ಸಂಪೂರ್ಣ ಅಪ್‌ಡೇಟ್ ಫೀಚರ್ಸ್ ಪಡೆದಿದ್ದು, ಇದರ ಡಿಸೈನ್ ಹಾಗೂ ದೀರ್ಘ ಬ್ಯಾಟರಿಗಳಂತಹ ಕೆಲವು ಆಯ್ಕೆಗಳು ಗಮನ ಸೆಳೆದಿವೆ.
ಒನ್‌ಪ್ಲಸ್ ವಾಚ್ 2 ಡಿವೈಸ್ ಗೂಗಲ್‌ನ ವೇರ್OS ನಲ್ಲಿ ಇದು ಕೆಲಸ ನಡೆಸುತ್ತದೆ ಜೊತೆಗೆ ಡ್ಯುಯಲ್ ಚಿಪ್‌ಗಳ ಪಡೆದಿದೆ. ಹಾಗೆಯೇ ಇದರ ಡಿಸೈನ್ ಆಕರ್ಷಕ ಎನಿಸಲಿದ್ದು, ಇದು ಸ್ಟೇನ್ಲೆಸ್ ಸ್ಟೀಲ್ ರಚನೆಯನ್ನು ಒಳಗೊಂಡಿದೆ. ಇದರೊಂದಿಗೆ ಹೆಲ್ತ್ ಹಾಗೂ ಫಿಟ್ನೆಸ್ ಆಯ್ಕೆಗಳನ್ನು ಪಡೆದಿದ್ದು ಮತ್ತಷ್ಟು ಆಕರ್ಷಕ ವಾಗಿ ಗುರುತಿಸಿಕೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ನ ಕಾರ್ಯ ವೈಖರಿ ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ರಚನೆ ಹಾಗೂ ಡಿಸೈನ್
ಒನ್‌ಪ್ಲಸ್ ವಾಚ್ 2 ಡಿವೈಸ್ ವೃತ್ತಾಕಾರದ ಡಯಲ್ ಅನ್ನು ಹೊಂದಿದ್ದು, ದೊಡ್ಡ ಬ್ಯಾಟರಿ ಹಾಗೂ ಸ್ಟೇನ್‌ಲೆಸ್ ಸ್ಟೀಲ್ ಕೇಸ್ ಅನ್ನು ಪಡೆದಿದೆ. ಇನ್ನು ಈ ವಾಚ್ ಪಟ್ಟಿಯು ಸೇರಿದಂತೆ 80 ಗ್ರಾಂ ಹೊಂದಿದ್ದು, ಇತರ ಸ್ಮಾರ್ಟ್‌ವಾಚ್‌ಗಳಿಗೆ ಹೋಲಿಸಿದರೆ ಇದು ಭಾರ ಎನಿಸುತ್ತದೆ. ಇನ್ನು 47 ಮಿಮೀ ಆಗಿರುವುದರಿಂದ ಸಣ್ಣ ಕೈಗಳನ್ನು ಹೊಂದಿರುವವರಿಗೆ ಇದು ದೊಡ್ಡದಾಗಿ ಕಾಣಬಹುದು.

ಅಲ್ಲದೇ ಇದು 5ATM + IP68 ನೀರಿನ ಪ್ರತಿರೋಧವನ್ನು ಪಡೆದಿದ್ದು, ಬಳಕೆದಾರರು ಈಜುವಾಗ ಸಹ ಧರಿಸಬಹುದು. ಇದು ಆಂಡ್ರಾಯ್ಡ್ ಡಿವೈಸ್‌ಗಳಿಗೆ ಸಂಪರ್ಕಿಸಲು ಬ್ಲೂಟೂತ್ 5.3 ಅನ್ನು ಪಡೆದಿದ್ದು, ಇನ್ನು iOS ನೊಂದಿಗೆ ಕಾರ್ಯ ನಿರ್ವಹಿಸುವುದಿಲ್ಲ.
AMOLED ಡಿಸ್‌ಪ್ಲೇ
ಒನ್‌ಪ್ಲಸ್ ವಾಚ್ 2 ದೊಡ್ಡದಾದ 1.43 ಇಂಚಿನ (466 × 466 ಪಿಕ್ಸೆಲ್ ರೆಸಲ್ಯೂಶನ್) AMOLED ಕಲರ್ ಟಚ್ ಸ್ಕ್ರೀನ್ ಡಿಸ್‌ಪ್ಲೇ ಪಡೆದಿದೆ. ಇದು 2.5D ಸಫೈರ್ ಕ್ರಿಸ್ಟಲ್ ರಕ್ಷಣೆಯೊಂದಿಗೆ ಒಂದೇ ಮಾದರಿಯನ್ನು ಒಳಗೊಂಡಿದ್ದು, ಇದರ ಟಚ್ ಸ್ಕ್ರೀನ್ ಬಳಸಲು ಸುಗಮವಾಗಿದೆ.
ಇದು ಬ್ರೈಟ್‌ನೆಸ್ ಮೋಡ್‌ನಲ್ಲಿ 1000 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್ ಅನ್ನು ಹೊಂದಿದ್ದು, ಡೀಫಾಲ್ಟ್ ಗರಿಷ್ಠ ಬ್ರೈಟ್ನೆಸ್ 600 ನಿಟ್‌ಗಳು ಆಗಿದೆ. ಹೀಗಾಗಿ ಇದರ ಒಳಾಂಗಣ ಹಾಗೂ ಹೊರಾಂಗಣ ಡಿಸ್‌ಪ್ಲೇ ಕ್ಲಿಯರಿಟಿ ಉತ್ತಮವಾಗಿದೆ.

ಹೆಲ್ತ್ ಹಾಗೂ ಫಿಟ್ನೆಸ್ ಸೌಲಭ್ಯಗಳು
ಒನ್‌ಪ್ಲಸ್ ವಾಚ್ 2 ಸ್ಮಾರ್ಟ್ ವಾಚ್ ಆಪ್ಟಿಕಲ್ ಹೃದಯ ಬಡಿತ ಮಾನಿಟರ್, ಪಲ್ಸ್ ಆಕ್ಸಿಮೀಟರ್ ಸೆನ್ಸಾರ್ ಆಯ್ಕೆಗಳನ್ನು ಕೂಡಾ ಹೊಂದಿದೆ. ಸ್ಲಿಪಿಂಗ್ ಸರ್ಕಲ್ ಮತ್ತು ಬಳಕೆದಾರರ ಒತ್ತಡದ ಮಟ್ಟವನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ 11 ಕ್ಕೂ ಹೆಚ್ಚು ವೃತ್ತಿಪರ ಮತ್ತು 100 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ಸಪೋರ್ಟ್ ಮಾಡುತ್ತದೆ.
ಬಿಗ್ ಬ್ಯಾಟರಿ ಕಮಾಲ್
ಒನ್‌ಪ್ಲಸ್ ವಾಚ್ 2 ಡಿವೈಸ್ 500mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇನ್ನು ಸ್ಮಾರ್ಟ್ ಮೋಡ್‌ನಲ್ಲಿ 100 ಗಂಟೆಗಳ ಅಥವಾ 4 ದಿನಗಳ ಬ್ಯಾಟರಿ ಬ್ಯಾಕ್‌ಅಪ್ ಅವಧಿಯನ್ನು ನೀಡುತ್ತದೆ. ಅಂದಹಾಗೆ 7.5W ನಲ್ಲಿ ಒನ್‌ಪ್ಲಸ್ ನ VOOC ಚಾರ್ಜಿಂಗ್ ಅನ್ನು ಬಳಸಿಕೊಂಡು ಈ ಸ್ಮಾರ್ಟ್ ವಾಚ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ.
ಕೊನೆಯ ಮಾತು
ಒಟ್ಟಾರೆಯಾಗಿ, ಒನ್‌ಪ್ಲಸ್ ವಾಚ್ 2 ಡಿವೈಸ್ ಸಂಸ್ಥೆಯ ಈ ಹಿಂದಿನ ಒನ್‌ಪ್ಲಸ್ ವಾಚ್ ಅಪ್‌ಡೇಟ್ ಆಗಿದ್ದು, ಅದರ ನೇರ ಉತ್ತಮ ಉತ್ತರಾಧಿಕಾರಿಯಾಗಿದೆ. ಚಿಕ್ಕ ಕೈ ಇರುವವರಿಗೆ ಇದರ ಡಯಲ್ ದೊಡ್ಡದು ಎನಿಸುತ್ತದೆ. ಇದನ್ನು ಹೊರತುಪಡಿಸಿ, ಇದು AMOLED ಸ್ಕ್ರೀನ್, ಪವರ್‌ಫುಲ್ ಪ್ರೊಸೆಸರ್, ಫಿಟ್‌ನೆಸ್ ಆಯ್ಕೆಗಳಿಂದಲೂ ಗಮನ ಸೆಳೆಯುತ್ತದೆ. ಅಲ್ಲದೇ ಬಿಗ್ ಬ್ಯಾಟರಿ ಬಾಳಿಕೆ ಸಹ ಒದಗಿಸುತ್ತದೆ. ಖರೀದಿಗೆ ಉತ್ತಮ ಆಯ್ಕೆ ಆಗಿದೆ.
ಒನ್‌ಪ್ಲಸ್ ವಾಚ್ 2 ಡಿವೈಸ್ ಮಾರಾಟ ಇದೇ 4 ಮಾರ್ಚ್ 2024 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭ ಆಗಲಿದ್ದು, ಇದರ ಬೆಲೆ 24,999ರೂ. ಆಗಿದೆ. ಇನ್ನು ಡಿವೈಸ್ ಒನ್‌ಪ್ಲಸ್.ಇನ್, ಒನ್‌ಪ್ಲಸ್ ಸ್ಟೋರ್ ಆಪ್, ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್, ಅಮೆಜಾನ್.ಇನ್, ಫ್ಲಿಪ್‌ಕಾರ್ಟ್.ಕಾಮ್, ಮಂತ್ರಾ.ಕಾಮ್, ರಿಯಲನ್ಸ್, ಕ್ರೋಮಾ ಹಾಗೂ ಇತರೆ ಪ್ರಮುಖ ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯ ಇರಲಿದೆ.


Click it and Unblock the Notifications








