Home
Gadgets

₹1,899 ಕ್ಕೆ ಹೊಸ Oppo ANC ಇಯರ್‌ಬಡ್ಸ್ ಲಾಂಚ್!..43 ಗಂಟೆ ಬ್ಯಾಟರಿ ಸಾಮರ್ಥ್ಯ!

Oppo ತನ್ನ ಹೊಸ ಫ್ಲ್ಯಾಗ್‌ಶಿಪ್ Oppo Find X9 ಸರಣಿಯೊಂದಿಗೆ ಭಾರತದಲ್ಲಿ ತನ್ನ Oppo Enco Buds 3 Pro+ TWS ಇಯರ್‌ಬಡ್ಸ್ ಅನ್ನು ಸಹ ಪರಿಚಯಿಸಿದೆ. ಈ ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಹೆಡ್‌ಸೆಟ್ 12.4mm ಡೈನಾಮಿಕ್ ಡ್ರೈವರ್‌ಗಳು, 32dB ವರೆಗೆ ಸಕ್ರಿಯ ಶಬ್ದ ರದ್ದತಿ (ANC) ಮತ್ತು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ದೀರ್ಘ ಬ್ಯಾಟರಿ ಬಾಳಿಕಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಂದಿದ್ದು, ಉತ್ತಮ ಧ್ವನಿ ಗುಣಮಟ್ಟ, ದೀರ್ಘ ಬ್ಯಾಟರಿ ಆಯುಷ್ಯ ಮತ್ತು ವೇಗದ ಚಾರ್ಜಿಂಗ್ ಇರುವ TWS ಇಯರ್‌ಬಡ್ಸ್ ಹುಡುಕುತ್ತಿರುವವರಿಗೆ ಇದು ಹೊಸ ಆಯ್ಕೆಯಾಗಬಹುದು. ಮತ್ತೊಮದು ಸುದ್ದಿ ಏನೆಂದರೆ, ಈ ಇಯರ್‌ಬಡ್ಸ್ ಅನ್ನು ಕೇವಲ ₹1,899 ರೂ.ಗೆ ಖರೀದಿಸಬಹುದು. ಹಾಗಾದರೆ, ಹೊಸ Oppo Enco Buds 3 Pro+ TWS ಇಯರ್‌ಬಡ್ಸ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

Oppo Enco Buds 3 Pro+ : ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Oppo Enco Buds 3 Pro+ ಬೆಲೆಯನ್ನು ₹2,099 ಬೆಲೆಯಲ್ಲಿ ಬಿಡುಗಡೆಯಾಗಿದೆ. ಇದರ ಮೊದಲ ಮಾರಾಟವು ನವೆಂಬರ್ 21 ರಿಂದ ಪ್ರಾರಂಭವಾಗಲಿದ್ದು, ಗ್ರಾಹಕರು ಆರಂಭಿಕ ಆಫರ್ ಕೊಡುಗೆಯಾಗಿ ₹1,899 ರೂ. ಬೆಲೆಯಲ್ಲಿ ಖರೀದಿಸಬಹುದು ಎಂದು ಕಂಪೆನಿಯು ತಿಳಿಸಿದೆ. ಲಭ್ಯತೆಯ ಕುರಿತು ನೋಡುವುದಾದರೆ, ಗ್ರಾಹಕರು ಈ ಇಯರ್‌ಬಡ್ಸ್ ಅನ್ನು Midnight Black ಮತ್ತು Sonic Blue ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ Oppo ಆನ್‌ಲೈನ್ ಸ್ಟೋರ್, Flipkart, Amazon ಹಾಗೂ ಅಧಿಕೃತ ರಿಟೇಲ್ ಅಂಗಡಿಗಳಲ್ಲಿ ಖರೀದಿಸಲು ಅವಕಾಶವಿರಲಿದೆ.

Oppo Enco Buds 3 Pro+:ಪ್ರಮುಖ ವೈಶಿಷ್ಟ್ಯಗಳು
Oppo Enco Buds 3 Pro+ ನಲ್ಲಿ 12.4mm ಡೈನಾಮಿಕ್ ಡ್ರೈವರ್ ಬಳಸಲಾಗಿದೆ. ಇದು ಹೆಚ್ಚು ಸ್ಪಷ್ಟ ಮತ್ತು ಸಮತೋಲನವಾದ ಧ್ವನಿಯನ್ನು ನೀಡಲು ಸಹಾಯಕವಾಗಿದೆ. ಈ ಇಯರ್‌ಬಡ್ಸ್ 20Hz ರಿಂದ 20kHz ವರೆಗೆ ಫ್ರೀಕ್ವೆನ್ಸಿ ರೇಂಜ್ ಹೊಂದಿದ್ದು, ಮ್ಯೂಸಿಕ್, ವಿಡಿಯೋ ಅಥವಾ ಗೇಮಿಂಗ್ ಎಲ್ಲಕ್ಕೂ ಸೂಕ್ತವಾದ ಶಬ್ದ ಅನುಭವ ಒದಗಿಸುವ ನಿರೀಕ್ಷೆ ಇದೆ. ಇನ್ನು ಈ ಇಯರ್‌ಬಡ್ಸ್‌ನ ಪ್ರಮುಖ ವಿಶೇಷತೆ ಎಂದರೆ 32dB ವರೆಗೆ ಸ್ಮಾರ್ಟ್ ANC ಅನ್ನು ಬೆಂಬಲಿಸುತ್ತವೆ ಮತ್ತು ಗತ್ಯವಿದ್ದಾಗ ಸುತ್ತುವರಿದ ಶಬ್ದಗಳನ್ನು ಕೇಳಲು Transparency ಮೋಡ್ ಅನ್ನು ಸಹ ನೀಡುತ್ತವೆ. 1000 ಪೂರ್ಣ ಚಾರ್ಜ್ ಸೈಕಲ್ ನಂತರವೈ 80 ಪ್ರತಿಶತಕ್ಕಿಂತ ಹೆಚ್ಚಿನ ಬ್ಯಾಟರಿ ಸಾಮರ್ಥ್ಯವನ್ನು ಉಳಿಸಿಕೊಳ್ಳಲು, ಈ Oppo Enco Buds 3 Pro+ ಸಾಧನವು TÜV ರೈನ್‌ಲ್ಯಾಂಡ್ ಬ್ಯಾಟರಿ ಆರೋಗ್ಯ ಪ್ರಮಾಣೀಕರಣದೊಂದಿಗೆ ಬರುತ್ತದೆ ಎಂದು ಕಂಪನಿ ತಿಳಿಸಿದೆ.

₹1,899 ಕ್ಕೆ ಹೊಸ Oppo ANC ಇಯರ್‌ಬಡ್ಸ್ ಲಾಂಚ್!..43 ಗಂಟೆ ಬ್ಯಾಟರಿ ಸಾಮರ್ಥ್ಯ!

ಬ್ಯಾಟರಿ ವಿಭಾಗದಲ್ಲಿ, ಇದೆ ಪ್ರತಿ ಇಯರ್‌ಬಡ್‌ನಲ್ಲಿ 58mAh ಬ್ಯಾಟರಿ ಮತ್ತು ಚಾರ್ಜಿಂಗ್ ಕೇಸ್‌ನಲ್ಲಿ 440mAh ಬ್ಯಾಟರಿಯಿಂದ ಚಾಲಿತವಾಗಿದೆ. ಕಂಪನಿಯ ಪ್ರಕಾರ, ANC ಆನ್ ಆಗಿರುವಾಗ 28 ಗಂಟೆಗಳವರೆಗೆ ಮತ್ತು ANC ಆಫ್ ಆಗಿರುವಾಗ 43 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯ ನಿಡಲಿದೆ. ಇದರ ಇಯರ್‌ಫೋನ್‌ಗಳು ANC ಆಫ್ ಆಗಿರುವಾಗ 12 ಗಂಟೆಗಳವರೆಗೆ ಅಥವಾ ANC ಆನ್ ಆಗಿರುವಾಗ ಎಂಟು ಗಂಟೆಗಳವರೆಗೆ ನಿರಂತರ ಪ್ಲೇಬ್ಯಾಕ್ ಸಮಯವನ್ನು ನೀಡುತ್ತವೆ ಎಂದು ಹೇಳಲಾಗಿದೆ. ಇನ್ನು USB ಟೈಪ್-C ಪೋರ್ಟ್ ಮೂಲಕ ಚಾರ್ಜ್ ಮಾಡಲು ಇಯರ್‌ಬಡ್‌ಗಳಿಗೆ 65 ನಿಮಿಷಗಳು ಮತ್ತು ಇಯರ್‌ಬಡ್‌ಗಳು ಮತ್ತು ಕೇಸ್ ಒಟ್ಟಿಗೆ 90 ನಿಮಿಷಗಳು ತೆಗೆದುಕೊಳ್ಳುತ್ತದೆ. 10 ನಿಮಿಷಗಳ ತ್ವರಿತ ಚಾರ್ಜ್ 11 ಗಂಟೆಗಳವರೆಗೆ ಒಟ್ಟು ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತದೆ.

ಸಂಪರ್ಕಕ್ಕಾಗಿ, ಇಯರ್‌ಬಡ್ಸ್ AAC ಮತ್ತು SBC ಆಡಿಯೊ ಕೋಡೆಕ್‌ಗಳಿಗೆ ಬೆಂಬಲದೊಂದಿಗೆ ಬ್ಲೂಟೂತ್ 5.4 ಅನ್ನು ಬಳಸುತ್ತವೆ. ಮಳೆ, ಬೆವರಿನಂತಹ ಪರಿಸ್ಥಿತಿಗಳಲ್ಲಿ ಸುರಕ್ಷಿತವಾಗಿ ಬಳಸಲು IP55 ರೇಟಿಂಗ್ ಇದೆ. ಇದರ ಪ್ರತಿ ಇಯರ್‌ಬಡ್ 4.2 ಗ್ರಾಂ ತೂಗಿದರೆ, ಕೇಸ್‌ನೊಂದಿಗೆ ಇದರ ತೂಕ ತೂಕ 46.2 ಗ್ರಾಂ ಇದೆ. ಇರ ಇಯರ್‌ಬಡ್‌ಗಳು 29.99×20.30×23.87mm ಅಳತೆಯನ್ನು ಹೊಂದಿದ್ದರೆ, ಚಾರ್ಜಿಂಗ್ ಕೇಸ್ 66.60×51.24×24.83mm ಅಳತೆಯನ್ನು ಹೊಂದಿದೆ. ಒಟ್ಟಾರೆಯಾಗಿ, ಕಡಿಮೆ ಬೆಲೆಯಲ್ಲೇ ANC, ಉತ್ತಮ ಬ್ಯಾಟರಿ ಆಯುಷ್ಯ ಮತ್ತು ವೇಗದ ಚಾರ್ಜಿಂಗ್ ಹುಡುಕುತ್ತಿರುವ ಬಳಕೆದಾರರಿಗೆ Oppo Enco Buds 3 Pro+ ಒಂದು ಉತ್ತಮ ಪ್ಯಾಕೇಜ್ ಆಗ ಬಂದಿದೆ ಎನ್ನಬಹುದು. Enco Buds 3 Pro‌ಗಿಂತ ಉತ್ತಮ ವೈಶಿಷ್ಟ್ಯಗಳನ್ನು ಒದಗಿಸುವ ಇದು ಬಜೆಟ್ TWS ವಿಭಾಗದಲ್ಲಿ ಹೊಸ ಸ್ಪರ್ಧಾತ್ಮಕ ಆಯ್ಕೆಯಾಗಲಿದೆ.

Best Mobiles in India

English summary
Oppo Enco Buds 3 Pro+ has been launched in India at a price of ₹2,099. Its first sale will start from November 21, and customers can buy it at an introductory offer price of ₹1,899, the company said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+