ಭಾರೀ ಚಳಿಯಿಂದ ಬೇಸತ್ತಿದ್ದೀರಾ? ಹಾಗಿದ್ರೆ ಈ ಹೀಟರ್ ಫ್ಯಾನ್ ನಿಮ್ಮನ್ನು ಬೆಚ್ಚಗಿಡಲಿದೆ, ಬೆಲೆ ಸಹ ಕಡಿಮೆ!
ಮಳೆಗಾಲ ಅಥವಾ ಚಳಿಗಾಲದಲ್ಲಿ ಜನರು ಚಳಿಯಿಂದ ತತ್ತರಿಸಿ ಹೋಗುತ್ತಾರೆ. ಇದರಿಂದ ರಕ್ಷಣೆ ಮಾಡಿಕೊಳ್ಳಲು ಹಲವಾರು ಮಾರ್ಗಗಳಿದ್ದರೂ ಸಹ ಇವು ಎಲ್ಲಾ ಕಡೆ ಎಲ್ಲರಿಗೂ ಪ್ರಯೋಜನ ನೀಡುವುದಿಲ್ಲ. ಈ ಕಾರಣಕ್ಕಾಗಿಯೇ ಮನೆ ಅಥವಾ ಆಫೀಸ್‌ನಲ್ಲಿ ಚಳಿಯಿಂದ ನಿಮ್ಮ ದೇಹವನ್ನು ಬೆಚ್ಚಗಿಡುವ ಸ್ಮಾರ್ಟ್ ಡಿವೈಸ್ ಬಗ್ಗೆ ತಿಳಿಸಲಿದ್ದೇವೆ.
ಹೌದು, ಇಂದು ಎಲ್ಲಾ ಕೆಲಸಗಳಿಗೂ ಸ್ಮಾರ್ಟ್ ಡಿವೈಸ್ ಬಳಕೆ ಆಗುತ್ತಿವೆ. ಅದರಂತೆ ಈಗ ಮಳೆಗಾಲ ಆರಂಭ ಆಗಿದ್ದು, ಚಳಿ ಸಹ ಹೆಚ್ಚಾಗಿದೆ. ಈ ನಡುವೆ ಮಹಾನಗರಗಳಲ್ಲಿ ಈ ಚಳಿಯಿಂದ ಅದೆಷ್ಟೋ ಜನರು ಸಾವಿಗೀಡಾಗುವ ಸುದ್ದಿಗಳನ್ನೂ ಸಹ ನಾವು ಕೇಳಿರಬಹುದು. ಆದರೆ ಈಗ ಈ ಡಿವೈಸ್ ಮೂಲಕ ಚಳಿಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು. ಹಾಗಿದ್ರೆ, ಯಾವುದು ಈ ಡಿವೈಸ್? ಫೀಚರ್ಸ್ ಏನು?, ಬೆಲೆ ಎಷ್ಟಿ ಎಂಬ ವಿವರವನ್ನು ಗಮನಿಸೋಣ ಬನ್ನಿ.

ಆರ್ಪಾಟ್ ಫ್ಯಾನ್ ಹೀಟರ್: ಫ್ಯಾನ್‌ಗಳು ಸಾಮಾನ್ಯವಾಗಿ ಬೇಸಿಗೆ ಸಂದರ್ಭದಲ್ಲಿ ಹೆಚ್ಚಾಗಿ ಬಳಕೆ ಆಗುತ್ತವೆ. ಆದರೆ ನಾವಿಲ್ಲಿ ಪರಿಚಯಿಸಲು ಹೊರಟಿರುವ ಈ ಫ್ಯಾನ್ ಚಳಿಗಾಲಕ್ಕೆ ಜನರಿಗೆ ಅಚ್ಚು ಮೆಚ್ಚಾಗಲಿದೆ. ಯಾಕೆಂದರೆ ಇದರಲ್ಲಿ ತಣ್ಣನೆ ಗಾಳಿ ಬರುವ ಬದಲು ಬಿಸಿಯಾದ ಅಥವಾ ಬೆಚ್ಚಗಿನ ಗಾಳಿ ಬರಲಿದ್ದು, ನಿಮ್ಮ ದೇಹದ ಸಮತೋಲಕ್ಕೆ ತನ್ನದೇ ಆದ ಕೊಡುಗೆ ನೀಡಲಿದೆ. ಇದರಿಂದ ಬೆಚ್ಚಗಿನ ಅನುಭವ ಪಡೆದುಕೊಳ್ಳಬಹುದು.
ನಿಮ್ಮ ಮನೆಯಲ್ಲಿ ಮಕ್ಕಳು ಹಾಗೂ ವಯಸ್ಸಾದವರು ಇದ್ದರೆ ಈ ಆರ್ಪಾಟ್ ಫ್ಯಾನ್ ಹೀಟರ್ (Orpat OEH-1220 2000-Watt Fan Heater) ಅಗತ್ಯ ಎಂದೇ ಹೇಳಬಹುದು. ಇದು 250 ಚದರ ಅಡಿ ಕೋಣೆಗೆ ಹೊಂದಿಕೊಳ್ಳಲಿದ್ದು, ಇಡೀ ಕೋಣೆಯನ್ನು ಬೆಚ್ಚಗಿಡಲಿದೆ. ಯಾಕೆಂದರೆ ಈ ಫ್ಯಾನ್ 2 ಹೀಟರ್ ಆಯ್ಕೆಗಳನ್ನು ಹೊಂದಿದ್ದು, ಅದರಲ್ಲಿ 1000 ವ್ಯಾಟ್, 2000 ವ್ಯಾಟ್ ಆಯ್ಕೆ ಹೊಂದಿವೆ.
ಅಷ್ಟು ಮಾತ್ರವಲ್ಲದೆ ಇದನ್ನು ಆನ್ ಮಾಡಿರುವಾಗ ಡಿವೈಸ್ ಮೇಲ್ಭಾಗವನ್ನು ಯಾವುದೇ ಅಂಜಿಕೆ ಇಲ್ಲದೆ ಮುಟ್ಟಬಹುದು. ಯಾಕೆಂದರೆ ಇದು ಶಾಕ್ ಹೊಡೆಯುವುದಿಲ್ಲ ಎಂದು ಕಂಪೆನಿ ಸ್ಪಷ್ಟನೆ ನೀಡಿದೆ. ಹಾಗಂದ ಮಾತ್ರಕ್ಕೆ ದುಸ್ಸಾಹಸಕ್ಕೆ ಕೈ ಹಾಕಬೇಡಿ. ಉಳಿದಂತೆ ಈ ಡಿವೈಸ್ 23 ಸೆಂ.ಮೀ ಉದ್ದ, 11 ಸೆಂ.ಮೀ ಅಗಲ ಮತ್ತು 22 ಸೆಂ.ಮೀ ಎತ್ತರವಿದೆ. ಜೊತೆಗೆ ಹಗುರವಾಗಿದ್ದು, ಇದನ್ನು ನೀವು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು.
ದೀರ್ಘ ಬಾಳಿಕೆ: ಈ ಡಿವೈಸ್ ಅನ್ನು ನೀವು ಹಲವಾರು ವರ್ಷಗಳ ಕಾಲ ಬಳಕೆ ಮಾಡಬಹುದು. ಯಾಕೆಂದರೆ ಬಿಲ್ಟ್ ಕ್ವಾಲಿಟಿ ಉತ್ತಮವಾಗಿದ್ದು, ಅಷ್ಟು ಸುಲಭದಲ್ಲಿ ಇದಕ್ಕೆ ಏನೂ ಆಗುವುದಿಲ್ಲ. ಜೊತೆಗೆ ಶುದ್ಧ ತಾಮ್ರದ ತಂತಿಯನ್ನು ಬಳಕೆ ಮಾಡಲಾಗಿರುವುದರಿಂದಾಗಿ ಇದು ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂದು ಕಂಪೆನಿ ದೃಢಪಡಿಸಿದೆ. ಹಾಗೆಯೇ ಈ ಫ್ಯಾನ್‌ನ ಬಾಡಿ ಪ್ಲಾಸ್ಟಿಕ್ ಮತ್ತು ಲೋಹದಿಂದ ನಿರ್ಮಾಣ ಆಗಿದೆ.

ಇನ್ನು ಕೋಣೆಯಲ್ಲಿ ಬಳಕೆ ಮಾಡುವಾಗ ಎಷ್ಟು ಶಾಖ ಬೇಕೋ ಅಷ್ಟನ್ನು ಸೆಟ್ ಮಾಡಿಕೊಳ್ಳುವ ಕಂಟ್ರೋಲ್ ಬಟನ್ ಆಯ್ಕೆ ಸಹ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ಮಕ್ಕಳು ಸಹ ಇದನ್ನು ಕಂಟ್ರೋಲ್ ಮಾಡಬಹುದು ಎನ್ನಲಾಗಿದ್ದು, ಈ ವೇಳೆ ಯಾವುದೇ ಸಮಸ್ಯೆ ಆಗಬಾರದು ಎಂದು ಸುರಕ್ಷತಾ ಮೆಶ್ ಗ್ರಿಲ್ ಆಯ್ಕೆ ನೀಡಲಾಗಿದೆ. ಇದರಿಂದ ಅಪ್ಪಿ ತಪ್ಪಿಯೂ ಮಕ್ಕಳು ಏನಾದರೂ ಡಿವೈಸ್ ಒಳಗೆ ಕೈ ಹಾಕಲು ಮುಂದಾದಾಗ ಯಾವುದೇ ಸಮಸ್ಯೆ ಆಗುವುದಿಲ್ಲ.
ಅಧಿಕವಾಗಿ ಬಿಸಿಯಾಗುವುದನ್ನು ತಡೆಯುವ ಉದ್ದೇಶದಿಂದ ಸೆಪ್ಟಿ ಕಟ್ ಆಫ್ ಫೀಚರ್ಸ್ ಆಯ್ಕೆ ನೀಡಲಾಗಿದ್ದು, ಈ ಮೂಲಕ ಕೋಣೆಯಲ್ಲಿ ತಂತಾನೆ ನಿರ್ದಿಷ್ಟ ಮಟ್ಟದ ಶಾಖವನ್ನು ನೀಡುತ್ತದೆ. ಇನ್ನು ಇದರ ವಿದ್ಯುತ್ ಕನೆಕ್ಟ್ ಗಾಗಿ 15A ಮಾದರಿಯ ಪ್ಲಗ್ ಅನ್ನು ಆಯ್ಕೆ ನೀಡಲಾಗಿದೆ. ಇದರಿಂದಾಗಿ ನೀವು 5 ಮತ್ತು 6A ಸಾಕೆಟ್‌ಗಳಲ್ಲಿ ಇದನ್ನು ಹಾಕಬೇಡಿ ಎಂದು ಕಂಪೆನಿ ಸಲಹೆ ನೀಡಿದೆ.
ಆರ್ಪಾಟ್ ಫ್ಯಾನ್ ಹೀಟರ್ ಬೆಲೆ ಹಾಗೂ ಲಭ್ಯತೆ: ಈ ಡಿವೈಸ್ 1,295ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ಅಮೆಜಾನ್‌ನಲ್ಲಿ ನೀವು ಇದನ್ನು 1,110ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಅಮೆಜಾನ್ ಈ ಡಿವೈಸ್‌ಮೇಲೆ 14% ಡಿಸ್ಕೌಂಟ್ ನೀಡಿದ್ದು, ಇದರೊಂದಿಗೆ ಇಎಮ್‌ಐ ಆಯ್ಕೆ ಸಹ ನೀಡಲಾಗಿದೆ. ಇದು 380ರೂ.ಗಳಿಂದ ಆರಂಭ ಆಗುತ್ತದೆ.


Click it and Unblock the Notifications








