Poco: ಜಾಗತಿಕವಾಗಿ ಪೊಕೊ ಪ್ಯಾಡ್ ಲಾಂಚ್, 120Hz ಡಿಸ್‌ಪ್ಲೇ, ಹೈಪರ್‌ಓಎಸ್ ಸೌಲಭ್ಯ... ಬೆಲೆ ಎಷ್ಟು?
ಪೊಕೊ (Poco) ಕೇವಲ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಇದೀಗ ಪ್ಯಾಡ್ ಅನ್ನೂ ಸಹ ಲಾಂಚ್ ಮಾಡಿದ್ದು, ಈ ಮೂಲಕ ಪೊಕೊ ಗ್ರಾಹಕರ ಮುಖದಲ್ಲಿ ಸಂತಸ ಉಂಟು ಮಾಡಿದೆ. ಅಂದರೆ ಪೊಕೊ ಇತ್ತೀಚೆಗೆ ತನ್ನ ಟಾಪ್ ಎಂಡ್ F6 ಸರಣಿಯನ್ನು ಜಾಗತಿಕವಾಗಿ ಲಾಂಚ್ ಮಾಡಿದ್ದು, ಅದರಲ್ಲಿ ಪೊಕೊ F6 ಮತ್ತು ಪೊಕೊ F6 ಪ್ರೊ (Poco F6, Poco F6 Pro) ಅನ್ನು ಕಾಣಬಹುದಾಗಿದೆ. ಇದರೊಂದಿಗೆ ಕಂಪನಿಯು ತನ್ನ ಮೊದಲ ಟ್ಯಾಬ್ಲೆಟ್ ಅನ್ನು ಇದೇ ಈವೆಂಟ್‌ನಲ್ಲಿ ಲಾಂಚ್ ಮಾಡಿದೆ.
ಹೌದು, ಪೊಕೊ ಪ್ಯಾಡ್ (Poco Pad) ಅನ್ನು ಜಾಗತಿಕವಾಗಿ ಲಾಂಚ್ ಮಾಡಲಾಗಿದ್ದು, ಇದು ಮಿಡ್ ರೇಂಜ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಆಗಿದೆ. ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಬಲದೊಂದಿಗೆ ಕಾರ್ಯನಿರ್ವಹಿಸಲಿದ್ದು, ಸೂಪರ್ ಸ್ಮೂತ್ ಡಿಸ್‌ಪ್ಲೇ, ಕ್ವಾಡ್ ಸ್ಟಿರಿಯೊ ಸ್ಪೀಕರ್‌ಗಳು ಹಾಗೂ ಹೈಪರ್‌ಓಎಸ್‌ನಲ್ಲಿ ಈ ಪ್ಯಾಡ್ ಲಭ್ಯ ಇರಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಏನು?, ಇದರ ಬೆಲೆ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ.

ಪೊಕೊ ಪ್ಯಾಡ್ ಡಿಸ್‌ಪ್ಲೇ ಮಾಹಿತಿ: ಈ ವಿಶೇಷ ಹಾಗೂ ಪೊಕೊದ ಮೊದಲ ಪ್ಯಾಡ್ 12.1 ಇಂಚಿನ 2.5K ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಹಾಗೂ 120Hz ರಿಫ್ರೆಶ್ ದರ (30/48/50/60/90/120Hz) ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಪಡೆದಿದೆ. ಈ ಮೂಲಕ ನೀವು ಉತ್ತಮವಾದ ವೀಕ್ಷಣೆಯನ್ನು ಇದರಿಂದ ಪಡೆಯಬಹುದಾಗಿದೆ. ಇದರೊಂದಿಗೆ ಗೊರಿಲ್ಲಾ ಗ್ಲಾಸ್ 3 ನಿಂದ ರಕ್ಷಿಸಲ್ಪಟ್ಟಿದ್ದು, ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತದೆ.
ಪೊಕೊ ಪ್ಯಾಡ್ ಪ್ರೊಸೆಸರ್ ವಿವರ: ಈ ಪ್ಯಾಡ್ 8GB LPDDR4X RAM ಮತ್ತು 256GB UFS 2.2 ಇಂಟರ್ ಸ್ಟೋರೇಜ್‌ನಲ್ಲಿ ಕಾಣಿಸಿಕೊಂಡಿದ್ದು, ಸ್ನಾಪ್‌ಡ್ರಾಗನ್ 7s ಜನ್ 2 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಡಿವೈಸ್ ಹೈಪರ್ ಓಎಸ್ ಅನ್ನು ಆಧರಿಸಿದ ಓಎಸ್ ಅನ್ನು ಇದು ರನ್ ಮಾಡಲಿದೆ.

ಪೊಕೊ ಪ್ಯಾಡ್ ಕ್ಯಾಮೆರಾ ರಚನೆ: ಈ ಡಿವೈಸ್ f/2.0 ದ್ಯುತಿರಂಧ್ರದೊಂದಿಗೆ 8 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮರಾ ಮತ್ತು f/2.28 ದ್ಯುತಿರಂಧ್ರದೊಂದಿಗೆ 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮರಾವನ್ನು ಹೊಂದಿದೆ. ಮುಂಭಾಗ ಮತ್ತು ಹಿಂಭಾಗದ ಎರಡೂ ಕ್ಯಾಮೆರಾಗಳು 1080p ವಿಡಿಯೋವನ್ನು 30fps ನಲ್ಲಿ ಸಾಮರ್ಥ್ಯದಲ್ಲಿ ರೆಕಾರ್ಡ್ ಮಾಡಬಹುದು. ಈ ಮೂಲಕ ಮೀಟಿಂಗ್‌ನಲ್ಲಿ ಉತ್ತಮ ಅನುಭವ ಪಡೆಯಬಹುದಾಗಿದೆ.
ಪೊಕೊ ಪ್ಯಾಡ್ ಬ್ಯಾಟರಿ ಹಾಗೂ ಇತರೆ: ಈ ಡಿವೈಸ್ 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 10,000 mAh ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ ಮಾಡಲಿದ್ದು, ಕ್ವಾಡ್ ಸ್ಪೀಕರ್‌ಗಳನ್ನು ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಪ್ಯಾಕ್ ಆಗಿದೆ, ಅಲ್ಲದೆ ಇದು 571 ಗ್ರಾಂ ತೂಕ ಹೊಂದಿದ್ದು, 7.52 ಮಿಮೀ ದಪ್ಪವಾಗಿದೆ. ಉಳಿದಂತೆ ಈ ಪೊಕೊ ಪ್ಯಾಡ್‌ನಲ್ಲಿರುವ ಪ್ಯಾನೆಲ್ TÜV ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್, ಫ್ಲಿಕರ್ ಫ್ರೀ ಮತ್ತು ಸರ್ಕಾಡಿಯನ್ ಫ್ರೆಂಡ್ಲಿ ಪ್ರಮಾಣೀಕೃತವಾಗಿದೆ.

ಪೊಕೊ ಪ್ಯಾಡ್ ಬೆಲೆ ಹಾಗೂ ಲಭ್ಯತೆ: ಇದು ಏಕೈಕ 8GB/256GB ಸ್ಟೋರೇಜ್ ಆಯ್ಕೆ ಪಡೆದಿದ್ದು, ಇದಕ್ಕೆ $330 (ಸುಮಾರು 27,500ರೂ.ಗಳು) ಗೆ ಬೆಲೆ ನಿಗದಿ ಮಾಡಲಾಗಿದೆ. ಆದಾಗ್ಯೂ, ವಿಶೇಷ ಆರಂಭಿಕ ಕೊಡುಗೆಯ ಭಾಗವಾಗಿ ಗ್ರಾಹಕರು ಇದನ್ನು $299 (ಸುಮಾರು 25,000 ರೂ.ಗಳು) ಗೆ ಖರೀದಿಸಲು ಸಾಧ್ಯವಾಗುತ್ತದೆ. ಈ ಡಿವೈಸ್ ಬೂದು ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
ಇದಲ್ಲದೆ ಪೊಕೊ ತನ್ನ ಮೊದಲ ಆಂಡ್ರಾಯ್ಡ್ ಟ್ಯಾಬ್ಲೆಟ್‌ನೊಂದಿಗೆ ವಿವಿಧ ಟೂಲ್ಸ್‌ಗಳನ್ನೂ ಸಹ ಲಾಂಚ್ ಮಾಡಿದೆ. ಅದರಲ್ಲಿ ಕೀಬೋರ್ಡ್ಗೆ $80, ಸ್ಮಾರ್ಟ್ ಪೆನ್ $60 ಮತ್ತು ಬೇಸಿಕ್ ಕವರ್ $20 ಸೇರಿದಂತೆ ಹಲವಾರು ಬಿಡಿಭಾಗಗಳನ್ನು ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಗಮನಿಸಬೇಕಾದ ಮಾಹಿತಿ ಏನೆಂದರೆ ಸದ್ಯಕ್ಕೆ ಭಾರತದಲ್ಲಿ ಪೊಕೊ ಪ್ಯಾಡ್ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ.


Click it and Unblock the Notifications








