Home
Gadgets

'ರಿಯಲ್ ಮಿ ಬಡ್ಸ್‌' ಖರೀದಿಗೆ ಯೋಗ್ಯವೇ?..ಇಲ್ಲಿದೆ ವಿಮರ್ಶೆ!

ರಿಯಲ್ ಮಿ ಕಂಪನಿಯು ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ಹಲವು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ಜೊತೆಗೆ ಹೊಸದಾಗಿ 'ವಾಯರ್‌ಲೆಸ್‌ ಇಯರ್‌ ಬಡ್ಸ್‌' ಬಿಡುಗಡೆ ಮಾಡಿತ್ತು. ಈಗಾಗಲೇ ಗ್ರಾಹಕರ ಗಮನ ಸೆಳೆದಿರುವ 'ರಿಯಲ್‌ ಮಿ ವಾಯರ್‌ಲೆಸ್‌ ಇಯರ್‌ ಬಡ್ಸ್' ಡಿವೈಸ್‌ ನೆಕ್‌ಬ್ಯಾಂಡ್‌, ಬೆಲೆ ಮತ್ತು 12 ಗಂಟೆಗಳ ಬ್ಯಾಟರಿ ಹೈಲೈಟ್‌ ಫೀಚರ್ಸ್‌ಗಳಿಂದ ಗುರುತಿಸಿಕೊಂಡಿದೆ.

ರಿಯಲ್‌ ಮಿ

ರಿಯಲ್‌ ಮಿ

ಹೌದು, ರಿಯಲ್‌ ಮಿ ಕಂಪನಿಯು ಇದೇ ಸೆಪ್ಟೆಂಬರ್ 13ರಂದು ಹೊಸ ರಿಯಲ್‌ ಮಿ ವಾಯರ್‌ಲೆಸ್‌ ಬಡ್ಸ್‌ ಲಾಂಚ್ ಮಾಡಿದ್ದು, ಈ ಡಿವೈಸ್‌ ಬ್ಲೂಟೂತ್ ಬೆಂಬಲಿತವಾಗಿದೆ. ಹಾಗೆಯೇ ಮ್ಯಾಗ್ನೆಟಿಕ್ ಫಾಸ್ಟ್‌ ಫೇರ್‌ ಸೌಲಭ್ಯವನ್ನು ಪಡೆದಿದ್ದು, ಬಜೆಟ್‌ ಬೆಲೆಯ ಪ್ರೈಸ್‌ಟ್ಯಾಗ್‌ ಹೊಂದಿದೆ. ಹಾಗಾದರೇ ರಿಯಲ್‌ ಮಿ ವಾಯರ್‌ಲೆಸ್‌ ಇಯರ್‌ ಬಡ್ಸ್‌ ರಚನೆ ಹೇಗಿದೆ?. ಫೀಚರ್ಸ್‌ಗಳೆನು ಎನ್ನುವ ಕಿರು ವಿಮರ್ಶೆ ಮುಂದೆ ನೋಡೋಣ ಬನ್ನಿರಿ.

ಡಿಸೈನ್ ಮತ್ತು ರಚನೆ

ಡಿಸೈನ್ ಮತ್ತು ರಚನೆ

ರಿಯಲ್‌ ಮಿ ಬಡ್ಸ್‌ ಮಿನಿಮಲಿಸ್ಟಿಕ್ (minimalistic) ಡಿಸೈನ್‌ನಲ್ಲಿದ್ದು, ಅತೀ ಹಗುರವಾಗದ ರಚನೆಯನ್ನು ಹೊಂದಿದೆ. ಈ ಡಿವೈಸ್‌ ಡ್ಯುಯಲ್ ಕಲರ್ ಕಾಂಬಿನೇಶನ್‌ನಲ್ಲಿದ್ದು, ಆಕರ್ಷಕ ಲುಕ್ ಪಡೆದಿದೆ. ನೆಕ್‌ಬ್ಯಾಂಡ್‌ ನಿಕಲ್-ಟೈಟಾನಿಮ್ ನಿಂದ ರಚಿತವಾಗಿದ್ದು, ಕೇವಲ 30ಗ್ರಾಂ ತೂಕವನ್ನು ಒಳಗೊಂಡಿದೆ. ಹಾಗೆಯೇ ಈ ಬಡ್ಸ್‌ಗಳು IPX4 ಸ್ಲಾಶ್‌ ಪ್ರೂಫ್ ರಚನೆಯನ್ನು ಸಹ ಹೊಂದಿವೆ. ತನ್ನ ವರ್ಗದಲ್ಲಿಯೇ ಇದು ಬೆಸ್ಟ್‌ ರಚನೆ ಎಂದು ಹೇಳಬಹುದು.

ಫೀಚರ್ಸ್‌ಗಳ ಕಾರ್ಯ

ಫೀಚರ್ಸ್‌ಗಳ ಕಾರ್ಯ

ರಿಯಲ್‌ ಮಿ ಬಡ್ಸ್‌ ಡಿವೈಸ್‌ಗಳು 11.2mm ಆಡಿಯೋ ಡ್ರೈವರ್ಸ್‌ಗಳನ್ನು ಹೊಂದಿದ್ದು, ಅತ್ಯುತ್ತಮ ಬಾಸ್‌ ಬೂಸ್ಟ್ ಸಾಮರ್ಥ್ಯವನ್ನು ಔಟ್‌ಪುಟ್ ನೀಡಲಿದೆ. ಇದರೊಂದಿಗೆ ಸೌಂಡ್‌ ಗುಣಮಟ್ಟವು ಡೈನಾಮಿಕ್ ಮತ್ತು ಪವರ್‌ಫುಲ್ ಆಗಿದ್ದು, ಅದಕ್ಕಾಗಿ ಬಡ್ಸ್‌ಗಳ ತಯಾರಿಕೆಯಲ್ಲಿ 'ನಾರ್ವೇಜಿಯನ್ ಡಿಜೆ ಅಲನ್ ವಾಕರ್ಸ್ನ ನೆರವು ಪಡೆಯಲಾಗಿದೆ. ಹಾಗೆಯೇ ರಿಯಲ್‌ ಮಿ ಬಡ್ಸ್‌ಗಳು ಕಿವಿಗಳಿಗೆ ಕಂಫರ್ಟ್‌ ಗ್ರೀಪ್ ಎನಿಸಲಿದ್ದು, ಗುಣಮಟ್ಟದ ಸೌಂಡ್‌ ನಿರೀಕ್ಷಿಸಬಹುದು.

ಬ್ಯಾಟರಿ ಲೈಫ್ ಹೇಗಿದೆ

ಬ್ಯಾಟರಿ ಲೈಫ್ ಹೇಗಿದೆ

ರಿಯಲ್ ಮಿ ವಾಯರ್‌ಲೆಸ್‌ ಬಡ್ಸ್‌ ತನ್ನ ವರ್ಗದಲ್ಲಿಯೇ ಬೆಸ್ಟ್‌ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಒಮ್ಮೆ ಚಾರ್ಜ್ ಮಾಡಿದರೇ ಸುಮಾರು 12 ಗಂಟೆಗಳ ಬ್ಯಾಟರಿ ಬಾಳಿಕೆ ಒದಗಿಸಲಿದೆ. ಹಾಗೆಯೇ ಇನ್ನೊಂದು ವಿಶೇಷವೆಂದರೇ ಕೇವಲ 10 ನಿಮಿಷದ ಚಾರ್ಜ್ ಮಾಡಿದರೇ ಸುಮಾರು 100 ನಿಮಿಷಗಳ ಬ್ಯಾಟರಿ ಬಾಳಿಕೆ ಲಭ್ಯವಾಗಲಿದೆ. ಲಾಂಗ್ ಜರ್ನಿ ಸಮಯದಲ್ಲಿ ಬ್ಯಾಟರಿ ಬಾಳಿಕೆ ಉತ್ತಮ ಎನಿಸಲಿದೆ. ಇದರೊಂದಿಗೆ ಬ್ಲೂಟೂತ್ v5.0, IPX4 ಸ್ಲಾಶ್‌ ಪ್ರೂಫ್ ಸೌಲಭ್ಯಗಳು ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ.

ಬೆಲೆ ಎಷ್ಟು

ಬೆಲೆ ಎಷ್ಟು

ರಿಯಲ್ ಮಿ ವಾಯರ್‌ಲೆಸ್‌ ಬಡ್ಸ್‌ ಬೆಲೆಯು 1799ರೂ.ಗಳಾಗಿದ್ದು, ಗ್ರಾಹಕರು ಅಮೆಜಾನ್ ತಾಣದಲ್ಲಿ ಖರೀದಿಸಬಹುದಾಗಿದೆ. ರಿಯಲ್ ಮಿ ವಾಯರ್‌ಲೆಸ್‌ ಬಡ್ಸ್‌ ಡಿವೈಸ್‌ ಆರೆಂಜ್, ಗ್ರೀನ್ ಮತ್ತು ಬ್ಲ್ಯಾಕ್ ಮತ್ತು ಯೆಲ್ಲೊ ಮಿಕ್ಸ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಬೋಟ್‌ 225F ಮತ್ತು ಶಿಯೋಮಿ ವಾಯರ್‌ಲೆಸ್‌ ಇಯರ್‌ಫೋನ್‌ಗಳಿಗೆ ನೇರ ಫೈಟ್‌ ನೀಡಲಿದೆ.

ಕೊನೆಯ ಮಾತು

ಕೊನೆಯ ಮಾತು

2000ರೂ ಪ್ರೈಸ್‌ಟ್ಯಾಗ್‌ ಒಳಗಿನ ವಾಯರ್‌ಲೆಸ್‌ ಇಯರ್‌ಫೋನ್‌ಗಳಿಗೆ ಹೋಲಿಸಿದರೇ 'ರಿಯಲ್‌ ಮಿ ವಾಯರ್‌ಲೆಸ್‌ ಬಡ್ಸ್‌' ಅತ್ಯುತ್ತಮ ಆಯ್ಕೆ ಎನ್ನಬಹುದಾಗಿದೆ. ಈ ಡಿವೈಸ್‌ ಹಗುರವಾಗಿದೆ. ಕಿವಿಗಳಿಗೆ ಹಿತಕರ ಅನಿಸುವ ಡಿಸೈನ್ ಪಡೆದಿದ್ದು, ಸೌಂಡ್‌ನ ಗುಣಮಟ್ಟವು ಸಹ ತನ್ನ ವರ್ಗದಲ್ಲಿಯೇ ಬೆಸ್ಟ್‌ ಆಗಿದೆ. ಹೀಗಾಗಿ ಖರೀದಿಗೆ ಮೋಸವಿಲ್ಲ ಅನಿಸುತ್ತದೆ.

Best Mobiles in India

English summary
RealmeBuds Wireless can go up to 12 hours in a single charge. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+