ಮಾರುಕಟ್ಟೆಯಲ್ಲಿ ಜಿಯೋ ವೈ-ಫೈ ಹವಾ ಜೋರಾಗಿದೆ..!
ರಿಲಯನ್ಸ್ ಮಾಲೀಕತ್ವದ ಜಿಯೋ 4G ಗೆ ಸಂಭಂದಿಸಿದ ಎಲ್ಲಾ ವಿಚಾರಗಳಲ್ಲೂ ಹೊಸ ದಾಖಲೆಯನ್ನು ನಿರ್ಮಿಸಿದೆ.
ದೇಶಿಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ರಿಲಯನ್ಸ್ ಮಾಲೀಕತ್ವದ ಜಿಯೋ 4G ಗೆ ಸಂಭಂದಿಸಿದ ಎಲ್ಲಾ ವಿಚಾರಗಳಲ್ಲೂ ಹೊಸ ದಾಖಲೆಯನ್ನು ನಿರ್ಮಿಸಿದೆ. ಇದೆ ಮಾದರಿಯಲ್ಲಿ 4G/LTE ಡೇಟಾ ಕಾರ್ಡ್ ಮಾರಾಟದಲ್ಲಿಯೂ ಮೊದಲ ಸ್ಥಾನವನ್ನು ಅಲಂಕರಿಸಿದೆ.

ಓದಿರಿ: ಫೇಸ್ಬುಕ್ನಲ್ಲಿ ಸ್ಟಾರ್ ಆಗಬೇಕಾ, ನಿಮ್ಮ ಪೋಸ್ಟಿಗೂ ಸಾವಿರ ಲೈಕ್ಸ್ ಬೇಕಾ? ಇಲ್ಲಿದೆ ರಾಜಮಾರ್ಗ.!!!!
ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಹುವಾವೇ ಕಂಪನಿಯ 4G/LTE ಡೇಟಾ ಕಾರ್ಡ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು, ಈಗ ಆ ಸ್ಥಾನವನ್ನು ರಿಲಯನ್ಸ್ ಅಲಂಕರಿಸಿದೆ ಎನ್ನಲಾಗಿದೆ.

ಮೊದಲನೇ ಸ್ಥಾನ:
ಕೆಲವು ದಿನಗಳ ಹಿಂದೆಯಷ್ಟೆ ಜಿಯೋ ತನ್ನ ಡೇಟಾ ಕಾರ್ಡ್ ಮೇಲೆ ಆಫರ್ ಘೋಷಣೆ ಮಾಡಿತ್ತು. ಇದಾದ ಬೆನ್ನಲ್ಲಿ ಜಿಯೋ 4G/LTE ಡೇಟಾ ಕಾರ್ಡ್ ಮಾರಾಟ ಅಧಿಕವಾಗಿದ್ದು, ಈ ಹಿನ್ನಲೆಯಲ್ಲಿ 2016-17ರ ಎರಡನೇ ಅವಧಿಯಲ್ಲಿ ಮೊದಲನೇ ಸ್ಥಾನವನ್ನು ಅಲಂಕರಿಸಿದೆ.

ಮಾರುಕಟ್ಟೆಯ ಮೇಲೆ ಹಿಡಿತ:
ಜಿಯೋ ಒಟ್ಟು 77% ರಷ್ಟು ಮಾರುಕಟ್ಟೆಯ ಮೇಲೆ ಹಿಡಿತವನ್ನು ಸಾಧಿಸಿದರೆ, ಹುವಾವೇ ಶೇ. 10 ರಷ್ಟು ಪಾಲನ್ನು ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ZTE ಇದ್ದು, ಶೇ.6 ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ.

ವೇಗದ ಕಾರ್ಯಚರಣೆ:
4G/LTE ಡೇಟಾ ಕಾರ್ಡ್ ಸೇವೆ ಆರಂಭವಾದ ನಂತರದಲ್ಲಿ 3G ಡೇಟಾ ಕಾರ್ಡ್ ಮಾರುಕಟ್ಟೆಯೂ ಶೇ. 67 ರಷ್ಟು ಕಡಿತಗೊಂಡಿದೆ ಎನ್ನಲಾಗಿದೆ. 4G/LTE ಡೇಟಾ ಕಾರ್ಡ್ ಗಳು ವೇಗವಾಗಿ ಕಾರ್ಯನಿರ್ವಹಿಸುತ್ತಿರುವುದು ಇದಕ್ಕೆ ಕಾರಣವಾಗಿದೆ.


Click it and Unblock the Notifications








