ರಿಲಾಯನ್ಸ್ 'ಜಿಯೋ ಡಾಂಗಲ್ 2' ಬೆಲೆ ರೂ.1,999 : ತಿಳಿಯಲೇಬೇಕಾದ 5 ಅಂಶಗಳು
ರಿಲಾಯನ್ಸ್ ಜಿಯೋ 'ಜಿಯೋಫೈ 2' ವೈರ್‌ಲೆಸ್ ಹಾಟ್‌ಸ್ಪಾಟ್ ಡಿವೈಸ್ ಅನ್ನು ಲಾಂಚ್ ಮಾಡಿದೆ. ಅಂದಹಾಗೆ 'ಜಿಯೋಫೈ 2' ಮೊದಲ ಜೆನೆರೇಷನ್ ಮಾಡೆಲ್ ಸ್ಥಾನವನ್ನು ಪಡೆದಿದೆ. ಕೇವಲ ಒಂದು ತಿಂಗಳ ಒಳಗಾಗಿ 'ಜಿಯೋ ಡಾಂಗಲ್ 2' ಡಿವೈಸ್ ಅನ್ನು ಲಾಂಚ್ ಮಾಡಿದೆ.
'ಜಿಯೋ ಡಾಂಗಲ್ 2' ಡಿವೈಸ್ USB ಯೋಜಿತ ವೈಫೈ ಹಾಟ್‌ಸ್ಪಾಟ್ ಆಗಿದೆ. ಇದನ್ನು ರಿಲಾಯನ್ಸ್(Reliance) ಡಿಜಿಟಲ್ ಸ್ಟೊರ್‌ಗಳಲ್ಲಿ ಪಡೆಯಬಹುದಾಗಿದೆ. ಅಲ್ಲದೇ ಜಿಯೋ ಸಿಮ್ ಜೊತೆಗೆ ಬಳಸಬಹುದು. ಇಂಟರ್ನೆಟ್‌ಗೆ ಕನೆಕ್ಟ್ ಆಗಿ ಅನ್‌ಲಿಮಿಟೆಡ್ 'ವೆಲ್ಕಮ್ ಆಫರ್' ಅನ್ನು ಎಂಜಾಯ್ ಮಾಡಬಹುದಾಗಿದೆ.
'ಜಿಯೋ ಡಾಂಗಲ್ 2' ಡಿವೈಸ್ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಮತ್ತು ಜಿಯೋ ನೆಟ್‌ವರ್ಕ್‌ನಿಂದ ಲಭ್ಯವಾಗುವ ಬೆನಿಫಿಟ್‌ಗಳನ್ನು ಕೆಳಗಿನ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.
ರಿಲಾಯನ್ಸ್ ಜಿಯೋ ಸಿಮ್ ಖರೀದಿಗೆ ಮುನ್ನ ತಿಳಿಯಲೇಬೇಕಾದ 5 ಆಘಾತಕಾರಿ ಸತ್ಯಗಳು

ಇನ್‌ಬಿಲ್ಟ್ ಬ್ಯಾಟರಿ ಪ್ಯಾಕ್ ಇಲ್ಲ
'ಜಿಯೋ ಡಾಂಗಲ್ 2' 2,300 mAh ಬ್ಯಾಟರಿ ಹೊಂದುವ ಸಾಮಾರ್ಥ್ಯ ಇದೆ. ಜಿಯೋಫೈ ಮೊದಲ ಜೆನೆರೇಷನ್ ಡಿವೈಸ್ 2,600 mAh ಬ್ಯಾಟರಿ ಹೊಂದಿತ್ತು. ಈ ಎರಡು ಡಿವೈಸ್‌ಗಳು ಸಹ 5-8 ಗಂಟೆ ಬ್ಯಾಟರಿ ಲೈಪ್ ಹೊಂದಿವೆ. ಆದರೆ 'ಜಿಯೋ ಡಾಂಗಲ್ 2' ಇನ್‌ಬಿಲ್ಟ್ ಬ್ಯಾಟರಿ ಪ್ಯಾಕ್ ಹೊಂದಿಲ್ಲ.

ವೈಫೈ ಸಿಗ್ನಲ್ ಪಡೆಯಲು ಪ್ಲಗ್ ಮಾಡಿ
'ಜಿಯೋ ಡಾಂಗಲ್ 2'ನಲ್ಲಿ ಇನ್‌ಬಿಲ್ಟ್ ಬ್ಯಾಟರಿ ಇಲ್ಲ. ಆದ್ದರಿಂದ ವೈಫೈ ಸಿಗ್ನಲ್ ಪಡೆಯಲು 'ಜಿಯೋ ಡಾಂಗಲ್ 2' ಡಿವೈಸ್ ಅನ್ನು ಲ್ಯಾಪ್‌ಟಾಪ್ ಅಥವಾ ಪವರ್ ಮೂಲಕ್ಕೆ ಪ್ಲಗ್ ಮಾಡಿ. ಡಿವೈಸ್ ಸಾಮಾನ್ಯ ಡಾಂಗಲ್‌ನಂತೆ ಕಾಣುತ್ತದೆ.

HD ಕರೆಗಳ ಎಂಜಾಯ್ ಮಾಡಬಹುದು
ಇತರೆ ಜಿಯೋಫೈ ಡಿವೈಸ್‌ಗಳಂತೆ 'ಜಿಯೋ ಡಾಂಗಲ್ 2'ನಿಂದ, ಸ್ಮಾರ್ಟ್‌ಫೋನ್ 4G ಅಲ್ಲದಿದ್ದರೂ ಸಹ HD ವಾಯ್ಸ್ ಕರೆಗಳನ್ನು ಜಿಯೋ4Gವಾಯ್ಸ್ ಆಪ್ ಬಳಸಿ ಮಾಡಬಹುದು. ಆದರೆ ನಿಮ್ಮ ಡಿವೈಸ್ ಜಿಯೋ ವೈಫೈ ಹಾಟ್‌ಸ್ಪಾಟ್‌ಗೆ ಕನೆಕ್ಟ್ ಆಗಿರಬೇಕು.

'ಜಿಯೋ ಡಾಂಗಲ್ 2' 10 ಡಿವೈಸ್‌ಗಳಿಗೆ ಸಪೋರ್ಟ್ ಮಾಡುತ್ತದೆ
'ಜಿಯೋ ಡಾಂಗಲ್ 2' 10 ವೈಫೈ ಇರುವ ಡಿವೈಸ್‌ಗಳಿಗೆ ಕನೆಕ್ಟ್ ಆಗಲು ಸಪೋರ್ಟ್ ಮಾಡುತ್ತದೆ. 10 ಡಿವೈಸ್‌ಗಳು ಸಹ ಜಿಯೋ ನೆಟ್‌ವರ್ಕ್‌ನಿಂದ ಇಂಟರ್ನೆಟ್ ಸಂಪರ್ಕ ಪಡೆಯಬಹುದು. ಇದು ಇತರೆ ವೈರ್‌ಲೆಸ್ ಹಾಟ್‌ಸ್ಪಾಟ್ ಡಿವೈಸ್‌ಗಳ ರೀತಿಯಲ್ಲಿ ವರ್ಕ್ ಆಗುತ್ತದೆ.

'ಜಿಯೋ ಡಾಂಗಲ್ 2' ಬೆಲೆ ರೂ.1,999
ರಿಲಾಯನ್ಸ್ ಜಿಯೋದ 'ಜಿಯೋ ಡಾಂಗಲ್ 2' ಬೆಲೆ ರೂ.1,999. ಅಂದಹಾಗೆ ಜಿಯೋಫೈ 2 ಮತ್ತು ಜಿಯೋಫೈ ಡಿವೈಸ್ ಒಂದೇ ರೀತಿಯ ಬೆಲೆ ಆಗಿವೆ.


Click it and Unblock the Notifications








