ರಿಲಾಯನ್ಸ್ ಜಿಯೋ ಸಿಮ್ ಖರೀದಿಗೆ ಮುನ್ನ ತಿಳಿಯಲೇಬೇಕಾದ 5 ಆಘಾತಕಾರಿ ಸತ್ಯಗಳು

By Suneel
|

ರಿಲಾಯನ್ಸ್ ಜಿಯೋ'ದ ಅತಿ ಕಡಿಮೆ ಬೆಲೆ(Cheap) ಟ್ಯಾರಿಫ್ ಪ್ಲಾನ್‌ಗಳು ಮತ್ತು ಕೊಡುಗೆಗಳು ಇಂದು ಪ್ರತಿಯೊಬ್ಬರು ಸಿಮ್ ಖರೀದಿ ಮಾಡಲು ಕಾರಣವಾಗಿವೆ. ಪ್ರತಿಯೊಂದು ರಿಲಾಯನ್ಸ್ ಡಿಜಿಟಲ್‌ ಮತ್ತು ಎಕ್ಸ್‌ಪ್ರೆಸ್‌ ಮಿನಿ ಸ್ಟೋರ್‌ಗಳ ಹೊರಗೆ ಗ್ರಾಹಕರು ಪ್ರತಿದಿನ ಸಾಲಿನಲ್ಲಿ ನಿಂದು ಜಿಯೋ ಸಿಮ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

Read also:ರಿಲಾಯನ್ಸ್ ಜಿಯೋ ಟ್ಯಾರಿಫ್ ಪ್ಲಾನ್ ಲೀಕ್: ರೂ. 50ಕ್ಕೆ 10GB 4G ನಿಜವೇ?

ಜಿಯೋ ಸಿಮ್ ಅತ್ಯಾಕರ್ಷಕ ಟ್ಯಾರಿಫ್ ಪ್ಲಾನ್‌ ಮತ್ತು ಉಚಿತ ಡಾಟಾ ಪಡೆಯುವ ಖುಷಿಯಲ್ಲಿ ಜಿಯೋ ಸಿಮ್‌'ಗೆ ಸಂಬಂಧಿಸಿದಂತೆ ಜನರು ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ಮರೆತಿದ್ದಾರೆ. ಜಿಯೋ ಸಿಮ್ ಪಡೆಯುತ್ತಿರುವ ಪತ್ರಿಯೊಬ್ಬರು ಸಹ ರಿಲಾಯನ್ಸ್ ಜಿಯೋ ಉಚಿತ ವಾಯ್ಸ್ ಕರೆ, ಅನ್‌ಲಿಮಿಟೆಡ್ 4G ಡಾಟಾ ಮತ್ತು ಜಿಯೋ ಆಪ್‌ ಆಕ್ಸೆಸ್‌ ನೀಡುತ್ತಿದೆ ಎಂದು ನಂಬಿದ್ದಾರೆ.

ಆದರೆ ಸಿಮ್ ಪಡೆಯುವ ಮೊದಲು ಜಿಯೋ(Jio) ಸಿಮ್‌ ಬಗ್ಗೆ ನಾವು ತಿಳಿಸುವ 5 ಅಘಾತಕಾರಿ ಸತ್ಯಗಳನ್ನು ನೀವು ತಿಳಿಯಲೇಬೇಕು. ಮಾಹಿತಿಗಳನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

Read also:ರಿಲಾಯನ್ಸ್ ಜಿಯೋಗೆ ನಿಮ್ಮ ನಂಬರ್ ಪೋರ್ಟ್‌ ಮಾಡದಿರಿ: 6 ಕಾರಣಗಳು

ಮೆಸೇಜ್‌ಗಳು(SMS) ಅನ್‌ಲಿಮಿಟೆಡ್‌

ಮೆಸೇಜ್‌ಗಳು(SMS) ಅನ್‌ಲಿಮಿಟೆಡ್‌

ರಿಲಾಯನ್ಸ್ ಜಿಯೋ ಪ್ರಕಟಣೆಯಲ್ಲಿ ಮೆಸೇಜ್‌ಗಳು ಜಿಯೋ ನೆಟ್‌ವರ್ಕ್‌ನಲ್ಲಿ ಉಚಿತ ಎಂದು ತಿಳಿಸಲಾಗಿದೆ, ಅಲ್ಲದೇ ಟ್ಯಾರಿಫ್ ಪ್ಲಾನ್‌ ವಿವರಣೆಯಲ್ಲಿ ಮೆಸೇಜ್‌ಗಳನ್ನು ಕಳುಹಿಸುವ ಬಗ್ಗೆಯು ಮಾಹಿತಿ ಖಚಿತಸಪಡಿಸಲಾಗಿದೆ. ರೂ.19 ಮತ್ತು ರೂ.149 ನಡುವಿನ ಟ್ಯಾರಿಫ್ ಪ್ಲಾನ್ ಸಬ್‌ಸ್ಕ್ರೈಬರ್‌ಗಳು ಗರಿಷ್ಟ 100 ಮೆಸೇಜ್‌ಗಳನ್ನು ಕಳುಹಿಸಬಹುದು ಎಂದು ಹೇಳಿದೆ. ಇದು 28 ದಿನಗಳಿಗೆ. ಟ್ಯಾರಿಫ್‌ ಪ್ಲಾನ್ ಬಳಕೆದಾರರು ರೂ.299 ಮತ್ತು ಅದಕ್ಕಿಂತ ಹೆಚ್ಚಿನ ಪ್ಲಾನ್ ಪಡೆದವರು ದಿನ ಒಂದಕ್ಕೆ ಮಾತ್ರ 100 ಮೆಸೇಜ್‌ಗಳನ್ನು ಕಳುಹಿಸಬಹುದು.

ಅನ್‌ಲಿಮಿಟೆಡ್‌ ರಾತ್ರಿ ಡಾಟಾ

ಅನ್‌ಲಿಮಿಟೆಡ್‌ ರಾತ್ರಿ ಡಾಟಾ

ಇದು ಇನ್ನೊಂದು ಅಘಾತಕಾರಿ ಮಾಹಿತಿ. ಟ್ಯಾರಿಫ್‌ ಪ್ಲಾನ್‌ಗಳು ರಾತ್ರಿ ಡಾಟಾ ಉಚಿತ ಎಂದು ಹೇಳಿವೆ. ಇದೊಂದು ನೈಸ್‌ ಡೀಲ್‌ ಎಂದು ಗ್ರಾಹಕರು ಭಾವಿಸಿದ್ದಾರೆ. ಆದರೆ ನೀವು ಟೈಮ್‌ ಅನ್ನು ಚೆಕ್‌ ಮಾಡಬೇಕು. ಕಾರಣ ರಾತ್ರಿ ಡಾಟಾ ಬಳಕೆ ಅವಕಾಶ 2AM ಇಂದ 5AM ವರೆಗೆ. ಅಂದರೆ ದಿನ ಒಂದಕ್ಕೆ ಕೇವಲ 3 ಗಂಟೆಗಳ ಕಾಲ. ಅಲ್ಲದೇ ಅದು ಜನರು ಹೆಚ್ಚು ನಿದ್ದೆ ಮಾಡುವ ಸಮಯವಾಗಿದೆ.

ಎಂಜಾಯ್‌ ಅನ್‌ಲಿಮಿಟೆಡ್‌ ಡಾಟಾ ಪ್ಲಾನ್‌

ಎಂಜಾಯ್‌ ಅನ್‌ಲಿಮಿಟೆಡ್‌ ಡಾಟಾ ಪ್ಲಾನ್‌

ಪ್ರತಿಯೊಬ್ಬರು ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅಂದಹಾಗೆ ಗ್ರಾಹಕರು ಪ್ರತಿಯೊಂದು ಟ್ಯಾರಿಫ್ ಪ್ಲಾನ್‌ನಲ್ಲೂ ಸಹ ಅನ್‌ಲಿಮಿಟೆಡ್‌ 4G ಡಾಟಾವನ್ನು ರಿಲಾಯನ್ಸ್ ಜಿಯೋ ಆಫರ್‌ ಮಾಡುತ್ತಿದೆ ಎಂದು ತಿಳಿದಿದ್ದಾರೆ. ಆದರೆ ದಿನದಲ್ಲಿ ಜಿಯೋ ಸಿಮ್ ಬಳಿಕೆದಾರರು 4GB ಡಾಟಾ ಬಳಕೆ ಮಾಡಿದ ನಂತರ ಅತಿವೇಗದ ಸಂಪರ್ಕ ಕಡಿತಗೊಳ್ಳುತ್ತದೆ. ಒಮ್ಮೆ 4GB ಮುಗಿಸದ ನಂತರ ಡಾಟಾ ವೇಗ 128 kbps ಗೆ ಕುಸಿಯುತ್ತದೆ.

ಜಿಯೋ ಆಪ್‌ಗಳ ಆಕ್ಸೆಸ್ ಸಂಪೂರ್ಣ ಉಚಿತ

ಜಿಯೋ ಆಪ್‌ಗಳ ಆಕ್ಸೆಸ್ ಸಂಪೂರ್ಣ ಉಚಿತ

ರಿಲಾಯನ್ಸ್‌ ಜಿಯೋ ತನ್ನ ಎಲ್ಲಾ ಆಪ್‌ಗಳ ಆಕ್ಸೆಸ್‌ ಉಚಿತ ಮತ್ತು ಸೇವೆಯು ಉಚಿತ ಎಂದು ಹೇಳಿದೆ. ಜಿಯೋ 'JioCinema, JioTV, JioMags, JioMusic, JioNewspaper, JioCloud, JioSecurity ಆಪ್‌ಗಳನ್ನು ಒಳಗೊಂಡಿದೆ. ಕಂಪನಿ ಈ ಆಪ್‌ಗಳಿಗೆ ಉಚಿತ ಸಬ್‌ಸ್ಕ್ರಿಪ್ಶನ್‌ ಅನ್ನು ಡಿಸೆಂಬರ್ 31 ರವರೆಗೆ ಆಫರ್‌ ಮಾಡಿದೆ. ಆದರೆ ಸತ್ಯಾಂಶ ಎಂದರೆ ಈ ಆಪ್‌ಗಳು ಬಳಕೆಯು ಸಹ ನಿಮ್ಮ ಡಾಟಾದಲ್ಲಿ ಕೌಂಟ್‌ ಆಗುತ್ತದೆ. ಈ ಆಪ್‌ಗಳು ಕೇವಲ ನೀವು ಜಿಯೋ ನೆಟ್‌ವರ್ಕ್‌ಗೆ ಸಂಪರ್ಕ ಗೊಂಡಾಗ ಮಾತ್ರ ಆಕ್ಸೆಸ್‌ ನೀಡುತ್ತದೆ. ಆದರೆ ಜಿಯೋ ವೈಫೈಗೆ ಅಲ್ಲ.

ರೂ.50 ಗೆ 1GB

ರೂ.50 ಗೆ 1GB

ಜಿಯೋ ಖರೀದಿ ಬಯಸುವ ಗ್ರಾಹಕರ ನಂಬಿಕೆ ಎಂದರೆ 1GB 4G ಡಾಟಾ ಬೆಲೆ ರೂ.50 ಎನ್ನುವುದು. ಆದರೆ ಗ್ರಾಹಕರು ಅರ್ಥ ಮಾಡಿಕೊಳ್ಳಬೇಕಾದ ಅಂಶವೆಂದರೆ ಅದು ಈ ಬೆಲೆ ಸೆಲ್ಯೂಲಾರ್ ಡಾಟಾಗೆ ಅಲ್ಲ. ಇದು ಕೇವಲ ಜಿಯೋನೆಟ್'ಗೆ ಮಾತ್ರ. 4G ಸೇವೆಯೊಂದಿಗೆ, ಜಿಯೋ ಸಾರ್ವಜನಿಕ ಹಾಟ್‌ಸ್ಪಾಟ್‌ ಎಂದು ಕರೆಯಲಾಗುವ ಜಿಯೋನೆಟ್‌(JioNet)ಗೆ ರೂ. 50 ರ ಡಾಟಾವನ್ನು ನಿಯೋಜಿಸುತ್ತದೆ. ಪ್ರತಿಯೊಂದು ಪ್ಲಾನ್‌ನಿಂದ ಸೆಲ್ಯೂಲಾರ್‌ ಡಾಟಾವನ್ನು ಪಡೆಯುತ್ತೀರಿ ಮತ್ತು ಡಾಟಾವು ಜಿಯೊನೆಟ್‌ಗೆ ಟೆಥರಿಂಗ್‌ ಮಾಡಿದಾಗ ಬಳಸಬಹುದು. ರೂ.50 ರ 1GB ಡಾಟಾವನ್ನು ಜಿಯೋನೆಟ್ ಪರಿಧಿಯಲ್ಲಿ ಪಡೆಯುತ್ತೀರಿ, ಆದರೆ ಸೆಲ್ಯೂಲಾರ್‌ ಡಾಟಾವಲ್ಲ.

Best Mobiles in India

English summary
5 Shocking MYTHS You Should Know Before Getting a Reliance Jio 4G SIM. Read more about this in kannad.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X