ಆರು ಸ್ಪೆಷಲ್ ಫೀಚರ್ಸ್‌ಗಳ ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಟಿವಿ ಖರೀದಿಗೆ ಯೋಗ್ಯ.!
ದಕ್ಷಿಣ ಕೋರಿಯಾ ಮೂಲದ ಟೆಕ್ ದೈತ್ಯ ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್‌ಟಿವಿಗಳಲ್ಲಿ ನೂತನ ಫೀಚರ್ಸ್‌ಗಳನ್ನು ಪರಿಚಯಿಸಿ ತನ್ನದೇ ಛಾಪು ಮೂಡಿಸಿದೆ. ಸ್ಮಾರ್ಟ್‌ಟಿವಿ ಪ್ರೀಮಿಯಮ್ ಸೆಗ್‌ಮೆಂಟ್‌ನಲ್ಲಿ ಜನಪ್ರಿಯವಾಗಿದ್ದು, ಗ್ರಾಹಕರ ¸ಸ್ಮಾರ್ಟ್‌ಟಿವಿ ಆಯ್ಕೆಯ ಲಿಸ್ಟ್‌ನಲ್ಲಿ ಮೊದಲಿನಲ್ಲಿರುತ್ತದೆ. ಇತ್ತೀಚಿಗೆ ಕಂಪನಿಯು ತನ್ನ ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಸ್ಮಾರ್ಟ್‌ಟಿವಿ ಸರಣಿಯನ್ನು ಬಿಡುಗಡೆ ಮಾಡಿದೆ.

ಸ್ಯಾಮ್‌ಸಂಗ್ UHD ಟಿವಿ ಶ್ರೇಣಿಯಲ್ಲಿ ಸ್ಮಾರ್ಟ್‌ಟಿವಿಯನ್ನು ರಿಲೀಸ್ ಮಾಡಿದ್ದು, ಇದು 4K UHD ಟಿವಿ ಆಗಿದೆ ಜೊತೆಗೆ ಲೈವ್ ಕ್ಯಾಸ್ಟ್, ಟ್ಯೂನ್ ಸ್ಟೇಷನ್, ಸ್ಮಾರ್ಟ್ ಕನ್ವರ್ಜೆನ್ಸ್ ಮತ್ತು ಲ್ಯಾಗ್-ಫ್ರೀ ಗೇಮಿಂಗ್ನಂತಹ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಗ್ರಾಹಕ ನಿರೀಕ್ಷೆಗಳನ್ನು ಪೂರೈಸುವತ್ತ ಹೆಜ್ಜೆ ಇರಿಸಿದ್ದೇವೆ ಎಂದು ಕಂಪನಿಯ ಆನ್‌ಲೈನ್ ಉದ್ಯಮದ ಹಿರಿಯ ಉಪಾಧ್ಯಕ್ಷ ರಾಜು ಪುಲನ್ ಹೇಳಿದ್ದಾರೆ.

ಮೂರು ವೇರಿಯಂಟ್ ಮಾದರಿಗಳಲ್ಲಿ ದೊರೆಯಲಿದ್ದು, ಸ್ಯಾಮ್‌ಸಂಗ್ ಸ್ಮಾರ್ಟ್‌ಟಿವಿಯು ಆರು ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದೆ. ಗ್ರಾಹಕರ ಟಿವಿ ವೀಕ್ಷಣಾ ಅನುಭವವನ್ನು ಅತ್ಯುತ್ತಮಗೊಳಿಸಲು ಸ್ಯಾಮ್‌ಸಂಗ್ PurColor ಟೆಕ್ನಾಲಜಿಯನ್ನು ಅಳವಡಿಸಿಕೊಂಡಿದೆ. ಹಾಗಾದರೇ ಸ್ಯಾಮ್‌ಸಾಂಗ್ ಹೊಸ UHD ಟಿವಿ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಸ್ಪೆಷಲ್ ಸಿಕ್ಸ್ ಫೀಚರ್ಸ್
ಸ್ಯಾಮ್‌ಸಂಗ್ ಸ್ಮಾರ್ಟ್‌ಟಿವಿಯು ಲೈವ್ ಕ್ಯಾಸ್ಟ್, ಟ್ಯೂನ್ ಸ್ಟೇಷನ್, ಸ್ಮಾರ್ಟ್ ಕನ್ವರ್ಜೆನ್ಸ್, ಲಾಗ್-ಫ್ರೀ ಗೇಮಿಂಗ್, ಸ್ಕ್ರೀನ್ ಮಿರರಿಂಗ್ ಮತ್ತು 4K ರೆಸಲ್ಯೂಶನ್ ಕ್ವಾಲಿಟಿ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದ್ದು, ಇದು ಗ್ರಾಹಕರಿಗೆ ಹೊಸ ವೀಕ್ಷಣೆಯ ಅನುಭೂತಿಯನ್ನು ನೀಡಲಿದೆ. ಈ ಹೊಸ ಫೀಚರ್ಸ್‌ಗಳು ಗ್ರಾಹಕರನ್ನು ಸ್ಮಾರ್ಟ್‌ಟಿವಿಯತ್ತ ಸೆಳೆಯುತ್ತವೆ.

ಮೂರು ವೇರಿಯಂಟ್‌ಗಳು
ಸ್ಯಾಮ್‌ಸಂಗ್ ಕಂಪನಿಯ ಹೊಸ UHD ಸ್ಮಾರ್ಟ್‌ಟಿವಿಯು ಮೂರು ವೇರಿಯಂಟ್‌ಗಳಲ್ಲಿ ದೊರೆಯಲಿದ್ದು, ಕ್ರಮವಾಗಿ 43 ಇಂಚು, 50 ಇಂಚು ಮತ್ತು 55 ಇಂಚು ಗಾತ್ರಗಳಲ್ಲಿ ಲಭ್ಯವಾಗಲಿದೆ. ಈ ಎಲ್ಲ ಸ್ಮಾರ್ಟ್‌ಟಿವಿಗಳಲ್ಲಿ ಫೀಚರ್ಸ್ ಒಂದೇ ಆಗಿದ್ದು. ಗ್ರಾಹಕರಿಗೆ ಆಯ್ಕೆಗಳನ್ನು ನೀಡಲಾಗಿದ್ದು, ಇದು ಗ್ರಾಹಕರನ್ನು ಸೆಳೆಯಲು ನೆರವಾಗಲಿದೆ.

ಗೇಮ್ ಮೋಡ್
ಸ್ಯಾಮ್‌ಸಂಗ್ ಸ್ಮಾರ್ಟ್‌ಟಿವಿಯು ಗೇಮಿಂಗ್ ಆಡಲು ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದ್ದು, ಅದಕ್ಕಾಗಿ ಗೇಮ್ ಮೋಡ್ ಆಯ್ಕೆಯನ್ನು ನೀಡಿದೆ. ಗ್ರಾಹಕರು ಗೇಮ್ಸ್ ಆಡಲು ಇದರಲ್ಲಿರುವ ಕ್ವಾರ್ಡ್‌ಕೋರ್ ಪ್ರೊಸೆಸರ್ ಸಹಕರಿಸುತ್ತದೆ. ಹೀಗಾಗಿ ಈ ಸ್ಮಾರ್ಟ್‌ಟಿವಿಯು ಗ್ರಾಹಕರ ಗೇಮ್ಸ್ ಆಡುವ ಉತ್ಸಾಹವನ್ನು ದ್ವಿಗುಣ ಮಾಡಲಿದೆ ಎನ್ನಬಹುದಾಗಿದೆ.

ಸ್ಮಾರ್ಟ್‌ಫೋನ್ ಕನೆಕ್ಟ್
ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಟಿವಿಯೊಂದಿಗೆ ಸ್ಮಾರ್ಟ್‌ಫೋನ್ ಅನ್ನು ಕನೆಕ್ಟಿವಿಟಿ ಮಾಡುವ ಸೌಲಭ್ಯವನ್ನು ಹೊಂದಿದೆ. ಇದು ಸಂಪೂರ್ಣ ಹೊಸ ಬಗೆಯ ಫೀಚರ್ ಆಗಿದ್ದು, ಎಲ್ಲಿಯೇ ಇದ್ದರೂ ಅಲ್ಲಿಂದಲೇ ನೇರವಾಗಿ ಸ್ಮಾರ್ಟ್‌ಫೋನ್ ಮೂಲಕ ಲೈವ್‌ಕಾಸ್ಟ್ ಮಾಡಬಹುದಾದ ಆಯ್ಕೆಯನ್ನು ನೀಡಲಾಗಿದೆ. ಲೈವ್‌ಕಾಸ್ಟ್ ಮಾಡಿರುವುದನ್ನು ಸ್ಮಾರ್ಟ್‌ಟಿವಿಯಲ್ಲಿ ವೀಕ್ಷಿಸಬಹುದು.

ಲಭ್ಯತೆ ಮತ್ತು ಬೆಲೆ
ಆನ್‌ಲೈನ್ ಮಾರುಕಟ್ಟೆಯಲ್ಲಿ ದೊರೆಯಲಿರುವ ಸ್ಯಾಮ್‌ಸಂಗ್ ಸ್ಮಾರ್ಟ್‌ಟಿವಿಯು ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಗ್ರಾಹಕರು ಪ್ರಮುಖ ಇ ಕಾಮರ್ಸ್ ಜಾಲತಾಣಗಳಾದ ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಸ್ಯಾಮ್‌ಸಂಗ್ ಇ ಶಾಪ್ ಮೂಲಕ ಖರೀದಿಸಬಹುದಾಗಿದೆ. 43 ಇಂಚಿನ ವೇರಿಯಂಟ್ ಬೆಲೆ 41,990ರೂ.ಗಳು, 50 ಇಂಚಿನ್ ವೇರಿಯಂಟ್ ಬೆಲೆಯು 51,990ರೂ.ಗಳು ಮತ್ತು ಬಿಗ್ ಸ್ಕ್ರೀನ್ 55 ಇಂಚಿನ ವೇರಿಯಂಟ್ ಬೆಲೆಯು 61,990ರೂ.ಗಳು ಎನ್ನಲಾಗಿದೆ.


Click it and Unblock the Notifications








