ಮಾನವನ ರೀತಿ ಆತ್ಮಹತ್ಯೆ ಮಾಡಿಕೊಂಡ ಮೊದಲ ರೋಬೋಟ್..!
ಎಂದಿನಂತೆ ಆಫೀಸ್ ನಲ್ಲಿ ಒಂದು ರೌಂಡ್ ಹೊಡೆಯುತ್ತಿರುವ ಸಂದರ್ಭದಲ್ಲಿ ಮೆಟ್ಟಿಲು ಮೇಲಿನಿಂದ ಇಳಿಯಲು ಹೋಗಿ ಆಫೀಸ್ ಮುಂಭಾಗದಲ್ಲಿದ್ದ ಫೌಂಟನ್ ನಲ್ಲಿ ಮುಳುಗಿ ಹೋಗಿದೆ.
ಸೆಕ್ಯೂರಿಟಿಗೆ ನೇಮಕ ಮಾಡಿಕೊಳ್ಳಲಾಗಿದ್ದ ರೋಬೋಟ್ ವೊಂದು ಮಾನವ ರೀತಿಯಲ್ಲಿ ನೀರಿನಲ್ಲಿ ಮುಳುಗಿ ಆತ್ಮ ಹತ್ಯೆ ಮಾಡಿಕೊಂಡಿದೆ ಎನ್ನಲಾಗಿದ್ದು, ಇದು ನಡೆದಿರುವುದು ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ.

ಓದಿರಿ: ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳ ಮತ್ತೊಂದು ಮೋಸ ಬಯಲು..!! ಗೊತ್ತಾದ್ರೆ ಖಂಡಿತ ಶಾಕ್ ಆಗ್ತೀರಾ..!!
ಕಾರ್ ಪಾರ್ಕಿಂಗ್ ಸುರಕ್ಷತೆಗಾಗಿ ಡಿಸೈನ್ ಮಾಡಿದ ಆಟೋ ಮೋಷನ್ ರೋಬೋಟ್, ಎಂದಿನಂತೆ ಆಫೀಸ್ ನಲ್ಲಿ ಒಂದು ರೌಂಡ್ ಹೊಡೆಯುತ್ತಿರುವ ಸಂದರ್ಭದಲ್ಲಿ ಮೆಟ್ಟಿಲು ಮೇಲಿನಿಂದ ಇಳಿಯಲು ಹೋಗಿ ಆಫೀಸ್ ಮುಂಭಾಗದಲ್ಲಿದ್ದ ಫೌಂಟನ್ ನಲ್ಲಿ ಮುಳುಗಿ ಹೋಗಿದೆ.

ನೈಟ್ ಶಿಪ್ K5 ರೋಬೋಟ್:
ನಾಲ್ಕು ಅಡಿ ಎತ್ತರದ ನೈಟ್ ಶಿಪ್ K5 ಹೆಸರಿನ ರೋಬೋಟ್ ಮುಖ ಚಹರೆಯನ್ನು ಕಂಡುಹಿಡಿಯುವ ಸಾಮಾರ್ಥ್ಯವನ್ನು ಹೊಂದಿದ್ದು, ಇದರಲ್ಲಿ ಹೈ-ಟೆಕ್ ಉಪಕರಣಗಳನ್ನು ಅಳವಡಿಸಲಾಗಿತ್ತು ಎನ್ನಲಾಗಿದೆ. ಹೈಡೆಫನಿಷನ್ ವಿಡಿಯೋ ರೆಕಾರ್ಡಿಂಗ್ ಮಾಡುವ ಸಾಮಾರ್ಥ್ಯವನ್ನು ಹೊಂದಿತ್ತು.
ಹೇಗೆ ಬಿತ್ತು..?
ಇದರಲ್ಲಿ ಇನ್‌ಫಾರ್ರೆಡ್ ಮತ್ತು ಆಲ್ಟ್ರಾಸಾನಿಕ್ ಸೆನ್ಸಾರ್ ಗಳನ್ನು ಅಳವಡಿಸಲಾಗಿತ್ತು. ಆದರೂ ಇದು ಹೇಗೆ ತನ್ನ ನಿರ್ಧಿಷ್ಟ ಜಾಗವನ್ನು ಬದಲಾಯಿಸಿ ಜಾರಿ ನೀರಿನಲ್ಲಿ ಬಿತ್ತು ಎನ್ನುವುದೇ ತಿಳಿದಿಲ್ಲ ಎನ್ನಲಾಗಿದೆ.
ಟ್ರೋಲ್ ಗೆ ಸಾಕ್ಷಿ:
ಈ ನೈಟ್ ಶಿಪ್ K5 ರೋಬೋರ್ ನೀರಿನಲ್ಲಿ ಬಿದ್ದ ಚಿತ್ರಗಳನ್ನು ಆನ್‌ಲೈನಿನಲ್ಲಿ ಆಪ್ ಲೋಡ್ ಮಾಡಿದವರು ಟ್ರೋಲ್ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.


Click it and Unblock the Notifications








