ಒಪ್ಪೊ-ವಿವೊ ಕುರಿತ ಶಾಕಿಂಗ್ ಸತ್ಯ: ನಂಬಿದ ಭಾರತೀಯರಿಗೆ ಮಾಡಿದ ಮಹಾ ಮೋಸ ಇದು..!

Written By:

  ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಚೀನಾ ಮೂಲದ ಕಂಪನಿಗಳ ಆರ್ಭಟವೇ ಜೋರಾಗಿದೆ. ಬಜೆಟ್ ಸ್ಮಾರ್ಟ್‌ಫೋನ್ ನಿಂದ ಹಿಡಿದು ಟಾಪ್ ಎಂಡ್ ಸ್ಮಾರ್ಟ್‌ಫೋನ್ ಗಳ ವರೆಗೆ ಚೀನಾ ಕಂಪನಿಗಳ ಸ್ಮಾರ್ಟ್‌ಫೋನ್‌ಗಳೇ ಹೆಚ್ಚಿವೆ, ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್ ಗಳು ಎನ್ನುವ ಖ್ಯಾತಿಗೆ ಪಾತ್ರವಾಗುತ್ತಿದೆ. ವಿವಿಧ ಹೆಸರಿನಲ್ಲಿ ಗ್ರಾಹಕರಿಗೂ ತಿಳಿಯದಂತೆ ಸೆಳೆಯುತ್ತಿವೆ.

  ಒಪ್ಪೊ-ವಿವೊ ಕುರಿತ ಶಾಕಿಂಗ್ ಸತ್ಯ: ನಂಬಿದ ಭಾರತೀಯರಿಗೆ ಮಾಡಿದ ಮಹಾ ಮೋಸ ಇದು..!

  ಆದರೆ ನಾವು ಇಂದು ಇದೇ ಚೀನಾ ಸ್ಮಾರ್ಟ್‌ಫೋನ್ ಗಳ ಕುರಿತು ಹೇಳಲು ಹೊರಟಿರುವುದು ನೀವು ತಿಳಿಯದ ಸತ್ಯ ವಿಚಾರ. ಮೊದಲಿಗೆ ಒಂದು ಉದಾಹರಣೆಯನ್ನು ನಿಮಗೆ ನೀಡಿ ಅಮೇಲೆ ಮಿಕ್ಕ ವಿಚಾರವನ್ನು ತಿಳಿಸುವ ಪ್ರಯತ್ನ ಮಾಡುತ್ತೇವೆ. ಬನ್ನಿ ಈ ಸ್ಟೋರಿಯನ್ನು ಓದಿ ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳ ಅಸಲಿ ಮುಖವನ್ನು ನೋಡ ಬನ್ನಿ.

  ಓದಿರಿ: ಖರ್ಚಿಲ್ಲದೇ ಒಂದೇ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಸಾಧ್ಯವೇ..? ಯಾಕಿಲ್ಲ ಇಲ್ಲಿದೇ ಸಂಪೂರ್ಣ ಮಾಹಿತಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಉದಾಹರಣೆ ಅಷ್ಟೆ ಇದು:

  ನಿಮಗೆ ವೋಕ್ಸ್ ವ್ಯಾಗನ್ ಕಾರು ತಯಾರಕ ಕಂಪನಿಯ ಬಗ್ಗೆ ತಿಳಿದರಬೇಕು, ಇದು ವಿಶ್ವದ ಅತೀ ದೊಡ್ಡ ಆಟೋ ಮೇಕರ್ ಕಂಪನಿಯಾಗಿದೆ. ಭಾರತದಲ್ಲಿಯೂ ಈ ಕಂಪನಿಯ ಕಾರುಗಳನ್ನು ನಾವು ನೋಡಬಹುದು. ಈ ಕಂಪನಿಯೂ ಪ್ರಮುಖ ಬ್ರಾಂಡ್ ಗಳಾದ ಆಡಿ, ಬೆನ್‌ಟ್ಲಿ, ಲ್ಯಾಂಬೋರ್ಗಿನಿ, ಪೋರ್ಶ್, ಸ್ಕೋಡಾ ಸೇರಿದಂತೆ ಇನ್ನು ಹಲವು ಕಾರು ತಯಾರಿಕ ಕಂಪನಿಗಳ ಮಾಲೀಕತ್ವವನ್ನು ಹೊಂದಿದೆ.

  ಒಂದೊಂದು ವಿಶಿಷ್ಠವಾಗಿದೆ:

  ವೋಕ್ಸ್ ವ್ಯಾಗನ್ ತಾನೇ ಕಾರು ತಯಾರಿಸುವ ಕಂಪನಿಯಾದರು ವಿವಿಧ ಕಂಪನಿಗಳ ಹೆಸರಿನಲ್ಲಿ ಹಲವು ಕಂಪನಿಗಳ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಕಾರಣ ಪ್ರತಿಯೊಂದು ಕಂಪನಿಯೂ ತನ್ನದೇ ಆದ ವಿಶಿಷ್ಠ ಕಾರುಗಳನ್ನು ಹಾಗೂ ಅಭಿಮಾನಿಗಳು ಹೊಂದಿದೆ. ಆದರೆ ಈ ಸತ್ಯ ವಿಶ್ವಕ್ಕೆ ತಿಳಿದಿದೆ.


  ವೋಕ್ಸ್ ವ್ಯಾಗನ್ ತಾನೇ ಕಾರು ತಯಾರಿಸುವ ಕಂಪನಿಯಾದರು ವಿವಿಧ ಕಂಪನಿಗಳ ಹೆಸರಿನಲ್ಲಿ ಹಲವು ಕಂಪನಿಗಳ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಕಾರಣ ಪ್ರತಿಯೊಂದು ಕಂಪನಿಯೂ ತನ್ನದೇ ಆದ ವಿಶಿಷ್ಠ ಕಾರುಗಳನ್ನು ಹಾಗೂ ಅಭಿಮಾನಿಗಳು ಹೊಂದಿದೆ.

  ಅಸಲಿ ವಿಚಾರಕ್ಕೆ ಬನ್ನಿ:

  ಈಗ ಅಸಲಿ ವಿಷಯಕ್ಕೆ ಬಂದರೆ, ಸದ್ಯ ನಮ್ಮ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಒಪ್ಪೋ, ವಿವೋ ಮತ್ತು ಒನ್ ಪ್ಲಸ್ ಸ್ಮಾರ್ಟ್‌ಫೋನ್ ಗಳು ನಿಮಗೆ ತೀರಾ ಪರಿಚಿತ. ಭಾರತದಲ್ಲಿ ಎಲ್ಲಿ ನೋಡಿದರು ಒಪ್ಪೋ ಮತ್ತು ವಿವೋ ಕಂಪನಿಗಳ ಜಾಹೀರಾತು ರಾರಾಜಿಸುತ್ತಿದೆ. ಈ ಎರಡು ಕಂಪನಿಗಳ ನಡುವೆ ಭಾರೀ ಸ್ಪರ್ಧೆ ಇದೆ ಎಂದು ನೀವು ಎಂದು ಕೊಳ್ಳಬಹುದು. ಆದರ ಅದು ತಪ್ಪು. ಇದು ನಾವು ಹೇಳ ಹೊರಟಿರುವ ಸತ್ಯ ವಿಚಾರವು ಅದಕ್ಕೆ ಸಂಬಂಧಪಟ್ಟಿದೆ.

  ಒಂದೇ ನಾಣ್ಯದ ಹಲವು ಮುಖಗಳು:

  ಒಪ್ಪೋ, ವಿವೋ ಮತ್ತು ಒನ್ ಪ್ಲಸ್ ಸ್ಮಾರ್ಟ್‌ಫೋನ್ ಒಂದೇ ನಾಣ್ಯದ ಹಲವು ಮುಖಗಳು. ಹಾಗೆಂದರೆ ಏನು ಎಂದು ನೀವು ಕೇಳಬಹುದು. ಈ ಮೂರು ಕಂಪನಿಗಳು ಒಂದೇ ಕಂಪನಿಯ ವಿವಿಧ ಬ್ರಾಂಡ್ ಗಳು ಅಷ್ಟೆ, ಈ ಮೂರು ಬ್ರಾಂಡ್ ಸ್ಮಾರ್ಟ್‌ಫೋನ್ ಗಳ ತಯಾರಕ ಕಂಪನಿಯೂ ವಿಶ್ವದ ಮೂರನೇ ಅತೀ ದೊಡ್ಡ ಕಂಪನಿಯಾಗಿದ್ದು, ಯಾರಿಗೂ ಕಾಣಿಸಿದೆ ಇಷ್ಟು ದಿನ ಅಜ್ಞಾತವಾಗಿದೆ ಎನ್ನಲಾಗಿದೆ.

  BBK ಎಲೆಕ್ಟ್ರಾನಿಕ್ಸ್ ಕಂಪನಿ:

  ಚೀನಾ ಮೂಲದ BBK ಎಲೆಕ್ಟ್ರಾನಿಕ್ಸ್ ಕಂಪನಿಯೂ ಒಪ್ಪೋ, ವಿವೋ ಮತ್ತು ಒನ್ ಪ್ಲಸ್ ಸ್ಮಾರ್ಟ್‌ಫೋನ್ ಗಳ ಒಡೆಯನವನ್ನು ಹೊಂದಿದೆ. BBK ಎಲೆಕ್ಟ್ರಾನಿಕ್ಸ್ ಕಂಪನಿಯೂ ತಾನು ತಯಾರಿಸುವ ಸ್ಮಾರ್ಟ್‌ಫೋನ್ ಗಳನ್ನು ಒಪ್ಪೋ, ವಿವೋ ಮತ್ತು ಒನ್ ಪ್ಲಸ್ ಬ್ರಾಂಡಿನ ಅಡಿಯಲ್ಲಿ ಭಾರತ, ಚೀನಾ ಸೇರಿದಂತೆ ಇಡೀ ವಿಶ್ವದ ಹಲವು ದೇಶಗಳಲ್ಲಿ ಮಾರಾಟ ಮಾಡುತ್ತಿದೆ. ಈ ಹಿಂದೆಯೂ ಹಲವು ಬಾರಿ ಈ ವಿಷಯದ ಚರ್ಚೆಗಳು ನಡೆದಿದ್ದರೂ ಅಧಿಕೃತ ಮಾಹಿತಿ ಲಭ್ಯವಾಗಿರಲಿಲ್ಲ. ಆದರೆ ಸದ್ಯ ಈ ಮೂರು ಬ್ರಾಂಡ್ ಗಳ ಒಡೆಯ BBK ಎಲೆಕ್ಟ್ರಾನಿಕ್ಸ್ ಕಂಪನಿ ಎನ್ನುವ ಅಧಿಕೃತ ಮಾಹಿತಿಯೂ ದೊರೆತಿದೆ.

  1995ರಲ್ಲಿ BBK ಎಲೆಕ್ಟ್ರಾನಿಕ್ಸ್ ಕಂಪನಿ ಸ್ಥಾಪನೆ:

  BBK ಎಲೆಕ್ಟ್ರಾನಿಕ್ಸ್ ಕಂಪನಿಯೂ 1995ರಲ್ಲಿ ಚೀನಾದ ಗುವಾಂಗ್ಡಾಂಗ್ ನಲ್ಲಿ ಸ್ಥಾಪನೆಯಾಗಿದ್ದು, ಸುಮಾರು 17,000ಕ್ಕೂ ಹೆಚ್ಚು ಮಂದಿ ನೌಕರನ್ನು ಹೊಂದಿರುವ ಅತೀ ದೊಡ್ಡ ತಯಾರಿಕ ಕಂಪನಿಯಾಗಿದೆ. ಇದು ವಿಶ್ವದೆಲ್ಲೆಡೆಯ ಮಾರುಕಟ್ಟೆಯಲ್ಲಿ ವ್ಯವಹಾರವನ್ನು ನಡೆಸುತ್ತಿದೆ ಎನ್ನಲಾಗಿದೆ.

  ವಿವಿಧ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿ:

  ಈ ಕಂಪನಿಯೂ ಯಂತ್ರ ಕಲಿಕೆಯ ತಂತ್ರಜ್ಞಾನ, ಎಲೆಕ್ಟ್ರಾನಿಕ್ ಡಿಕ್ಷನರಿ, ಓದುವ ಯಂತ್ರಗಳು ಸೇರಿದಂತೆ ಲ್ಯಾಂಡ್ ಲೈನ್ ಫೋನ್ ಗಳು, ಮೊಬೈಲ್ ಫೋನ್ ಗಳು, ಬ್ಲೂ ರೇ ಡಿಸ್ಕ್ ಪ್ಲೇಯರ್ ಗಳು, ಹೆಡ್ ಫೋನ್, ಆಂಪ್ಲಿಫೈಯರ್ ಗಳನ್ನು ತಯಾರು ಮಾಡುತ್ತದೆ.

  ಒಪ್ಪೋ, ವಿವೋ ಮತ್ತು ಒನ್ ಪ್ಲಸ್ ಬ್ರಾಂಡ್:

  ಇದೇ ಮಾದರಿಯಲ್ಲಿ ಒಪ್ಪೋ, ವಿವೋ ಮತ್ತು ಒನ್ ಪ್ಲಸ್ ಬ್ರಾಂಡಿನ ಅಡಿಯಲ್ಲಿ ಸ್ಮಾರ್ಟ್‌ಫೋನ್ ಗಳನ್ನು ತಯಾರು ಮಾಡಿದ ವಿಶ್ವದ ಮೂಲೆ ಮೂಲೆಗೆ ತಲುಪಿಸುವಂತಹ ಕಾರ್ಯವನ್ನು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಒಪ್ಪೋ, ವಿವೋ ಮತ್ತು ಒನ್ ಪ್ಲಸ್ ಬ್ರಾಂಡಿನ ಮಾಹಿತಿ ಇಲ್ಲಿದೆ.

  ಒಪ್ಪೋ ಸ್ಮಾರ್ಟ್‌ಫೋನ್ ಬ್ರಾಂಡ್:

  2004ರಲ್ಲಿ ಒಪ್ಪೋ ಬ್ರಾಂಡ್ ಅನ್ನು ತೆರೆಯಲಾಗಿದ್ದು, ಇದು BBK ಎಲೆಕ್ಟ್ರಾನಿಕ್ಸ್ ಕಂಪನಿಯ ಒಂದು ಭಾಗವಷ್ಟೆ. ಈ ಕಂಪನಿಯೂ ಮೊದಲಿಗೆ ಕೇವಲ DVD ಪ್ಲೇಯರ್ ಗಳನ್ನು ತಯಾರು ಮಾಡುತ್ತಿತು. ಅದುವೇ ಯುನಿವರ್ಸಲ್ DVD ಎನ್ನುವ ಹೆಸರಿನಲ್ಲಿ. ಇದಾದ ಕೆಲವು ದಿನಗಳ ನಂತರ ಅಂದರೆ 2008ರಲ್ಲಿ ಇದು ಸ್ಮಾರ್ಟ್‌ಫೋನ್ ತಯಾರಿಕೆಯನ್ನು ಆರಂಭಿಸಿತು. ನಂತರ 2013ರಲ್ಲಿ ಒನ್ ಪ್ಲಸ್ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯನ್ನು ತನ್ನ ಅಧೀನದಲ್ಲಿ ಸ್ಥಾಪನೆ ಮಾಡಿತು.

  ಒಪ್ಪೋ ಸದ್ದು ಶುರು:

  2013ರ ನಂತರಲ್ಲಿ ಚೀನಾದ ದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಲ್ಲಿ ಒಂದೆನ್ನುವ ಖ್ಯಾತಿಗೆ ಪಾತ್ರವಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿಯೂ ಈ ಒಪ್ಪೋ ಭಾರಿ ಸದ್ದು ಮಾಡುವುದರೊಂದಿಗೆ ಹೆಚ್ಚಿನ ವಹಿವಾಟು ನಡೆಸುತ್ತಿದೆ. ಈ ಕಂಪನಿಯೂ ಉತ್ತಮ ಗುಣಮಟ್ಟದ ಕ್ಯಾಮೆರಾ ಸ್ಮಾರ್ಟ್‌ಪೋನ್ ಗಳನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡುವದರೊಂದಿಗೆ ಭಾರತದಲ್ಲಿಯೂ ತಯಾರಿಕಾ ಘಟಕವನ್ನು ಹೊಂದಿದೆ. ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವ ಒಪ್ಪೋ ಪಡೆದುಕೊಂಡಿದೆ.

  ಒಪ್ಪೋ ಸ್ಮಾರ್ಟ್ ಫೋನ್ ಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

  ವಿವೋ ಸ್ಮಾರ್ಟ್‌ಫೋನ್ ಬ್ರಾಂಡ್:

  ಈ ಕಂಪನಿ ಸಹ BBK ಎಲೆಕ್ಟ್ರಾನಿಕ್ಸ್ ಕಂಪನಿಯ ಒಂದು ಭಾಗವಾಗಿದ್ದು, 2009ರಲ್ಲಿ ಈ ಕಂಪನಿಯೂ ತನ್ನ ಕಾರ್ಯ ಚಟುವಟಿಕೆಯನ್ನು ಆರಂಭಿಸಿತ್ತು. ಈ ಪೋನ್ ಬ್ರಾಂಡಿನ ಅಡಿಯಲ್ಲಿ ಉತ್ತಮ ಆಡಿಯೋ ಇಂಜಿನ್ ಇರುವ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿತ್ತಿದೆ. ಇದು ಸಹ ಚೀನಾದಲ್ಲಿ ಮೊಬೈಲ್ ತಯಾರಿಕ ಕಂಪನಿಗಳ ಪಟ್ಟಿಯಲ್ಲಿ ಮೊದಲ ಕೆಲ ಸ್ಥಾನಗಳಲ್ಲಿ ಕಾಣಿಸಿಕೊಂಡಿದೆ.

  ಚೀನಾ ಮಾರುಕಟ್ಟೆಯಲ್ಲಿ ಫೇಮಸ್:

  ಅದರಲ್ಲಿಯೂ ಕಳೆದ ವರ್ಷ ಚೀನಾ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮೊಬೈಲ್ ಸೇಲ್ ಮಾಡಿದ ಕೀರ್ತೀಯೂ ಒಪ್ಪೋ ಮತ್ತು ವಿವೋದಾಗಿದೆ. ಭಾರತದಲ್ಲಿಯೂ ಈ ಕಂಪನಿಯ ಸ್ಮಾರ್ಟ್‌ಪೋನ್ ಗಳು ಹೆಚ್ಚು ಸದ್ದು ಮಾಡುತ್ತಿದೆ. ಭಾರತದಲ್ಲಿಯೂ ತಯಾರಿಕ ಘಟಕವನ್ನು ಹೊಂದಿದೆ. ಅಲ್ಲದೇ IPL ಪ್ರಾಯೋಕತ್ವವನ್ನು ಪಡೆದುಕೊಂಡಿದೆ.

  ವಿವೋ ಸ್ಮಾರ್ಟ್ ಫೋನ್ ಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

  ಒನ್ ಪ್ಲಸ್ ಸ್ಮಾರ್ಟ್‌ಫೋನ್ ಬ್ರಾಂಡ್:

  ಇದು ಒಪ್ಪೋ ಬ್ರಾಂಡಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2013ರಲ್ಲಿ ಸ್ಥಾಪಿತವಾದ ಕಂಪನಿಯೂ ವಿಶ್ವದ 43 ದೇಶಗಳಲ್ಲಿ ಸ್ಮಾರ್ಟ್‌ಪೋನ್ ಗಳನ್ನು ಮಾರಾಟ ಮಾಡುತ್ತಿದೆ. ಇದು ಟಾಪ್ ಎಂಡ್ ಮಾದರಿಯ ಸ್ಮಾರ್ಟ್‌ಫೋನ್ ಗಳನ್ನು ತಯಾರು ಮಾಡುತ್ತಿದ್ದು, ದೊಡ್ಡ ದೊಡ್ಡ ಕಂಪನಿಗಳಿಗೆ ಪ್ರಭಲ ಸ್ಪರ್ಧೆಯನ್ನು ನೀಡುತ್ತಿದೆ. ಸದ್ಯ ಈ ಕಂಪನಿಯ ಒನ್ ಪ್ಲಸ್ 5 ಹೆಚ್ಚು ಸದ್ದು ಮಾಡುತ್ತಿದೆ. ಉತ್ತಮ ಗುಣಮಟ್ಟದ ಫೋನ್ ಗಳನ್ನು ಈ ಬ್ರಾಂಡಿನ ಅಡಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

  ಚೀನಾ ಗಿಂತಲೂ ವಿದೇಶದಲ್ಲಿ ಹೆಚ್ಚು:

  ಇದರ ಪ್ರಮುಖ ವಿಷಯ ಎಂದರೆ ಇದು ಚೀನಾಗಿಂತ ಹೆಚ್ಚಾಗಿ ವಿದೇಶಗಳಲ್ಲಿಯೇ ಮಾರಾಟವಾಗುತ್ತಿದ್ದು, ಅದುವೇ ಅಮೆಜಾನ್ ಆನ್‌ಲೈನ್ ತಾಣದ ಮೂಲಕವೇ ಹೆಚ್ಚು ಜನರನ್ನು ತಲುಪುತ್ತಿದೆ. ಅಲ್ಲದೇ ಒನ್ ಪ್ಲಸ್ ಕಂಪನಿಗೆ ಅಭಿಮಾನಿಗಳು ಹೆಚ್ಚಿದ್ದು, ಇದು ಅಷ್ಟಾಗಿ ಮಾರ್ಕೆಟಿಂಗ್ ಮಾಡುವುದಿಲ್ಲ ಬದಲಾಗಿ ಇದರ ಬಳಕೆದಾರರೇ ಮೌತ್ ಪಬ್ಲಿಸಿಟಿಯನ್ನು ಹೆಚ್ಚಾಗಿ ನೀಡುತ್ತಿದ್ದಾರೆ.

  ಇದು ಸತ್ಯ ವಿಚಾರ:

  ಈ ಸತ್ಯ ವಿಚಾರವು ಇಲ್ಲಿಯ ವರೆಗೆ ಯಾರಿಗೂ ತಿಳಿದಿಲ್ಲ ಎನ್ನಲಾಗಿದೆ. BBK ಎಲೆಕ್ಟ್ರಾನಿಕ್ಸ್ ಕಂಪನಿಯೂ ಈ ಮೂರು ಬ್ರಾಂಡ್ ಗಳ ನಡುವೆಯೇ ಸ್ಪರ್ಧೆ ಇದೆ ಎಂಬಂತೆ ಬಿಂಬಿಸಿ ಗ್ರಾಹಕರನ್ನು ಮರುಳು ಮಾಡುತ್ತಿದೆ. ಸದ್ಯ ಭಾರತದಲ್ಲಿ ವಿವೋ ಮತ್ತು ಒಪ್ಪೋ ನಡುವೆ ಭಯಂಕರ ಸ್ಪರ್ಧೆಯನ್ನು ನಿರ್ಮಿಸಿ ಎರಡು ಕಂಪನಿಗಳ ಮೂಲಕ ಲಾಭವನ್ನು ಮಾಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ.

  How to Download e-Aadhaar Card! ಸ್ಮಾರ್ಟ್‌ಫೋನ್‌ನಲ್ಲಿ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..?
  ಮಾಹಿತಿ ಮೂಲಗಳು:

  ಮಾಹಿತಿ ಮೂಲಗಳು:

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  BBK Electronics is a giant group, which holds three brands under its name, technically OPPO and Vivo are parts of BBK, while the OnePlus is a wholly owned subsidiary of the OPPO. to know more visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more