Home
Gadgets

ಟೆಲ್ಸಾ ದಿಂದ ಸೂಪರ್ ಪವರ್ ಬ್ಯಾಂಕ್; ಇದು ಡಿಫ್ರೆಂಟ್ ಯಾಕೆ ಗೊತ್ತಾ..?

By Srinidhi

ಬ್ಯಾಟರಿ ಚಾಲಿತ ಐಷಾರಾಮಿ ಎಲೆಕ್ಟ್ರಾನಿಕ್ ಸೂಪರ್ ಕಾರ್ ಉತ್ಪಾದನೆಯ ಮೂಲಕ ಜಗತ್ತಿನ ಗಮನವನ್ನು ಸೆಳೆದಿರುವ ಟೆಲ್ಸಾ ಕಂಪನಿ ಸದ್ಯ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ಬಹುಬೇಡಿಕೆಯ ಸ್ಮಾರ್ಟ್‌ಫೋನ್ ಪವರ್ ಬ್ಯಾಂಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದುವೇ $45(ರೂ.3,000)ಕ್ಕೆ ಲಾಂಚ್ ಮಾಡಿದೆ.

ಟೆಲ್ಸಾ ದಿಂದ ಸೂಪರ್ ಪವರ್ ಬ್ಯಾಂಕ್; ಇದು ಡಿಫ್ರೆಂಟ್ ಯಾಕೆ ಗೊತ್ತಾ..?

ಓದಿರಿ: ವಾಟ್ಸ್‌ಆಪ್‌ನ ಹಲವು ಆಯ್ಕೆಗಳು ಬದಲಾಗಲಿದೆ...!

ಟೆಲ್ಸಾ ಪವರ್ ಬ್ಯಾಂಕ್ ನೋಡಲು ಉತ್ತಮ ವಿನ್ಯಾಸವನ್ನು ಹೊಂದಿದ್ದು, ಬ್ಲಾಕ್ ಅಂಡ್ ರೆಡ್ ಬಣ್ಣದಲ್ಲಿ ಕಾಣಿಸಿಕೊಂಡಿದೆ. ಐಫೋನ್-ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗಳನ್ನು ಚಾರ್ಜ್ ಮಾಡಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ. USB ಮತ್ತು ಮೈಕ್ರೋ USB ಫೋರ್ಟ್‌ಗಳನ್ನು ಒಳಗೊಂಡಿದೆ. ಅಲ್ಲದೇ ಆಪಲ್ ಫೋನ್ ಚಾರ್ಜ್ ಮಾಡುವ ಫೋರ್ಟ್ ಸಹ ಇದರಲ್ಲಿದೆ.

3,350mAh ಬ್ಯಾಟರಿ:

3,350mAh ಬ್ಯಾಟರಿ:

ಈಗಾಗಲೇ ಹೆಚ್ಚು ಕಾರ್ಯಕ್ಷಮತೆಯ ಬ್ಯಾಟರಿಗಳನ್ನು ತಯಾರು ಮಾಡಿ ಇಡೀ ವಿಶ್ವವನ್ನೇ ಚಕಿತಗೊಳಿಸಿರುವ ಟೆಲ್ಸಾ ತನ್ನ ನೂತನ ಹೊಸ ಪವರ್ ಬ್ಯಾಂಕಿನಲ್ಲಿ 3,350mAh ಬ್ಯಾಟರಿಯನ್ನು ಅಳವಡಿಸಿದೆ. ಇದು ಸಿಂಗಲ್ ಸೆಲ್ ಚಾರ್ಜರ್ ಆಗಿದೆ ಎನ್ನಲಾಗಿದೆ.

ಉತ್ತಮ ವಿನ್ಯಾಸ:

ಉತ್ತಮ ವಿನ್ಯಾಸ:

ಇತರೇ ಪವರ್ ಬ್ಯಾಂಕ್‌ಗಳಿಗೆ ಹೋಲಿಸಿಕೊಂಡರೆ ಟೆಲ್ಸಾ ಪವರ್ ಬ್ಯಾಂಕ್ ಅತ್ಯುತ್ತಮ ವಿನ್ಯಾಸವನ್ನು ಹೊಂದಿದೆ ಎನ್ನಲಾಗಿದೆ. ಇದನ್ನು ಟೆಲ್ಸಾ ಡಿಸೈನ್ ಸ್ಟೂಡಿಯೋದಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಬ್ಯಾಟರಿ ಕೆಪಾಸಿಟಿ ಮತ್ತು ಚಾರ್ಜಿಂಗ್ ಇಂಡಿಕೇಟರ್ ಅನ್ನು ಕಾಣಬಹುದಾಗಿದೆ.

ಮತ್ತಷ್ಟು ಅವಿಷ್ಕಾರ:

ಮತ್ತಷ್ಟು ಅವಿಷ್ಕಾರ:

ಟೆಲ್ಸಾ ಸ್ಮಾರ್ಟ್‌ಫೋನ್ ಲೋಕಕ್ಕೆ ಕಾಲಿಡುವ ಚಿಂತನೆಯನ್ನು ಮಾಡಿದೆ ಎನ್ನಲಾಗಿದೆ. ಬ್ಯಾಟರಿ ಸಾಮಾರ್ಥ್ಯವನ್ನು ಹೆಚ್ಚು ಹೊಂದಿರುವ ಸ್ಮಾರ್ಟ್‌ಫೋನ್ ತಯಾರಿಸಲಿದೆ ಎನ್ನಲಾಗಿದೆ. ಇದಕ್ಕಾಗಿ ಮೊದಲು ಸ್ಮಾರ್ಟ್‌ಫೋನ್ ಪವರ್ ಬ್ಯಾಂಕ್ ಬಿಡುಗಡೆ ಮಾಡಿದೆ ಎನ್ನಲಾಗಿದೆ.

Best Mobiles in India

English summary
Tesla launches power bank to charge Android and iOS devices, to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+