ಅಗ್ಗದ ದರದಲ್ಲಿ ಸಿಗುವ 5 ಸ್ಮಾರ್ಟ್‌ಫೋನ್‌ಗೆ ಅಗತ್ಯ ಎನಿಸುವ ಗ್ಯಾಡ್ಜೆಟ್ಸ್‌ಗಳು!
ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಜೊತೆಗೆ ಇತರೆ ಸ್ಮಾರ್ಟ್ ಡಿವೈಸ್‌ಗಳು ಅಗತ್ಯ ಎಂದೆನಿಸಿವೆ. ಅಲ್ಲದೇ ಸ್ಮಾರ್ಟ್‌ಫೋನ್ ಜೊತೆಗೆ ಅದಕ್ಕೆ ಪೂರಕವಾಗಿ ಕೆಲವೊಂದು ಗ್ಯಾಡ್ಜೆಟ್ಸ್‌ಗಳು/ಆಕ್ಸಸರಿಸ್ ಗಳನ್ನು ಹೊಂದುವುದು ಅಗತ್ಯ ಅನಿಸುತ್ತದೆ. ಈ ನಿಟ್ಟಿನಲ್ಲಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಹೆಡ್‌ಫೋನ್, ಫೋನ್ ಕವರ್, ಸ್ಕ್ರೀನ್ ಗಾರ್ಡ್, ಫೋನ್ ಬ್ಯಾಕ್ ಕವರ್, ಆಡಿಯೊ ಕನೆಕ್ಟರ್ ಕೇಬಲ್ ಹೀಗೆ ಕೆಲವೊಂದು ಪರಿಕರಗಳನ್ನು ಖರೀದಿಸುತ್ತಾರೆ.

ಹೌದು, ಪ್ರಸ್ತುತ ಅನೇಕ ಗ್ರಾಹಕರು ಮೊಬೈಲ್‌ಗಳಿಗೆ ಸ್ಕ್ರೀನ್ ಗಾರ್ಡ್ ಹಾಗೂ ಬ್ಯಾಕ್ ಕವರ್ ಹಾಕಿಸಿಕೊಳ್ಳುತ್ತಾರೆ. ಇದರೊಂದಿಗೆ ಇನ್ನು ಅನೇಕರು ಚಾರ್ಜಿಂಗ್ ಕೇಬಲ್, OTG ಕೇಬಲ್, ಟ್ರೈಪ್ಯಾಡ್ ಸ್ಟ್ಯಾಂಡ್, ಸೆಲ್ಫಿ ಸ್ಟಿಕ್ ಸೇರಿದಂತೆ ಇನ್ನಷ್ಟು ಸಣ್ಣ ಪುಟ್ಟ ಗ್ಯಾಡ್ಜೆಟ್ಸ್‌ಗಳನ್ನು ಖರೀದಿಸುತ್ತಾರೆ. ಆನ್‌ಲೈನ್ ಇ-ಕಾಮರ್ಸ್ ತಾಣಗಳಲ್ಲಿ ತರಹೇವಾರಿ ಫೋನ್ ಆಕ್ಸಸರಿಸ್‌ಗಳು ಲಭ್ಯ ಇವೆ. ಜಸ್ಟ್ 1000ರೂ, ಬೆಲೆಯಲ್ಲಿಯೂ ಹಲವು ಅಗತ್ಯ ಆಕ್ಸಸರಿಸ್‌ಗಳು ದೊರೆಯುತ್ತವೆ. ಹಾಗಾದರೇ ಆನ್‌ಲೈನ್‌ನಲ್ಲಿ 1000ರೂ. ಒಳಗೆ ಲಭ್ಯ ವಾಗುವ ಕೆಲವು ಫೋನ್ ಆಕ್ಸಸರಿಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಸ್ಕ್ರೀನ್ ಕ್ಲಿನ್ ಡಿವೈಸ್
spray n' clean device ಲ್ಯಾಪ್‌ಟಾಪ್ ಅಥವಾ ಸ್ಮಾರ್ಟ್‌ಫೋನ್ ಮೇಲಿಂದ ಮೇಲೆ ಕ್ಲಿನ್ ಮಾಡಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಸ್ಕ್ರೀನ್ ಕ್ಲಿನ್ ಡಿವೈಸ್ ಗ್ರಾಹಕರಿಗೆ ಉತ್ತಮ ಅನಿಸಲಿದೆ. ಮುಖ್ಯವಾಗಿ ಈ ಡಿವೈಸ್ ಮೂಲಕ ಗ್ಯಾಡ್ಜೆಟ್ಸ್ ಸ್ಕ್ರೀನ್ ಸುಲಭವಾಗಿ ಕ್ಲಿನ್ ಮಾಡಬಹುದು. ಅಮೆಜಾನ್‌ನಲ್ಲಿ ಇದರ ಬೆಲೆಯು 500ರೂ. ಒಳಗೆ ಲಭ್ಯ.

OTG ಕಾರ್ಡ್ ರೀಡರ್
OTG ಮತ್ತು ಕಾರ್ಡ್ ರೀಡರ್ ಪ್ರಸ್ತುತ ಬಳಕೆದಾರರಿಗೆ ಬಹು ಉಪಯುಕ್ತ ಸ್ಮಾರ್ಟ್‌ಫೋನ್ ಆಕ್ಸಸರಿಸ್‌ಗಳು ಎಂದು ಹೇಳಬಹುದಾಗಿದೆ. ಈ ಡಿವೈಸ್‌ಗಳ ಮೂಲಕ ಸುಲಭವಾಗಿ ಡೇಟಾ ಟ್ರಾನ್ಸ್‌ಫರ್/ ಸ್ಟೋರ್ ಮಾಡಬಹುದಾಗಿದೆ ಇನ್ನು ಇವುಗಳ ಬೆಲೆಯು ಅಷ್ಟೆನು ದುಬಾರಿ ಇರುವುದಿಲ್ಲ. ಅಮೆಜಾನ್‌ನಲ್ಲಿ 1000ರೂ. ಒಳಗೆ ತರಹೇವಾರಿ OTG ಕಾರ್ಡ್ ರೀಡರ್ ಆಯ್ಕೆಗಳು ಲಭ್ಯ.

ಯುನಿವರ್ಸಲ್ ಟ್ರೈಪಾಡ್ ಸ್ಟ್ಯಾಂಡ್
ಇಂದಿನ ನೂತನ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ ಸೌಲಭ್ಯ ಹೊಂದಿವೆ. ಸದ್ಯ ಬಹುತೇಕ ಬಹುತೇಕ ಬಳಕೆದಾರರು ಸ್ಮಾರ್ಟ್‌ಫೋನ್ ಮೂಲಕವೇ ಫೋಟೊಗ್ರಫಿ ನಡೆಸುತ್ತಿದ್ದಾರೆ. ಫೋನಿನಲ್ಲಿ ಬೆಸ್ಟ್ ಫೋಟೊ/ವಿಡಿಯೊ ಶೂಟ್ ಮಾಡಲು ಟ್ರೈಪಾಡ್ ಸ್ಟ್ಯಾಂಡ್ ಬಳಕೆ ಸಹ ಹೆಚ್ಚಾಗುತ್ತಿದೆ. ಅಮೆಜಾನ್ ತಾಣದಲ್ಲಿ 1000ರೂ. ಒಳಗೆ ಟ್ರೈಪಾಡ್ ಸ್ಟ್ಯಾಂಡ್ ಗಳು ಲಭ್ಯ.

ಅಂಟುವ ಕೇಬಲ್ ಕ್ಲಿಪ್ (Adhesive cable clips)
ಈ ಕೇಬಲ್ ಕ್ಲಿಪ್‌ಗಳನ್ನು ಗೋಡೆಗೆ ಸುಲಭವಾಗಿ ಅಂಟಿಸಬಹುದಾಗಿದೆ. ಡೆಕೊರೇಶನ್ ಸಂದರ್ಭಗಳಲ್ಲಿ ಈ ಕ್ಲಿಪ್ ಹೆಚ್ಚು ಉಪಯುಕ್ತ ಅನಿಸಲಿದೆ. ಅಮೆಜಾನ್ ತಾಣದಲ್ಲಿ ಈ ಕ್ಲಿಪ್ ಪ್ಯಾಕ್ ಬೆಲೆಯು 245ರೂ. ಆಗಿದೆ.

ವಾಟರ್‌ಪ್ರೂಫ್ ಪೌಚ್
ವಾಟರ್‌ಪ್ರೂಫ್ ಆರ್ಮ್ ಬ್ಯಾಂಡ್ ಪೌಚ್‌ಗಳು ಫಿಟ್ನೆಸ್ ಪ್ರಿಯರಿಗೆ ಹೆಚ್ಚು ಉಪಯುಕ್ತ ಅನಿಸುವುದರಲ್ಲಿ ಎರಡು ಮಾತಿಲ್ಲ. ಈ ಪೌಚ್‌ಗಳು ಆಕರ್ಷಕ ಬಣ್ಣಗಳ ಆಯ್ಕೆಗಳನ್ನು ಹೊಂದಿವೆ. ಅಮೆಜಾನ್ ತಾಣದಲ್ಲಿ ಈ ಪೌಚ್ ದರವು 300ರೂ. ಒಳಗೆ ಲಭ್ಯ ಆಗುತ್ತದೆ.


Click it and Unblock the Notifications








