Home
Gadgets

Earbuds: ಒಂದು ಸಾವಿರದ ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್‌ಬಡ್ಸ್‌ ಇವು: ಲಿಸ್ಟ್‌ ನೋಡಿ!

ಸ್ಮಾರ್ಟ್‌ಫೋನ್‌ (Smartphone) ಬಳಕೆ ಮಾಡುವ ಹಲವಾರು ಜನರು ಉತ್ತಮ ಇಯರ್‌ಬಡ್ಸ್‌ (Earbuds) ಅನ್ನು ಖರೀದಿ ಮಾಡುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಂಪೆನಿಗಳು ಸುಧಾರಿತ ಫೀಚರ್ಸ್‌ ಆಯ್ಕೆಯೊಂದಿಗೆ ವಿಶೇಷ ಶೈಲಿಯ ಇಯರ್‌ಬಡ್ಸ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಗ್ರಾಹಕರಿಗೆ ಇವು ಇಷ್ಟವಾಗುತ್ತಿವೆ.

ಹೌದು, ಇತ್ತೀಚೆಗೆ ಲಾಂಚ್‌ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಆಡಿಯೋ ಜಾಕ್‌ ಆಯ್ಕೆ ನೀಡುವುದಿಲ್ಲ. ಹೀಗಾಗಿ ಅಗತ್ಯವಾಗಿ ಇಯರ್‌ಬಡ್ಸ್‌ ಅನ್ನು ಖರೀದಿ ಮಾಡಬೇಕಿದೆ. ಮಾರುಕಟ್ಟೆಯಲ್ಲಿ ಭಿನ್ನ ಫೀಚರ್ಸ್‌ ಹಾಗೂ ವಿವಿಧ ಬೆಲೆಯ ಇಯರ್‌ಬಡ್ಸ್‌ಗಳಿದ್ದು, ಅವುಗಳ ಸಾಲಿಗೆ ಬೋಟ್‌, ವಿಂಗ್ಸ್‌, ಮಿವಿ (Boat, Wings, Mivi) ಸೇರಿದಂತೆ ಅನೇಕ ಕಂಪೆನಿಯ ಡಿವೈಸ್‌ಗಳನ್ನು ಕಾಣಬಹುದು. ಈ ನಡುವೆ ನೀವು 1 ಸಾವಿರದ ಒಳಗೆ ಅತ್ಯುತ್ತಮ ಇಯರ್‌ಬಡ್ಸ್‌ ಖರೀದಿ ಮಾಡಲು ಮುಂದಾಗಿದ್ರೆ ಈ ಲೇಖನ ನಿಮಗೆ ಬಹಳ ಉಪಕಾರಿಯಾಗಲಿದೆ. ಹಾಗಿದ್ರೆ, ಯಾವೆಲ್ಲಾ ಡಿವೈಸ್‌ಗಳು ಈ ಬೆಲೆಯಲ್ಲಿ ಲಭ್ಯ ಇವೆ?, ಇವುಗಳ ಫೀಚರ್ಸ್‌ ಏನು ಅನ್ನೋದನ್ನು ತಿಳಿಸಿಕೊಡಲಾಗಿದೆ ಓದಿರಿ.

ಒಂದು ಸಾವಿರದ ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್‌ಬಡ್ಸ್‌ ಇವು: ಲಿಸ್ಟ್‌ ನೋಡಿ!

ಬೋಟ್ ಏರ್‌ಡೋಪ್ಸ್ 161 ಟ್ರೂ ವೈರ್‌ಲೆಸ್ ಇಯರ್‌ಬಡ್ಸ್: ಈ ಇಯರ್‌ಬಡ್ಸ್ (boAt Airdopes 161 True Wireless Earbuds) ಅನ್ನು ನೀವು 999 ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದು ಬ್ಲೂಟೂತ್ ಆವೃತ್ತಿ 5.1 ಸಾಮರ್ಥ್ಯ ಪಡೆದಿದ್ದು, ಜೊತೆಗೆ ಮೈಕ್ರೋಫೋನ್‌ ಆಯ್ಕೆ ಮೂಲಕ ಕರೆಯಲ್ಲಿ ಉತ್ತಮ ಅನುಭವ ನೀಡಲಿದೆ. ಇದರೊಂದಿಗೆ 10 ಮೀ ಶ್ರೇಣಿ ಆಯ್ಕೆಯಲ್ಲಿ ಕಾರ್ಯನಿರ್ವಹಿಸುವ ಈ ಇಯರ್‌ಬಡ್ಸ್‌ ಉತ್ತಮ ಆವರ್ತನ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಬೋಟ್‌ ಏರ್‌ಡೋಪ್ಸ್‌161 ಪ್ರೊ ಟ್ರೂ ವೈರ್‌ಲೆಸ್ ಇಯರ್‌ಬಡ್ಸ್: ಈ ಬಡ್ಸ್‌ (boAt Airdopes 161 Pro True Wireless Earbuds) ಅನ್ನು ಸಹ 999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 380 mAh ಸಾಮರ್ಥ್ಯದ ಚಾರ್ಜಿಂಗ್ ಕೇಸ್‌ ಹೊಂದಿದ್ದು, ಇದರ ಪ್ರತಿ ಇಯರ್‌ಬಡ್ 35 mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿವೆ. ಇದರೊಂದಿಗೆ 40 ಗಂಟೆಯ ಚಾರ್ಜಿಂಗ್‌ ಬ್ಯಾಕಪ್ ಅನ್ನು ನಿರೀಕ್ಷೆ ಮಾಡಬಹುದಾಗಿದೆ. ಈ ಬಡ್ಸ್‌ ಸಹ ಬ್ಲೂಟೂತ್ ಆವೃತ್ತಿ 5.3 ನೊಂದಿಗೆ 10 ಮೀ ಶ್ರೇಣಿಯ ಸಾಮರ್ಥ್ಯ ಪಡೆದುಕೊಂಡಿದೆ.

ವಿಂಗ್ಸ್ ಫ್ಯಾಂಟಮ್ 450 ಟ್ರೂ ವೈರ್‌ಲೆಸ್ ಇಯರ್‌ಬಡ್ಸ್: ಈ ಇಯರ್‌ಬಡ್ಸ್ (Wings Phantom 450 True Wireless Earbuds) ಅನ್ನು ನೀವು 599 ರೂ.ಗಳ ಆಫರ್‌ ಬೆಲೆಗೆ ಖರೀದಿ ಮಾಡಬಹುದಾಗಿದೆ.ಇದು ಇನ್‌ಇಯರ್‌ ವಿನ್ಯಾಸ ಪಡೆದಿದ್ದು, ಮೈಕ್ರೊಫೋನ್ ಆಯ್ಕೆಯೊಂದಿಗೆ ಬ್ಲೂಟೂತ್ ಆವೃತ್ತಿ 5.3 ಹಾಗೂ 13 ಎಂಎಂ ಡ್ರೈವರ್‌ ಸೌಲಭ್ಯ ಪಡೆದಿದೆ. ಜೊತೆಗೆ IPX5 ರೇಟೆಡ್, 40ms ಕಡಿಮೆ ಲೇಟೆನ್ಸಿ, ಡೆಡಿಕೇಟೆಡ್ ಗೇಮಿಂಗ್ ಮೋಡ್, ಟೈಪ್-ಸಿ ಚಾರ್ಜಿಂಗ್, ಎಲ್ಇಡಿ ಲೈಟಿಂಗ್ಸ್ ಆಯ್ಕೆಯನ್ನು ಇದರಲ್ಲಿ ನೋಡಬಹುದು.

ಒಂದು ಸಾವಿರದ ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್‌ಬಡ್ಸ್‌ ಇವು: ಲಿಸ್ಟ್‌ ನೋಡಿ!

ಮಿವಿ ಡ್ಯುಯೋಪಾಡ್ಸ್D3 ಟ್ರೂ ವೈರ್‌ಲೆಸ್ ಇಯರ್‌ಬಡ್ಸ್: ಇದನ್ನು (Mivi Duopods D3 True Wireless Earbuds) 599 ರೂ.ಗಳ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ಡಿವೈಸ್‌ ಸಹ ಬ್ಲೂಟೂತ್ ಆವೃತ್ತಿ 5.3 ಹಾಗೂ 10 ಮೀ ಶ್ರೇಣಿಯೊಂದಿಗೆ ಸುಧಾರಿತ ಮೈಕ್ರೋಫೋನ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ IPX4 ರೇಟೆಡ್, ಎಲ್‌ಇಡಿ ಲೈಟ್‌ ಇಂಡಿಕೇಟರ್, ಟೈಪ್ ಸಿ ಚಾರ್ಜಿಂಗ್, ಕಡಿಮೆ ಲೇಟೆನ್ಸಿ ಗೇಮಿಂಗ್ ಮೋಡ್, ಡ್ಯುಯಲ್ ಪೇರಿಂಗ್ ಸೌಲಭ್ಯ ಹೊಂದಿದೆ.

ಟ್ರಿಗ್ಗರ್ ಅಲ್ಟ್ರಾಬಡ್ಸ್ N1 ಟ್ರೂ ವೈರ್‌ಲೆಸ್ ಇಯರ್‌ಬಡ್ಸ್: ಈ ವಿಶೇಷ ಇಯರ್‌ಬಡ್ಸ್ (TRIGGR Ultrabuds N1 True Wireless Earbuds) ಅನ್ನು 699 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು IPS4 ರೇಟಿಂಗ್‌, ಎಲ್‌ಇಡಿ ಇಂಡಿಕೇಟರ್‌. 40ms ಕಡಿಲೆ ಲೇಟನ್ಸಿ ಯೊಂದಿಗೆ ಕಾಣಿಸಿಕೊಂಡಿದ್ದು, ಇದರ ಬ್ಯಾಟರಿ ಬಾಳಿಕೆ 40 ಗಂಟೆಗಳಾಗಿದೆ. ಜೊತೆಗೆ ಇದರ ಚಾರ್ಜಿಂಗ್ ಸಮಯ 1.5 ಗಂಟೆಗಳು. ಇದೂ ಸಹ ಬ್ಲೂಟೂತ್ ಆವೃತ್ತಿ 5.3 ನಲ್ಲಿ ಕಾಣಿಸಿಕೊಂಡಿದೆ.

ಒಂದು ಸಾವಿರದ ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್‌ಬಡ್ಸ್‌ ಇವು: ಲಿಸ್ಟ್‌ ನೋಡಿ!

ಬೌಲ್ಟ್ ಆಡಿಯೊ ಏರ್‌ಬಾಸ್ W40 ಟ್ರೂ ವೈರ್‌ಲೆಸ್ ಇಯರ್‌ಬಡ್ಸ್: ಈ ಡಿವೈಸ್‌ (Boult Audio Airbass W40 True Wireless Earbuds) ಅನ್ನು 999ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು IPX5 ರೇಟೆಡ್, 45ms ಅಲ್ಟ್ರಾ-ಲೋ ಲೇಟೆನ್ಸಿ ಗೇಮಿಂಗ್ ಮೋಡ್, ಟೈಪ್-ಸಿ ಚಾರ್ಜಿಂಗ್, ಎಲ್ಇಡಿ ಇಂಡಿಕೇಟರ್ ಆಯ್ಕೆಯೊಂದಿಗೆ ಬಂದಿದ್ದು, ಇದರ ಬ್ಯಾಟರಿ ಬಾಳಿಕೆ 48 ಗಂಟೆಗಳಾಗಿದ್ದು, ಬಡ್ಸ್‌ಗಳು 7 ಗಂಟೆಗಳ ಬ್ಯಾಕಪ್‌ ನೀಡಲಿದೆ. ಇದರ ಚಾರ್ಜಿಂಗ್ ಟೈಮ್ 1.5 ಗಂಟೆಗಳಾಗಿದೆ.

Best Mobiles in India

English summary
Most recent smartphones don't have an audio jack option. Consequently, buying earbuds is essential. Here's a list of the best earbuds available under Rs1000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+